Belagavi News: ಕರ್ನಾಟಕ ಮಹಾರಾಷ್ಟ್ರ ಗಡಿಯಲ್ಲಿ ನಕಲಿ ನೋಟು ಬದಲಾಯಿಸೋ ಗ್ಯಾಂಗ್ ಅರೆಸ್ಟ್

ಬೆಳಗಾವಿ: ಕರ್ನಾಟಕ ಮಹಾರಾಷ್ಟ್ರ ಗಡಿಯಲ್ಲಿ ನಕಲಿ ನೋಟು ಬದಲಾಯಿಸೋ ಗ್ಯಾಂಗ್ ಅರೆಸ್ಟ್ ಮಾಡಲಾಗಿದ್ದು, ಬಂಧಿತರಿಂದ 120ಕ್ಕೂ ಅಧಿಕ ಬಂಡಲ್ ನಕಲಿ ನೋಟು, ಒಂದು ಲಕ್ಷ ಅಸಲಿ ನೋಟುಗಳನ್ನು ವಶಕ್ಕೆ ಪಡೆಯಲಾಗಿದೆ.

Belagavi News: ಕರ್ನಾಟಕ ಮಹಾರಾಷ್ಟ್ರ ಗಡಿಯಲ್ಲಿ ನಕಲಿ ನೋಟು ಬದಲಾಯಿಸೋ ಗ್ಯಾಂಗ್ ಅರೆಸ್ಟ್
ಆರೋಪಿಗಳು
Follow us
|

Updated on: Jun 03, 2023 | 11:32 AM

ಬೆಳಗಾವಿ: ಕರ್ನಾಟಕ ಮಹಾರಾಷ್ಟ್ರ ಗಡಿಯಲ್ಲಿ ನಕಲಿ ನೋಟು (Fake Notes)ಬದಲಾಯಿಸೋ ಗ್ಯಾಂಗ್ ಅರೆಸ್ಟ್ ಮಾಡಲಾಗಿದೆ. ಆರ್‌ಬಿಐ(RBI) 2 ಸಾವಿರ ನೋಟ್ ಬ್ಯಾನ್ ಮಾಡಿದ್ದನ್ನೇ ಅಸ್ತ್ರವಾಗಿಸಿಕೊಂಡ ವಂಚಕರು. ನೋಟು ಬದಲಾವಣೆ ಹೆಸರಲ್ಲಿ ಪಂಗನಾಮ ಹಾಕಲು ಮುಂದಾಗಿದ್ದರು. ಅದರಂತೆ ಆರೋಪಿಗಳಾದ ಮಹಾರಾಷ್ಟ್ರದ ಓರ್ವ ಪೊಲೀಸ್(Police) ಸೇರಿ ಮೂವರನ್ನ ಬಂಧಿಸಲಾಗಿದೆ. 500 ರೂ. ಮುಖ ಬೆಲೆಯ 5 ಲಕ್ಷ ನೋಟು ಕೊಟ್ಟು, 2 ಸಾವಿರ ಮುಖ ಬೆಲೆಯ 6 ಲಕ್ಷ ಪಡೆಯರಿ ಎಂದು ಹೇಳಿ, ನಕಲಿ ನೋಟು ತೋರಿಸಿ ಜನರನ್ನ ನಂಬಿಸಿ ಮೋಸ ಮಾಡುತ್ತಿದ್ದರು. ಇದೀಗ ಖದೀಮರನ್ನ ಬಂಧಿಸಲಾಗಿದ್ದು, ಬೆಳಗಾವಿ ಜಿಲ್ಲೆಯ ಕಾಗವಾಡ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಹಾರಾಷ್ಟ್ರ ಮೂಲದ ವ್ಯಕ್ತಿಯಿಂದ 5 ಲಕ್ಷ ರೂ. ಪಡೆದು ಪಂಗನಾಮ

ಸಮೀರ್ ಭೋಸಲೆ ಎಂಬುವವರನ್ನ ಅಥಣಿ ತಾಲೂಕಿನ ಮಂಗಸೂಳಿ ಗ್ರಾಮಕ್ಕೆ ಕರೆಸಿ, 500 ರೂ. ಮುಖ ಬೆಲೆಯ 5 ಲಕ್ಷ ಹಣವನ್ನ ಪಡೆದು ಎಸ್ಕೇಪ್ ಆಗಿದ್ದರು. ಹೌದು 5 ಲಕ್ಷ ರೂಪಾಯಿ ಕೈಗೆ ಸಿಗುತ್ತಿದ್ದಂತೆ ಪೋಲಿಸರು ಬಂದ್ರು, ಎಂದು ಸುಳ್ಳು ಹೇಳಿ ಅಲ್ಲಿಂದ ಕಾಲ್ಕಿತ್ತಿದ್ದಾರೆ. ಈ ವಿಚಾರ ಗೊತ್ತಾಗಿ ಅಖಾಡಕ್ಕಿಳಿದಿದ್ದ ಕಾಗವಾಡ ಪೊಲೀಸರು. ಘಟನೆ ನಡೆದ 24 ಗಂಟೆ ಒಳಗೆ ಮಹಾರಾಷ್ಟ್ರದ ಮಿರಜ್ ಠಾಣೆಯ ಪೊಲೀಸ್‌ ಸಾಗರ ಜಾಧವ್, ಆರೀಫ್, ಲಕ್ಷ್ಮಣ ನಾಯಕ್ ಎಂಬುವವರನ್ನ ಬಂಧಿಸಲಾಗಿದ್ದು, ಬಂಧಿತರಿಂದ 120ಕ್ಕೂ ಅಧಿಕ ಬಂಡಲ್ ನಕಲಿ ನೋಟು, ಒಂದು ಲಕ್ಷ ಅಸಲಿ ನೋಟುಗಳನ್ನು ವಶಕ್ಕೆ ಪಡೆಯಲಾಗಿದೆ.

ಇದನ್ನೂ ಓದಿ:ಬೆಂಗಳೂರು: ಯೂಟ್ಯೂಬ್​ ನೋಡಿ ನಕಲಿ ನೋಟು ತಯಾರಿ ಮಾಡುತ್ತಿದ್ದವನನ್ನ ಬಂಧಿಸಿದ ಪೊಲೀಸರು

ನಿಮ್ಮ ಬಳಿ 500 ರೂ ನೋಟಿದ್ದರೆ ಹುಷಾರ್; ಹೆಚ್ಚು ನಕಲಿ ನೋಟು ಇರೋದು 2,000 ರೂದ್ದಲ್ಲವಂತೆ; ಕುತೂಹಲ ಮೂಡಿಸಿದೆ ಆರ್​ಬಿಐ ವರದಿ

ನವದೆಹಲಿ: ಭಾರತದಲ್ಲಿ 500 ರೂ ಮುಖಬೆಲೆಯ ನಕಲಿ ನೋಟುಗಳು ಪತ್ತೆಯಾಗುವುದು ಹೆಚ್ಚುತ್ತಿದೆ. 2022-23ರ ಹಣಕಾಸು ವರ್ಷದಲ್ಲಿ ಹೆಚ್ಚೂಕಡಿಮೆ ಒಂದು ಲಕ್ಷ ಸಮೀಪದಷ್ಟು 500 ರೂ ನಕಲಿ ನೋಟುಗಳು ಪತ್ತೆಯಾಗಿವೆ. 2021-22ಕ್ಕೆ ಹೋಲಿಸಿದರೆ 2022-23ರ ಹಣಕಾಸು ವರ್ಷದಲ್ಲಿ 500 ರೂ ಮುಖಬೆಲೆಯ ನಕಲಿ ನೋಟುಗಳು ಶೇ. 14.6ರಷ್ಟು ಹೆಚ್ಚು ಪತ್ತೆಯಾಗಿವೆ. ಹೆಚ್ಚು ನಕಲಿ ನೋಟುಗಳಿರಬಹುದು ಎಂದು ಭಾವಿಸಲಾಗಿರುವ 2,000 ರೂ ಮುಖಬೆಲೆಯ ನೋಟುಗಳಲ್ಲಿ ನಕಲಿ ನೋಟುಗಳು ಪತ್ತೆಯಾಗಿರುವ ಪ್ರಮಾಣ ಶೇ. 28ರಷ್ಟು ಕಡಿಮೆ ಆಗಿದೆ. 500 ರೂ ಮುಖಬೆಲೆ ನಕಲಿ ನೋಟುಗಳ ಸಂಖ್ಯೆ 91,110 ಆದರೆ, 2,000 ರೂ ಮುಖಬೆಲೆಯ ನಕಲಿ ನೋಟುಗಳು 9,806 ಇವೆ. ಇದು ಭಾರತೀಯ ರಿಸರ್ವ್ ಬ್ಯಾಂಕ್ ಪ್ರಕಟಿಸಿದ ವಾರ್ಷಿಕ ವರದಿಯಲ್ಲಿ ಕಂಡು ಬಂದ ಅಂಶ.

ಈ ವರದಿ ಪ್ರಕಾರ 2021-22ರಲ್ಲಿ ಒಟ್ಟು 2,30,971 ನಕಲಿ ನೋಟುಗಳು ಪತ್ತೆಯಾಗಿದ್ದವು. ಈ ಸಂಖ್ಯೆ 2022-23ರಲ್ಲಿ ಇಳಿಮುಖವಾಗಿದೆ. ಈ ಹಣಕಾಸು ವರ್ಷದಲ್ಲಿ ಪತ್ತೆಯಾದ ನಕಲಿ ನೋಟುಗಳ ಸಂಖ್ಯೆ 2,25,769 ಇದೆ. ನಕಲಿ ನೋಟುಗಳು ಪತ್ತೆಯಾಗುವುದು ಹೆಚ್ಚಾಗಿರುವುದು 500 ರೂ ಮತ್ತು 20 ರೂ ಮುಖಬೆಲೆಯ ನೋಟುಗಳು ಮಾತ್ರವೇ. 2000 ರೂ, 10 ರೂ ಮತ್ತು 100 ರೂ ಮುಖಬೆಲೆಯ ನಕಲಿ ನೋಟುಗಳ ಪತ್ತೆ ಪ್ರಮಾಣ ಕಡಿಮೆ ಆಗಿದೆ.

ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ದಸರಾ ಹಬ್ಬದ ವಿಶೇಷ ಬಸ್​ಗಳು ​ಫುಲ್: ಬಿಬಿಎಂಟಿಸಿ ಬಸ್ ವ್ಯವಸ್ಥೆ
ದಸರಾ ಹಬ್ಬದ ವಿಶೇಷ ಬಸ್​ಗಳು ​ಫುಲ್: ಬಿಬಿಎಂಟಿಸಿ ಬಸ್ ವ್ಯವಸ್ಥೆ
ಇಷ್ಟು ದಿನ ಸ್ವರ್ಗದಲ್ಲಿದ್ದು ಈಗ ನರಕದ ಪಾಲಾದ ಐಶ್ವರ್ಯಾ; ಜಗದೀಶ್​ಗೆ ಖುಷಿ
ಇಷ್ಟು ದಿನ ಸ್ವರ್ಗದಲ್ಲಿದ್ದು ಈಗ ನರಕದ ಪಾಲಾದ ಐಶ್ವರ್ಯಾ; ಜಗದೀಶ್​ಗೆ ಖುಷಿ
ಹಬ್ಬಕ್ಕಾಗಿ ದೂರದ ಊರುಗಳಿಗೆ ಪ್ರಯಾಣಿಸುತ್ತಿರೋರಿಗೆ ಮಳೆ ಕಾಟ!
ಹಬ್ಬಕ್ಕಾಗಿ ದೂರದ ಊರುಗಳಿಗೆ ಪ್ರಯಾಣಿಸುತ್ತಿರೋರಿಗೆ ಮಳೆ ಕಾಟ!
ಆ ಸಮಯದ ಬಳಿಕ ರಜನೀಕಾಂತ್ ನಾಯಕನಾಗಿ ನಟಿಸಲ್ಲ: ಗೆಳೆಯ ಬಹದ್ದೂರ್
ಆ ಸಮಯದ ಬಳಿಕ ರಜನೀಕಾಂತ್ ನಾಯಕನಾಗಿ ನಟಿಸಲ್ಲ: ಗೆಳೆಯ ಬಹದ್ದೂರ್
ಕರ್ನಾಟಕದಲ್ಲಿ ಮುಂದಿನ 5 ದಿನ ಭಾರೀ ಮಳೆ ಮುನ್ಸೂಚನೆ: ಎಲ್ಲೆಲ್ಲಿ?
ಕರ್ನಾಟಕದಲ್ಲಿ ಮುಂದಿನ 5 ದಿನ ಭಾರೀ ಮಳೆ ಮುನ್ಸೂಚನೆ: ಎಲ್ಲೆಲ್ಲಿ?
ಸಿದ್ದರಾಮಯ್ಯ ಮೇಲಿದ್ದ ವಿಶ್ವಾಸ ಹುಸಿಹೋಗಿದೆ, ರಾಜೀನಾಮೆ ನೀಡಲಿ: ರವಿಕುಮಾರ್
ಸಿದ್ದರಾಮಯ್ಯ ಮೇಲಿದ್ದ ವಿಶ್ವಾಸ ಹುಸಿಹೋಗಿದೆ, ರಾಜೀನಾಮೆ ನೀಡಲಿ: ರವಿಕುಮಾರ್
ದಸರಾ ರಜೆ: ತುಂಬಿ ತುಳುಕುತ್ತಿರೋ ಬೆಂಗಳೂರಿನ KSRTC ಬಸ್​ ನಿಲ್ದಾಣ
ದಸರಾ ರಜೆ: ತುಂಬಿ ತುಳುಕುತ್ತಿರೋ ಬೆಂಗಳೂರಿನ KSRTC ಬಸ್​ ನಿಲ್ದಾಣ
ಚನ್ನಪಟ್ಟಣ: ಬೇರೆ ಅಭ್ಯರ್ಥಿ ಒಪ್ಪಿಕೊಳ್ಳುವುದು ಕುಮಾರಸ್ವಾಮಿಗೆ ಸಾಧ್ಯವಿಲ್ಲ
ಚನ್ನಪಟ್ಟಣ: ಬೇರೆ ಅಭ್ಯರ್ಥಿ ಒಪ್ಪಿಕೊಳ್ಳುವುದು ಕುಮಾರಸ್ವಾಮಿಗೆ ಸಾಧ್ಯವಿಲ್ಲ
ಸುಲಭ ಕ್ಯಾಚ್ ಕೈಚೆಲ್ಲಿದ ಬಾಬರ್; 262 ರನ್ ಚಚ್ಚಿದ ರೂಟ್
ಸುಲಭ ಕ್ಯಾಚ್ ಕೈಚೆಲ್ಲಿದ ಬಾಬರ್; 262 ರನ್ ಚಚ್ಚಿದ ರೂಟ್
ಅದೃಷ್ಟ ಅಂದ್ರೆ ಇದಪ್ಪಾ..! 25 ಕೋಟಿ ರೂ. ಲಾಟರಿ ಗೆದ್ದ ಕನ್ನಡಿಗನ ಮನದ ಮಾತು
ಅದೃಷ್ಟ ಅಂದ್ರೆ ಇದಪ್ಪಾ..! 25 ಕೋಟಿ ರೂ. ಲಾಟರಿ ಗೆದ್ದ ಕನ್ನಡಿಗನ ಮನದ ಮಾತು