AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಾರಾಯಣ ನೇತ್ರಾಲಯದ ಮುಖ್ಯಸ್ಥ, ಖ್ಯಾತ ನೇತ್ರ ತಜ್ಞ ಡಾ ಕೆ ಭುಜಂಗ ಶೆಟ್ಟಿ ಇನ್ನಿಲ್ಲ

ನಾರಾಯಣ ನೇತ್ರಾಲಯದ ಮುಖ್ಯಸ್ಥರೂ ಆಗಿರುವ ಖ್ಯಾತ ನೇತ್ರ ತಜ್ಞ ಡಾ ಕೆ ಭುಜಂಗಶೆಟ್ಟಿ ಅವರು ನಿಧನ ಹೊಂದಿದ್ದಾರೆ.

ನಾರಾಯಣ ನೇತ್ರಾಲಯದ ಮುಖ್ಯಸ್ಥ, ಖ್ಯಾತ ನೇತ್ರ ತಜ್ಞ ಡಾ ಕೆ ಭುಜಂಗ ಶೆಟ್ಟಿ ಇನ್ನಿಲ್ಲ
ನಾರಾಯಣ ನೇತ್ರಾಲಯದ ಮುಖ್ಯಸ್ಥ ಡಾ ಕೆ ಭುಜಂಗಶೆಟ್ಟಿ ನಿಧನ
Rakesh Nayak Manchi
Rakesh Nayak Manchi|

Updated on:May 19, 2023 | 11:01 PM

Share

ಬೆಂಗಳೂರು: ನಾರಾಯಣ ನೇತ್ರಾಲಯದ ಮುಖ್ಯಸ್ಥರೂ ಆಗಿರುವ ಖ್ಯಾತ ನೇತ್ರ ತಜ್ಞ ಡಾ ಕೆ ಭುಜಂಗಶೆಟ್ಟಿ (Dr. K. Bhujang Shetty) ಅವರು ನಿಧನ ಹೊಂದಿದ್ದಾರೆ. ಇಂದು ಆಸ್ಪತ್ರೆಗೆ ಹೋಗಿ ಚಿಕಿತ್ಸೆ ನೀಡಿದ್ದ ಡಾ.ಭುಜಂಗ ಶೆಟ್ಟಿ ಅವರಿಗೆ ಸಂಜೆ 6 ಗಂಟೆ ಸುಮಾರಿಗೆ ತೀವ್ರ ಹೃದಯಾಘಾತವಾಗಿತ್ತು. ಆಸ್ಪತ್ರೆಯಿಂದ ಮನೆಗೆ ವಾಪಸಾದ ಬಳಿಕ ಹೃದಯಾಘಾತವಾಗಿದ್ದು, ಕೂಡಲೇ ಯಶವಂತಪುರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಿಸದೆ ಕೊನೆಯುಸಿರೆಳೆದಿದ್ದಾರೆ.

ಅವರು 1978 ರಲ್ಲಿ ತಮ್ಮ ಎಂಬಿಬಿಎಸ್ ಮಾಡಿದ ಬೆಂಗಳೂರು ವೈದ್ಯಕೀಯ ಕಾಲೇಜಿನ ಹಳೆಯ ವಿದ್ಯಾರ್ಥಿಯಾಗಿದ್ದರು. ಅವರು ಎಂಬತ್ತರ ದಶಕದಲ್ಲಿ ಸಣ್ಣ ಕ್ಲಿನಿಕ್‌ನಲ್ಲಿ ನೇತ್ರಶಾಸ್ತ್ರವನ್ನು ಪ್ರಾರಂಭಿಸಿದರು. ಭವಿಷ್ಯದ ಅಗತ್ಯಗಳನ್ನು ಪೂರೈಸುವ ದೂರದೃಷ್ಟಿ ಹೊಂದಿದ್ದ ಅವರು ಅಭಿವೃದ್ಧಿಯಲ್ಲಿ ಉತ್ಸಾಹ ತೋರಿದರು. ಅದರಂತೆ ಕ್ಲೀನಿಕ್ ಅನ್ನು ಅಕ್ಟೋಬರ್ 1993 ರಲ್ಲಿ ಪ್ರಸ್ತುತ ಕಟ್ಟಡಕ್ಕೆ ಸ್ಥಳಾಂತರಿಸಿದರು.

ಇದನ್ನೂ ಓದಿ: SP Hinduja Passes Away: ಹಿಂದೂಜಾ ಗ್ರೂಪ್ ಛೇರ್ಮನ್ ಎಸ್.ಪಿ. ಹಿಂದೂಜಾ ನಿಧನ; 109 ವರ್ಷದ ಹಳೆಯ ಕಂಪನಿಯ ನೊಗ ಹೊತ್ತು ಮುನ್ನಡೆಸಿದ್ದ ಧೀಮಂತ ಉದ್ಯಮಿ

ನಂತರ ಕಣ್ಣಿನ ಕ್ಲಿನಿಕ್ ಕಣ್ಣಿನ ಆಸ್ಪತ್ರೆಯಾಗಿ ಮಾರ್ಪಟ್ಟಿತು ಮತ್ತು ವರ್ಷದಿಂದ ವರ್ಷಕ್ಕೆ ಬೆಳೆಯಲು ಪ್ರಾರಂಭಿಸಿತು. ಗುಣಮಟ್ಟದ ಕಣ್ಣಿನ ಆರೈಕೆಗಾಗಿ ಹೆಚ್ಚುತ್ತಿರುವ ಬೇಡಿಕೆಯನ್ನು ಪೂರೈಸಲು, ಆಧುನಿಕ ಅತ್ಯಾಧುನಿಕ ಉಪಕರಣಗಳನ್ನು ಅಳವಡಿಸಲಾಯಿತು. ಇದಕ್ಕೆ ನಿರಂತರ ಪ್ರೋತ್ಸಾಹವನ್ನು ನೀಡುತ್ತಾ ಬಂದಿದ್ದರು. ಆ ಮೂಲಕ ನಾರಾಯಣ ನೇತ್ರಾಲಯವನ್ನು ಕರ್ನಾಟಕದ ಅತಿದೊಡ್ಡ ಸೂಪರ್ ಸ್ಪೆಷಾಲಿಟಿ ಕಣ್ಣಿನ ಆಸ್ಪತ್ರೆಯಾಗಿ ಪರಿವರ್ತಿಸಲು ಕಾರಣರಾಗಿದ್ದರು. ಅವರು ಕಣ್ಣಿನ ಪೊರೆ ಮತ್ತು ಫಾಕೋಎಮಲ್ಸಿಫಿಕೇಶನ್ ಶಸ್ತ್ರಚಿಕಿತ್ಸಕರಾಗಿದ್ದರು. ಅವರು ನಾರಾಯಣ ನೇತ್ರಾಲಯದ ಅಧ್ಯಕ್ಷರೂ ಆಗಿದ್ದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:38 pm, Fri, 19 May 23

Follow Us
Rakesh Nayak Manchi
Rakesh Nayak Manchi

ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಮಂಚಿ ಗ್ರಾಮದವನಾದ ನಾನು, ಪದವಿ ಮುಗಿಸಿದ ನಂತರ ಏನು ಮಾಡಬೇಕು ಎಂಬ ಯೋಚನೆಯಲ್ಲಿದ್ದಾಗ ಪತ್ರಿಕೋದ್ಯಮ ಕ್ಷೇತ್ರದ ಮೇಲೆ ಕಣ್ಣುಬಿತ್ತು. ಅದರಂತೆ ಎಂಎ ಮುಗಿಸಿ ಕಳೆದ ನಾಲ್ಕು ವರ್ಷಗಳಿಂದ ಪತ್ರಕರ್ತನಾಗಿ ಕಾರ್ಯನಿರ್ವಹಿಸುತ್ತಿದ್ದೇನೆ. ದಿನ ಪತ್ರಿಕೆ, ನ್ಯೂಸ್ ಆ್ಯಪ್​ನಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಪ್ರಸ್ತುತ ಕಳೆದ ಒಂದೂವರೆ ವರ್ಷಗಳಿಂದ 'ಉತ್ತಮ ಸಮಾಜಕ್ಕಾಗಿ' ಟಿವಿ9 ಡಿಜಿಟಲ್​ನಲ್ಲಿ ಕೆಲಸ ಮಾಡುತ್ತಿದ್ದೇನೆ.

ಸಾವಿನ ಬಗ್ಗೆ ಪದೇ ಪದೇ ಸುಳ್ಳು ಸುದ್ದಿ: ನಟ ದೊಡ್ಡಣ್ಣ ಹೇಳಿದ್ದೇನು?
ಸಾವಿನ ಬಗ್ಗೆ ಪದೇ ಪದೇ ಸುಳ್ಳು ಸುದ್ದಿ: ನಟ ದೊಡ್ಡಣ್ಣ ಹೇಳಿದ್ದೇನು?
ವೆನೆಜುವೆಲಾ ದರೋಡೆಕೋರನ ಮೇಲಿನ ವೈಮಾನಿಕ ದಾಳಿಯ ವಿಡಿಯೋ ಹಂಚಿಕೊಂಡ ಟ್ರಂಪ್
ವೆನೆಜುವೆಲಾ ದರೋಡೆಕೋರನ ಮೇಲಿನ ವೈಮಾನಿಕ ದಾಳಿಯ ವಿಡಿಯೋ ಹಂಚಿಕೊಂಡ ಟ್ರಂಪ್
ಮತ್ತೆ ವಿದೇಶಕ್ಕೆ ತೆರಳಿದ ಪ್ರಧಾನಿ ಮೋದಿ; ಫ್ರಾನ್ಸ್​, ಸ್ಲೋವಾಕಿಯಾಗೆ ಭೇಟಿ
ಮತ್ತೆ ವಿದೇಶಕ್ಕೆ ತೆರಳಿದ ಪ್ರಧಾನಿ ಮೋದಿ; ಫ್ರಾನ್ಸ್​, ಸ್ಲೋವಾಕಿಯಾಗೆ ಭೇಟಿ
ಮನಾಲಿಗೆ ಹೊರಟ ಪ್ರವಾಸಿಗರಿಂದ ಕುಲು-ಮಂಡಿ ಮಾರ್ಗದಲ್ಲಿ ಟ್ರಾಫಿಕ್ ಜಾಮ್
ಮನಾಲಿಗೆ ಹೊರಟ ಪ್ರವಾಸಿಗರಿಂದ ಕುಲು-ಮಂಡಿ ಮಾರ್ಗದಲ್ಲಿ ಟ್ರಾಫಿಕ್ ಜಾಮ್
ಪ್ರಥಮ ದರ್ಜೆ ನೌಕರನಿಗೆ ಚಪ್ಪಲಿ ಏಟು ಕೊಟ್ಟ ರೈತ! ಯಾಕೆ ಗೊತ್ತಾ?
ಪ್ರಥಮ ದರ್ಜೆ ನೌಕರನಿಗೆ ಚಪ್ಪಲಿ ಏಟು ಕೊಟ್ಟ ರೈತ! ಯಾಕೆ ಗೊತ್ತಾ?
ಬಿಡದಿ ಟೌನ್​ಶಿಪ್​ ಯೋಜನೆ ವಿರೋಧಿಸಿ ಜೂನ್ 22ರಂದು ಬೃಹತ್ ಪ್ರತಿಭಟನೆ!
ಬಿಡದಿ ಟೌನ್​ಶಿಪ್​ ಯೋಜನೆ ವಿರೋಧಿಸಿ ಜೂನ್ 22ರಂದು ಬೃಹತ್ ಪ್ರತಿಭಟನೆ!
ಕಲಬುರಗಿಯಲ್ಲಿ ನಕಲಿ ಡಿಎಪಿ ರಸಗೊಬ್ಬರ ಮಾರಾಟ: ರೈತರ ತೀವ್ರ ಆಕ್ರೋಶ
ಕಲಬುರಗಿಯಲ್ಲಿ ನಕಲಿ ಡಿಎಪಿ ರಸಗೊಬ್ಬರ ಮಾರಾಟ: ರೈತರ ತೀವ್ರ ಆಕ್ರೋಶ
ಬಿಡದಿ ಟೌನ್​ಶಿಪ್​​ ಯೋಜನೆ ಲೂಟಿ ಸ್ಕೀಮ್​​​ ಡೌಟೇ ಬೇಡ: ಕುಮಾರಸ್ವಾಮಿ
ಬಿಡದಿ ಟೌನ್​ಶಿಪ್​​ ಯೋಜನೆ ಲೂಟಿ ಸ್ಕೀಮ್​​​ ಡೌಟೇ ಬೇಡ: ಕುಮಾರಸ್ವಾಮಿ
ಕೊಲೆ ಆರೋಪಿಗಳಿಂದ ಜೈಲಿನಲ್ಲಿ ಪುಂಡಾಟ: ವಾರ್ಡನ್ ಮೇಲೆ ಹಲ್ಲೆ!
ಕೊಲೆ ಆರೋಪಿಗಳಿಂದ ಜೈಲಿನಲ್ಲಿ ಪುಂಡಾಟ: ವಾರ್ಡನ್ ಮೇಲೆ ಹಲ್ಲೆ!
‘ಯತ್ನಾಳ್ ಯಾವುದೋ ಒಂದು ಕೋತಿಯ ಬ್ರೀಡ್’: ಪ್ರದೀಪ್ ಈಶ್ವರ್ ವಾಗ್ದಾಳಿ
‘ಯತ್ನಾಳ್ ಯಾವುದೋ ಒಂದು ಕೋತಿಯ ಬ್ರೀಡ್’: ಪ್ರದೀಪ್ ಈಶ್ವರ್ ವಾಗ್ದಾಳಿ