AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರಿನಲ್ಲಿ ಪಾಕಿಸ್ತಾನ​ ಪರ ಘೋಷಣೆ; ಇಬ್ಬರು ಆರೋಪಿಗಳ ಬಂಧನ

ಪಾಕಿಸ್ತಾನ​ ಪರ ಘೋಷಣೆ ಕೂಗಿದ್ದ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ ಘಟನೆ ಬೆಂಗಳೂರಿ(Bengaluru)ನಲ್ಲಿ ನಡೆದಿದೆ. ಇನಾಯತ್​ವುಲ್ಲಾ ಖಾನ್ ಹಾಗೂ ಸೈಯದ್ ಮುಬಾರಕ್ ಬಂಧಿತರು. ನಿನ್ನೆ(ಡಿ.01) ರಾತ್ರಿ  ಭಾರತ-ಆಸ್ಟ್ರೇಲಿಯಾ ತಂಡದ ನಡುವೆ ಟಿ20 ಪಂದ್ಯ ನಡೆಯುತ್ತಿತ್ತು. ಪಬ್​ನಲ್ಲಿ ಪಂದ್ಯ ವೀಕ್ಷಣೆ ಮಾಡುತ್ತಿದ್ದ ವೇಳೆ ಇಬ್ಬರು ಪಾಕಿಸ್ತಾನ ಪರ ಘೋಷಣೆ ಕೂಗಿದ್ದರು.

ಬೆಂಗಳೂರಿನಲ್ಲಿ ಪಾಕಿಸ್ತಾನ​ ಪರ ಘೋಷಣೆ; ಇಬ್ಬರು ಆರೋಪಿಗಳ ಬಂಧನ
ಬಂಧಿತ ಆರೋಪಿಗಳು
Shivaprasad B
| Edited By: |

Updated on:Dec 02, 2023 | 7:40 PM

Share

ಬೆಂಗಳೂರು, ಡಿ.02: ಪಾಕಿಸ್ತಾನ​ ಪರ ಘೋಷಣೆ ಕೂಗಿದ್ದ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ ಘಟನೆ ಬೆಂಗಳೂರಿ(Bengaluru)ನಲ್ಲಿ ನಡೆದಿದೆ. ಇನಾಯತ್​ವುಲ್ಲಾ ಖಾನ್ ಹಾಗೂ ಸೈಯದ್ ಮುಬಾರಕ್ ಬಂಧಿತರು. ನಿನ್ನೆ(ಡಿ.01) ರಾತ್ರಿ  ಭಾರತ-ಆಸ್ಟ್ರೇಲಿಯಾ ತಂಡದ ನಡುವೆ ಟಿ20 ಪಂದ್ಯ ನಡೆಯುತ್ತಿತ್ತು. ಪಬ್​ನಲ್ಲಿ ಪಂದ್ಯ ವೀಕ್ಷಣೆ ಮಾಡುತ್ತಿದ್ದ ವೇಳೆ ಇಬ್ಬರು ಪಾಕಿಸ್ತಾನ ಪರ ಘೋಷಣೆ ಕೂಗಿದ್ದರು. ಈ ಹಿನ್ನಲೆ ಇತರರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರು. ಬಳಿಕ ಪಬ್​ನಲ್ಲಿದ್ದವರು ಜೆ.ಪಿ.ನಗರ ಠಾಣೆಯ ಪೊಲೀಸರಿಗೆ ಮಾಹಿತಿ ನೀಡಿದ್ದು, ಇನಾಯತ್​ವುಲ್ಲಾ ಖಾನ್, ಸೈಯದ್ ಮುಬಾರಕ್​ನನ್ನು ಬಂಧಿಸಲಾಗಿದೆ. ಈ ವೇಳೆ ಮದ್ಯದ ನಶೆಯಲ್ಲಿ ಕೂಗಿದ್ದಾಗಿ ಪೊಲೀಸರ ಮುಂದೆ ಆರೋಪಿಗಳ ಹೇಳಿಕೆ ನೀಡಿದ್ದಾರೆ.

ಲೋಕಾಯುಕ್ತ ಬಲೆಗೆ ಬಿದ್ದ ಕುಂದಗೋಳ ಕ್ಷೇತ್ರ ಶಿಕ್ಷಣಾಧಿಕಾರಿ

ಧಾರವಾಡ: ಜಿಲ್ಲೆಯ ಕುಂದಗೋಳ ಕ್ಷೇತ್ರ ಶಿಕ್ಷಣಾಧಿಕಾರಿ(BEO) ಡಾ.ವಿದ್ಯಾ ಕುಂದರಗಿ ಎಂಬುವವರು ನಿವೃತ್ತ ಮುಖ್ಯೋಪಾಧ್ಯಾಯರ ಬಳಿ ಲಂಚ ಪಡೆಯುವಾಗ ಲೋಕಾಯುಕ್ತ ಬಲೆಗೆ ಬಿದ್ದ ಘಟನೆ ನಡೆದಿದೆ. ನಿವೃತ್ತಿ ಹಣ ಮಂಜೂರಿಗೆ ದಾಖಲೆ ರವಾನಿಸಲು ಲಂಚಕ್ಕೆ ಬೇಡಿಕೆಯಿಟ್ಟಿದ್ದು, ಕಚೇರಿಯಲ್ಲಿ 8 ಸಾವಿರ ರೂ. ಲಂಚ ಪಡೆಯುವಾಗ ಸಿಕ್ಕಿಬಿದ್ದಿದ್ದಾರೆ. ಹರ್ಲಾಪುರ ಸರ್ಕಾರಿ ಶಾಲೆಯ ನಿವೃತ್ತ ಮುಖ್ಯೋಪಾಧ್ಯಾಯ ಮಂಜುನಾಥ್ ಅವರ ಬಳಿ ಲಂಚಕ್ಕೆ ಬೇಡಿಕೆಯಿಟ್ಟಿದ್ದರು. ಇನ್ನು ಧಾರವಾಡದ ಹೊಯ್ಸಳನಗರ ಬಡಾವಣೆಯಲ್ಲಿರುವ ಅವರ ನಿವಾಸದ ಮೇಲೂ ದಾಳಿ ಮಾಡಲಾಗಿ, ದಾಖಲೆಗಳನ್ನು ಪರಿಶೀಲನೆ ನಡೆಸುತ್ತಿದ್ದಾರೆ.

ಇದನ್ನೂ ಓದಿ:ರಕ್ಷಣಾ ವ್ಯವಸ್ಥೆಗೆ ನುಸುಳಲು ಎಚ್​ಎಎಲ್​ ಕೋರ್ಸ್​​ ಸೇರಲು ಅರ್ಜಿ ಸಲ್ಲಿಸಿದ್ದ ಐಎಸ್​​ ಉಗ್ರರು: ಎನ್​ಐಎ ಸ್ಪೋಟಕ ಮಾಹಿತಿ

ಭಾರತದ ರಕ್ಷಣಾ ವ್ಯವಸ್ಥೆಗೆ ಲಗ್ಗೆ ಇಡಲು ಸಂಚು

ಇಸ್ಲಾಮಿಕ್ ಸ್ಟೇಟ್ ಉಗ್ರ ಸಂಘಟನೆ ಚಟುವಟಿಕೆಗಳಲ್ಲಿ ಶಾಮೀಲಾಗಿದ್ದ ಆರೋಪಿ ಮಾಜ್ ಮುನೀರ್ ಅಹ್ಮದ್ ಎಂಬಾತ HAL ಸೇರುವ ಮೂಲಕ ಭಾರತದ ರಕ್ಷಣಾ ವ್ಯವಸ್ಥೆಗೆ ಲಗ್ಗೆ ಇಡಲು ಸಂಚು ಹೂಡಿದ್ದ ಎಂಬ ಆತಂಕಕಾರಿ ವಿಚಾರ ಅಕ್ಟೋಬರ್ 25 ರಂದು ಬಹಿರಂಗವಾಗಿತ್ತು. ಈ ವಿಚಾರವಾಗಿ ಆರೋಪಿಯ ಸಾಮಾಜಿಕ ಮಾಧ್ಯಮ ಖಾತೆಗಳು ಮತ್ತು ಇತರ ದಾಖಲೆಗಳಿಂದ ತಿಳಿದುಬಂದಿದೆ ಎಂದು ರಾಷ್ಟ್ರೀಯ ತನಿಖಾ ದಳ (NIA) ಬೆಂಗಳೂರಿನ ವಿಶೇಷ ನ್ಯಾಯಾಲಯಕ್ಕೆ ತಿಳಿಸಿತ್ತು. ಆರೋಪಿಯು ತನ್ನ ಆನ್​ಲೈನ್ ಹ್ಯಾಂಡ್ಲರ್​​​ನ ಸೂಚನೆಯಂತೆ ಬೆಂಗಳೂರಿನ ಎಚ್‌ಎಎಲ್ ಮ್ಯಾನೇಜ್‌ಮೆಂಟ್ ಅಕಾಡೆಮಿಯಲ್ಲಿ ಪಿಜಿ ಡಿಪ್ಲೊಮಾ ಇನ್ ಏವಿಯೇಷನ್ ​​ಮ್ಯಾನೇಜ್‌ಮೆಂಟ್ (PGDM) ಗೆ ಪ್ರವೇಶಕ್ಕಾಗಿ ಅರ್ಜಿ ಸಲ್ಲಿಸಿದ್ದ ಎಂದು ಎನ್​ಐಎ ಹೇಳಿತ್ತು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 6:44 pm, Sat, 2 December 23