‘ಸೆಪ್ಟೆಂಬರ್ ಕಳೆದರೆ ಸಿಎಂ ಯಡಿಯೂರಪ್ಪನವರಿಗೆ ಒಳ್ಳೆಯ ಕಾಲ ಬರಲಿದೆ’: ಬ್ರಹ್ಮಾಂಡ ಗುರೂಜಿ ಭವಿಷ್ಯ

ಮಠಾಧೀಶರ ಸಮಾವೇಶ: ಮುಖ್ಯಮಂತ್ರಿ ಬಿ.ಎಸ್,ಯಡಿಯೂರಪ್ಪನವರು ಸೆಪ್ಟೆಂಬರ್​ವರೆಗೆ ಕಳೆದರೆ ನಂತರ ಅವರೇ ಅಧಿಕಾರಾವಧಿಯನ್ನು ಪೂರೈಸುತ್ತಾರೆ ಎಂದು ಬ್ರಹ್ಮಾಂಡ ಗುರೂಜಿ ಭವಿಷ್ಯ ನುಡಿದಿದ್ದಾರೆ. ಇದೇ ವೇಳೆ ಯಡಿಯೂರಪ್ಪನವರು ತಮ್ಮ ತಪ್ಪುಗಳನ್ನು ತಿದ್ದಿಕೊಳ್ಳಬೇಕು ಎಂದು ಅವರು ಕಿವಿಮಾತು ಹೇಳಿದ್ದಾರೆ.

ಬೆಂಗಳೂರು: ಮುಂದಿನ ಸೆಪ್ಟೆಂಬರ್ ಕಳೆದರೆ ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ಒಳ್ಳೆ ಕಾಲ ಬರುತ್ತದೆ. ಸೆಪ್ಟೆಂಬರ್​ವರೆಗೂ ಈಗಿರುವ ಪರಿಸ್ಥಿತಿಯೇ ಇರುತ್ತದೆ. ಒಂದು ವೇಳೆ ಸೆಪ್ಟೆಂಬರ್ ದಾಟಿದರೆ ಅವರು ಪೂರ್ಣಾವಧಿಯನ್ನು ಪೂರೈಸುತ್ತಾರೆ ಎಂದು ಬ್ರಹ್ಮಾಂಡ ಗುರೂಜಿ ಭವಿಷ್ಯ ನುಡಿದಿದ್ದಾರೆ. ಮಠಾಧೀಶರ ಮಹಾ ಸಮಾವೇಶಕ್ಕೆ ಆಗಮಿಸಿ ಮಾಧ್ಯಮದವರೊಂದಿಗೆ ಮಾತನಾಡಿದ ಬ್ರಹ್ಮಾಂಡ ಗುರೂಜಿ, ಸಿಎಂ ಯಡಿಯೂರಪ್ಪ ಅವರನ್ನು ಬಲಪಡಿಸಲು ಬಂದಿದ್ದೇವೆ. ಅವರಿಗೆ ಕಳೆದ ಸೆಪ್ಟೆಂಬರ್ ನಿಂದ ರಾಹು ಶನಿ ಕಾಟ ಇದೆ. ನಾನು ಕೆಲವು ಮಂತ್ರಿಗಳಿಗೆ ಮೊದಲೇ ಹೇಳಿದ್ದೆ. ಆದರೆ ಅವರು ಯಡಿಯೂರಪ್ಪನವರಿಗೆವಿಚಾರ ತಿಳಿಸಿಲ್ಲ. ಯಡಿಯೂರಪ್ಪನವರು ಮುಂದುವರಿಯಲಿ ಎಂದು ನಾವೆಲ್ಲರೂ ಸೇರಿದ್ದೇವೆ ಎಂದು ಗುರೂಜಿ ಹೇಳಿದ್ದಾರೆ. 

ಗ್ರಹಗತಿಯಲ್ಲಿ ಕೇತು ಇರುವುದರಿಂದ ಅನುಮಾನ ಹೀಗೆಯೇ ಮುಂದುವರಿಯುತ್ತದೆ. ಸೆಪ್ಟೆಂಬರ್​ವರೆಗೆ ಹೀಗೆಯೇ ಇರುತ್ತದೆ. ಸೆಪ್ಟೆಂಬರ್ ಕಳೆದರೆ ಪೂರ್ಣಾವಧಿ ಪೂರೈಸುತ್ತಾರೆ. ಗುರು ಹಿರಿಯರು ತಮ್ಮ ಮನೆ ಸರಿಪಡಿಸುತ್ತಾರೆ. ಅಂತೆಯೇ, ಈಗಲೂ ಗುರುಗಳೆಲ್ಲ ಸೇರಿದ್ದಾರೆ. ಸಣ್ಣಪುಟ್ಟ ಸರಿ ತಪ್ಪು ಇದ್ದರೂ ಯಡಿಯೂರಪ್ಪನವರು ಸರಿಪಡಿಸಿಕೊಳ್ಳಬೇಕು ಎಂದು ಬ್ರಹ್ಮಾಂಡ ಗುರೂಜಿ ಕಿವಿಮಾತು ಹೇಳಿದ್ದಾರೆ.

ಇದನ್ನೂ ಓದಿ: ಉತ್ತರಪ್ರದೇಶದಂತೆ ಇಲ್ಲೂ ಮಠಾಧೀಶರನ್ನ ಸಿಎಂ ಮಾಡಿ: ಮುಷ್ಟೂರು ಮಠದ ರುದ್ರಮುನಿ ಶಿವಾಚಾರ್ಯ ಶ್ರೀ

ಇದನ್ನೂ ಓದಿ: ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿ ಹಿಂದುಳಿದ ವರ್ಗಕ್ಕೆ ಏನೂ ಮಾಡಿಲ್ಲ: ನಳಿನ್ ಕುಮಾರ್ ಕಟೀಲ್

(After September CM BS Yediyurappa having good time says Brahmanda Guruji)

Click on your DTH Provider to Add TV9 Kannada