Sign In

By signing in or creating an account, you agree with Associated Broadcasting Company's Terms & Conditions and Privacy Policy.

New Year: ಕೊರೊನಾ, ನೈಟ್ ಕರ್ಫ್ಯೂ, ನಿಷೇಧಾಜ್ಞೆ, ಮಳೆ; ಹಲವು ಅಡ್ಡಿ ಆತಂಕಗಳ ನಡುವೆ ಹೊಸವರ್ಷಾಚರಣೆ!

New Year 2022: ಕೊರೊನಾ ಮಹಾಮಾರಿ ಆಗಮನದ ಬಳಿಕ ಯಾವುದೇ ಸಂಭ್ರಮಾಚರಣೆಗಳು ತನ್ನ ಎಂದಿನ ಗೌಜು ಉಳಿಸಿಕೊಂಡಂತಿಲ್ಲ. ಕಳೆದ ವರ್ಷವೂ ಹಲವು ಬಾರಿ ಇದೇ ಅನುಭವ ಆಗಿದೆ. ಹಬ್ಬ ಹರಿದಿನಗಳ ಆಚರಣೆಗಳು ಕಟ್ಟುನಿಟ್ಟಿನ ಕ್ರಮದ ನಡುವೆಯೇ ನಡೆಯುವಂತಾಗಿದೆ.

New Year: ಕೊರೊನಾ, ನೈಟ್ ಕರ್ಫ್ಯೂ, ನಿಷೇಧಾಜ್ಞೆ, ಮಳೆ; ಹಲವು ಅಡ್ಡಿ ಆತಂಕಗಳ ನಡುವೆ ಹೊಸವರ್ಷಾಚರಣೆ!
ಸಾಂದರ್ಭಿಕ ಚಿತ್ರ
Follow us
TV9 Web
| Updated By: ganapathi bhat

Updated on:Dec 31, 2021 | 8:50 PM

ಬೆಂಗಳೂರು: ಕೊರೊನಾ ಸೋಂಕು, ಒಮಿಕ್ರಾನ್ ರೂಪಾಂತರಿ ಆತಂಕ, ಕೊವಿಡ್19 ಪ್ರಕರಣ ಹೆಚ್ಚಳ ಭೀತಿ ಈ ಎಲ್ಲಾ ಕಾರಣಗಳಿಂದ ಕರ್ನಾಟಕದಲ್ಲಿ ಹತ್ತು ದಿನಗಳ ನೈಟ್ ಕರ್ಫ್ಯೂ ವಿಧಿಸಲಾಗಿದೆ. ರಾತ್ರಿ 10 ಗಂಟೆಯಿಂದ ಬೆಳಗ್ಗೆ 5 ಗಂಟೆಯ ವರೆಗೆ ರಾತ್ರಿ ಕರ್ಫ್ಯೂ ಇರಲಿದೆ. ಇದಲ್ಲದೆ, ಹೊಸ ವರ್ಷಾಚರಣೆಗೆ ಜನಸಂದಣಿ ಹೆಚ್ಚುವ ಆತಂಕದಲ್ಲಿ ಇಂದು (ಡಿಸೆಂಬರ್ 31) ಬೆಂಗಳೂರು ನಗರದಲ್ಲಿ ಸಂಜೆ 6 ಗಂಟೆಯಿಂದಲೇ ನಿಷೇಧಾಜ್ಞೆ ಜಾರಿಗೊಳಿಸಿ ಬೆಂಗಳೂರು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಆದೇಶ ನೀಡಿದ್ದಾರೆ. ಇದೆಲ್ಲಕ್ಕೂ ಹೆಚ್ಚಾಗಿ ಗಾಯದ ಮೇಲೆ ಬರೆ ಎಳೆದಂತೆ ಇಂದು ಸಂಜೆಯ ವೇಳೆಗಾಗಲೇ ಬೆಂಗಳೂರು, ಮೈಸೂರು, ಕೋಲಾರದ ಭಾಗಗಳಲ್ಲಿ ಮಳೆಯ ಸಿಂಚನವಾಗಿದೆ. ಈ ಮಧ್ಯೆ ಹೊಸ ವರ್ಷಾಚರಣೆ ಕಳೆಗುಂದಿದೆ.

ಕೊರೊನಾ ಮಹಾಮಾರಿ ಆಗಮನದ ಬಳಿಕ ಯಾವುದೇ ಸಂಭ್ರಮಾಚರಣೆಗಳು ತನ್ನ ಎಂದಿನ ಗೌಜು ಉಳಿಸಿಕೊಂಡಂತಿಲ್ಲ. ಕಳೆದ ವರ್ಷವೂ ಹಲವು ಬಾರಿ ಇದೇ ಅನುಭವ ಆಗಿದೆ. ಹಬ್ಬ ಹರಿದಿನಗಳ ಆಚರಣೆಗಳು ಕಟ್ಟುನಿಟ್ಟಿನ ಕ್ರಮದ ನಡುವೆಯೇ ನಡೆಯುವಂತಾಗಿದೆ. ಸರ್ಕಾರದ ಮುನ್ನೆಚ್ಚರಿಕೆ ಕ್ರಮಗಳು ಜನರ ಗುಂಪು ಸೇರುವಿಕೆ, ಆಚರಣೆಯ ಭರಾಟೆಯನ್ನು ತಡೆದು ನಿಲ್ಲಿಸಿದೆ. ಈ ಬಾರಿಯ ಹೊಸ ವರ್ಷಾಚರಣೆ ಕೂಡ ಅದಕ್ಕೆ ಹೊರತಾಗಿಲ್ಲ.

ಸಾಮಾನ್ಯವಾಗಿ ಹೊಸ ವರ್ಷದ ಸಂಭ್ರಮ ಡಿಸೆಂಬರ್ 31ರ ತಡರಾತ್ರಿಯ ವರೆಗೆ ನಡೆಯುತ್ತದೆ. 12 ಗಂಟೆ ವೇಳೆಗೆ ಹೊಸ ವರ್ಷವನ್ನು ಸ್ವಾಗತಿಸುವುದು, ಬೆಂಗಳೂರಿನ ಎಂಜಿ ರಸ್ತೆ, ಬ್ರಿಗೇಡ್ ರಸ್ತೆ ಸಹಿತ ಇತರ ಕಡೆಗಳಲ್ಲಿ ಅಥವಾ ರಾಜ್ಯದ ವಿವಿಧ ಕಡೆಗಳಲ್ಲಿ ಕೂಡ ಜನರ ಸಂಭ್ರಮಾಚರಣೆ ಜೋರಾಗಿರುತ್ತದೆ. ಡಿಜೆ, ಪಬ್, ಬಾರ್, ರೆಸ್ಟೋರೆಂಟ್​ಗಳು ತುಂಬಿ ತುಳುಕುತ್ತಿರುತ್ತವೆ. ಹೊಸ ವರ್ಷದ ಪಾರ್ಟಿಯಲ್ಲಿ ಯುವಕ- ಯುವತಿಯರಿಂದ ತೊಡಗಿ ವಯಸ್ಕರೂ ಪಾಲ್ಗೊಳ್ಳುವುದಿದೆ.

ಈ ಬಾರಿಯ ಆಚರಣೆಯಲ್ಲಿ ಇದ್ಯಾವುದೂ ಇಲ್ಲ. ಹೋಟೆಲ್, ಬಾರ್, ಪಬ್​ಗಳಲ್ಲಿ 50-50 ನಿಯಮ ಹೇರಲಾಗಿದೆ. ಶೇಕಡಾ 50ರಷ್ಡು ಗ್ರಾಹಕರೊಂದಿಗೆ ಈ ಬಾರಿ ಹೋಟೆಲ್, ಬಾರ್, ಪಬ್, ರೆಸ್ಟೋರೆಂಟ್​ಗಳು ಕಾರ್ಯನಿರ್ವಹಿಸಬೇಕಿದೆ. ಅದರ ಜೊತೆಗೆ ನೈಟ್ ಕರ್ಫ್ಯೂ ಹಾಗೂ ಬೆಂಗಳೂರಿನಲ್ಲಿ ನಿಷೇಧಾಜ್ಞೆ ಕೂಡ ಹೇರಿರುವುದರಿಂದ ಜನರು ಅದಷ್ಟು ಬೇಗ ಮನೆ ಸೇರಬೇಕಾದ ಅನಿವಾರ್ಯತೆ ಉಂಟಾಗಿದೆ.

ಈ ಎಲ್ಲಾ ಕಾರಣಗಳಿಂದ ಜನರು ಹಲವು ಕಡೆ ಮಧ್ಯಾಹ್ನವೇ ಫ್ಯಾಮಿಲಿ ಔಟಿಂಗ್, ಗೆಳೆಯರ ಜೊತೆ ಊಟ, ಪಾರ್ಟಿ ಮಾಡಿಕೊಂಡಿದ್ದಾರೆ. ಅಥವಾ ಮನೆಯಲ್ಲೇ ಸರಳವಾಗಿ ಕುಟುಂಬದ ಜೊತೆಗೆ, ಸಣ್ಣ ಸ್ನೇಹಿತರ ಬಳಗದ ಜೊತೆಯಾಗಿ ಪಾರ್ಟಿ, ಮೋಜು ಮಸ್ತಿಯಲ್ಲಿ ತೊಡಗಿಕೊಂಡಿದ್ದಾರೆ. ಬಾರ್, ಪಬ್, ರೆಸ್ಟೋರೆಂಟ್​ಗಳು ಯಾವತ್ತಿನಂತೆ ಜನರಿಂದ ತುಂಬಿ ತುಳುಕುತ್ತಿಲ್ಲ. ರಾಜ್ಯದ ಪ್ರವಾಸಿ ತಾಣಗಳು ಕೂಡ ಜನರಿಲ್ಲದೆ ಬಿಕೋ ಎನ್ನುತ್ತಿದೆ.

ಬಹುತೇಕ ಮಂದಿ ಕೇಕ್ ಅನ್ನು ಮನೆಗೆ ಪಾರ್ಸೆಲ್ ತೆಗೆದುಕೊಂಡು ಹೋಗಿರುವ ಬಗ್ಗೆ ಅಂಗಡಿ, ಬೇಕರಿ ಮಾಲೀಕರು ತಿಳಿಸಿದ್ದಾರೆ. ಕೇಕ್ ಖರೀದಿಗೆ ಬೇಕರಿಗಳಲ್ಲಿ ಜನರು ಮುಗಿಬಿದ್ದು ವ್ಯಾಪಾರ ನಡೆಸಿದ್ದಾರೆ. ಸಮಯ ಮಿತಿಯೂ ಇರುವುದರಿಂದ ಸಂಜೆಯ ವೇಳೆಗಾಗಲೇ ಕೇಕ್ ಕೊಂಡೊಯ್ಯಲು ಜನರು ಆಗಮಿಸಿದ್ದಾರೆ. ಅದೇ ರೀತಿ ಮದ್ಯ ಪಾರ್ಸೆಲ್ ಖರೀದಿಯೂ ಜೋರಾಗಿ ನಡೆದಿದೆ.

ಸಂಭ್ರಮಾಚರಣೆಗೆ ನಿರ್ಬಂಧ ಹಿನ್ನೆಲೆ ಜನರಿಗೆ ಯಾವತ್ತಿನ ಮೋಜು ಮಸ್ತಿ ಅವಕಾಶ ಸಿಗುತ್ತಿಲ್ಲ. ಬೆಂಗಳೂರಿನ ಮುಖ್ಯ ಬೀದಿಗಳಲ್ಲಿ ಜನಜಂಗುಳಿ ಇಲ್ಲ ಎಂದು ತಿಳಿದುಬಂದಿದೆ. ಹೀಗಾಗಿ ಹೆಚ್ಚಿನವರು ಮನೆಯಲ್ಲೇ ಕೇಕ್ ಕತ್ತರಿಸುವ ಮೂಲಕ ಹೊಸ ವರ್ಷವನ್ನು ಸ್ವಾಗತಿಸಲಿದ್ದಾರೆ. ಈ ನಡುವೆ, ವ್ಯಾಪಾರ ವಹಿವಾಟು ಇಲ್ಲದ ಬಿಸಿ ಹೋಟೆಲ್, ರೆಸ್ಟೋರೆಂಟ್, ಬಾರ್, ಪಬ್, ಪ್ರವಾಸಿ ತಾಣಗಳನ್ನು ಅವಲಂಬಿಸಿ ಬದುಕುವ ಜನರಿಗೆ ಮುಟ್ಟಿದೆ. ಈ ಬಗ್ಗೆ ಕೆಲ ಉದ್ಯಮಿಗಳು ಬೇಸರ, ಆಕ್ರೋಶ ವ್ಯಕ್ತಪಡಿಸಿದ್ದರೂ ಸರ್ಕಾರ ಮಾತ್ರ ತನ್ನ ನಿರ್ಧಾರವನ್ನು ಕಟುವಾಗಿ ಜಾರಿಗೊಳಿಸಿದೆ.

ಇದನ್ನೂ ಓದಿ: Bengaluru Rain: ಹೊಸವರ್ಷ ಆಚರಣೆಗೆ ವರುಣನ ಅಡ್ಡಿ; ಗಾಯದ ಮೇಲೆ ಬರೆ ಎಳೆದ ಮಳೆರಾಯ

ಇದನ್ನೂ ಓದಿ: ಬೆಂಗಳೂರಿನಲ್ಲಿ ಸಂಜೆ 6 ಗಂಟೆಯಿಂದ ನಿರ್ಬಂಧ; ಹೊಸವರ್ಷಾಚರಣೆ ಹೆಸರಲ್ಲಿ ಹೆಚ್ಚು ಜನ ಸೇರದಂತೆ ಕ್ರಮ

Published On - 8:42 pm, Fri, 31 December 21

ಉಪೇಂದ್ರ ಊಟ ಮಾಡೋದು ಬಹಳ ವಿಚಿತ್ರ; ಅಚ್ಚರಿಯ ವಿಷಯ ಹೇಳಿದ ಶಿವಣ್ಣ
ಉಪೇಂದ್ರ ಊಟ ಮಾಡೋದು ಬಹಳ ವಿಚಿತ್ರ; ಅಚ್ಚರಿಯ ವಿಷಯ ಹೇಳಿದ ಶಿವಣ್ಣ
ಕ್ಯಾಪ್ಟನ್ ಕೂಲ್ ಧೋನಿಗೆ ಬಿಸಿಸಿಐನಿಂದ ವಿಶೇಷ ಗೌರವ
ಕ್ಯಾಪ್ಟನ್ ಕೂಲ್ ಧೋನಿಗೆ ಬಿಸಿಸಿಐನಿಂದ ವಿಶೇಷ ಗೌರವ
ಸಿಎಸ್​​ಕೆ ಬೌಲರ್​ಗಳ ಎದುರು ಅಬ್ಬರಿಸಿ ಬೊಬ್ಬಿರಿದ ನಿತೀಶ್ ರಾಣಾ
ಸಿಎಸ್​​ಕೆ ಬೌಲರ್​ಗಳ ಎದುರು ಅಬ್ಬರಿಸಿ ಬೊಬ್ಬಿರಿದ ನಿತೀಶ್ ರಾಣಾ
ಲಾಲು ಯಾದವ್ ಸರ್ಕಾರ ಜಂಗಲ್ ರಾಜ್ ಎಂದೇ ನೆನಪುಳಿಯುತ್ತದೆ; ಅಮಿತ್ ಶಾ
ಲಾಲು ಯಾದವ್ ಸರ್ಕಾರ ಜಂಗಲ್ ರಾಜ್ ಎಂದೇ ನೆನಪುಳಿಯುತ್ತದೆ; ಅಮಿತ್ ಶಾ
ಉಪ್ಪಿ, ಶಿವಣ್ಣ, ರಾಜ್ ಶೆಟ್ಟಿ ನಟನೆ ‘45’ ಸಿನಿಮಾ ಟೀಸರ್ ಲಾಂಚ್ ಲೈವ್ ನೋಡಿ
ಉಪ್ಪಿ, ಶಿವಣ್ಣ, ರಾಜ್ ಶೆಟ್ಟಿ ನಟನೆ ‘45’ ಸಿನಿಮಾ ಟೀಸರ್ ಲಾಂಚ್ ಲೈವ್ ನೋಡಿ
ಬುಡಕಟ್ಟು ನೃತ್ಯದ ಮೂಲಕ ಛತ್ತೀಸ್​ಗಢದಲ್ಲಿ ಮೋದಿಗೆ ಸಾಂಪ್ರದಾಯಿಕ ಸ್ವಾಗತ
ಬುಡಕಟ್ಟು ನೃತ್ಯದ ಮೂಲಕ ಛತ್ತೀಸ್​ಗಢದಲ್ಲಿ ಮೋದಿಗೆ ಸಾಂಪ್ರದಾಯಿಕ ಸ್ವಾಗತ
ಬೌಂಡರಿ ಬಳಿ ಅತ್ಯದ್ಭುತ ಕ್ಯಾಚ್ ಹಿಡಿದ ಜ್ಯಾಕ್ ಫ್ರೇಸರ್
ಬೌಂಡರಿ ಬಳಿ ಅತ್ಯದ್ಭುತ ಕ್ಯಾಚ್ ಹಿಡಿದ ಜ್ಯಾಕ್ ಫ್ರೇಸರ್
ಚೊಚ್ಚಲ ಐಪಿಎಲ್ ಅರ್ಧಶತಕ ಸಿಡಿಸಿದ ಅನಿಕೇತ್ ವರ್ಮಾ
ಚೊಚ್ಚಲ ಐಪಿಎಲ್ ಅರ್ಧಶತಕ ಸಿಡಿಸಿದ ಅನಿಕೇತ್ ವರ್ಮಾ
ಮೋದಿ ಭೇಟಿಗೂ ಕೆಲವೇ ಗಂಟೆ ಮೊದಲು ಛತ್ತೀಸ್‌ಗಢದಲ್ಲಿ 50 ನಕ್ಸಲರ ಶರಣಾಗತಿ
ಮೋದಿ ಭೇಟಿಗೂ ಕೆಲವೇ ಗಂಟೆ ಮೊದಲು ಛತ್ತೀಸ್‌ಗಢದಲ್ಲಿ 50 ನಕ್ಸಲರ ಶರಣಾಗತಿ
ನಾಗ್ಪುರದಲ್ಲಿ ರೋಡ್ ಶೋ ನಡೆಸಿದ ಮೋದಿ; ಜೈ ಶ್ರೀರಾಮ್ ಘೋಷಣೆ ಕೂಗಿದ ಜನರು
ನಾಗ್ಪುರದಲ್ಲಿ ರೋಡ್ ಶೋ ನಡೆಸಿದ ಮೋದಿ; ಜೈ ಶ್ರೀರಾಮ್ ಘೋಷಣೆ ಕೂಗಿದ ಜನರು