ಬೆಂಗಳೂರು ಹೊರವಲಯದಲ್ಲಿ ಎರಡು ಹೆದ್ದಾರಿ ಟೋಲ್ಗಳಲ್ಲಿ ದರ ಏರಿಕೆ; ಮಧ್ಯರಾತ್ರಿಯಿಂದಲೇ ಹೊಸ ದರ ಜಾರಿ
Devihalli Express Pvt Ltd toll plaza rates hike: ರಾಷ್ಟ್ರೀಯ ಹೆದ್ದಾರಿಯ ವಾಹನ ಸವಾರರಿಗೆ ಟೋಲ್ ದರ ಏರಿಕೆಯ ಮತ್ತೊಂದು ಶಾಕ್ ಎದುರಾಗಿದೆ, ಇಂದು ಮಧ್ಯ ರಾತ್ರಿಯಿಂದಲೇ ದರ ಏರಿಕೆಯನ್ನ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಜಾರಿ ಮಾಡಿ ಆದೇಶ ಹೊರಡಿಸಿದೆ. ಯಾವುದು ಆ ರಾಷ್ಟ್ರೀಯ ಹೆದ್ದಾರಿ? ಎಷ್ಟು ದರ ಏರಿಕೆ? ಇಲ್ಲಿದೆ ಡೀಟೇಲ್ಸ್.

ಬೆಂಗಳೂರು, ಆಗಸ್ಟ್ 31: ರಾಜ್ಯದಲ್ಲಿ ಜನಸಾಮಾನ್ಯರಿಗೆ ಒಂದಲ್ಲ ಒಂದು ದರ ಏರಿಕೆ ಶಾಕ್ ದಿನದಿಂದ ದಿನಕ್ಕೆ ಎದುರಾಗಿದೆ. ಇಂದು ಮಧ್ಯ ರಾತ್ರಿಯಿಂದ ವಾಹನ ಸವಾರರಿಗೆ ಟೋಲ್ ಶಾಕ್ ಎದುರಾಗಿದೆ. ಬೆಂಗಳೂರು ಹೊರವಲಯ ನೆಲಮಂಗಲ ರಾಷ್ಟ್ರೀಯ ಹೆದ್ದಾರಿ ಮೂಲಕ ಹಾಸನ ರಾಷ್ಟ್ರೀಯ ಹೆದ್ದಾರಿ 75 ರ ರಸ್ತೆಯಲ್ಲಿ ಸಂಚಾರ ಮಾಡುವ ವಾಹನ ಸವಾರರಿಗೆ ಸೆಪ್ಟೆಂಬರ್ 1 ರಿಂದ ದರ ಏರಿಕೆ ಮಾಡಿ ಶಾಕ್ ನೀಡಿದೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI). ಈ ದರ ಏರಿಕೆ ಇಂದು ಮಧ್ಯ ರಾತ್ರಿ 12 ಗಂಟೆಯಿಂದ ಜಾರಿಗೆ ಬರಲಿದೆ. ನೆಲಮಂಗಲ ದೇವಿಹಳ್ಳಿ ಎಕ್ಸ್‌ಪ್ರೆಸ್ ಪ್ರೈವೇಟ್ ಲಿಮಿಟೆಡ್ ಟೋಲ್ಗಳಲ್ಲಿ ಏರಿಕೆಯಾಗಿದೆ.
ನೆಲಮಂಗಲ ಹಾಸನ ರಾಷ್ಟ್ರೀಯ ಹೆದ್ದಾರಿಯ ಟೋಲ್ಗಳಲ್ಲಿ ವಾಹನ ಸವಾರರಿಗೆ ಹೆಚ್ಚಿನ ಸುಂಕ ಹೊರೆ ಎದುರಾಗಿದೆ. ದೊಡ್ಡಕರೇನಹಳ್ಳಿ ಟೋಲ್ ಹಾಗೂ ಕಾರಬೈಲು ಟೋಲ್ ಪ್ಲಾಜಾಗಳಲ್ಲಿ ದರ ಏರಿಕೆಯಾಗಿದೆ. ಏಕ ಮುಖ ಸಂಚಾರಕ್ಕೆ 5 ರೂಪಾಯಿ, ದ್ವಿಮುಖ ಸಂಚಾರಕ್ಕೆ 10 ರೂಪಾಯಿ ದರ ಏರಿಕೆ ಮಾಡಲಾಗಿದೆ.
ಇದನ್ನೂ ಓದಿ: ಆ. 27ರಿಂದ ಬೆಂಗಳೂರಿನ ಕೆರೆಗಳಲ್ಲಿ ವಿಸರ್ಜನೆಯಾದ ಗಣೇಶ ಮೂರ್ತಿಗಳ ಸಂಖ್ಯೆ ಎಷ್ಟು ಗೊತ್ತಾ?
ಈಗ ಇರುವ ದರಗಳೆಂದರೆ, ಫಾಸ್ಟ್ಯಾಗ್ ಇರುವ ಕಾರು, ಜೀಪು, ವ್ಯಾನ್ ಹಾಗೂ ಹಗುರ ವಾಹನಗಳಿಗೆ ಏಕಮುಖ ಸಂಚಾರಕ್ಕೆ 55 ರೂ ಇದೆ. ಇವತ್ತು ಮಧ್ಯರಾತ್ರಿಯಿಂದ ಇದರ ದರ 60 ರೂಗೆ ಏರಿಕೆ ಆಗುತ್ತದೆ. ದಿನದ ಸಂಚಾರವು 85 ರೂನಿಂದ 90 ರೂಗೆ ಏರಿಕೆ ಆಗುತ್ತಿದೆ. ಫಾಸ್ಟ್ಯಾಗ್ ಇಲ್ಲದ ವಾಹನಗಳಿಗೆ ಏಕಮುಖ ಸಂಚಾರಕ್ಕೆ ಟೋಲ್ ದರ 110 ರೂನಿಂದ 120 ರೂಗೆ ಏರಿಕೆ ಆಗುತ್ತಿದೆ.
ಲೈಟ್ ಕಮರ್ಷಿಯಲ್ ವಾಹನ ಹಾಗೂ ಸರಕು ಸಾಗಣೆ ವಾಹನಗಳಾದರೆ ಏಕಮುಖ ಸಂಚಾರಕ್ಕೆ 100 ರೂ, ದಿನದ ಸಂಚಾರಕ್ಕೆ 155 ರೂ ಟೋಲ್ ಏರಿಸಲಾಗುತ್ತಿದೆ.
ಟೋಲ್ ದರ ಏರಿಕೆಗೆ ಸಾರ್ವಜನಿಕರ ಆಕ್ರೋಶ
ಹೆದ್ದಾರಿಯಲ್ಲಿ ಟೋಲ್ ದರಗಳನ್ನು ಏರಿಸುವುದರಿಂದ ವಾಹನ ಮಾಲೀಕರ ಜೇಬಿಗೆ ಕತ್ತರಿ ಬೀಳಲಿದೆ. ಸಾಗಣೆ ವೆಚ್ಚ ಇತ್ಯಾದಿಗಳು ಏರಿಕೆ ಆಗಲಿವೆ. ಇದರ ಪರಿಣಾಮ ಬೇರೆ ಬೇರೆ ಸ್ತರಗಳಲ್ಲೂ ಆಗುತ್ತದೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಈ ಕ್ರಮಕ್ಕೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಲಘು ವಾಣಿಜ್ಯ ಹಾಗೂ ಸರಕು ವಾಹನಗಳು ಈಗಿನ ದರ ಏಕಮುಖ 100 ಹಾಗೂ ದಿನದ ಸಂಚಾರ 155 ದರ ಏರಿಕೆಯಿಂದ ವಾಹನ ಮಾಲೀಕರ ಜೇಬಿಗೆ ಕತ್ತರಿ ಇದ್ದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ವಿರುದ್ಧ ಜನಸಾಮಾನ್ಯರ ಆಕ್ರೋಶಕ್ಕೆ ಕಾರಣವಾಗಿದೆ.
ಇದನ್ನೂ ಓದಿ: ಬೆಂಗಳೂರಿನ ಪಿಜಿಯಲ್ಲಿ ಮಲಗಿದ್ದ ಯುವತಿಗೆ ಲೈಂಗಿಕ ದೌರ್ಜನ್ಯ; ಹಲ್ಲೆ ಮಾಡಿ ದುಡ್ಡಿನೊಂದಿಗೆ ಆರೋಪಿ ಪರಾರಿ
ಒಟ್ಟಾರೆ ರಾಜ್ಯದಲ್ಲಿ ಜನಸಾಮಾನ್ಯರು ಒಂದಲ್ಲ ಒಂದು ದರ ಏರಿಕೆಯಿಂದ ಪರಿತಪ್ಪಿಸುತ್ತಿದ್ದಾರೆ. ನೆಲಮಂಗಲ ಹಾಸನ ರಾಷ್ಟ್ರೀಯ ಹೆದ್ದಾರಿ 75 ರ ದರ ಏರಿಕೆಯಿಂದ ಈ ರಸ್ತೆಯಲ್ಲಿ ಸಂಚಾರ ಮಾಡುವ ಸವಾರರಿಗೆ ಟೋಲ್ ಶಾಕ್ ಎದುರಾಗಿದೆ.
ಇನ್ನಷ್ಟು ರಾಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ



