ಬೆಂಗಳೂರು ಟ್ರಾಫಿಕ್; 10 ಕಿಮೀ ತೆರಳಲು ಕಾರಿಗೆ 90 ನಿಮಿಷ, ಬೈಕ್​ಗೆ 35 – 40 ನಿಮಿಷ!

Bengaluru Traffic problem; ತಮ್ಮ ಕೆಲಸದ ಸ್ಥಳಗಳಿಗೆ ಪ್ರಯಾಣಿಸಲು ಮೆಟ್ರೋವನ್ನು ಬಳಸುವ ನಾಗರಿಕರು ಮೆಟ್ರೋದಲ್ಲಿ 45 ನಿಮಿಷಗಳಿಗಿಂತ ಕಡಿಮೆ ಸಮಯವನ್ನು ಕಳೆಯುತ್ತಾರೆ. ಆದಾಗ್ಯೂ, ಮೆಟ್ರೋದಿಂದ ಇಳಿದ ನಂತರ ತಲುಪಬೇಕಾದ ಸ್ಥಳವನ್ನು ಸಂಪರ್ಕಿಸುವುದನ್ನು ಅವಲಂಬಿಸಿ ಅವರ ಒಟ್ಟಾರೆ ಪ್ರಯಾಣದ ಸಮಯವು 60 ರಿಂದ 90 ನಿಮಿಷಗಳವರೆಗೆ ಇರುತ್ತದೆ.

ಬೆಂಗಳೂರು ಟ್ರಾಫಿಕ್; 10 ಕಿಮೀ ತೆರಳಲು ಕಾರಿಗೆ 90 ನಿಮಿಷ, ಬೈಕ್​ಗೆ 35 - 40 ನಿಮಿಷ!
ಸಾಂದರ್ಭಿಕ ಚಿತ್ರ
Follow us
|

Updated on: Sep 04, 2023 | 8:31 PM

ಬೆಂಗಳೂರು, ಸೆಪ್ಟೆಂಬರ್ 4: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ (Bangalore) ಕಾರಿನಲ್ಲಿ ಪ್ರಯಾಣಿಸುವ ನಾಗರಿಕರು 10 ಕಿ.ಮೀ ದೂರವನ್ನು ಕ್ರಮಿಸಲು ಸುಮಾರು 90 ನಿಮಿಷಗಳನ್ನು ಕಳೆಯುತ್ತಾರೆ ಮತ್ತು ದ್ವಿಚಕ್ರ ವಾಹನಗಳು ಅದೇ ದೂರವನ್ನು ಕ್ರಮಿಸಲು 35 ರಿಂದ 40 ನಿಮಿಷಗಳನ್ನು ತೆಗೆದುಕೊಳ್ಳುತ್ತವೆ ಎಂಬುದು ತಿಳಿದು ಬಂದಿದೆ. ಎನ್‌ಜಿಒಗಳು, ಬೆಂಗಳೂರು ಪೊಲಿಟಿಕಲ್ ಆಕ್ಷನ್ ಕಮಿಟಿ (B.PAC) ಮತ್ತು ಡಬ್ಲ್ಯುಆರ್‌ಐ ಇಂಡಿಯಾ ಬಿಡುಗಡೆ ಮಾಡಿದ ವರದಿಯಿಂದ ಈ ಮಾಹಿತಿ ತಿಳಿದುಬಂದಿದೆ. ಎನ್‌ಜಿಒಗಳು ಪ್ರಾರಂಭಿಸಿದ ‘ಪರ್ಸನಲ್2ಪಬ್ಲಿಕ್ (personal2Public)’ ಅಭಿಯಾನವು ವಾರಕ್ಕೆ ಎರಡು ಬಾರಿಯಾದರೂ ಸಾರ್ವಜನಿಕ ಸಾರಿಗೆಯನ್ನು ಬಳಸಲು ಜನರನ್ನು ಉತ್ತೇಜಿಸುವ ಗುರಿಯನ್ನು ಹೊಂದಿದೆ.

ತಮ್ಮ ಕೆಲಸದ ಸ್ಥಳಗಳಿಗೆ ಪ್ರಯಾಣಿಸಲು ಮೆಟ್ರೋವನ್ನು ಬಳಸುವ ನಾಗರಿಕರು ಮೆಟ್ರೋದಲ್ಲಿ 45 ನಿಮಿಷಗಳಿಗಿಂತ ಕಡಿಮೆ ಸಮಯವನ್ನು ಕಳೆಯುತ್ತಾರೆ. ಆದಾಗ್ಯೂ, ಮೆಟ್ರೋದಿಂದ ಇಳಿದ ನಂತರ ತಲುಪಬೇಕಾದ ಸ್ಥಳವನ್ನು ಸಂಪರ್ಕಿಸುವುದನ್ನು ಅವಲಂಬಿಸಿ ಅವರ ಒಟ್ಟಾರೆ ಪ್ರಯಾಣದ ಸಮಯವು 60 ರಿಂದ 90 ನಿಮಿಷಗಳವರೆಗೆ ಇರುತ್ತದೆ. ಅಧ್ಯಯನದ ಪ್ರಕಾರ, ವೈಯಕ್ತಿಕ ಮತ್ತು ಖಾಸಗಿ ಸಾರಿಗೆ ವಿಧಾನಗಳನ್ನು ಬಳಸುವವರಿಗಿಂತ ಕಚೇರಿಯಿಂದ ಒದಗಿಸಲಾದ ಸಾರಿಗೆಯನ್ನು ಬಳಸುವ ಜನರು ಪ್ರಯಾಣದಲ್ಲಿ ಹೆಚ್ಚು ಸಮಯವನ್ನು ಕಳೆಯುತ್ತಾರೆ.

ಕೆಲಸದ ಸ್ಥಳಕ್ಕೆ ಪ್ರಯಾಣಿಸಲು ಖಾಸಗಿ ವಾಹನಗಳನ್ನು ಬಳಸುವ ಶೇ 95 ಕ್ಕಿಂತ ಹೆಚ್ಚು ಪ್ರಯಾಣಿಕರು ಮೆಟ್ರೋ ತಲುಪಲು ಮತ್ತು ಇಳಿದ ನಂತರ ತಲುಪಬೇಕಾದ ಸ್ಥಳವನ್ನು ಸಂಪರ್ಕವನ್ನು ಸೂಕ್ತ ವ್ಯವಸ್ಥೆ ಒದಗಿಸಿದರೆ ಮೆಟ್ರೋವನ್ನು ಬಳಸಲು ಸಿದ್ಧರಿದ್ದಾರೆ. ಎನ್‌ಜಿಒಗಳು ನಡೆಸಿದ ಅಧ್ಯಯನಕ್ಕೆ ಸುಮಾರು 3,855 ಮಂದಿ ಪ್ರತಿಕ್ರಿಯಿಸಿದ್ದಾರೆ. ಈ ಪ್ರತಿಕ್ರಿಯಿಸಿದವರಲ್ಲಿ, ಶೇಕಡಾ 58 ರಷ್ಟು ಜನರು ಪ್ರಯಾಣಿಸಲು ಕಾರು ಅಥವಾ ಬೈಕು ಬಳಸುತ್ತಾರೆ. ಶೇಕಡಾ 17 ಜನರು ಮಾತ್ರ ಸಾರ್ವಜನಿಕ ಸಾರಿಗೆಯನ್ನು ಬಳಸುತ್ತಾರೆ (BMTC ಅಥವಾ ಮೆಟ್ರೋ). ಸಾರ್ವಜನಿಕ ಸಾರಿಗೆಯನ್ನು ಬಳಸುವ ಹೆಚ್ಚಿನ ಜನರು ಟೆಕ್ ಕಾರಿಡಾರ್‌ಗಳಾದ ಔಟರ್ ರಿಂಗ್ ರೋಡ್ (ORR) ಮತ್ತು ವೈಟ್‌ಫೀಲ್ಡ್‌ಗೆ ಪ್ರಯಾಣಿಸುವ ದೈನಂದಿನ ಪ್ರಯಾಣಿಕರಾಗಿದ್ದಾರೆ.

ದೈನಂದಿನ ಪ್ರಯಾಣಿಕರ ಸಂಖ್ಯೆ ಹೆಚ್ಚಿರುವ ಕಾರಣ ಟೆಕ್ ಕಾರಿಡಾರ್‌ಗಳಾದ ಔಟರ್ ರಿಂಗ್ ರೋಡ್ ಮತ್ತು ವೈಟ್‌ಫೀಲ್ಡ್‌ಗೆ ಉತ್ತಮ ಸಾರಿಗೆ ಸೌಲಭ್ಯಗಳನ್ನು ಕಲ್ಪಿಸಬೇಕು ಎಂಬುನ್ನು ಅಧ್ಯಯನವು ಒತ್ತಿಹೇಳಿದೆ.

ಇದನ್ನೂ ಓದಿ: ಷೋ ರೂಮ್​​ನಲ್ಲಿ ಖರೀದಿಸಿದ ಮೇಲೆ ಎಲೆಕ್ಟ್ರಿಕ್ ಬೈಕ್ ಸರಿಯಾಗಿಯೇ ಇರುತ್ತದೆ ಎಂದು ಯಾಮಾರುವ ಮುನ್ನ, ಅದರ ಶಕ್ತಿ-ಸಾಮರ್ಥ್ಯ ಸರಿಯಾಗಿ ಅಳೆಯುವುದು ಹೇಗೆ?

ಬೈಕು ಬಳಕೆದಾರರು ವೆಚ್ಚ ಉಳಿಸಲು ಯೋಚಿಸಿದರೆ, ಕಾರು ಬಳಕೆದಾರರು ಪ್ರಯಾಣದ ವೆಚ್ಚಕ್ಕಿಂತ ಸಮಯವನ್ನು ಉಳಿಸಲು ಆದ್ಯತೆ ನೀಡುತ್ತಾರೆ ಎಂದು ಅಧ್ಯಯನವು ತಿಳಿಸಿದೆ. ಸಾರ್ವಜನಿಕ ಮತ್ತು ಖಾಸಗಿ ವಾಹನಗಳಲ್ಲಿ ಪ್ರಯಾಣಿಸುವ ಸಮಯ ಮತ್ತು ವೆಚ್ಚವು ಬಹುತೇಕ ಒಂದೇ ಆಗಿರುತ್ತದೆ ಎಂದು ಅಧ್ಯಯನದಲ್ಲಿ ಭಾಗಿಯಾದವರು ಹೇಳಿದ್ದಾರೆ.

ಸುಮಾರು ಶೇ 50 ರಷ್ಟು ಮಹಿಳೆಯರು ಸಾರ್ವಜನಿಕ ಸಾರಿಗೆಯನ್ನು ಅವಲಂಬಿಸಿದ್ದಾರೆ ಎಂದು ಅಧ್ಯಯನವು ತಿಳಿಸಿದೆ. ಆದರೆ, ಸಾರ್ವಜನಿಕ ಸಾರಿಗೆಯನ್ನು ತಲುಪುವುದು ಮತ್ತು ಅವುಗಳಿಂದ ಇಳಿದ ನಂತರ ಗಮ್ಯ ತಲುಪಲು ಸಮಸ್ಯೆಗಳನ್ನು ಎದುರಿಸುತ್ತಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ