Namma Metro: ಮೈಸೂರು ರಸ್ತೆಯಿಂದ ಕೆಂಗೇರಿವರೆಗೆ ನಿರ್ಮಾಣವಾದ ನೂತನ ಮೆಟ್ರೋ ಮಾರ್ಗದ ಸುರಕ್ಷತೆ ಪರೀಕ್ಷೆಗೆ ದಿನಾಂಕ ನಿಗದಿ

ಮೈಸೂರು ರಸ್ತೆ ನಾಯಂಡಹಳ್ಳಿ ಯಿಂದ ಕೆಂಗೇರಿವರೆಗೆ ಸಿದ್ದವಾಗಿರೋ ನೂತನ ಮೆಟ್ರೋ ರೈಲು ಮಾರ್ಗ ಮೇ ತಿಂಗಳಲ್ಲೆ ಮಾರ್ಗದ ಅಂದಿನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ರೈಲ್ವೆ ಮಾರ್ಗದ ವೀಕ್ಷಣೆ ಮಾಡಿದ್ದರು.

Namma Metro: ಮೈಸೂರು ರಸ್ತೆಯಿಂದ ಕೆಂಗೇರಿವರೆಗೆ ನಿರ್ಮಾಣವಾದ ನೂತನ ಮೆಟ್ರೋ ಮಾರ್ಗದ ಸುರಕ್ಷತೆ ಪರೀಕ್ಷೆಗೆ ದಿನಾಂಕ ನಿಗದಿ
ನಮ್ಮ ಮೆಟ್ರೋ
Edited By:

Updated on: Jul 29, 2021 | 9:01 PM

ಬೆಂಗಳೂರು: ಮೈಸೂರು ರಸ್ತೆಯಿಂದ ಕೆಂಗೇರಿವರೆಗೆ ನಿರ್ಮಾಣವಾದ ನೂತನ ಮೆಟ್ರೋ (Namma Metro) ಮಾರ್ಗದ ಸುರಕ್ಷತೆ ಪರೀಕ್ಷೆಗೆ ಕೊನೆಗೂ ದಿನಾಂಕ ನಿಗದಿಯಾಗಿದೆ. ಅಗಸ್ಟ್ 11 ಮತ್ತು 12ರಂದು ಸುರಕ್ಷತಾ ಆಯುಕ್ತರು ಮಾರ್ಗದ ಸುರಕ್ಷತೆಯ ಪರಿಶೀಲನೆ ನಡೆಸಲಿದ್ದಾರೆ. ಸುರಕ್ಷತಾ ಆಯುಕ್ತರು ಒಪ್ಪಿಗೆ ನೀಡಿದ ಬಳಿಕವಷ್ಟೇ ನೂತನ ಮೆಟ್ರೋ ಮಾರ್ಗ ಉದ್ಘಾಟನೆಗೊಳ್ಳಲಿದೆ. ಈ ಕುರಿತು ಬಿಎಂಆರ್​ಸಿಎಲ್ ಕೇಂದ್ರ ಕಚೇರಿ ಅಧಿಕೃತ ಮಾಹಿತಿ ಒದಗಿಸಿದೆ.

ಮೈಸೂರು ರಸ್ತೆ ನಾಯಂಡಹಳ್ಳಿ ಯಿಂದ ಕೆಂಗೇರಿವರೆಗೆ ಸಿದ್ದವಾಗಿರೋ ನೂತನ ಮೆಟ್ರೋ ರೈಲು ಮಾರ್ಗ ಮೇ ತಿಂಗಳಲ್ಲೆ ಮಾರ್ಗದ ಅಂದಿನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ರೈಲ್ವೆ ಮಾರ್ಗದ ವೀಕ್ಷಣೆ ಮಾಡಿದ್ದರು. ಅಲ್ಲದೇ, ಉದ್ಘಾಟನೆಯ ಬಗ್ಗೆಯೂ ಘೋಷಣೆ ಮಾಡಿದ್ದರು. ಆದರೆ ಮೆಟ್ರೋ ಸುರಕ್ಷತೆ ಆಯುಕ್ತರ ಭೇಟಿಯ ದಿನಾಂಕ ನಿಗದಿಯಾಗದ ಕಾರಣ ಉದ್ಘಾಟನೆ ವಿಳಂಬವಾಗಿತ್ತು.

ಇದನ್ನೂ ಓದಿ: 

Gang War: ಬೆಂಗಳೂರು- ರಾಯಲಸೀಮಾ ಮಂಗಳಮುಖಿಯರ ಮಧ್ಯೆ ಸಿನಿಮಾ ರೀತಿಯ ಗ್ಯಾಂಗ್ ವಾರ್; ಏನಿದು ಗಲಾಟೆ?

Uttara Kannada Flood: ಭೂಕುಸಿತಕ್ಕೊಳಗಾದ ಕಳಚೆ ಗ್ರಾಮದ ಸಂಪೂರ್ಣ ಸ್ಥಳಾಂತರ, ನೊಂದವರಿಗೆ ಶೀಘ್ರ ಪರಿಹಾರ: ಸಿಎಂ ಬಸವರಾಜ ಬೊಮ್ಮಾಯಿ ಸೂಚನೆ

(New metro line from Mysore road to Kengeri safety inspection date is scheduled)