ಕಾಮಗಾರಿಗೆ ಹಣ ಬಿಡುಗಡೆಯಾಗದಿರಲು ಈಶ್ವರಪ್ಪ ಮುಖ್ಯ ಕಾರಣ: ಗುತ್ತಿಗೆದಾರ ಸಂತೋಷ್ ಮತ್ತೊಂದು ಆರೋಪ

ನಾನು ನಿರ್ವಹಿಸಿದ ಕಾಮಗಾರಿಗೆ ಹಣ ಬಿಡುಗಡೆಯಾಗಿಲ್ಲ. ಇದಕ್ಕೆ ಸಚಿವ ಕೆ.ಎಸ್.ಈಶ್ವರಪ್ಪ ನೇರ ಹೊಣೆ ಎಂದು ಕಮಿಷನ್ ಆರೋಪ ಮಾಡಿರುವ ಸಂತೋಷ್ ಪಾಟೀಲ್ ಹೇಳಿದರು.

ಕಾಮಗಾರಿಗೆ ಹಣ ಬಿಡುಗಡೆಯಾಗದಿರಲು ಈಶ್ವರಪ್ಪ ಮುಖ್ಯ ಕಾರಣ: ಗುತ್ತಿಗೆದಾರ ಸಂತೋಷ್ ಮತ್ತೊಂದು ಆರೋಪ
ಕೆ ಎಸ್​ ಈಶ್ವರಪ್ಪ
Follow us
TV9 Web
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Mar 29, 2022 | 1:57 PM

ಹುಬ್ಬಳ್ಳಿ: ನಾನು ನಿರ್ವಹಿಸಿದ ಕಾಮಗಾರಿಗೆ ಹಣ ಬಿಡುಗಡೆಯಾಗಿಲ್ಲ. ಇದಕ್ಕೆ ಸಚಿವ ಕೆ.ಎಸ್.ಈಶ್ವರಪ್ಪ (KS Eshwarappa) ನೇರ ಹೊಣೆ ಎಂದು ಕಮಿಷನ್ ಆರೋಪ ಮಾಡಿರುವ ಸಂತೋಷ್ ಪಾಟೀಲ್ ಹೇಳಿದರು. ಈಶ್ವರಪ್ಪ ವಿರುದ್ಧ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸಂತೋಷ್ ಬರೆದಿದ್ದ ಪತ್ರ ಸುದ್ದಿಯಾಗಿತ್ತು. ‘ಈಶ್ವರಪ್ಪ ಅವರು ಆರೋಪದಿಂದ ನುಣುಚಿಕೊಳ್ಳಲು ಏನೇನೋ ಮಾತನಾಡುತ್ತಿದ್ದಾರೆ. ಸಚಿವರು, ಇಲಾಖೆಯ ಅನುಮತಿಯಿಲ್ಲದೆ ಯಾವುದಾದರೂ ಕಾಮಗಾರಿ ಮಾಡಲು ಸಾಧ್ಯವಿದೆಯೇ? ಅನುಮತಿ ಇಲ್ಲದೆ ಒಂದು ಅಡಿ ರಸ್ತೆ ಅಗೆದರೆ ಕೇಸ್ ಹಾಕುತ್ತಾರೆ. ಅಂಥದ್ದರಲ್ಲಿ ನಾನು ನೂರೆಂಟ್​ ಕಾಮಗಾರಿ ಮಾಡಿದ್ದೇನೆ ಎಂದು ಹೇಳಿದರು.

ನಾನು ಅನುಮತಿ ಪಡೆಯದೆ ಕಾಮಗಾರಿ ನಡೆಸಲು ಹೇಗೆ ಸಾಧ್ಯ ಎನ್ನುವ ಬಗ್ಗೆ ಈಶ್ವರಪ್ಪ ಅವರೇ ಉತ್ತರಿಸಬೇಕು. ಇಷ್ಟೊಂದು ಕಾಮಗಾರಿಗಳನ್ನು ನಿರ್ವಹಿಸಿದ್ದರೂ ಬಿಲ್​ಗಳ ಮಂಜೂರಾಗಿಲ್ಲ ಎಂದು ಗೆಳೆಯರೊಂದಿಗೆ ಚರ್ಚಿಸಿದಾಗ ಅವರು ತಾವೆಲ್ಲರೂ ಕಮಿಷನ್ ಕೊಟ್ಟು ಬಿಲ್ ಮಾಡಿಸಿಕೊಂಡಿದ್ದೇವೆ ಎಂದು ಹೇಳಿದರು. ನನಗೂ ಈಶ್ವರಪ್ಪ ಅವರ ಆಪ್ತ ಬಸವರಾಜು ಕಡೆಯಿಂದ ಕಮಿಷನ್​ ಆಮಿಷ ಬಂದಿತ್ತು. ಹಿರಿಯರಾಗಿರುವ ಈಶ್ವರಪ್ಪ ಏನೇನೋ ಮಾತನಾಡಬಾರದು. ನಾನು ಪ್ರಧಾನಿ ಮೋದಿಗೆ ಪತ್ರ ಬರೆದು ನ್ಯಾಯ ಕೇಳಿದ್ದೇನೆ. ನ್ಯಾಯ ಸಿಗದಿದ್ದರೆ ನಾನು ಜೀವ ಕಳೆದುಕೊಳ್ಳಬೇಕಾಗುತ್ತದೆ. ನಾನು ಕಟ್ಟಾ ಬಿಜೆಪಿ ಕಾರ್ಯಕರ್ತ, ಅದು ಎಲ್ಲರಿಗೂ ಗೊತ್ತು ಎಂದು ಹೇಳಿದರು.

ವಿಧಾನ ಪರಿಷತ್​ನಲ್ಲಿ ಮತ್ತೆ ಪ್ರಸ್ತಾಪ

ಸಚಿವ ಕೆ.ಎಸ್.ಈಶ್ವರಪ್ಪ ಅವರ ವಿರುದ್ಧ ಕೇಳಿಬಂದಿರುವ ಕಮಿಷನ್ ಆರೋಪವು ಮಂಗಳವಾರವು ಸದನದಲ್ಲಿ ಸದ್ದು ಮಾಡಿತು. ಪ್ರತಿಪಕ್ಷಗಳ ಆರೋಪ ಕುರಿತು ಪ್ರತಿಕ್ರಿಯಿಸಿದ ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ, ಯಾವ ಸಚಿವರು ಪರ್ಸೆಂಟೇಜ್ ಪಡೆದಿದ್ದಾರೆಂದು ನೇರವಾಗಿ ಹೇಳಲಿ. ಯಾರೋ ಎಲ್ಲೋ ಮಾತಾಡಿರುವ ಬಗ್ಗೆ ಇಲ್ಲಿ ಚರ್ಚೆ ಮಾಡುವುದು ಸರಿಯಲ್ಲ ಎಂದರು.

ಸಚಿವರ ಹೇಳಿಕೆಗೆ ಕಾಂಗ್ರೆಸ್ ಸದಸ್ಯರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಈ ಬಗ್ಗೆ ಹೈಕೋರ್ಟ್ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆ ಮಾಡಿಸಬೇಕು. ಕಮಿಷನ್ ವಿಚಾರದ ಬಗ್ಗೆ ಅವರು ಪ್ರಧಾನಿಗೆ ಪತ್ರ ಬರೆದಿದ್ದಾರೆ. ಈ ಬಗ್ಗೆ ತನಿಖೆ ಆಗಬೇಕು ಎಂದು ಆಗ್ರಹಿಸಿದರು. ಕಾಂಗ್ರೆಸ್ ಒತ್ತಾಯಕ್ಕೆ ಮಣಿಯದ ಈಶ್ವರಪ್ಪ, ರಾಜಕೀಯ ಪ್ರಚಾರಕ್ಕೆ ಸದನ ಬಳಸಿಕೊಳ್ತೀರಿ ಎಂದು ಕಿಡಿಕಾರಿದರು. ಅವನ್ಯಾರೋ ಪತ್ರ ಬರೆದರೆ ಅದಕ್ಕೆಲ್ಲ ನಾವು ತಲೆಕೆಡಿಸಿಕೊಳ್ಳಲು ಆಗುವುದಿಲ್ಲ ಎಂದರು.

ಯಾರೋ ಮಾಧ್ಯಮಗಳ ಜೊತೆಗೆ ಮಾತನಾಡಿದ್ದಕ್ಕೆ ನಾವು ಉತ್ತರ ಕೊಡಲು ಆಗುವುದಿಲ್ಲ. ನಿರ್ದಿಷ್ಟವಾಗಿ ಯಾವ ಸಚಿವ, ಯಾವ ಶಾಸಕ ಹಣ ಪಡೆದ ಅಂತ ಹೇಳಲಿ. ಉತ್ತರ ಕೊಡ್ತೀವಿ ಎಂದರು. ಈ ಹೇಳಿಕೆಗೆ ಕಾಂಗ್ರೆಸ್​ನ ಪ್ರಕಾಶ್ ರಾಥೋಡ್, ಹರಿಪ್ರಸಾದ್ ಒತ್ತಾಯಿಸಿದರು.

ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಸದಸ್ಯ ಪ್ರಕಾಶ್ ರಾಥೋಡ್, ಏಪ್ರಿಲ್ ಕೊನೆಯ ವಾರದಲ್ಲಿ ಗುತ್ತಿಗೆದಾರರಿಂದ ಹೋರಾಟ ಮಾಡಿದರು. ವಿವಿಧ ಇಲಾಖೆಗಳಲ್ಲಿ ₹ 25 ಸಾವಿರ ಕೋಟಿ ಅಕ್ರಮ ನಡೆದಿದೆ. ಈ ಬಗ್ಗೆ ಕ್ರಮ ತೆಗೆದುಕೊಳ್ಳಿ. ಹೈಕೋರ್ಟ್ ನ್ಯಾಯಾಧೀಶರಿಂದ ತನಿಖೆಗೆ ಸದನ ಸಮಿತಿಯನ್ನಾದರೂ ನೇಮಿಸಬೇಕು ಎಂದು ಆಗ್ರಹಿಸಿದರು.

ಇದನ್ನೂ ಓದಿ: ಕಾಮಗಾರಿ ಮಾಡಿದ ಬಿಲ್ ಕೊಡಿಸುವಂತೆ ಸಚಿವ ಕೆಎಸ್ ಈಶ್ವರಪ್ಪ ವಿರುದ್ಧ ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದ ಸಂತೋಷ್ ಪಾಟೀಲ್

ಇದನ್ನೂ ಓದಿ: ನನ್ನ ವಿರುದ್ಧ ದೂರು ಕೊಟ್ಟ ಹೆಸರಿನವರಿಗೆ ಯಾವುದೇ ಗುತ್ತಿಗೆ ಕೊಟ್ಟಿಲ್ಲ: ಈಶ್ವರಪ್ಪ

ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ