ಬೆಂಗಳೂರು: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (BMTC) ರಾತ್ರಿ 11 ಗಂಟೆಯಿಂದ ಬೆಳಿಗ್ಗೆ 5 ಗಂಟೆವರೆಗೆ ಪ್ರಯಾಣಿಸುವ ಪ್ರಾಯಣಿಕರಿಗೆ ಸಾಮಾನ್ಯ ದರಕ್ಕಿಂತ 1.5 ಪಟ್ಟು ಹೆಚ್ಚು ಹಣ ಪಡೆಯುತ್ತಿತ್ತು. ಆದರೆ ಶೀಘ್ರದಲ್ಲೇ ಇದನ್ನು ರದ್ದುಪಡಿಸಲಾಗುವುದು ಎಂದು ಸಾರಗೆ ಸಚಿವ ರಾಮಲಿಂಗಾ ರೆಡ್ಡಿ (Ramalinga Reddy) ಹೇಳಿದರು. ಇನ್ನು ಸೆಪ್ಟೆಂಬರ್ 25ಕ್ಕೆ ಬಿಎಂಟಿಸಿ ಆರಂಭವಾಗಿ 25 ವರ್ಷ ಪೂರೈಸಲಿದೆ. ಈ ರಜತ ಮಹೋತ್ಸವ ದಿನದಂದೇ ‘ನಮ್ಮ ಬಿಎಂಟಿಸಿ (Namma BMTC)’ ಬಸ್ ಟ್ರ್ಯಾಕಿಂಗ್ ಮೊಬೈಲ್ ಆ್ಯಪ್ ಅನ್ನು ಬಿಡುಗಡೆ ಮಾಡಲಾಗುವುದು ಎಂದು ಹೇಳಿದರು.
ಸೋಮವಾರ ನಗರದ ಕಲಾಸಿಪಾಳ್ಯ ಬಸ್ ನಿಲ್ದಾಣವನ್ನು ಪರಿಶೀಲಿಸಿ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮತನಾಡಿದ ಅವರು ಈ ಆ್ಯಪ್ ಮೂಲಕ ಪ್ರಯಾಣಿಕರು ಬಿಎಂಟಿಸಿ ಬಸ್‌ಗಳನ್ನು ಟ್ರ್ಯಾಕ್ ಮಾಡಬಹುದಾಗಿದೆ. ಮತ್ತು ಈ ಆ್ಯಪ್ನಲ್ಲಿ ಪ್ರಯಾಣದ ಟಿಕೆಟ್ ಕೂಡ ಕೊಂಡುಕೊಳ್ಳಬಹುದಾಗಿದೆ ಎಂದರು.
ಇದನ್ನೂ ಓದಿ: ಬೆಂಗಳೂರು: ಡಬಲ್ ಡೆಕ್ಕರ್ ಬಸ್ಗೆ ಶೀಘ್ರ ಟೆಂಡರ್ ಕರೆಯಲಿದೆ ಬಿಎಂಟಿಸಿ, ವರ್ಷಾಂತ್ಯ ರಸ್ತೆಗಿಳಿಯಲಿವೆ ಬಸ್ಗಳು
“ಈ ಆ್ಯಪ್ ಅನ್ನು ಆ್ಯಪ್ ಅನ್ನು 2022 ರ ಡಿಸೆಂಬರ್ನಲ್ಲಿ ಮತ್ತು ನಂತರ 2023 ರ ಜನವರಿ ಮತ್ತು ಮಾರ್ಚ್ನಲ್ಲಿ ಪ್ರಾರಂಭಿಸಲು ನಿರೀಕ್ಷಿಸಲಾಗಿತ್ತು. ಆದರೆ ತಾಂತ್ರಿಕ ದೋಷಗಳು ಮತ್ತು ಇತರ ಸಮಸ್ಯೆಗಳನ್ನು ಸರಿಪಡಿಸಿ ಅನಾವರಣಗೊಳಿಸಲು ವಿಳಂಬವಾಯಿತು.”
ಇತ್ತೀಚಿಗೆ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ (NWKSRTC) ಬಸ್ಗಳಲ್ಲಿ ಯುಪಿಐ ಮೂಲಕ ಟಿಕೆಟ್ ಕೊಂಡುಕೊಳ್ಳುವ ವ್ಯವಸ್ಥೆಯನ್ನು ಪ್ರಾಯೋಗಿಕವಾಗಿ ಪರಿಚಯಿಸಲಾಗಿದೆ. ಇದು ಯಶಸ್ವಿಯಾದರೇ ಬಿಎಂಟಿಸಿ ಮತ್ತು ಕೆಎಸ್ಆರ್ಟಿಸಿ ಬಸ್ಗಳಲ್ಲೂ ಪರಿಚಯಿಸಲಾಗುವುದು ಎಂದು ತಿಳಿಸಿದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ