ಬಿಡದಿ ಟೌನ್‌ಶಿಪ್ ಯೋಜನೆ ಲೂಟಿ ಸ್ಕೀಮ್ ಡೌಟೇ ಬೇಡ: ಹೆಚ್ಡಿ ಕುಮಾರಸ್ವಾಮಿ
ಕೇಂದ್ರ ಸಚಿವ ಹೆಚ್ಡಿ ಕುಮಾರಸ್ವಾಮಿ ಬಿಡದಿ ಟೌನ್‌ಶಿಪ್ ಯೋಜನೆಯನ್ನು ಲೂಟಿ ಸ್ಕೀಮ್ ಎಂದಿದ್ದಾರೆ. ಸಿಎಂ ಡಿ.ಕೆ. ಶಿವಕುಮಾರ್ ವಿರುದ್ಧ ವಾಗ್ದಾಳಿ ಮಾಡಿರುವ ಕುಮಾರಸ್ವಾಮಿ, ಫಲವತ್ತಾದ ಭೂಮಿ ಕಳೆದುಕೊಳ್ಳುವ ರೈತರ ಪರ ಧ್ವನಿ ಎತ್ತಿದ್ದಾರೆ. ರೈತರೊಂದಿಗೆ ಚರ್ಚಿಸದೆ ಯೋಜನೆಯನ್ನು ಮುಂದಕ್ಕೆ ಸಾಗಿಸಲಾಗುತ್ತಿದೆ ಎಂದು ಆರೋಪಿಸಿದ್ದಾರೆ.
ಬೆಂಗಳೂರು, ಜೂನ್ 13: ಬಿಡದಿ ಟೌನ್‌ಶಿಪ್ ವಿವಾದ ಸದ್ಯ ಸಿಎಂ ಡಿಕೆ ಶಿವಕುಮಾರ್ ಮತ್ತು ಕೇಂದ್ರ ಸಚಿವ ಹೆಚ್ಡಿ ಕುಮಾರಸ್ವಾಮಿ ಮಧ್ಯೆ ಮತ್ತೆ ರಾಜಕೀಯ ಸಂಘರ್ಷಕ್ಕೆ ಕಾರಣವಾಗುವ ಎಲ್ಲಾ ಲಕ್ಷಣಗಳು ಕಾಣಿಸುತ್ತಿವೆ. ಈ ಬಗ್ಗೆ ಮಾತನಾಡಿರುವ ಹೆಚ್ಡಿ ಕುಮಾರಸ್ವಾಮಿ, ಬಿಡದಿ ಟೌನ್‌ಶಿಪ್ ಎಂದರೆ ಲೂಟಿ ಸ್ಕೀಮ್ ಡೌಟೇ ಬೇಡ ಎಂದು ಹೇಳಿದ್ದಾರೆ. ಬಿಡದಿ ಟೌನ್‌ಶಿಪ್ ಅವರ ಕನಸಿನ ಕೂಸಲ್ಲ, ನನ್ನ ಕನಸಿನ ಕೂಸು. ಬಿಡದಿ ಟೌನ್‌ಶಿಪ್ ವಿಚಾರದಲ್ಲಿ ಅವತ್ತಿನ ನನ್ನ ಉದ್ದೇಶ ಬೇರೆ ಇತ್ತು, ಆದರೆ ಇವತ್ತಿನ ಉದ್ದೇಶ ಬೇರೆಯೇ ಇದೆ. ಎಲ್ಲದಕ್ಕೂ ಅಜ್ಜಯ್ಯ ಬಳಿ ಹೋಗ್ತೀರಿ, ಅಜ್ಜಯ್ಯ ಹೇಳಿದ್ದಾರಾ ಟೌನ್‌ಶಿಪ್ ಮಾಡಿ ರೈತರ ಒಕ್ಕಲೆಬ್ಬಿಸಿ ಎಂದು. ಜೆಡಿಎಸ್ನಿಂದ ಪ್ರತಿಭಟನೆ, ಕಾನೂನು ಹೋರಾಟಕ್ಕೆ ಸಿದ್ಧರಾಗಿದ್ದೇವೆ. 450 ದಿನದಿಂದ ಹೋರಾಟ ಮಾಡುತ್ತಿರುವವರ ಧ್ವನಿಯಾಗಿದ್ದೇವೆ ಅಷ್ಟೇ. ರೈತ ಮುಖಂಡರನ್ನು ಬಂಧಿಸುವಂತೆ ಕೆಲಸವಾಗುತ್ತಿದೆ. ಅಗತ್ಯವಿದ್ದರೆ ನಾನೇ ಹೋರಾಟಕ್ಕೆ ಹೋಗುವೆ ಎಂದು ಹೆಚ್ಡಿ ಕುಮಾರಸ್ವಾಮಿ ಹೇಳಿದ್ದಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.
Published on: Jun 13, 2026 04:57 PM
ಕಣ್ಣೀರಿಡುತ್ತಾ ಕೆಎಸ್ಆರ್ಟಿಸಿ ಬಸ್ಗೆ ಮುತ್ತನ್ನಿಟ್ಟ ಕೇರಳದ ಚಾಲಕ
ಹಿಮವದ್ ಗೋಪಾಲಸ್ವಾಮಿ ಬೆಟ್ಟಕ್ಕೆ ದಕ್ಷಿಣದ ಗೋವರ್ಧನಗಿರಿ ಎಂದು ಕರೆಯುವುದೇಕೆ
ಟಿವಿ9 ಇಂಪ್ಯಾಕ್ಟ್: 8 ವರ್ಷದಿಂದ ಆಗದ ಕೆಲಸ ಕೇವಲ ಹತ್ತು ದಿನದಲ್ಲೇ ಆಯ್ತು!
ಬಿಗ್ ಬಾಸ್ ಸ್ಪರ್ಧಿಗಳ ವಿಡಿಯೋ ಹಂಚಿಕೊಂಡ ಕಲರ್ಸ್ ಕನ್ನಡ; ಯಾರು ಗೊತ್ತಾಯ್ತಾ

