ನಮ್ಮ ಮೆಟ್ರೋಗೂ ತಟ್ಟಿದ ವಿದ್ಯುತ್ ಸಮಸ್ಯೆ: ಈ ಮಾರ್ಗದಲ್ಲಿ ಮೆಟ್ರೋ ಸಂಚಾರ ಸ್ಥಗಿತ

ಬೆಂಗಳೂರು ನಮ್ಮ ಗ್ರೀನ್​​​ ಲೈನ್ ಹಳಿಯಲ್ಲಿ ತಾಂತ್ರಿಕ ದೋಷ ಉಂಟಾಗಿದ್ದು, ಈ ಹಿನ್ನೆಲೆಯಲ್ಲಿ ಆರ್​ವಿ ರಸ್ತೆಯಿಂದ ರೇಷ್ಮೆ ಸಂಸ್ಥೆ ವರೆಗಿನ ಮೆಟ್ರೋ ಸಂಚಾರ ಸ್ಥಗಿತಗೊಂಡಿದೆ.

ನಮ್ಮ ಮೆಟ್ರೋಗೂ ತಟ್ಟಿದ ವಿದ್ಯುತ್ ಸಮಸ್ಯೆ: ಈ ಮಾರ್ಗದಲ್ಲಿ ಮೆಟ್ರೋ ಸಂಚಾರ ಸ್ಥಗಿತ
ಗ್ರೀನ್ ಲೈನ್ ಮೆಟ್ರೋ
Follow us
ರಮೇಶ್ ಬಿ. ಜವಳಗೇರಾ
|

Updated on:Jul 30, 2024 | 6:38 PM

ಬೆಂಗಳೂರು, (ಜುಲೈ 30): ನಮ್ಮ ಮೆಟ್ರೋ ಹಸಿರು ಮಾರ್ಗದ ರೈಲುಗಳ ಓಡಾಟದಲ್ಲಿ ವ್ಯತ್ಯಯ ಉಂಟಾಗಿದೆ. ವಿದ್ಯುತ್ ಸಮಸ್ಯೆಯಿಂದ ಸಿಲ್ಕ್ ಇನ್ಸ್ಟಿಟ್ಯೂಟ್ ನಿಂದ (ರೇಷ್ಮೆ ಸಂಸ್ಥೆ) ಆರ್​ವಿ ರಸ್ತೆವರೆಗೆ ಮೆಟ್ರೋ ಸೇವೆ ತಾತ್ಕಾಲಿಕವಾಗಿ ಸ್ಥಗಿತವಾಗಿದೆ. ಇಂದು (ಜುಲೈ 30) ಸಂಜೆ 5.33ರಿಂದ ವಿದ್ಯುತ್ ಸರಬರಾಜು ವ್ಯವಸ್ಥೆಯಲ್ಲಿ ಸಮಸ್ಯಯಾಗಿದೆ. ನಾಗಸಂದ್ರದಿಂದ ಆರ್ ವಿ ರೋಡ್ ವರೆಗೆ ಮಾತ್ರ ಮೆಟ್ರೋ ಸಂಚಾರ ಇದ್ದು, ಆರ್​ವಿ ರಸ್ತೆಯಿಂದ ರೇಷ್ಮೆ ಸಂಸ್ಥೆವರೆಗೆ ಮೆಟ್ರೋ ಸಂಚಾರ ಸ್ಥಗಿತವಾಗಿದೆ. ಈ ಬಗ್ಗೆ ಬಿಎಂಆರ್​ಸಿಎಲ್​ ಮಾಹಿತಿ ನೀಡಿದೆ.

ಗ್ರೀನ್ ಲೈನ್ ನಲ್ಲಿ ನಾಗಸಂದ್ರದಿಂದ ಸಿಲ್ಕ್ ಇನ್ಸ್ಟಿಟ್ಯೂಟ್ ವರೆಗೆ ಮೆಟ್ರೋ ಸಂಚರಿಸುತ್ತಿದ್ದು, ಇದೀಗ ವಿದ್ಯುತ್ ಸಮಸ್ಯೆಯಿಂದಾಗಿ ಸಿಲ್ಕ್ ಇನ್ಸ್ಟಿಟ್ಯೂಟ್ ನಿಂದ ಆರ್ ವಿ ರೋಡ್ ವರೆಗೆ ಮಾತ್ರ ಮೆಟ್ರೋ ಸೇವೆ ತಾತ್ಕಾಲಿಕವಾಗಿ ಸ್ಥಗಿತವಾಗಿದೆ. ಇದರಿಂದ ಪ್ರಯಾಣಿಕರಿಗೆ ತೊಂದರೆ ಉಂಟಾಗಿದ್ದಕ್ಕೆ ಬಿಎಂಆರ್​ಸಿಎಲ್​ ವಿಷಾದ ವ್ಯಕ್ತಪಡಿಸಿದೆ.

ಇನ್ನು ಆರ್ ವಿ ರೋಡ್ ನಿಂದ ನಾಗಸಂದ್ರದವರೆಗೆ ಎಂದಿನಂತೆ ಮೆಟ್ರೋ ಸಂಚರಿಸುತ್ತಿದೆ. ಅತಿ ಶೀಘ್ರದಲ್ಲೇ ವಿದ್ಯುತ್ ಸಮಸ್ಯೆಯನ್ನ ಬಗೆಹರಿಸಲಾಗುತ್ತದೆ ಎಂದು ಬಿಎಂಆರ್​ಸಿಎಲ್​ ತಿಳಿಸಿದೆ.

Published On - 6:27 pm, Tue, 30 July 24