ಬೆಂಗಳೂರು: ಡಬಲ್ ಡೆಕ್ಕರ್​ ಬಸ್​​ಗೆ ಶೀಘ್ರ ಟೆಂಡರ್ ಕರೆಯಲಿದೆ ಬಿಎಂಟಿಸಿ, ವರ್ಷಾಂತ್ಯ ರಸ್ತೆಗಿಳಿಯಲಿವೆ ಬಸ್​ಗಳು

ಬಿಎಂಟಿಸಿ ಈ ಹಿಂದೆ ಐದು ಡಬಲ್ ಡೆಕ್ಕರ್ ಬಸ್‌ಗಳ ಪೂರೈಕೆಗಾಗಿ ಟೆಂಡರ್‌ ಕರೆದಿತ್ತು. ಬಿಡ್ಡರ್​​ಗಳು ಹೆಚ್ಚಿನ ಬೆಲೆ ಘೋಷಿಸಿದ್ದರು. ಹೀಗಾಗಿ ಮರು ಟೆಂಡರ್‌ಗೆ ಹೋಗಲು ಸಂಪುಟವು ನಿರ್ಧರಿಸಿತು ಮತ್ತು ಹತ್ತು ಡಬಲ್ ಡೆಕ್ಕರ್ ಬಸ್‌ಗಳ ಖರೀದಿಗೆ ಅನುಮೋದನೆ ನೀಡಿತು ಎಂದು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ತಿಳಿಸಿರುವುದಾಗಿ ವರದಿಯಾಗಿದೆ.

ಬೆಂಗಳೂರು: ಡಬಲ್ ಡೆಕ್ಕರ್​ ಬಸ್​​ಗೆ ಶೀಘ್ರ ಟೆಂಡರ್ ಕರೆಯಲಿದೆ ಬಿಎಂಟಿಸಿ, ವರ್ಷಾಂತ್ಯ ರಸ್ತೆಗಿಳಿಯಲಿವೆ ಬಸ್​ಗಳು
ಸಾಂದರ್ಭಿಕ ಚಿತ್ರ
Follow us
Ganapathi Sharma
|

Updated on: Sep 04, 2023 | 10:42 PM

ಬೆಂಗಳೂರು, ಸೆಪ್ಟೆಂಬರ್ 4: ಹಿಂದೊಮ್ಮೆ ಬೆಂಗಳೂರಿನ ಆಕರ್ಷಣೆಯಾಗಿದ್ದ ಡಬಲ್ ಡೆಕ್ಕರ್ ಬಸ್‌ಗಳು (Double-Decker Buses) ಈ ವರ್ಷಾಂತ್ಯದ ವೇಳೆಗೆ ನಗರದಲ್ಲಿ ಮತ್ತೆ ಸಂಚಾರ ಆರಂಭಿಸಲಿವೆ. ಜೂನ್ ತಿಂಗಳಲ್ಲಿ 24 ಕೋಟಿ ರೂಪಾಯಿ ವೆಚ್ಚದಲ್ಲಿ ಹತ್ತು ಡಬಲ್ ಡೆಕ್ಕರ್ ಬಸ್‌ಗಳ ಖರೀದಿಗೆ ರಾಜ್ಯ ಸಚಿವ ಸಂಪುಟವು ಒಪ್ಪಿಗೆ ನೀಡಿದ ಸುಮಾರು ಎರಡು ತಿಂಗಳ ನಂತರ, ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (BMTC) ಟೆಂಡರ್ ಕರೆಯಲು ಸಜ್ಜಾಗಿದೆ. ಶೀಘ್ರದಲ್ಲೇ ಟೆಂಡರ್ ಪ್ರಕ್ರಿಯೆ ನಡೆಯುವ ಸಾಧ್ಯತೆ ಇದೆ ಎಂದು ವರದಿಯಾಗಿದೆ.

ಬಿಎಂಟಿಸಿ ಈ ಹಿಂದೆ ಐದು ಡಬಲ್ ಡೆಕ್ಕರ್ ಬಸ್‌ಗಳ ಪೂರೈಕೆಗಾಗಿ ಟೆಂಡರ್‌ ಕರೆದಿತ್ತು. ಬಿಡ್ಡರ್​​ಗಳು ಹೆಚ್ಚಿನ ಬೆಲೆ ಘೋಷಿಸಿದ್ದರು. ಹೀಗಾಗಿ ಮರು ಟೆಂಡರ್‌ಗೆ ಹೋಗಲು ಸಂಪುಟವು ನಿರ್ಧರಿಸಿತು ಮತ್ತು ಹತ್ತು ಡಬಲ್ ಡೆಕ್ಕರ್ ಬಸ್‌ಗಳ ಖರೀದಿಗೆ ಅನುಮೋದನೆ ನೀಡಿತು ಎಂದು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ದೃಢಪಡಿಸಿರುವುದಾಗಿ ‘ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್’ ವರದಿ ಮಾಡಿದೆ.

ನಿಗಮವು ಟೆಂಡರ್ ವಿವರಗಳನ್ನು ಸಿದ್ಧಪಡಿಸುತ್ತಿದೆ. ಶೀಘ್ರದಲ್ಲೇ ಟೆಂಡರ್ ಕರೆಯಲಾಗುವುದು ಎಂದು ಅವರು ಹೇಳಿದ್ದಾರೆ.

ಅಶೋಕ್ ಲೇಲ್ಯಾಂಡ್‌ನ ಸ್ವಿಚ್ ಮೊಬಿಲಿಟಿ ಹೊರತುಪಡಿಸಿ, ಡಬಲ್ ಡೆಕ್ಕರ್ ಎಲೆಕ್ಟ್ರಿಕ್ ಬಸ್‌ಗಳನ್ನು ತಯಾರಿಸಲು ಸದ್ಯ ಯಾರೂ ಇಲ್ಲ. ಟೆಂಡರ್ ಪ್ರಕ್ರಿಯೆ ಮುಗಿದ ನಂತರ ನಿಖರ ಮಾಹಿತಿ ನೀಡಲಾಗುವುದು. ಶೀಘ್ರದಲ್ಲೇ ಬಸ್‌ಗಳು ರಸ್ತೆಗಿಳಿಯಲಿವೆ ಎಂದು ಸಚಿವರು ತಿಳಿಸಿದ್ದಾರೆ.

ಇದನ್ನೂ ಓದಿ: ಬೆಂಗಳೂರು ಟ್ರಾಫಿಕ್; 10 ಕಿಮೀ ತೆರಳಲು ಕಾರಿಗೆ 90 ನಿಮಿಷ, ಬೈಕ್​ಗೆ 35 – 40 ನಿಮಿಷ!

ನಗರದಲ್ಲಿ ಇತ್ತೀಚೆಗೆ ನೀರಿನ ಟ್ಯಾಂಕರ್​ಗೆ ತಾಗಿ ಬಿದ್ದ ವಿದ್ಯುತ್ ತಂತಿ ತಗುಲಿದ ಪರಿಣಾಮ ಕಾಲೇಜು ವಿದ್ಯಾರ್ಥಿನಿಯೊಬ್ಬರು ಶೇಕಡಾ 35 ರಷ್ಟು ಸುಟ್ಟಗಾಯಕ್ಕೆ ತುತ್ತಾಗಿದ್ದರು. ಈ ಪ್ರಕರಣದ ಹಿನ್ನೆಲೆಯಲ್ಲಿ, ಮಾರ್ಗಗಳ ಬಗ್ಗೆ ಪರಿಶೀಲಿಸಲು ಮತ್ತು ಪ್ರತಿಕ್ರಿಯಿಸಲು ಇದು ಸುಸಮಯವಾಗಿದೆ ಎಂದು ಬಿಎಂಟಿಸಿಯ ಉನ್ನತ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಆದಾಗ್ಯೂ, ಫ್ಲೈಓವರ್‌ಗಳು ಮತ್ತು ಅಂಡರ್‌ಪಾಸ್‌ಗಳ ನಿರ್ಮಾಣದೊಂದಿಗೆ ನಗರದ ತ್ವರಿತ ಅಭಿವೃದ್ಧಿಯನ್ನು ಗಮನಿಸಿದರೆ, ಹೊರ ವರ್ತುಲ ರಸ್ತೆ ಮತ್ತು ಇತರ ಮಾರ್ಗಗಳಲ್ಲಿ ಡಬಲ್ ಡೆಕ್ಕರ್ ಬಸ್‌ನ ಸಂಚಾರಕ್ಕೆ ಯಾವುದೇ ಅಡ್ಡಿಯಾಗಲಾರದು ಎಂದು ಅಧಿಕಾರಿ ತಿಳಿಸಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ