ಬೆಂಗಳೂರು, ಸೆ.10: ಆರ್ವಿ ರೋಡ್ ಟು ಬೊಮ್ಮಸಂದ್ರ ಮಾರ್ಗದ ಹಳದಿ ಮಾರ್ಗದಲ್ಲಿ (Metro Yellow Line) ಹದಿನೈದು ದಿನಗಳ ಕಾಲ ಪರೀಕ್ಷೆ ನಡೆಸಲಾಗುತ್ತದೆ. ಕೇಂದ್ರ ರೈಲ್ವೆ ಇಲಾಖೆಯ ರಿಸರ್ಚ್ ಡಿಸೈನ್ ಅಂಡ್ ಸ್ಟ್ಯಾಂಡರ್ಡ್ಸ್ ಆರ್ಗನೈಸೇಶನ್ ಅಧಿಕಾರಿಗಳಿಂದ ಆಸಿಲೇಷನ್ ಮತ್ತು ಇಬಿಡಿ ಟೆಸ್ಟಿಂಗ್ ಮಾಡಲಾಗುತ್ತಿದೆ. ಅಂದರೆ ಈ ರೈಲಿನಲ್ಲಿ ಎಷ್ಟು ಪ್ರಯಾಣಿಕರು ಸಂಚಾರ ಮಾಡಬಹುದು, ಎಷ್ಟು ವೇಗದಲ್ಲಿ ಈ ರೈಲು ಸಂಚಾರ ಮಾಡುತ್ತದೆ, ಸಿಗ್ನಲ್ ಟೆಸ್ಟ್, ಬ್ರೇಕ್ ಕ್ಯಾಪಾಸಿಟಿ ಟೆಸ್ಟ್ ಹೀಗೆ ನಾನಾ ರೀತಿಯಲ್ಲಿ ಚೀನಾದ ಡ್ರೈವರ್ಲೆಸ್ ರೈಲಿನ ಪರಿಶೀಲನೆ ಮಾಡಲಾಗುತ್ತಿದೆ.
ಈ ಮೆಟ್ರೋ ಎತ್ತರಿಸಿದ ಮಾರ್ಗದಲ್ಲಿ ಮಾತ್ರ ಸಂಚರಿಸಲಿವೆ. ರಸ್ತೆ,ಮೇಲ್ಸೇತುವೆ,ಅದರ ಮೇಲ್ಭಾಗದಲ್ಲಿ ಈ ಮೆಟ್ರೋ ಸಂಚರಿಸುವ ನಿಲ್ದಾಣ ಇರಲಿದ್ದು, ಇದರ ಮತ್ತೊಂದು ವಿಶೇಷತೆಯಾಗಿದೆ.
ಆರ್ಡಿಎಸ್ಒ ಅಧಿಕಾರಿಗಳು, ಇಂದಿನಿಂದ ರೀಚ್ 5 ಮಾರ್ಗದಲ್ಲಿಬೊಮ್ಮನಹಳ್ಳಿಯಿಂದ ಆರ್ವಿ-ರಸ್ತೆ ನಡುವೆ, ಆಸಿಲೇಷನ್ ಮತ್ತುಇಬಿಡಿ ಪ್ರಯೋಗಗಳನ್ನ ಪ್ರಾರಂಭಿಸಿ, ಸುಮಾರು 12-14 ದಿನಗಳವರೆಗೆನಡೆಸಲಾಗುವುದು. ಆರ್ಡಿಎಸ್ಒ ಪ್ರಾಯೋಗಿಕ ವರದಿಯನ್ನುಸಲ್ಲಿಸಿದ ನಂತರ ರೈಲ್ವೆ ಮಂಡಳಿಯಿಂದ ತಾಂತ್ರಿಕ ಮಂಜೂರಾತಿಪಡೆಯಲಾಗುವುದು. pic.twitter.com/VNVHLCbtbL
— ನಮ್ಮ ಮೆಟ್ರೋ (@OfficialBMRCL) September 9, 2024
ಇದನ್ನೂ ಓದಿ: ಬೆಂಗಳೂರು: ಬೆಮಲ್ನಲ್ಲಿ ಸಿದ್ಧವಾಗ್ತಿದೆ ನಮ್ಮ ಮೆಟ್ರೋ ಚಾಲಕರಹಿತ ರೈಲು!
ಇನ್ನೂ ನಿನ್ನೆಯಿಂದ 12 ರಿಂದ 15 ದಿನಗಳ ವರೆಗೆ ಈ ಪರೀಕ್ಷೆಗಳು ನಡೆಯಲಿದೆ. 19.15 ಕಿಮೀ ವಿಸ್ತೀರ್ಣವಿರುವ ಹಳದಿ ಮಾರ್ಗ ಹದಿನಾರು ಮೆಟ್ರೋ ಸ್ಟೇಷನ್ ಗಳು ಬರಲಿದ್ದು,ಈಗಾಗಲೇ ಹಳದಿ ಮಾರ್ಗದಲ್ಲಿ ಟ್ರಯಲ್ ಕಾರ್ಯ ಪೂರ್ಣಗೊಂಡಿದೆ. ಚೀನಾದ ಡ್ರೈವರ್ಲೆಸ್ ರೈಲುಗಳಿಂದ ಟ್ರ್ಯಾಕ್ ಮೇಲೆ ಟ್ರಯಲ್ ರನ್ ನಡೆಸುತ್ತಿದ್ದಾರೆ. ಆರ್ಡಿಎಸ್ಓ ಅಧಿಕಾರಿಗಳ ಟೆಸ್ಟಿಂಗ್ ರಿಪೋರ್ಟ್ ಸಲ್ಲಿಸಿದ ನಂತರ ಕೇಂದ್ರದ ರೈಲ್ವೆ ಸುರಕ್ಷತಾ ಆಯುಕ್ತರು ಭೇಟಿ ನೀಡಿ ಪರಿಶೀಲನೆ ನಡೆಸಿ ಹಳದಿ ಮಾರ್ಗದ ಮೆಟ್ರೋ ರೈಲು ವಾಣಿಜ್ಯ ಸಂಚಾರಕ್ಕೆ ಅವಕಾಶ ನೀಡಲಿದ್ದಾರೆ.
ಒಟ್ಟಿನಲ್ಲಿ ಹಲವು ರೀತಿಯ ವಿಶೇಷತೆಗಳನ್ನ ಹೊಂದಿರುವ ಡ್ರೈವರ್ ಲೆಸ್ ಮೆಟ್ರೋ 37 ಬಗೆಯ ಅಗ್ನಿ ಪರೀಕ್ಷೆಗೆ ಒಳಗಾಗುತ್ತಿದ್ದು, ಎಲ್ಲವೂ ಅಂದುಕೊಂಡಂತೆ ನಡೆದರೆ, ಡಿಸೆಂಬರ್ ಕೊನೆಯ ವಾರ ಅಥವಾ ಜನವರಿ ಮೊದಲನೆಯ ವಾರದಲ್ಲಿ ಡ್ರೈವರ್ ಲೆಸ್ ಮೆಟ್ರೋದ ವಾಣಿಜ್ಯ ಸಂಚಾರ ಆರಂಭವಾಗಲಿದೆ. ಆ ದಿನಕ್ಕಾಗಿ ಮೆಟ್ರೋ ಪ್ರಯಾಣಿಕರು ಕಾಯುತ್ತಿರೋದಂತು ಸತ್ಯ.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ