ಒಂದನಿ ಕಾವೇರಿ ನೀರು ಬರಲ್ಲ, ಆದ್ರೂ ಸಾವಿರಾರು ರುಪಾಯಿ ಬಿಲ್: ಬೆಂಗಳೂರಿನ ಜನ ಕಂಗಾಲ್​!

| Updated By: ರಮೇಶ್ ಬಿ. ಜವಳಗೇರಾ

Updated on: Mar 31, 2025 | 8:01 PM

ಯಾವುದನ್ನೇ ಆಗಲಿ ನಾವು‌ ಬಳಕೆ‌ ಮಾಡಿದಷ್ಟು ಮಾತ್ರ ಬಿಲ್‌ ಕಟ್ಟುತ್ತೇವೆ. ‌ಇದು‌ ನಿಯಮ. ವಿದ್ಯುತ್​ ಎಷ್ಟು ಬಳಕೆ ಮಾಡುತ್ತೇವೆಯೋ ಅದರ ಆಧಾರದ ಮೇಲೆ ಬಿಲ್​ ಬರಲಿದ್ದು, ಅದನ್ನು ಕಟ್ಟಬೇಕಾಗುತ್ತೆ. ಆದರೆ ಬೆಂಗಳೂರಿನ ಈ ಏರಿಯಾದ ನೂರಾರು ಮನೆಗಳು ಕಾವೇರಿಯ ಒಂದು ಹನಿ ‌ನೀರನ್ನೂ ಸಹ ಬಳಸುತ್ತಿಲ್ಲ. ಅದು ಹೋಗಲಿ ಒಂದೇ ಒಂದು ಹನಿ ನೀರು ಬರಲ್ಲ. ಆದರೂ ಸಹ ಸಾವಿರಾರು ರಾಪಾಯಿ ಬಿಲ್​ ಬರುತ್ತಿದೆ. ಇದರಿಂದ ಕಂಗಾಲಾದ ನಿವಾಸಿಗಳು ಬಿಡಬ್ಲುಎಸ್ಎಸ್ಬಿ ವಿರುದ್ಧ ಕೆಂಡ ಕಾರುತ್ತಿದ್ದಾರೆ.

ಒಂದನಿ ಕಾವೇರಿ ನೀರು ಬರಲ್ಲ, ಆದ್ರೂ ಸಾವಿರಾರು ರುಪಾಯಿ ಬಿಲ್: ಬೆಂಗಳೂರಿನ ಜನ ಕಂಗಾಲ್​!
Cauvery Water Bill
Follow us on

ಬೆಂಗಳೂರು, (ಮಾರ್ಚ್ 31): ವಿದ್ಯುತ್ ಆಗಲಿ, ನೀರಾಗಲಿ‌ ನಾವು ಬಳಸಿದ್ದಷ್ಟಕ್ಕೇ ಬಿಲ್ ಬರುತ್ತೆ. ಅಷ್ಟು ಪಾವತಿ ಮಾಡಬೇಕಾಗುತ್ತೆ. ಆದರೆ ಬೆಂಗಳೂರಿನ(Bengaluru)  ಯಶವಂತಪುರ ವಿಧಾನಸಭಾ ಕ್ಷೇತ್ರದ ಹೆಮ್ಮಿಗೆ ಪುರದ ಆದಿತ್ಯಲೇಔಟ್​ನಲ್ಲಿ ಒಂದು ಹನಿ ಕಾವೇರಿ ನೀರು (cauvery water) ಬರುತ್ತಿಲ್ಲ. ಆದರೂ ಸಹ ಬಿಲ್​ ಬರುತ್ತಿದೆಯಂತೆ. ಹೌದು..ಈ ಏರಿಯಾದ ನೂರಾರು ಮನೆಗಳಿಗೆ ಒಂದು ಹನಿ‌ ಕಾವೇರಿ‌ ನೀರು ಬರದೇ ಮೂರ್ನಾಲ್ಕು ತಿಂಗಳಿಂದ‌ ಬಿಲ್ ಬರುವುದಕ್ಕೆ ಶುರುವಾಗಿದೆ. ಕಾವೇರಿ ನೀರು ಕನೆಕ್ಷನ್ ಕೊಟ್ಟರೂ ನೀರೇ ಬಂದಿಲ್ಲ. ಆದ್ರೆ ಪ್ರತಿ ತಿಂಗಳು ಬಿಲ್ ಮಾತ್ರ ಬರುತ್ತಿದೆ. ಇದರಿಂದ ನಿವಾಸಿಗಳು ಕಂಗಾಲಾಗಿದ್ದಾರೆ. ನೀರು ಬರದೇ ಬಿಲ್ ಹೇಗೆ ಬಂತು ಎಂದು ಫುಲ್ ಕನ್ಪೂಸ್ ಆಗಿದ್ದಾರೆ.

ನಮ್ಮ ಮನೆಗೆ ಬಿಡಬ್ಲೂಎಸ್ಎಸ್ಬಿಯಿಂದ ಕಾವೇರಿ ನೀರಿನ ಕನೆಕ್ಷನ್ ಕೊಟ್ಟು ಮೂರು ವರ್ಷ ಆಗಿದೆ ನೀರು ಮಾತ್ರ ಬರುತ್ತಿಲ್ಲ. ಕಳೆದ ನಾಲ್ಕು ತಿಂಗಳಿನಿಂದ ಜಲಮಂಡಳಿಯಿಂದ ಪ್ರತಿ ತಿಂಗಳಿನಿಂದ ನೀರಿನ ಬಿಲ್ ಬಂದಿದೆ. ನಾಲ್ಕು ತಿಂಗಳಿಗೆ 2800 ರುಪಾಯಿ ಬಿಲ್ ಬಂದಿದೆ, ಒಂದು ಹನಿ ನೀರು ಕೂಡ ಬಂದಿಲ್ಲ. ಗಾಳಿಗೆ ಏನಾದರೂ ಮೀಟರ್ ತಿರುಗಿ ಬಿಲ್ ಬರುತ್ತಿದೆಯೋ ಗೊತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ನಾಳೆಯಿಂದ ಬೆಂಗಳೂರು ಜನರಿಗೆ ಡಬಲ್ ಶಾಕ್: ಹಾಲು, ಕರೆಂಟ್ ದರ ಏರಿಕೆ ಜೊತೆಗೆ ಕಸಕ್ಕೂ ಕಟ್ಟಬೇಕು ಟ್ಯಾಕ್ಸ್

ಕಳೆದ 2022ರಲ್ಲಿ ಆದಿತ್ಯ ಲೇಔಟ್ ನ ನೂರಾರು ಮನೆಗಳಿಗೆ ಕಾವೇರಿ ನೀರು ಪೈಪ್ ಲೈನ್ ಕನೆಕ್ಷನ್ ಪಡೆಯಲಾಗಿದೆ. ಲೇಔಟ್ ನಿವಾಸಿಗಳು ನೀರು ಆಗ ಬರುತ್ತೆ,ಈಗ ಬರುತ್ತೆ ಎಂದು ಕಾಯುತ್ತಾ ಕುಳಿತ್ತಿದ್ದರು. ಆದರೆ ಎರಡೂವರೆ ವರ್ಷಗಳ‌ ನಂತರ ಬಂದಿದ್ದು ನೀರಲ್ಲ, ಬಳಸದ ನೀರಿನ ಬಿಲ್. ಎರಡುವರೆ ವರ್ಷ ಕಳೆದರೂ ಕಾವೇರಿ ನೀರು ಮಾತ್ರ ಬಂದಿಲ್ಲ. ಆದರೆ ಅಚ್ಚರಿ ಎನ್ನುವ ರೀತಿ ನೀರು ಬಾರದೇ ಬಿಲ್ ಬಂದಿದೆ.

ಇದನ್ನೂ ಓದಿ
ಈ ಸೈಟ್​ನಲ್ಲಿ ಅರ್ಜಿ ಸಲ್ಲಿಸಿದ್ರೆ ಎರಡೇ ದಿನಗಳಲ್ಲಿ ಸಿಗುತ್ತೆ ಇ ಖಾತಾ!
ಬೆಂಗಳೂರಿನಲ್ಲಿ ಆಟೋ ಬುಕ್ ಮಾಡುವ ಟಿಪ್ಸ್ ನೀಡಬೇಕು
ಬಿಬಿಎಂಪಿ ಆಸ್ತಿ ತೆರಿಗೆ ಬಾಕಿಗೆ ನಾಳೆಯಿಂದ ದುಪ್ಪಟ್ಟು ತೆರಿಗೆ, ಬಡ್ಡಿ
ದುಪ್ಪಟ್ಟಾಗಲಿದೆ ಲಿಫ್ಟ್, ಜನರೇಟರ್ ತಪಾಸಣೆ ಹಾಗೂ ರಿನೀವಲ್ ಶುಲ್ಕ

ಒಂದೊಂದು‌ ಮನೆಗೆ ಸಾವಿರಾರು ರೂಪಾಯಿ ನೀರಿನ ಬಿಲ್ ಬರುತ್ತಿದೆ. ನೀರು ಬರುತ್ತಿಲ್ಲ ಬಿಲ್ ಯಾಕೆ ಕಟ್ಟಬೇಕೆಂದು ಇಲ್ಲಿನ ನಿವಾಸಿಗಳು ಸುಮ್ಮನಾಗಿದ್ದಾರೆ. ಆದ್ರೆ, ಬಿಡ್ಲ್ಯೂಎಸ್​ಎಸ್​ಬಿನವರು ಮಾತ್ರ ಹಣ ಕಟ್ಟಿಲ್ಲ ಎಂದು ಮತ್ತೆ ಡ್ಯೂ , ಇಂಟ್ರೆಸ್ಟ್ ಹಣ ಹಾಕುತ್ತಿದ್ದಾರೆ. ಇದು ಯಾಬ ಲೆಕ್ಕಾಚಾರ ಎಂದು ಸ್ಥಳೀಯರು ಗರಂ ಆಗಿದ್ದಾರೆ.

ಒಟ್ಟಿನಲ್ಲಿ 110 ಹಳ್ಳಿಗೆ ಕಾವೇರಿ ನೀರು ಕೊಡುತ್ತೇವೆ ಎಂದು ಜಲಮಂಡಳಿ ನೀರು‌ ಕೊಡದೇ ಬಿಲ್‌ ಮಾತ್ರ ಕೊಟ್ಟಿದೆ. ನೀರಿಗೆ ಬದಲಾಗಿ ಗಾಳಿಗೆ ಮೀಟರ್ ಓಡಿ‌ ಬಿಲ್‌‌ ಬಂತ ಎಂದು ನಿವಾಸಿಗಳು ಆಕ್ರೋಶಗೊಂಡಿದ್ದು, ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಈ ಸಮಸ್ಯೆ ಬಗೆಹರಿಸಬೇಕಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 7:50 pm, Mon, 31 March 25