ಬೆಂಗಳೂರಿನ ಐಕಿಯಾನಲ್ಲಿ ಶಾಪಿಂಗ್​ ವೇಳೆ ವ್ಯಕ್ತಿಗೆ ಹೃದಯಾಘಾತ: ದೇವರಂತೆ ಬಂದು ಪ್ರಾಣ ಉಳಿಸಿದ ವೈದ್ಯ, ವಿಡಿಯೋ ನೋಡಿ

ವ್ಯಕ್ತಿ ಒಬ್ಬರಿಗೆ ಏಕಾಏಕಿ ಎದೆ ನೋವು ಕಾಣಿಸಿಕೊಂಡಿದ್ದು ಅಲ್ಲೇ ಇದ್ದ ವೈದ್ಯರೊಬ್ಬರು ಸಿನಿಮೀಯ ರೀತಿಯಲ್ಲಿ ಚಿಕಿತ್ಸೆ ನೀಡಿ ಪ್ರಾಣ ಉಳಿಸಿರುವಂತಹ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಬೆಂಗಳೂರಿನ ಐಕಿಯಾನಲ್ಲಿ ಶಾಪಿಂಗ್​ ವೇಳೆ ವ್ಯಕ್ತಿಗೆ ಹೃದಯಾಘಾತ: ದೇವರಂತೆ ಬಂದು ಪ್ರಾಣ ಉಳಿಸಿದ ವೈದ್ಯ, ವಿಡಿಯೋ ನೋಡಿ
ಎದೆ ನೋವು ಕಾಣಿಸಿಕೊಂಡ ವ್ಯಕ್ತಿಗೆ ಪ್ರಥಮ ಚಿಕಿತ್ಸೆ ನೀಡಿದ ವೈದ್ಯ
Follow us
TV9 Web
| Updated By: ಗಂಗಾಧರ​ ಬ. ಸಾಬೋಜಿ

Updated on: Dec 31, 2022 | 9:31 PM

ಎದೆ ನೋವು (heart attack) ಯಾವಾಗ ಮತ್ತು ಹೇಗೆ ಬರುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಕುಳಿತುಕೊಂಡಲೇ ವ್ಯಕ್ತಿ ಕುಸಿದು ಬೀಳುವುದು, ಡ್ಯಾನ್ಸ್​ ಮಾಡುತ್ತಿರುವಾಗ, ಇತ್ತೀಚೆಗೆ ಮದುವೆ ಮನೆಯಲ್ಲಿ ವರನಿಗೆ ಎದೆ ನೋವು ಕಾಣಿಸಿಕೊಂಡು ಆತ ಸಾವಪ್ಪಿರುವಂತಹ ಘಟನೆ ಕೂಡ ವರದಿಯಾಗಿತ್ತು. ಸದ್ಯ ಇಂತಹದೇ ಒಂದು ಘಟನೆ ನಡೆದಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ವೈರಲ್​ ಆಗಿದೆ. ಶಾಪಿಂಗ್​ ಮಾಡುವ ಸಂದರ್ಭದಲ್ಲಿ ವ್ಯಕ್ತಿ ಒಬ್ಬರಿಗೆ ಏಕಾಏಕಿ ಎದೆ ನೋವು ಕಾಣಿಸಿಕೊಂಡಿದ್ದು ನೋಡ ನೋಡುತ್ತಿದ್ದಂತೆ ಕುಸಿದು ಬಿದ್ದಿದ್ದು, ಅಲ್ಲೇ ಇದ್ದ ವೈದ್ಯರೊಬ್ಬರು ಸಿನಿಮೀಯ ರೀತಿಯಲ್ಲಿ ಚಿಕಿತ್ಸೆ ನೀಡಿ ಪ್ರಾಣ ಉಳಿಸಿರುವಂತಹ ಘಟನೆ ಬೆಂಗಳೂರಿನ (Bengaluru) ಐಕಿಯಾ ಮಾಲ್‌ನಲ್ಲಿ ನಡೆದಿದೆ.

ದೇವರಂತೆ ಬಂದ ವೈದ್ಯ

ಈ ಕುರಿತಾಗಿ ವೈದ್ಯರ ಮಗ ರೋಹಿತ್ ಡಾಕ್​ ಎನ್ನುವವರು ತಮ್ಮ ಟ್ವೀಟರ್​ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ನನ್ನ ತಂದೆ ಒಂದು ಜೀವ ಉಳಿಸಿದರು. ನಾವು ಬೆಂಗಳೂರಿನ ಐಕಿಯಾ ಮಾಲ್ ಇದ್ದೇವು. ಈ ವೇಳೆ ವ್ಯಕ್ತಿ ಒಬ್ಬರಿಗೆ ಸಡನ್​ ಆಗಿ ಎದೆ ನೋವು ಕಾಣಿಸಿಕೊಂಡಿತು. ಜೊತೆಗೆ ನಾಡಿಮಿಡಿತ ಕೂಡ ಇರಲಿಲ್ಲ. ನನ್ನ ತಂದೆ 10 ನಿಮಿಷಕ್ಕೂ ಹೆಚ್ಚು ಕಾಲ ಅವರಿಗೆ ಪ್ರಥಮ ಚಿಕಿತ್ಸೆ ನೀಡಿ ಅವರನ್ನು ಬದುಕಿಸಿದರು. ಬಳಿಕ ಪಕ್ಕದ ಲೇನ್‌ನಲ್ಲಿದ್ದ ವೈದ್ಯರು ಕೂಡಲೇ ನೆರವಿಗೆ ಧಾವಿಸಿ ಪ್ರಾಣವನ್ನ ಉಳಿಸಿದ್ದಾರೆ ಎಂದು ಟ್ವೀಟ್​ನಲ್ಲಿ ಬರೆದುಕೊಂಡಿದ್ದಾರೆ.

ಇದನ್ನೂ ಓದಿ: ನಿಮ್ಮ ಇಂಡಿಯಾದಲ್ಲಿ ಏನು ನಡೀತಿದೆ? ಈ ಚಿಲ್ಟಾರಿಗಳ ರೀಲ್​ ನೋಡಿ, ನಗು ಉಕ್ಕದಿದ್ದರೆ ಹೇಳಿ

ಇನ್ನು ಕರ್ನಾಟಕದಲ್ಲಿ ಇತ್ತೀಚಿನ ದಿನಗಳಲ್ಲಿ ಹೃದಯಾಘಾತದಿಂದ ಸಚಿವ ಉಮೇಶ್ ಕತ್ತಿಯಿಂದ ಹಿಡಿದು ನಟ ಪುನೀತ್ ರಾಜ್‌ಕುಮಾರ್‌ವರೆಗೆ ಹಲವು ವ್ಯಕ್ತಿಗಳ ಸಾವಿಗೆ ಸಾಕ್ಷಿಯಾಗಿದೆ. ಹಾಸ್ಯನಟ ರಾಜು ಶ್ರೀವಾಸ್ತವ್ ಮತ್ತು ಗಾಯಕ ಕೆಕೆ ಅವರಂತಹ ಇತರ ಸೆಲೆಬ್ರಿಟಿಗಳು ಸಹ ಹೃದಯಾಘಾತದಿಂದ ಪ್ರಾಣ ಕಳೆದುಕೊಂಡಿದ್ದಾರೆ.

ಇದನ್ನು ಓದಿ: ಕಮರ್ ತೇರಿ ಲೆಫ್ಟ್ ರೈಟ್; 17 ಮಿಲಿಯನ್​ ನೆಟ್ಟಿಗರು ಈ ಪುಟ್ಟಿಯ ಆತ್ಮವಿಶ್ವಾಸಕ್ಕೆ ಫಿದಾ

ವೈದ್ಯನ ಕಾರ್ಯಕ್ಕೆ ಶ್ಲಾಘನೆ

10 ನಿಮಿಷಕ್ಕೂ ಹೆಚ್ಚು ಕಾಲ ಛಲ ಬಿಡದೆ ಚಿಕಿತ್ಸೆ ನೀಡಿದ ವೈದ್ಯರ ಕಾರ್ಯಕ್ಕೆ ಸೋಶಿಯಲ್​ ಮೀಡಿಯಾದಲ್ಲಿ ಶ್ಲಾಘನೆ ವ್ಯಕ್ತವಾಗುತ್ತಿದೆ. ಹಲವು ನೆಟ್ಟಿಗರು ಶಿಕ್ಷಣ ಸಂಸ್ಥಗಳಲ್ಲಿ ಕಡ್ಡಾಯವಾಗಿ ಸಿಪಿಆರ್​ ತರಬೇತಿ ನೀಡಬೇಕು ಎಂದು ಒತ್ತಾಯಿಸಿದ್ದಾರೆ. ಇನ್ನು ವಿಡಿಯೋ ಹಂಚಿಕೊಂಡ ಕೆಲವೇ ಗಂಟೆಗಳಲ್ಲಿ 467,000 ವೀಕ್ಷಣೆ ಮತ್ತು ಸುಮಾರು 23,000 ಲೈಕ್ಸ್​ ಪಡೆದುಕೊಂಡಿದೆ.

ಮತ್ತಷ್ಟು ವೈರಲ್​ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.