ರಕ್ಷಣಾ ವ್ಯವಸ್ಥೆಗೆ ನುಸುಳಲು ಎಚ್​ಎಎಲ್​ ಕೋರ್ಸ್​​ ಸೇರಲು ಅರ್ಜಿ ಸಲ್ಲಿಸಿದ್ದ ಐಎಸ್​​ ಉಗ್ರರು: ಎನ್​ಐಎ ಸ್ಪೋಟಕ ಮಾಹಿತಿ

ಎನ್ಐಎ ಸಂಗ್ರಹಿಸಿದ ಮತ್ತು ವಿಶ್ಲೇಷಿಸಿದ ಮಾಹಿತಿಯ ಪ್ರಕಾರ, ಮಾಜ್ ಎಸ್​​ಕೆವೈಎಫ್ಐ ಲ್ಯಾಬ್ಸ್‌ನಲ್ಲಿ ‘7 ರೊಬೊಟಿಕ್ಸ್ ಆನ್‌ಲೈನ್ ಪ್ರಾಜೆಕ್ಟ್-ಆಧಾರಿತ ಕೋರ್ಸ್'ಗೆ ಸೇರಿದ್ದ ಮತ್ತು ರೊಬೊಟಿಕ್ಸ್ ಕಿಟ್ ಅನ್ನು ಸ್ವೀಕರಿಸಿದ್ದ. ಮತ್ತೊಬ್ಬ ಆರೋಪಿ ಸೈಯದ್ ಯಾಸಿನ್ ‘ಮೊಬೈಲ್ ರೋಬೋಟಿಕ್ ಆನ್‌ಲೈನ್ ಕೋರ್ಸ್'ಗೆ ಸೇರಿಕೊಂಡಿದ್ದ!

ರಕ್ಷಣಾ ವ್ಯವಸ್ಥೆಗೆ ನುಸುಳಲು ಎಚ್​ಎಎಲ್​ ಕೋರ್ಸ್​​ ಸೇರಲು ಅರ್ಜಿ ಸಲ್ಲಿಸಿದ್ದ ಐಎಸ್​​ ಉಗ್ರರು: ಎನ್​ಐಎ ಸ್ಪೋಟಕ ಮಾಹಿತಿ
ಎನ್​ಐಎ
Follow us
Ganapathi Sharma
|

Updated on: Oct 25, 2023 | 8:44 PM

ಬೆಂಗಳೂರು, ಅಕ್ಟೋಬರ್ 25: ಇಸ್ಲಾಮಿಕ್ ಸ್ಟೇಟ್ (IS) ಉಗ್ರ ಸಂಘಟನೆ ಚಟುವಟಿಕೆಗಳಲ್ಲಿ ಶಾಮೀಲಾಗಿದ್ದ ಆರೋಪಿ ಮಾಜ್ ಮುನೀರ್ ಅಹ್ಮದ್ (Maaz Muneer Ahmed) ಎಚ್‌ಎಎಲ್ (HAL) ಸೇರುವ ಮೂಲಕ ಭಾರತದ ರಕ್ಷಣಾ ವ್ಯವಸ್ಥೆಗೆ ಲಗ್ಗೆ ಇಡಲು ಸಂಚು ಹೂಡಿದ್ದ ಎಂಬ ಆತಂಕಕಾರಿ ವಿಚಾರ ಬಹಿರಂಗವಾಗಿದೆ. ಈ ವಿಚಾರವಾಗಿ ಆರೋಪಿಯ ಸಾಮಾಜಿಕ ಮಾಧ್ಯಮ ಖಾತೆಗಳು ಮತ್ತು ಇತರ ದಾಖಲೆಗಳಿಂದ ತಿಳಿದುಬಂದಿದೆ ಎಂದು ರಾಷ್ಟ್ರೀಯ ತನಿಖಾ ದಳ (NIA) ಬೆಂಗಳೂರಿನ ವಿಶೇಷ ನ್ಯಾಯಾಲಯಕ್ಕೆ ತಿಳಿಸಿದೆ.

ಆರೋಪಿಯು ತನ್ನ ಆನ್​ಲೈನ್ ಹ್ಯಾಂಡ್ಲರ್​​​ನ ಸೂಚನೆಯಂತೆ ಬೆಂಗಳೂರಿನ ಎಚ್‌ಎಎಲ್ ಮ್ಯಾನೇಜ್‌ಮೆಂಟ್ ಅಕಾಡೆಮಿಯಲ್ಲಿ ಪಿಜಿ ಡಿಪ್ಲೊಮಾ ಇನ್ ಏವಿಯೇಷನ್ ​​ಮ್ಯಾನೇಜ್‌ಮೆಂಟ್ (PGDM) ಗೆ ಪ್ರವೇಶಕ್ಕಾಗಿ ಅರ್ಜಿ ಸಲ್ಲಿಸಿದ್ದ ಎಂದು ಎನ್​ಐಎ ಹೇಳಿದೆ.

ಎನ್ಐಎ ಸಂಗ್ರಹಿಸಿದ ಮತ್ತು ವಿಶ್ಲೇಷಿಸಿದ ಮಾಹಿತಿಯ ಪ್ರಕಾರ, ಮಾಜ್ ಎಸ್​​ಕೆವೈಎಫ್ಐ ಲ್ಯಾಬ್ಸ್‌ನಲ್ಲಿ ‘7 ರೊಬೊಟಿಕ್ಸ್ ಆನ್‌ಲೈನ್ ಪ್ರಾಜೆಕ್ಟ್-ಆಧಾರಿತ ಕೋರ್ಸ್’ಗೆ ಸೇರಿದ್ದ ಮತ್ತು ರೊಬೊಟಿಕ್ಸ್ ಕಿಟ್ ಅನ್ನು ಸ್ವೀಕರಿಸಿದ್ದ. ಮತ್ತೊಬ್ಬ ಆರೋಪಿ ಸೈಯದ್ ಯಾಸಿನ್ ‘ಮೊಬೈಲ್ ರೋಬೋಟಿಕ್ ಆನ್‌ಲೈನ್ ಕೋರ್ಸ್’ಗೆ ಸೇರಿಕೊಂಡಿದ್ದ.

ಬೆಂಗಳೂರಿನ ಫುಡ್ ಡೆಲಿವರಿ ಬಾಯ್ ಮತ್ತು ರಾಪಿಡೋ ರೈಡರ್ ಆಗಿ ಕೆಲಸ ಮಾಡುತ್ತಿದ್ದ ಹುಝೈರ್ ಫರ್ಹಾನ್ ಬೇಗ್ (22) ಮತ್ತು ದಕ್ಷಿಣ ಕನ್ನಡದ ಎಂಜಿನಿಯರಿಂಗ್ ಪದವೀಧರ ಮಜಿನ್ ಅಬ್ದುಲ್ ರಹಮಾನ್ (22) ಸಲ್ಲಿಸಿದ್ದ ಜಾಮೀನು ಅರ್ಜಿಗೆ ಸಲ್ಲಿಸಿದ ಆಕ್ಷೇಪಣೆಗಳಲ್ಲಿ ಎನ್‌ಐಎ ಈ ಸಂಗತಿಗಳನ್ನು ಬಹಿರಂಗಪಡಿಸಿದೆ ಎಂದು ‘ದಿ ನ್ಯೂ ಇಂಡಿಯನ್ ಎಕ್ಸ್​​ಪ್ರೆಸ್’ ವರದಿ ಮಾಡಿದೆ.

ಇದನ್ನೂ ಓದಿ: ಉಡುಪಿ ಕೃಷ್ಣ ಮಠ, ಬಿಜೆಪಿ ಕಚೇರಿ ಬ್ಲಾಸ್ಟ್​ಗೆ ಪ್ಲಾನ್: ಎನ್​ಐಎ ತನಿಖೆಯಲ್ಲಿ ಸ್ಪೋಟಕ ರಹಸ್ಯ ಬಯಲು

2022ರ ಆಗಸ್ಟ್‌ನಲ್ಲಿ ಶಿವಮೊಗ್ಗದಲ್ಲಿ ನಡೆದ ಪ್ರೇಮ್ ಸಿಂಗ್ ಹತ್ಯೆಯ ನಂತರ ದೊಡ್ಡ ಸಂಚು ರೂಪಿಸಿದ ಎಂಟು ಆರೋಪಿಗಳಲ್ಲಿ ಇವರಿಬ್ಬರೂ ಸೇರಿದ್ದಾರೆ. ಪ್ರಮುಖ ಆರೋಪಿ ಮೊಹಮ್ಮದ್ ಶಾರಿಕ್ ತನ್ನ ಆನ್​ಲೈನ್ ಹ್ಯಾಂಡ್ಲರ್ ನಿರ್ದೇಶನದ ಮೇರೆಗೆ ಪ್ರೆಶರ್ ಕುಕ್ಕರ್ ಬಾಂಬ್ ಸಿದ್ಧಪಡಿಸಿದ್ದನ್ನು ಎನ್ಐಎ ಬಹಿರಂಗಪಡಿಸಿದೆ. ಮಂಗಳೂರಿನ ಕದ್ರಿ ದೇವಸ್ಥಾನಕ್ಕೆ ಕುಕ್ಕರ್ ಬಾಂಬ್ ಹಾಕಲು ತೆರಳುತ್ತಿದ್ದ ವೇಳೆ ಬಾಂಬ್ ಸ್ಫೋಟಗೊಂಡಿತ್ತು.

ಆನ್​ಲೈನ್ ಹ್ಯಾಂಡ್ಲರ್ ನಿರ್ದೇಶನದ ಮೇರೆಗೆ ಆರೋಪಿಗಳು ಶಿವಮೊಗ್ಗ, ಬ್ರಹ್ಮಾವರ ಮತ್ತು ಸುರತ್ಕಲ್‌ನಲ್ಲಿ ಹಿಂದೂಗಳಿಗೆ ಸೇರಿದ ಸರಕು ವಾಹನಗಳು, ಮದ್ಯ ಮಾರಾಟ ಮಳಿಗೆಗಳು, ಬಣ್ಣ ಮತ್ತು ಹಾರ್ಡ್‌ವೇರ್ ಅಂಗಡಿಗಳು ಮತ್ತು ಹೊನ್ನಾಳಿಯ ವಿಂಡ್‌ಮಿಲ್ ನಿಲ್ದಾಣವನ್ನು ಗುರಿಯಾಗಿಸಿಕೊಂಡಿದ್ದರು. ಅವರು ತ್ರಿವರ್ಣ ಧ್ವಜವನ್ನು ಸುಡುವ ವೀಡಿಯೊವನ್ನು ಸಹ ಹಂಚಿಕೊಂಡಿದ್ದರು ಎನ್ನಲಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

ಬಿಗ್​ ಬಾಸ್ ಮನೆಗೆ ಬಂದ ಗೌತಮಿ ಜಾದವ್ ಪತಿ​; ಹೇಗಿತ್ತು ಮಂಜು ರಿಯಾಕ್ಷನ್?
ಬಿಗ್​ ಬಾಸ್ ಮನೆಗೆ ಬಂದ ಗೌತಮಿ ಜಾದವ್ ಪತಿ​; ಹೇಗಿತ್ತು ಮಂಜು ರಿಯಾಕ್ಷನ್?
ಭಾವುಕ ಜೀವಿ ಸಾರಾ ಮಹೇಶ್ ಗತಿಸಿದ ಚಿಂಟುಳನ್ನು ನೆನೆದು ಕಣ್ಣೀರಾಗುತ್ತಾರೆ!
ಭಾವುಕ ಜೀವಿ ಸಾರಾ ಮಹೇಶ್ ಗತಿಸಿದ ಚಿಂಟುಳನ್ನು ನೆನೆದು ಕಣ್ಣೀರಾಗುತ್ತಾರೆ!
ರಸ್ತೆ ತಡೆಗೋಡೆಯಿಲ್ಲದಿದ್ದರೆ ಬಸ್ಸು ಪ್ರಪಾತಕ್ಕೆ ಉರುಳುತಿತ್ತು!
ರಸ್ತೆ ತಡೆಗೋಡೆಯಿಲ್ಲದಿದ್ದರೆ ಬಸ್ಸು ಪ್ರಪಾತಕ್ಕೆ ಉರುಳುತಿತ್ತು!
ಕೆಪಿಸಿಸಿ ಅಧ್ಯಕ್ಷನನ್ನು ಬದಲಾಯಿಸುವುದು ಹೈಕಮಾಂಡ್​ಗೆ ಬಿಟ್ಟ ವಿಚಾರ: ಸಚಿವ
ಕೆಪಿಸಿಸಿ ಅಧ್ಯಕ್ಷನನ್ನು ಬದಲಾಯಿಸುವುದು ಹೈಕಮಾಂಡ್​ಗೆ ಬಿಟ್ಟ ವಿಚಾರ: ಸಚಿವ
ತಂದೆ ಮುಖ ನೋಡಿ ಅಳು ನಿಲ್ಲಿಸಲೇ ಇಲ್ಲ ಉಗ್ರಂ ಮಂಜು; ಎಮೋಷನಲ್ ಎಪಿಸೋಡ್
ತಂದೆ ಮುಖ ನೋಡಿ ಅಳು ನಿಲ್ಲಿಸಲೇ ಇಲ್ಲ ಉಗ್ರಂ ಮಂಜು; ಎಮೋಷನಲ್ ಎಪಿಸೋಡ್
ಪೊಲೀಸರ ಮೇಲೆ ಅಪಾರ ನಂಬಿಕೆಯಿದೆ, ಸಿಬಿಐ ತನಿಖೆ ಬೇಕಿಲ್ಲ: ಸಿದ್ದರಾಮಯ್ಯ
ಪೊಲೀಸರ ಮೇಲೆ ಅಪಾರ ನಂಬಿಕೆಯಿದೆ, ಸಿಬಿಐ ತನಿಖೆ ಬೇಕಿಲ್ಲ: ಸಿದ್ದರಾಮಯ್ಯ
ಸಂವಿಧಾನದ ಆಶಯಗಳಿಗೆ ಕಾಂಗ್ರೆಸ್​ನಿಂದ ಅಪಪ್ರಚಾರ: ಸಿಟಿ ರವಿ
ಸಂವಿಧಾನದ ಆಶಯಗಳಿಗೆ ಕಾಂಗ್ರೆಸ್​ನಿಂದ ಅಪಪ್ರಚಾರ: ಸಿಟಿ ರವಿ
ಯುವಕ ಯುವತಿಯರ ಜೊತೆ ಮಧ್ಯವಯಸ್ಕ ಮಹಿಳೆಯರೂ ಪಬ್​ಗೆ ಬಂದಿದ್ದರು
ಯುವಕ ಯುವತಿಯರ ಜೊತೆ ಮಧ್ಯವಯಸ್ಕ ಮಹಿಳೆಯರೂ ಪಬ್​ಗೆ ಬಂದಿದ್ದರು
ಹೊಸ ವರ್ಷಕ್ಕೆ ಸಿಹಿ ಸುದ್ದಿ ಕೊಟ್ಟ ಶಿವಣ್ಣ: ವಿಡಿಯೋ ನೋಡಿ
ಹೊಸ ವರ್ಷಕ್ಕೆ ಸಿಹಿ ಸುದ್ದಿ ಕೊಟ್ಟ ಶಿವಣ್ಣ: ವಿಡಿಯೋ ನೋಡಿ
ನ್ಯೂ ಈಯರ್ ರೆವೆಲ್ಲರ್​​ಗಳ ಅಮಲಿನ ಹಾವಭಾವಗಳು ನಗೆ ಹುಟ್ಟಿಸುವಂತಿದ್ದವು!
ನ್ಯೂ ಈಯರ್ ರೆವೆಲ್ಲರ್​​ಗಳ ಅಮಲಿನ ಹಾವಭಾವಗಳು ನಗೆ ಹುಟ್ಟಿಸುವಂತಿದ್ದವು!