ವಿದ್ಯಾರ್ಥಿನಿಯರಿಗೆ ಶುಚಿ ಯೋಜನೆ ಜಾರಿಯಲ್ಲಿ ವಿಳಂಬ; ರಾಜ್ಯ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ಹೈಕೋರ್ಟ್
Karnataka High Court : ಅಗಸ್ಟ್ 5 ರಂದು ಖುದ್ದು ವಿವರಣೆ ಆರೋಗ್ಯ ಇಲಾಖೆ ಆಯುಕ್ತರಿಗೆ ಹೈಕೋರ್ಟ್ ಸೂಚನೆ ನೀಡಿದೆ. ‘ಶುಚಿ’ ವಿದ್ಯಾರ್ಥಿನಿಯರಿಗೆ ಸ್ಯಾನಿಟರಿ ನ್ಯಾಪ್‌ಕಿನ್ ಒದಗಿಸುವ ಯೋಜನೆಯಾಗಿದ್ದು, ಸರ್ಕಾರಿ ಮತ್ತು ಅನುದಾನಿತ ಶಾಲಾ ಕಾಲೇಜುಗಳಿಗೆ ಅನ್ವಯವಾಗಲಿದೆ.
ಬೆಂಗಳೂರು: ವಿದ್ಯಾರ್ಥಿನಿಯರಿಗೆ ‘ಶುಚಿ’ ಯೋಜನೆ ಜಾರಿ ನಿರ್ಲಕ್ಷ್ಯಗೊಳಿಸಿದ ಹಿನ್ನೆಲೆಯಲ್ಲಿ ಹೈಕೋರ್ಟ್ (Karnataka High Court) ರಾಜ್ಯ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದೆ. ಬಜೆಟ್ ಅನುದಾನವಿದ್ದರೂ ಯೋಜನೆ ಜಾರಿ ವಿಳಂಬಗೊಳಿಸಲಾಗಿದೆ ಎಂದು ಹೈಕೋರ್ಟ್ ವಿಭಾಗೀಯ ಪೀಠ ರಾಜ್ಯ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡುಕೊಂಡಿದೆ. ಕೇವಲ ಕಾಗದದಲ್ಲಿ ಮಾತ್ರ ಯೋಜನೆ ಇದೆ. ಸರ್ಕಾರದ (Karnataka Government) ನಿರ್ಲಕ್ಷ್ಯದಿಂದ ವಿದ್ಯಾರ್ಥಿನಿಯರಿಗೆ ಸಮಸ್ಯೆ ಉಂಟಾಗುತ್ತಿದೆ. ನಿರ್ದಿಷ್ಟ ದಿನಗಳಲ್ಲಿ ಶಾಲೆಯಿಂದ ದೂರವುಳಿಯುವ ಸ್ಥಿತಿಯಿದೆ. ‘ಶುಚಿ’ ಯೋಜನೆ ಹೆಣ್ಣುಮಕ್ಕಳ ಖಾಸಗಿತನ ಮತ್ತು ಘನತೆಯ ವಿಚಾರವಾಗಿದೆ. ಇದನ್ನೂ ಸಹ ಮಕ್ಕಳ ಮೂಲಭೂತ ಹಕ್ಕಿನಂತೆ ಪರಿಗಣಿಸಬೇಕಿದೆ ಎಂದು ಹೈಕೋರ್ಟ್ ಅಭಿಪ್ರಾಯವ್ಯಕ್ತಪಡಿಸಿ ರಾಜ್ಯ ಸರ್ಕಾರದ ನಿರ್ಲಕ್ಷವನ್ನು ಪ್ರಶ್ನಿಸಿದೆ.
‘ಶುಚಿ’ ಯೋಜನೆ ಜಾರಿಯಲ್ಲಿ ವಿಳಂಬವಾದರೆ ಶಿಕ್ಷಣ ಮತ್ತು ಸಬಲೀಕರಣ ಹೇಗೆ ಸಾಧ್ಯ ಎಂದು ಪ್ರಶ್ನಿಸಿದ ಹೈಕೋರ್ಟ್ ವಿಭಾಗೀಯ ಪೀಠ ಅಸಮಾಧಾನ ವ್ಯಕ್ತಪಡಿಸಿದೆ. ಜತೆಗೆ ಅಗಸ್ಟ್ 5 ರಂದು ಖುದ್ದು ವಿವರಣೆ ಆರೋಗ್ಯ ಇಲಾಖೆ ಆಯುಕ್ತರಿಗೆ ಹೈಕೋರ್ಟ್ ಸೂಚನೆ ನೀಡಿದೆ. ‘ಶುಚಿ’ ವಿದ್ಯಾರ್ಥಿನಿಯರಿಗೆ ಸ್ಯಾನಿಟರಿ ನ್ಯಾಪ್‌ಕಿನ್ ಒದಗಿಸುವ ಯೋಜನೆಯಾಗಿದ್ದು, ಸರ್ಕಾರಿ ಮತ್ತು ಅನುದಾನಿತ ಶಾಲಾ ಕಾಲೇಜುಗಳಿಗೆ ಅನ್ವಯವಾಗಲಿದೆ.
ಕ್ಯಾಮ್ಸ್ ಪ್ರಧಾನ ಕಾರ್ಯದರ್ಶಿ ಶಶಿಕುಮಾರ್ ಮೇಲೆ ಮಚ್ಚಿನಿಂದ ಹಲ್ಲೆಗೆ ಯತ್ನ ಕ್ಯಾಮ್ಸ್ ಪ್ರಧಾನ ಕಾರ್ಯದರ್ಶಿ ಶಶಿಕುಮಾರ್ ಮೇಲೆ ಮಚ್ಚಿನಿಂದ ಹಲ್ಲೆಗೆ ಯತ್ನಿಸಲಾಗಿದೆ. ಜಾಲಹಳ್ಳಿ ಪೊಲೀಸ್ ಠಾಣಾ ವ್ಯಪ್ತಿಯಲ್ಲಿ ಘಟನೆ ನಡೆದಿದ್ದು, ಮನೆ ಮುಂದೆ ಕಾರು ನಿಲ್ಲಿಸಿ ಮನೆಗೆ ತೆರಳುವ ಸಮಯದಲ್ಲಿ ಘಟನೆ ನಡೆದಿದೆ. ಘಟನಾ ಸ್ಥಳಕ್ಕೆ ಭೇಟಿ ನೀಡಿದ ಉತ್ತರ ವಿಭಾಗದ ಡಿಸಿಪಿ ಧರ್ಮೇಂದ್ರ ಕುಮಾರ್ ಮೀನಾ ಮಾಹಿತಿ ಪಡೆದಿದ್ದಾರೆ.
ರಾಜ್ಯದಲ್ಲಿ ಇಂದು 2,052 ಜನರಿಗೆ ಕೊವಿಡ್ ದೃಢ, 35 ಜನರು ನಿಧನ ಕರ್ನಾಟಕದಲ್ಲಿ ಇಂದು ಒಂದೇ ದಿನ 2,052 ಜನರಿಗೆ ಕೊವಿಡ್ ಸೋಂಕು (Karnataka Covid Update) ದೃಢಪಟ್ಟಿದ್ದು, 35 ಜನರು ನಿಧನರಾಗಿದ್ದಾರೆ. ಬೆಂಗಳೂರು ನಗರ ಜಿಲ್ಲೆಯಲ್ಲಿ ಇಂದು ಒಂದೇ ದಿನ 506 ಜನರಿಗೆ ಸೋಂಕು ಖಚಿತವಾಗಿದ್ದು, 9 ಜನರು ಸಾವನ್ನಪ್ಪಿದ್ದಾರೆ. ಇಂದು ರಾಜ್ಯದಲ್ಲಿ 1,22,803 ಜನರಿಗೆ ಕೊವಿಡ್ ಲಸಿಕೆ ವಿತರಿಸಲಾಗಿದೆ. ಬಿಬಿಎಂಪಿ ನಗರ ವ್ಯಾಪ್ತಿಯಲ್ಲಿ 29,393 ಜನರಿಗೆ ಕೊವಿಡ್ ಲಸಿಕೆ ನೀಡಲಾಗಿದ್ದು, ಈವರೆಗೆ 2,97,22,558 ಡೋಸ್ ಕೊವಿಡ್ ಲಸಿಕೆ ವಿತರಿಸಲಾಗಿದೆ.
ಇದನ್ನೂ ಓದಿ:
Uttara Kannada Flood: ಚಿತ್ರನೋಟ: ಸಿಎಂ ಬಸವರಾಜ ಬೊಮ್ಮಾಯಿ ಭೇಟಿ ಕೊಟ್ಟ ಭೂಕುಸಿತಕ್ಕೊಳಗಾದ ಕಳಚೆ ಗ್ರಾಮ ಹೇಗಿದೆ?
(High Court to take down state government in Delay in implementation of Shuchi Programme)
Published On - 11:12 pm, Thu, 29 July 21