ಬೆಂಗಳೂರು, ಬಳ್ಳಾರಿ ಡಿ.02: ನಕಲಿ ನೋಟು(Fake Note)ತಯಾರಿಸುವ ಜಾಲದ ಮೇಲೆ ಎನ್‌ಐಎ (NIA) ಅಧಿಕಾರಿಗಳ ದಾಳಿ ಮಾಡಿದ್ದು, ಬಿಹಾರ, ಉತ್ತರ ಪ್ರದೇಶ, ಮಹಾರಾಷ್ಟ್ರ ಹಾಗೂ ಕರ್ನಾಟಕದ ಬೆಂಗಳೂರು, ಬಳ್ಳಾರಿಯಲ್ಲಿ ಎನ್‌ಐಎ ದಾಳಿ ನಡೆಸಿದೆ. ಈ ವೇಳೆ ಪ್ರಮುಖ ಆರೋಪಿ ರಾಹುಲ್ ತಾನಾಜಿ ಎಂಬಾತನನ್ನು ಬಂಧಿಸಲಾಗಿದೆ. ಇನ್ನು ಬಳ್ಳಾರಿ ಜಿಲ್ಲೆಯಲ್ಲೂ ದಾಳಿ ನಡೆಸಿ ಓರ್ವನನ್ನು ಅರೆಸ್ಟ್ ಮಾಡಲಾಗಿದೆ. ಬಳ್ಳಾರಿ ಮೂಲದ ಮಹೇಂದರ್ ಬಂಧಿತ ಆರೋಪಿ. ಇತ ಮನೆಯಲ್ಲೇ 500, 200, 100 ರೂಪಾಯಿಯ ಮುಖಬೆಲೆಯ ನಕಲಿ ನೋಟು ತಯಾರಿಸುತ್ತಿದ್ದ. ಇದೀಗ ಪೊಲೀಸರು ನೋಟು ತಯಾರಿಸುವ ಪೇಪರ್, ಪ್ರಿಂಟಿಂಗ್ ಮಶಿನ್ಗಳನ್ನು ವಶಕ್ಕೆ ಪಡೆದಿದ್ದಾರೆ.
ನಕಲಿ ನೋಟು ಸ್ಮಗ್ಲಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಅಪರಾಧಿ ವನಿತಾ ಎಂಬುವವರಿಗೆ ಸೆ.16 ರಂದುಬೆಂಗಳೂರಿನ ಎನ್ಐಎ ವಿಶೇಷ ನ್ಯಾಯಾಲಯ 6 ವರ್ಷ ಜೈಲುಶಿಕ್ಷೆ ಜೊತೆಗೆ 20 ಸಾವಿರ ದಂಡ ವಿಧಿಸಿತ್ತು. 2018ರಲ್ಲಿ ಬಾಂಗ್ಲಾದೇಶದಿಂದ ಅಕ್ರಮವಾಗಿ ರಾಜ್ಯಕ್ಕೆ ಖೋಟಾ ನೋಟು ಸಾಗಾಟ ಮಾಡುತ್ತಿದ್ದ ಮಾಹಿತಿ ಮೇರೆಗೆ ಎನ್ಐಎ, ಪೊಲೀಸರು ಕಾರ್ಯಾಚರಣೆ ನಡೆಸಿದ್ದರು. ಈ ವೇಳೆ ಅಪರಾಧಿ ವನಿತಾ ಅಲಿಯಾಸ್ ತಂಗಂ ಬಳಿ 2.50 ಲಕ್ಷ ನಕಲಿ ನೋಟು ಪತ್ತೆಯಾಗಿತ್ತು. ಬಳಿಕ 8 ಜನರ ವಿರುದ್ಧ ಚಾರ್ಜ್ಶೀಟ್ ಸಲ್ಲಿಸಿದ್ದರು. ಈ ಕುರಿತು ಬೆಳಗಾವಿ ಜಿಲ್ಲೆಯ ಚಿಕ್ಕೋಡಿಯಲ್ಲಿ ಪ್ರಕರಣ ದಾಖಲು ಮಾಡಲಾಗಿತ್ತು. ನಂತರ ಪ್ರಕರಣದ 6ನೇ ಆರೋಪಿ ವನಿತಾ ಅವರಿಗೆ ಆರೋಪ ಸಾಬೀತಾದ ಹಿನ್ನೆಲೆ ಶಿಕ್ಷೆ ವಿಧಿಸಲಾಗಿತ್ತು.
ಇದನ್ನೂ ಓದಿ:Belagavi News: ಕರ್ನಾಟಕ ಮಹಾರಾಷ್ಟ್ರ ಗಡಿಯಲ್ಲಿ ನಕಲಿ ನೋಟು ಬದಲಾಯಿಸೋ ಗ್ಯಾಂಗ್ ಅರೆಸ್ಟ್
ಇನ್ನು ಕರ್ನಾಟಕದಲ್ಲಿ ನಕಲಿ ನೋಟುಗಳ ಹಾವಳಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಅದರಂತೆ ಇತ್ತೀಚೆಗೆ 100 ರೂಪಾಯಿ ಮುಖಬೆಲೆಯ ಒಟ್ಟು 30 ನಕಲಿ ನೋಟುಗಳು ಉಡುಪಿ , ಮಣಿಪಾಲ , ಹುಬ್ಬಳ್ಳಿ ಹಾಗು ಮಲ್ಲೇಶ್ವರ ಬ್ರಾಂಚ್ನ ಬ್ಯಾಂಕ್ ಗಳಲ್ಲಿ ಪತ್ತೆಯಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಎರಡು ದಿನಗಳಲ್ಲಿ 4 ಎಫ್ಐಆರ್ಗಳು ದಾಖಲಾಗಿದ್ದು, ಆರ್ಬಿಐಗೆ ರಿಮೀಟ್ ಮಾಡುವ ಸಂದರ್ಭದಲ್ಲಿ ಈ ನಕಲಿ ನೋಟುಗಳು ಬೆಳಕಿಗೆ ಬಂದಿತ್ತು. ಇದೀಗ ನೋಟು ಪ್ರಿಂಟ್ ಮಾಡುವ ಜಾಲ ಪತ್ತೆಯಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 5:15 pm, Sat, 2 December 23