ಶಿವಮೊಗ್ಗದಲ್ಲಿ ಬಜರಂಗದಳ ಕಾರ್ಯಕರ್ತ ಹರ್ಷ ಹತ್ಯೆ ಪ್ರಕರಣ; ಬೆಂಗಳೂರಿನ ಎನ್ಐಎ ಅಧಿಕೃತ ಕಚೇರಿಯಲ್ಲಿ ಕಾರ್ಯಾರಂಭ

| Updated By: preethi shettigar

Updated on: Mar 29, 2022 | 3:27 PM

ದೊಮ್ಮಲೂರಲ್ಲಿ ಎನ್​ಐಎ ಪ್ರಾದೇಶಿಕ ಕಚೇರಿ ಕಾರ್ಯಾರಂಭವಾಗಿದೆ. ಇದಕ್ಕಾಗಿ ಓರ್ವ ಡಿಐಜಿ, ಒಬ್ಬರು ಎಸ್​ಪಿ, ಇನ್ಸ್​ಪೆಕ್ಟರ್​, ಪಿಎಸ್ಐ, ಎಎಸ್ಐ, ಹೆಚ್​ಸಿಸಿ, ಪಿಸಿ ಸೇರಿದಂತೆ  20 ಜನ ಸಿಬ್ಬಂದಿ ನೇಮಕ ಮಾಡಲಾಗಿದೆ. ಸದ್ಯ ದೆಹಲಿಯಲ್ಲಿ ದಾಖಲಾಗಿದ್ದ ಹರ್ಷ ಕೊಲೆ ಪ್ರಕರಣದ ಕೇಸ್ ಬೆಂಗಳೂರಿಗೆ ವರ್ಗಾವಣೆ ಮಾಡಲಾಗಿದೆ.

ಶಿವಮೊಗ್ಗದಲ್ಲಿ ಬಜರಂಗದಳ ಕಾರ್ಯಕರ್ತ ಹರ್ಷ ಹತ್ಯೆ ಪ್ರಕರಣ; ಬೆಂಗಳೂರಿನ ಎನ್ಐಎ ಅಧಿಕೃತ ಕಚೇರಿಯಲ್ಲಿ ಕಾರ್ಯಾರಂಭ
ಶಿವಮೊಗ್ಗದಲ್ಲಿ ಕೊಲೆಯಾಗಿದ್ದ ಬಜರಂಗದಳ ಕಾರ್ಯಕರ್ತ ಹರ್ಷ
Follow us on

ಬೆಂಗಳೂರು: ನಗರದ ಎನ್​ಐಎ ಅಧಿಕಾರಿಗಳು ಶಿವಮೊಗ್ಗದಲ್ಲಿ ಬಜರಂಗದಳ ಕಾರ್ಯಕರ್ತ ಹರ್ಷ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅಧಿಕೃತವಾಗಿ ತಮ್ಮ ಕಚೇರಿಯಲ್ಲಿ ಕಾರ್ಯ ಆರಂಭಿಸಿದ್ದಾರೆ. ದೊಮ್ಮಲೂರಲ್ಲಿ ಎನ್​ಐಎ (NIA) ಪ್ರಾದೇಶಿಕ ಕಚೇರಿ ಕಾರ್ಯಾರಂಭವಾಗಿದೆ. ಇದಕ್ಕಾಗಿ ಓರ್ವ ಡಿಐಜಿ(DIGP), ಒಬ್ಬರು ಎಸ್​ಪಿ, ಇನ್ಸ್​ಪೆಕ್ಟರ್​, ಪಿಎಸ್ಐ, ಎಎಸ್ಐ, ಹೆಚ್​ಸಿಸಿ, ಪಿಸಿ ಸೇರಿದಂತೆ  20 ಜನ ಸಿಬ್ಬಂದಿ ನೇಮಕ ಮಾಡಲಾಗಿದೆ. ಸದ್ಯ ದೆಹಲಿಯಲ್ಲಿ ದಾಖಲಾಗಿದ್ದ ಹರ್ಷ ಕೊಲೆ ಪ್ರಕರಣದ ಕೇಸ್ (Case) ಬೆಂಗಳೂರಿಗೆ ವರ್ಗಾವಣೆ ಮಾಡಲಾಗಿದೆ.

ಪ್ರಾದೇಶಿಕವಾಗಿ ಬೆಂಗಳೂರಿನಲ್ಲಿ ಕಚೇರಿ ಕಾರ್ಯಾರಂಭ ಹಿನ್ನಲೆ ಬೆಂಗಳೂರಿನಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆಯಲ್ಲಿ ಹಲವು ಪ್ರಕರಣಗಳ ತನಿಖೆಗೆ ಸಹಕಾರಿಯಾಗಿದೆ. ಇಂದಿನಿಂದ ನಗರದ ದೊಮ್ಮಲೂರಿನಲ್ಲು ಎನ್ಐಎ ಪ್ರಾದೇಶಿಕ ಬೆಂಗಳೂರು ಕಚೇರಿ ಕಾರ್ಯಾರಂಭವಾಗುತ್ತಿದೆ.

ಹರ್ಷ ಕೊಲೆ ಪ್ರಕರಣದ ಮೂವರು ಆರೋಪಿಗಳನ್ನ ವಶಕ್ಕೆ ಪಡೆದ ಎನ್ಐಎ

ಹರ್ಷ ಕೊಲೆ ಪ್ರಕರಣದ ಮೂವರು ಆರೋಪಿಗಳನ್ನ ಎನ್ಐಎ ಸದ್ಯ ವಶಕ್ಕೆ ಪಡೆದಿದೆ. ಬಳ್ಳಾರಿ ಸೆಂಟ್ರಲ್ ಜೈಲಿನಿಂದ ಮೂವರು ಆರೋಪಿಗಳು ಪರಪ್ಪನ ಅಗ್ರಹಾರಕ್ಕೆ ಸ್ಥಳಾಂತರಿಸಲಾಗಿದೆ. ಬಾಡಿ ವಾರಂಟ್ ಮೂಲಕ 3 ಆರೋಪಿಗಳು ಎನ್​ಐಎ ವಶಕ್ಕೆ ಪಡೆದು ಗ್ರಿಲ್ ಮಾಡಲಾಗಿದೆ.  ಉಳಿದ 7 ಆರೋಪಿಗಳ ಪೈಕಿ ಮೂವರು ಬಳ್ಳಾರಿ ಮತ್ತು ಉಳಿದ ನಾಲ್ವರು ಮೈಸೂರಿನ ಜೈಲಿನಲ್ಲಿದ್ದಾರೆ. ಉಳಿದ 7 ಆರೋಪಿಗಳನ್ನು ಬಾಡಿ ವಾರೆಂಟ್ ಮೂಲಕ ವಶಕ್ಕೆ ಎನ್​ಐಎ ಪಡೆದುಕೊಳ್ಳಲಿದೆ.

ಮತೀಯ ಸಂಘಟನೆಗಳ ಮೇಲೆ ಎನ್​ಐಎ ಹದ್ದಿನ ಕಣ್ಣು!

ಸೂಕ್ಷ್ಮವಾಗಿ ಮತೀಯ ಸಂಘಟನೆಗಳ ಕಾರ್ಯ ಚಟುವಟಿಕೆಗಳನ್ನು ಎನ್​ಐಎ ಗಮನಿಸುತ್ತಿದೆ. ಆ ಮೂಲಕ ಹರ್ಷ ಕೊಲೆ ಪ್ರಕರಣವನ್ನು ಮತ್ತಷ್ಟು ಎಚ್ಚರಿಕೆಯಿಂದ ಎನ್​ಐಎ ತನಿಖೆ ನಡೆಸುತ್ತಿದೆ.

ಇದನ್ನೂ ಓದಿ:

ಬಜರಂಗದಳ ಕಾರ್ಯಕರ್ತ ಹರ್ಷ ಕೊಲೆ ಪ್ರಕರಣ: ಶಿವಮೊಗ್ಗಕ್ಕೆ ಶೀಘ್ರ ಎನ್​ಐಎ ಸಿಬ್ಬಂದಿ

ಶಿಡ್ಲಘಟ್ಟದ ಜೋಡಿ ಕೊಲೆ ಪ್ರಕರಣ ಬಯಲು, 2 ಅಪ್ರಾಪ್ತರು, ಒಬ್ಬ ಯುವಕ ಅರೆಸ್ಟ್; ದುಷ್ಕೃತ್ಯ ನಡೆದಿದ್ದು ಹೇಗೆ? ಉದ್ದೇಶವೇನಾಗಿತ್ತು?

Published On - 3:14 pm, Tue, 29 March 22