ಬೆಂಗಳೂರು, ಮಾ.22: ಮರದ ಕೊಂಬೆ ಮುರಿದು ಬಿದ್ದು ಬೈಕ್ ಸವಾರನ ಬೆನ್ನು ಮೂಳೆ ಮುರಿದ ಘಟನೆ ಬೆಂಗಳೂರು (Bengaluru) ನಗರದಲ್ಲಿ ನಡೆದಿದೆ. ಮರದ ಕೊಂಬೆ ರಸ್ತೆಗೆ ಬೀಳುವಂತಿದ್ದರು ತೆರವು ಮಾಡದ ಆರೋಪ ಪ್ರಕರಣ ಸಂಬಂಧ ಖಾಸಗಿ ಶಾಲೆ ಮತ್ತು ಬಿಬಿಎಂಪಿ (BBMP) ವಿರುದ್ಧ ಆಶೋಕನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಾಗರಬಾವಿ ನಿವಾಸಿ ಚಂದನ್ ಬೆನ್ನು ಮೂಳೆ ಮುರಿತಕ್ಕೊಳಗಾದ ಬೈಕ್ ಸವಾರ. ರಿಚ್ಮಂಡ್ ರಸ್ತೆಯ ಫೈನಾನ್ಸ್ ಕಂಪನಿವೊಂದರಲ್ಲಿ ಕೆಲಸ ಮಾಡುತ್ತಿದ್ದ ಚಂದನ್ ಮಾರ್ಚ್ 7 ರಂದು ಬೆಳಗ್ಗೆ ಕಚೇರಿಗೆ ಹೋಗುತ್ತಿದ್ದರು. ಈ ವೇಳೆ ರಸ್ತೆಗೆ ಚಾಚುಕೊಂಡಿದ್ದ ಮರದ ಕೊಂಬೆ ಚಂದನ್ ಮೇಲೆ ಮುರಿದು ಬಿದ್ದಿದೆ.
ಇದನ್ನೂ ಓದಿ: ರೆಂಬೆ ಕಡಿಯಲು ಅನುಮತಿ ಪಡೆದು ಇಡೀ ಮರವನ್ನೇ ಕಡಿದ ಬಿಬಿಎಂಪಿ ಸಿಬ್ಬಂದಿ
ಕೊಂಬೆ ಮೈ ಮೇಲೆ ಬೀಳುತ್ತಿದ್ದಂತೆ ರಸ್ತೆ ಮೇಲೆ ಬಿದ್ದ ಚಂದನ್ನ ಕುತ್ತಿಗೆ ಗಾಯವಾಗಿದೆ. ಅಲ್ಲದೆ, ಬೆನ್ನು ಮೂಳೆ ಮುರಿದಿದೆ. ಏಳೆಂಟು ನಿಮಿಷಗಳ ಕಾಲ ರಸ್ತೆಯಲ್ಲಿ ನರಳಾಡಿದ್ದ ಚಂದನ್ನನ್ನು ಬಳಿಕ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕಳೆದ 14 ದಿನಗಳಿಂದ ಖಾಸಗಿ ಆಸ್ಪತ್ರೆಯಲ್ಲಿ ಚಂದನ್ಗೆ ಚಿಕಿತ್ಸೆ ನೀಡಲಾಗುತ್ತಿದ್ದಾರೆ. ಈ ನಡುವೆ ಆಶೋಕನಗರ ಪೊಲೀಸರಿಗೆ ಚಂದನ್ ದೂರು ನೀಡಿದ್ದಾರೆ.
ಮರದ ಕೊಂಬೆ ರಸ್ತೆಗೆ ಬೀಳುವಂತಿದ್ದರೂ ಅದನ್ನು ತೆರವು ಮಾಡದೆ ನಿರ್ಲಕ್ಷ್ಯ ಮಾಡಿದ್ದಾರೆ. ಹೀಗಾಗಿ ಬಿಬಿಎಂಪಿ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ದೂರಿನಲ್ಲಿ ಮನವಿ ಮಾಡಿದ್ದಾರೆ. ಖಾಸಗಿ ಶಾಲೆ ಹಾಗೂ ಬಿಬಿಎಂಪಿ ವಿರುದ್ಧ ಪ್ರಕರಣ ದಾಖಲುಸಿಕೊಂಡ ಪೊಲೀಸರು, ತನಿಖೆ ಕೈಗೊಂಡಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ