ಚಿಕ್ಕಬಳ್ಳಾಪುರ: ಮಹಾಮಾರಿ ಕೊರೊನಾದಿಂದಾಗಿ(Coronavirus) ಕಳೆದ ಮೂರು ವರ್ಷದಿಂದ ಹೊಸ ವರ್ಷವನ್ನ ಸಂಭ್ರಮಿಸಲಾಗಿರಲಿಲ್ಲ. ಸದ್ಯ ಈ ಬಾರಿ ಹೊಸ ವರ್ಷಾಚರಣೆಗೆ(New Year 2023) ಅವಕಾಶ ಸಿಕ್ಕಿದ್ದು ಇಡೀ ರಾಜ್ಯ ಸಂಭ್ರಮದಿಂದ ಹೊಸ ವರ್ಷವನ್ನು ಬರ ಮಾಡಿಕೊಂಡಿದೆ. ಇಡೀ ಜಗತ್ತು 2022ಗೆ ಗುಡ್ ಬಾಯ್ ಹೇಳಿ 2023 ಬರಮಾಡಿಕೊಂಡಿದೆ. ಈ ಸಂಭ್ರಮಾಚರಣೆ ವೇಳೆ ಕೆಲ ಕಡೆ ಕೆಲವು ಅಹಿತಕರ ಘಟನೆಗಳು ಸಂಭವಿಸಿವೆ.
ಚಿಕ್ಕಬಳ್ಳಾಪುರ ತಾಲೂಕಿನ ಕಳವಾರದ ಸ್ಕಂದಗಿರಿ ಬೆಟ್ಟ ಬಳಿಯ ಮೈಸ್ಟ್ರಿ ರೋಸ್ಟರ್ ಕೆಫೆಯಲ್ಲಿ ಹುಕ್ಕಾ ಪಾರ್ಟಿ ನಡೆದಿದೆ. ಮದನ್ಗೌಡ ವಿರುದ್ಧ ಹುಕ್ಕಾ ಪಾರ್ಟಿ ಆಯೋಜಿಸಿದ್ದ ಆರೋಪ ಕೇಳಿ ಬಂದಿದೆ. ಸ್ಥಳಕ್ಕೆ ಚಿಕ್ಕಬಳ್ಳಾಪುರ ಗ್ರಾಮಾಂತರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇನ್ನು ಸಾಮೂಹಿಕವಾಗಿ ಯುವಕ, ಯುವತಿಯರು ಹುಕ್ಕಾ ಸೇದುತ್ತಿದ್ದ ವಿಡಿಯೋ ಚಿತ್ರೀಕರಿಸಿದ್ದ ಸ್ಥಳೀಯ ಪತ್ರಕರ್ತನ ಮೇಲೆ ಹಲ್ಲೆ ನಡೆದಿದೆ. ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಹೊಸ ವರ್ಷ ಸಂಭ್ರಮ ಹಿನ್ನೆಲೆ ರಾಯಚೂರು ನಗರದ ಬಸ್ ನಿಲ್ದಾಣದ ಬಳಿ ಇರುವ ಐತಿಹಾಸಿಕ ಕೋಟೆ ಒಳಗೆ ಯುವಕರು ಎಣ್ಣೆ ಪಾರ್ಟಿ ಮಾಡಿದ್ದಾರೆ. ಕೋಟೆಯ ಗೇಟನ್ನು ಹೊರಗಡೆಯಿಂದ ಲಾಕ್ ಮಾಡಲಾಗಿತ್ತು. ಆದ್ರೆ ಗೇಟ್ ಏರಿ ಒಳ ಹೋಗಿ ಯುವಕರು ಎಣ್ಣೆ ಪಾರ್ಟಿ ಮಾಡಿದ್ದಾರೆ. ಈ ವಿಚಾರ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಪೊಲೀಸರು ಆಗಮಿಸಿ ಯುವಕರನ್ನು ಚದುರಿಸಿದ್ದಾರೆ. ಈ ವೇಳೆ ಪೊಲೀಸರ ಜೊತೆ ಯುವಕರ ಕಿರಿಕ್ ಆಗಿದೆ. ಪಾನಮತ್ತರಾಗಿ ಖಾಕಿ ಜೊತೆ ಯುವಕರು ಕಿರಿಕ್ ಮಾಡಿಕೊಂಡಿದ್ದಾರೆ.
ಇದನ್ನೂ ಓದಿ: New Year Celebration: ಜಗತ್ತಿನ ವಿವಿಧ ದೇಶಗಳ ನಗರಗಳಲ್ಲಿನ ಹೊಸ ವರ್ಷದ ಸಂಭ್ರಮಾಚರಣೆ
ಬೆಂಗಳೂರಿನ ಬ್ರೆಗೇಡ್ ರೋಡ್, ಚರ್ಚ್ ಸೀಟ್ ನಲ್ಲಿ ಬೆಂಗಳೂರು ಮಂದಿ ಅದ್ದೂರಿಯಾಗಿ ಕುಣಿದು ಕುಪ್ಪಳಿಸಿ ಹೊಸ ವರ್ಷವನ್ನು ಬರ ಮಾಡಿಕೊಂಡಿದ್ದಾರೆ. ಆದ್ರೆ ಹೊಸ ವರ್ಷದ ಸಂಭ್ರಮದಲ್ಲಿದ್ದ ಕೆಲ ಮದ್ಯಪ್ರಿಯರು ಕಂಠ ಪೂರ್ತಿ ಕುಡಿದು ಫುಲ್ ಟೈಟಾಗಿದ್ದು ಯುವತಿ-ಯುವಕರು ಎಲ್ಲೆಂದರಲ್ಲಿ ತೂರಾಡುತ್ತಿದ್ದ ದೃಶ್ಯಗಳು ಕಂಡು ಬಂದಿವೆ. ಅತಿಯಾಗಿ ಕುಡಿದಿದ್ದ ಗೆಳೆಯರನ್ನ ಯುವಕರು ಕರೆದುಕೊಂಡು ಹೋಗುತ್ತಿದ್ದರು.
ಬ್ರಿಗೇಡ್ ರಸ್ತೆಯ ಎರಡು ಬದಿ ಬ್ಯಾರಿಕೇಡ್ ಹಾಕಿ ಸಂಚಾರ ನಿರ್ಬಂಧ ಹೇರಲಾಗಿತ್ತು. ರಸ್ತೆಯೂದ್ದಕ್ಕೂ ನೆರೆದಿದ್ದ ಜನರನ್ನ ಹೊರ ಕಳಿಸಲು ಪೊಲೀಸರು ಹರ ಸಾಹಸ ಪಡಬೇಕಾಯಿತು. ಮೈಕ್ ಮೂಲಕ ಅನೌನ್ಸ್ ಮಾಡುತ್ತಾ ಜನರನ್ನ ಮನವಿ ಮಾಡಿ ಪೊಲೀಸರು ಹೊರ ಕಳುಹಿಸುತ್ತಿದ್ದರು.
ಇನ್ನು ಬೆಂಗಳೂರಿನಲ್ಲಿ ಬೃಹತ್ ಗುಂಪನ್ನು ಚದುರಿಸಲು ಬೆಂಗಳೂರು ಪೊಲೀಸರು ಲಾಠಿ ಚಾರ್ಜ್ ಮಾಡಿದ್ದಾರೆ.
#WATCH | Karnataka: Bengaluru police lathi-charged to disperse the huge crowd after it went out of control. pic.twitter.com/yRMdyBSHww
— ANI (@ANI) December 31, 2022
ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 7:55 am, Sun, 1 January 23