‘ಮಾಸ್ಕ್ ಎಲ್ಲಿ ಸ್ವಾಮಿ?’ ಮುಖಗವಸು ಇಲ್ಲದೆ ಸೈಕಲ್​ನಲ್ಲಿ ಬೆಂಗಳೂರು ಸುತ್ತಿದ ತೇಜಸ್ವಿ ಸೂರ್ಯಗೆ ಜನರ ಪ್ರಶ್ನೆ

| Updated By: ganapathi bhat

Updated on: Jul 25, 2021 | 4:16 PM

Tejasvi Surya: ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ಮಾಸ್ಕ್ ಇಲ್ಲದೆ ಬೆಂಗಳೂರು ತುಂಬಾ ಸೈಕಲ್ ಸವಾರಿ ಮಾಡಿದ್ದಾರೆ. ಆ ಫೋಟೊಗಳನ್ನು ಕೂಡ ತಮ್ಮ ಇನ್​ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಕೊರೊನಾ ನಡುವೆ ಜನಪ್ರತಿನಿಧಿಗಳು ಹೀಗೆ ನಡೆದುಕೊಳ್ಳುತ್ತಿರುವುದು ಜನರ ಆಕ್ಷೇಪಕ್ಕೆ ಕಾರಣವಾಗಿದೆ.

‘ಮಾಸ್ಕ್ ಎಲ್ಲಿ ಸ್ವಾಮಿ?’ ಮುಖಗವಸು ಇಲ್ಲದೆ ಸೈಕಲ್​ನಲ್ಲಿ ಬೆಂಗಳೂರು ಸುತ್ತಿದ ತೇಜಸ್ವಿ ಸೂರ್ಯಗೆ ಜನರ ಪ್ರಶ್ನೆ
ತೇಜಸ್ವಿ ಸೂರ್ಯ ಸೈಕಲ್ ಸವಾರಿ
Follow us on

ಬೆಂಗಳೂರು: ಕೊರೊನಾ ಎರಡನೇ ಅಲೆ ಇನ್ನೂ ಸಂಪೂರ್ಣ ಕೊನೆಯಾಗಿಲ್ಲ. ದಿನನಿತ್ಯ 400 ರಿಂದ 600 ರಷ್ಟು ಕೊವಿಡ್-19 ಸೋಂಕು ಪ್ರಕರಣಗಳು ಬೆಂಗಳೂರು ನಗರದಲ್ಲಿ ದೃಢವಾಗುತ್ತಿದೆ. ಉಳಿದಂತೆ, ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಕೂಡ ಕೊರೊನಾ ಪ್ರಕರಣಗಳು ಶೂನ್ಯಕ್ಕೆ ಇಳಿದಿಲ್ಲ. ಅಷ್ಟೇ ಅಲ್ಲದೆ ಕೊವಿಡ್ ಮೂರನೇ ಅಲೆಯ ಆತಂಕ ಕೂಡ ಜನರಲ್ಲಿದೆ. ಹೀಗಾಗಿ, ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಪಾಲಿಸುವುದು, ಇತ್ಯಾದಿ ಕೊರೊನಾ ಮಾರ್ಗಸೂಚಿಗಳನ್ನು ತಪ್ಪದೆ ಆಚರಿಸುವುದು ಜನರ ಕರ್ತವ್ಯವಾಗಿದೆ. ಈ ಬಗ್ಗೆ ಸರ್ಕಾರ, ಆರೋಗ್ಯ ಇಲಾಖೆ ಮತ್ತು ತಜ್ಞರು ಕೂಡ ಎಚ್ಚರಿಸುತ್ತಲೇ ಇದ್ದಾರೆ. ಈ ನಡುವೆ, ನಮಗೆ ಮಾದರಿಯಾಗಿ ಇರಬೇಕಾದ ಜನನಾಯಕರೇ ದಾರಿ ತಪ್ಪಿದರೆ ಹೇಗೆ?

ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ಮಾಸ್ಕ್ ಇಲ್ಲದೆ ಬೆಂಗಳೂರು ತುಂಬಾ ಸೈಕಲ್ ಸವಾರಿ ಮಾಡಿದ್ದಾರೆ. ಆ ಫೋಟೊಗಳನ್ನು ಕೂಡ ತಮ್ಮ ಇನ್​ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಕೊರೊನಾ ನಡುವೆ ಜನಪ್ರತಿನಿಧಿಗಳು ಹೀಗೆ ನಡೆದುಕೊಳ್ಳುತ್ತಿರುವುದು ಜನರ ಆಕ್ಷೇಪಕ್ಕೆ ಕಾರಣವಾಗಿದೆ. ತೇಜಸ್ವಿ ಸೂರ್ಯ ನಡೆಗೆ ಜನರು ಖಾರವಾಗಿಯೇ ಪ್ರತಿಕ್ರಿಯೆ ನೀಡಿದ್ದಾರೆ, ಪ್ರಶ್ನೆ ಮಾಡಿದ್ದಾರೆ.

ಮಾಸ್ಕ್ ಎಲ್ಲಿ? ಮಾಸ್ಕ್? ಮಾಸ್ಕ್ ಧರಿಸಿ ಎಂದು ನೆಟ್ಟಿಗರು ಇನ್​ಸ್ಟಾಗ್ರಾಂ ಪೋಸ್ಟ್​ಗೆ ಕಮೆಂಟ್ ಮಾಡಿದ್ದಾರೆ. ತೇಜಸ್ವಿ ಸೂರ್ಯ ಮಾತ್ರವಲ್ಲ. ಸೂಕ್ಷ್ಮವಾಗಿ ಗಮನಿಸಿದರೆ, ವಿವಿಧ ಪಕ್ಷಗಳ ರಾಜಕೀಯ ನಾಯಕರು ಕೊರೊನಾ ಮಾರ್ಗಸೂಚಿ ಉಲ್ಲಂಘಿಸಿ ಕಾರ್ಯಕ್ರಮಗಳಲ್ಲಿ ಭಾಗಿಯಾಗುವುದು ಕಂಡುಬರುತ್ತಿದೆ. ಜನರ ಹಿತ ಕಾಯಬೇಕಾದ, ಜನರಿಗೆ ತಿಳಿಹೇಳಬೇಕಾದವರೇ ಹೀಗೆ ಬೇಜವಾಬ್ದಾರಿ ತೋರುವುದು ಹಾಗೂ ಅದನ್ನು ಹೆಮ್ಮೆಯಿಂದ ಪ್ರದರ್ಶಿಸುವುದು ವಿಷಾದ ಮೂಡಿಸಿದೆ.

 

ಇದನ್ನೂ ಓದಿ: ಬೆಂಗಳೂರು ಮೆಟ್ರೊ 2ಎ, 2ಬಿ ಹಂತಗಳಿಗೆ ಕೇಂದ್ರದ ಅನುಮೋದನೆ: ಸಂಸದ ತೇಜಸ್ವಿ ಸೂರ್ಯ ಸಂತಸ

ಸಂಸದ ತೇಜಸ್ವಿ ಸೂರ್ಯ ಆಪ್ತ ಸಹಾಯಕನ ಹೆಸರಲ್ಲಿ ರೆಮ್​ಡೆಸಿವಿರ್ ಔಷಧ ಕೊಡಿಸುವುದಾಗಿ ಕೊವಿಡ್ ಸೋಂಕಿತರಿಗೆ ವಂಚನೆ

(Netizens questions BJP MP Tejasvi Surya for Not Wearing Mask and Cycling in Bengaluru City)