AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಿಬಿಎಂಪಿ ಆಸ್ತಿ ತೆರಿಗೆ ಪಾವತಿಗೆ ಇಂದು ಕೊನೇ ದಿನ: ನಾಳೆಯಿಂದ ದುಪ್ಪಟ್ಟು ತೆರಿಗೆ, ಬಡ್ಡಿ ಹಾಗೂ ಕಠಿಣ ಕ್ರಮ

ಬಿಬಿಎಂಪಿ ಆಸ್ತಿ ತೆರಿಗೆ ಪಾವತಿಗೆ ಮಾರ್ಚ್ 31, ಅಂದರೆ ಇಂದು ಕೊನೆಯ ದಿನ. ಇಂದು ಪಾವತಿಸದಿದ್ದರೆ ಡಬಲ್ ತೆರಿಗೆ ಮತ್ತು ಬಡ್ಡಿ ಪಾವತಿಸಬೇಕಾಗುತ್ತದೆ. ಹೀಗಾಗಿ ಇಂದು ರಂಜಾನ್ ರಜೆ ಕೂಡ ರದ್ದುಗೊಳಿಸಿ, ರಾತ್ರಿ 11ರವರೆಗೆ ಕಚೇರಿ ತೆರೆದಿರುತ್ತದೆ. ಏಪ್ರಿಲ್ 1 ರಿಂದ ಬಾಕಿ ತೆರಿಗೆ ಪಾವತಿಗೆ ಬಡ್ಡಿ ಎಷ್ಟಾಗುತ್ತದೆ? ಬಾಕಿ ತೆರಿಗೆ ವಸೂಲಿಗೆ ಬಿಬಿಎಂಪಿ ಏನೆಲ್ಲ ಕ್ರಮ ಕೈಗೊಳ್ಳಲಿದೆ ಎಂಬ ವಿವರ ಇಲ್ಲಿದೆ.

ಬಿಬಿಎಂಪಿ ಆಸ್ತಿ ತೆರಿಗೆ ಪಾವತಿಗೆ ಇಂದು ಕೊನೇ ದಿನ: ನಾಳೆಯಿಂದ ದುಪ್ಪಟ್ಟು ತೆರಿಗೆ, ಬಡ್ಡಿ ಹಾಗೂ ಕಠಿಣ ಕ್ರಮ
ಸಾಂದರ್ಭಿಕ ಚಿತ್ರ
ಶಾಂತಮೂರ್ತಿ
| Edited By: |

Updated on:Mar 31, 2025 | 9:59 AM

Share

ಬೆಂಗಳೂರು, ಮಾರ್ಚ್ 31: ಬಿಬಿಎಂಪಿ ಆಸ್ತಿ ತೆರಿಗೆ (BBMP Property Tax) ಪಾವತಿಗೆ ಇಂದು (March 31) ಕೊನೆಯ ದಿನವಾಗಿದೆ. ಒಂದು ವೇಳೆ ಇಂದಿನ ಒಳಗೆ ತೆರಿಗೆ ಪಾವತಿಸಲು ವಿಫಲವಾದರೆ ದುಪ್ಪಟ್ಟು ಮೊತ್ತ ಪಾವತಿಸಬೇಕಾಗಲಿದೆ. ಮಾರ್ಚ್ 31 ರ ವರೆಗೆ ತೆರಿಗೆ ಬಾಕಿ ಪಾವತಿಸಲು ಬಿಬಿಎಂಪಿ (BBMP) ಅವಕಾಶ ಕಲ್ಪಿಸಿದೆ. ಒಂದು ಬಾರಿಯ ಪಾವತಿಗೆ (One Time Settlement) ನೀಡಿದ್ದ ಅವಕಾಶವನ್ನು ಹಲವು ಬಾರಿ ವಿಸ್ತರಿಸಿದ್ದ ಬಿಬಿಎಂಪಿ, ಅಂತಿಮವಾಗಿ ಮಾರ್ಚ್ 31ರ ಗಡುವು ವಿಧಿಸಿತ್ತು. ಇದೀಗ ತೆರಿಗೆ ಪಾವತಿಸಿದವರ ವಿರುದ್ಧ ಕಠಿಣ ಕ್ರಮಕ್ಕೆ ನಿರ್ಧರಿಸಿದೆ.

ರಂಜಾನ್ ರಜೆ ರದ್ದು: ಇಂದು ರಾತ್ರಿ ವರೆಗೆ ಆಸ್ತಿ ತೆರಿಗೆ ಪಾವತಿಗೆ ಅವಕಾಶ

ಆಸ್ತಿ ತೆರಿಗೆ ಪಾವತಿಗೆ ಕೊನೆಯ ದಿನವಾಗಿರುವ ಕಾರಣ ಬಿಬಿಎಂಪಿ ಕಂದಾಯ ಇಲಾಖೆ ಕಚೇರಿಗೆ ರಂಜಾನ್ ರಜೆ ರದ್ದುಗೊಳಿಸಲಾಗಿದೆ. ರಾತ್ರಿ 11 ರ ವರೆಗೆ ಬಿಬಿಎಂಪಿ ಕಂದಾಯ ಇಲಾಖೆ ಕಚೇರಿ ತೆರೆದಿರಲಿದ್ದು, ಆಸ್ತಿ ತೆರಿಗೆ ಪಾವತಿಗೆ ಅವಕಾಶ ಕಲ್ಪಿಸಲಾಗಿದೆ.

ದುಪ್ಪಟ್ಟು ತೆರಿಗೆ, ಬಡ್ಡಿಯ ಬರೆ

ಒಂದು ವೇಳೆ ಗಡುವಿನ ಒಳಗೆ ಆಸ್ತಿ ತೆರಿಗೆ ಪಾವತಿಸಲು ವಿಫಲರಾದರೆ, ಏಪ್ರಿಲ್ 1 ರಿಂದ ದುಪ್ಪಟ್ಟು ತೆರಿಗೆ ಪಾವತಿಸಬೇಕಾಗುತ್ತದೆ. ಅದೆ ಜತೆಗೆ, ಶೇ 9 ರ ಬಡ್ಡಿ ಸಹ ಪಾವತಿಸಬೇಕಾಗುತ್ತದೆ. ಬಿಬಿಎಂಪಿ ಕಾಯ್ದೆಯಲ್ಲಿ ತಿದ್ದುಪಡಿ ಹಿನ್ನೆಲೆ ಡಬಲ್ ತೆರಿಗೆ ಪಾವತಿಸಬೇಕಾಗುತ್ತದೆ.

ಇದನ್ನೂ ಓದಿ
Image
ಇಂದು ಚಾಮರಾಜಪೇಟೆ, ಮೈಸೂರು ರಸ್ತೆಗಳಲ್ಲಿ ಸಂಚರಿಸುವವರು ಗಮನಿಸಿ
Image
ರಂಜಾನ್​ ಹಬ್ಬ: ಮಾ.31 ರಂದು ಬೆಂಗಳೂರಿನ ಈ ರಸ್ತೆಯಲ್ಲಿ ಸಂಚಾರ ನಿರ್ಬಂಧ
Image
ಬೆಂಗಳೂರಿನ ಆ ಸ್ಥಳದಲ್ಲಿ ಸ್ಫೋಟಕ ಇಡಲು ಪ್ಲಾನ್: ಬಾಯ್ಬಿಟ್ಟ ಅಬ್ದುಲ್
Image
ಬ್ರಿಟಿಷ್ ಕಾಲದ ಟೋಪಿಗೆ ನಿವೃತ್ತಿ: ಪೊಲೀಸರ ತಲೆ ಮೇಲೆ ಸ್ಮಾರ್ಟ್​ ಹ್ಯಾಟ್​

ಸದ್ಯ ಪಾಲಿಕೆಗೆ 400 ಕೋಟಿ ರೂ. ಆಸ್ತಿ ತೆರಿಗೆ ಬಾಕಿ ಬರಬೇಕಿದೆ. ಇವುಗಳಲ್ಲಿ ಕೆಲವು ಸರ್ಕಾರಿ ಕಟ್ಟಡಗಳ ಆಸ್ತಿ ತೆರಿಗೆ ಕೂಡ ಬಾಕಿ ಇದೆ ಎನ್ನಲಾಗಿದೆ. ತೆರಿಗೆ ಬಾಕಿ ಪಾವತಿಸಿಲ್ಲ ಎಂದಾದರೆ ಮುಂದಿನ ದಿನಗಳಲ್ಲಿ ಆಸ್ತಿ ಹರಾಜು ಹಾಕುವ ಸಾಧ್ಯತೆಯೂ ಇದೆ.

ತೆರಿಗೆ ಪಾವತಿಸದವರ ವಿರುದ್ಧ ಈಗಾಗಲೇ ಕಠಿಣ ಕ್ರಮ ಕೈಗೊಳ್ಳಲು ಪ್ರಾರಂಭಿಸಿದ್ದೇವೆ. ತೆರಿಗೆ ಮೊತ್ತ ವಶಪಡಿಸಿಕೊಳ್ಳುವುದು ಮತ್ತು ಆಸ್ತಿ ಹರಾಜು ಮಾಡುವುದು ಸೇರಿದಂತೆ ಅನೇಕ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಬಿಬಿಎಂಪಿಯ ಕಂದಾಯ ವಿಶೇಕ್ಷ ಆಯುಕ್ತ ಮುನೀಶ್​ ಮೌದ್ಗಿಲ್ ತಿಳಿಸಿದ್ದಾರೆ.

ಯಾವ ವರ್ಷದ ತೆರಿಗೆ ಬಾಕಿಗೆ ಎಷ್ಟು ಬಡ್ಡಿ?

2022-23 ಅಥವಾ ಅದಕ್ಕಿಂತ ಮೊದಲಿನ ತೆರಿಗೆ ಬಾಕಿಗೆ ವಾರ್ಷಿಕ ಶೇ 9 ರ ಬಡ್ಡಿ ವಿಧಿಸಲಾಗುತ್ತದೆ. 2023-24 ರ ಬಾಕಿಗೆ ಶೇ 15 ರ ಬಡ್ಡಿ ವಿಧಿಸಲಾಗುತ್ತದೆ. 2024-25 ರ ಹಣಕಾಸು ವರ್ಷಕ್ಕೆ ತೆರಿಗೆ ಬಾಕಿ ಇರಿಸಿಕೊಂಡರೆ ಶೇ 15 ರ ಬಡ್ಡಿ ವಿಧಿಸಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ.

ಉದಾಹರಣೆಗೆ, 2022-23 ರಿಂದ ಆಸ್ತಿ ಮಾಲೀಕರು 1,000 ರೂ. ತೆರಿಗೆ ಬಾಕಿ ಉಳಿದಿದ್ದರೆ, ಅವರು 2,000 ರೂ. ಪಾವತಿಸಬೇಕಾಗುತ್ತದೆ. ಜೊತೆಗೆ ಶೇ 9 ರ ಬಡ್ಡಿ ಪಾವತಿಸಬೇಕಾಗುತ್ತದೆ.

ಇದನ್ನೂ ಓದಿ: BBMP Budget 2025: ಬ್ರ್ಯಾಂಡ್ ಬೆಂಗಳೂರಿಗೆ ಒತ್ತು ನೀಡಿದ ಬಿಬಿಎಂಪಿ ಬಜೆಟ್, ಯಾವ ಕ್ಷೇತ್ರಕ್ಕೆ ಎಷ್ಟು ಸಿಕ್ತು? ಇಲ್ಲಿದೆ ವಿವರ

ಪ್ರಸ್ತುತ, ಬಿಬಿಎಂಪಿ ಮಿತಿಯಲ್ಲಿ ಸುಮಾರು 1,82,467 ಆಸ್ತಿಗಳು ತೆರಿಗೆ ಬಾಕಿ ಉಳಿಸಿಕೊಂಡಿವೆ. ಮಹದೇವಪುರ, ಪೂರ್ವ ಮತ್ತು ದಕ್ಷಿಣ ವಲಯಗಳಲ್ಲಿ ಹೆಚ್ಚು ತೆರಿಗೆ ಬಾಕಿ ಉಳಿಸಿಕೊಳ್ಳಲಾಗಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 9:41 am, Mon, 31 March 25

ಅಸಹ್ಯ ದೃಶ್ಯ! ಟಾಕ್ಸಿಕ್ ವಿರುದ್ಧ ಕಂಪ್ಲೇಂಟ್ ನೀಡಿದ ವಕೀಲರು ಹೇಳಿದ್ದೇನು?
ಅಸಹ್ಯ ದೃಶ್ಯ! ಟಾಕ್ಸಿಕ್ ವಿರುದ್ಧ ಕಂಪ್ಲೇಂಟ್ ನೀಡಿದ ವಕೀಲರು ಹೇಳಿದ್ದೇನು?
ಪ್ಯಾರಾ-ಅಥ್ಲೀಟ್ ಪ್ರಸಾದ್​​​ಗೆ 5 ವರ್ಷಗಳ ನಂತರ ಸಿಕ್ತು ಸೂರು ಭಾಗ್ಯ!
ಪ್ಯಾರಾ-ಅಥ್ಲೀಟ್ ಪ್ರಸಾದ್​​​ಗೆ 5 ವರ್ಷಗಳ ನಂತರ ಸಿಕ್ತು ಸೂರು ಭಾಗ್ಯ!
ಯುವಕನ ಬಳಿ ನನ್ನ ಕರ್ಕೊಂಡೋಗಿ ಮದುವೆಯಾಗು ಎಂದಿದ್ದ ಅಪ್ರಾಪ್ತೆ ನಿಗೂಢ ಸಾವು
ಯುವಕನ ಬಳಿ ನನ್ನ ಕರ್ಕೊಂಡೋಗಿ ಮದುವೆಯಾಗು ಎಂದಿದ್ದ ಅಪ್ರಾಪ್ತೆ ನಿಗೂಢ ಸಾವು
ಕಾಂಪೌಂಡ್ ಒಳಗಿದ್ದ ನಾಯಿಯನ್ನು ಬೇಟೆಯಾಡಲು ಬಂದ ಚಿರತೆ!
ಕಾಂಪೌಂಡ್ ಒಳಗಿದ್ದ ನಾಯಿಯನ್ನು ಬೇಟೆಯಾಡಲು ಬಂದ ಚಿರತೆ!
ಸಂಬಂಧಗಳನ್ನು ಇಟ್ಟುಕೊಂಡು ಮನೆಯನ್ನು ನರಕ ಮಾಡ್ತಾ ಇದೀರಾ; ರಕ್ಷಿತಾಗೆ ಪಾಠ
ಸಂಬಂಧಗಳನ್ನು ಇಟ್ಟುಕೊಂಡು ಮನೆಯನ್ನು ನರಕ ಮಾಡ್ತಾ ಇದೀರಾ; ರಕ್ಷಿತಾಗೆ ಪಾಠ
WPL 2026: 6 ಎಸೆತಗಳಲ್ಲಿ 3 ತಪ್ಪು ಮಾಡಿ ಸೋತ ಮುಂಬೈ ಇಂಡಿಯನ್ಸ್
WPL 2026: 6 ಎಸೆತಗಳಲ್ಲಿ 3 ತಪ್ಪು ಮಾಡಿ ಸೋತ ಮುಂಬೈ ಇಂಡಿಯನ್ಸ್
ಬೆಂಗಳೂರಿಗರಿಗೆ ಮೆಟ್ರೋ ದಿಂದ ಮತ್ತೊಂದು ಗುಡ್ ನ್ಯೂಸ್!
ಬೆಂಗಳೂರಿಗರಿಗೆ ಮೆಟ್ರೋ ದಿಂದ ಮತ್ತೊಂದು ಗುಡ್ ನ್ಯೂಸ್!
ಅರಣ್ಯ ಇಲಾಖೆ ವಾಹನವ ಅಟ್ಟಾಡಿಸಿಕೊಂಡು ಬೆನ್ನಟ್ಟಿದ ಕಾಡಾನೆ, ವಿಡಿಯೋ ವೈರಲ್
ಅರಣ್ಯ ಇಲಾಖೆ ವಾಹನವ ಅಟ್ಟಾಡಿಸಿಕೊಂಡು ಬೆನ್ನಟ್ಟಿದ ಕಾಡಾನೆ, ವಿಡಿಯೋ ವೈರಲ್
ಚಾಮರಾಜನಗರ: ನೇನೆಕಟ್ಟೆ ಗ್ರಾಮದಲ್ಲಿ ರಾಜಾರೋಷವಾಗಿ ಸಂಚರಿಸಿದ ಚಿರತೆ
ಚಾಮರಾಜನಗರ: ನೇನೆಕಟ್ಟೆ ಗ್ರಾಮದಲ್ಲಿ ರಾಜಾರೋಷವಾಗಿ ಸಂಚರಿಸಿದ ಚಿರತೆ
ಮನೆಯಲ್ಲಿ ಆಲೋವೆರಾ ಇದ್ದರೆ ಏನೆಲ್ಲಾ ಲಾಭ?
ಮನೆಯಲ್ಲಿ ಆಲೋವೆರಾ ಇದ್ದರೆ ಏನೆಲ್ಲಾ ಲಾಭ?