‘ಕಲ್ಲಿದ್ದಲು ಕೊರತೆಯಿದೆ-ಲೋಡ್ ​ಶೆಡ್ಡಿಂಗ್ ಆಗುತ್ತೆ’ ಇದೆಲ್ಲ ಕಾಂಗ್ರೆಸ್​ನಿಂದ ವದಂತಿ -ಇಂಧನ ಸಚಿವ ಸುನಿಲ್ ಕುಮಾರ್ ಕೆಂಡಾಮಂಡಲ

| Updated By: ಸಾಧು ಶ್ರೀನಾಥ್​

Updated on: Apr 20, 2022 | 6:18 PM

V sunil kumar: ಆರು ತಿಂಗಳ ಮೊದಲೇ ಎಚ್ಚರಿಕೆ ತೆಗೆದುಕೊಂಡಿದ್ದೇವೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾರ್ಗದರ್ಶನದಲ್ಲಿ ಎಲ್ಲಾ ವ್ಯವಸ್ಥಿತವಾಗಿ ನೋಡಿಕೊಂಡು ಬಂದಿದ್ದೇವೆ. ಸೋಲಾರ್ ಮತ್ತು ವಿಂಡ್ ಹೆಚ್ಚು ಉತ್ಪಾದನೆ ಆಗ್ತಾ ಇದೆ. ಹಾಗಾಗಿ ಲೋಡ್ ಶೆಡ್ಡಿಂಗ್ ತೊಂದರೆ ಆಗಿಲ್ಲ. ಕಲ್ಲಿದ್ದಲು ಸರಬರಾಜು ಕೊರತೆಯಿಂದ ತೊಂದರೆ ಆಗಿರಬಹುದು. ಮುಂದೆ ಸರಿ ಮಾಡುವ ಕೆಲಸ ಮಾಡಿದ್ದೇವೆ.

‘ಕಲ್ಲಿದ್ದಲು ಕೊರತೆಯಿದೆ-ಲೋಡ್ ​ಶೆಡ್ಡಿಂಗ್ ಆಗುತ್ತೆ’ ಇದೆಲ್ಲ  ಕಾಂಗ್ರೆಸ್​ನಿಂದ ವದಂತಿ -ಇಂಧನ ಸಚಿವ ಸುನಿಲ್ ಕುಮಾರ್ ಕೆಂಡಾಮಂಡಲ
ಕನ್ನಡ ಮತ್ತು ಸಂಸ್ಕೃತಿ ಖಾತೆ ಸಚಿವ ವಿ.ಸುನಿಲ್ ಕುಮಾರ್
Follow us on

ಬೆಂಗಳೂರು: ರಾಜ್ಯದಲ್ಲಿ ಕಲ್ಲಿದ್ದಲು ಸರಬರಾಜು ಕೊರತೆ ಇದೆ ಅನ್ನುವ ಊಹಾಪೋಹದ ಮಾತು ಕಾಂಗ್ರೆಸ್ (congress) ಹೇಳ್ತಾ ಇದೆ. ಇದರಿಂದ ಲೋಡ್ ಶೆಡ್ಡಿಂಗ್ ಆಗುತ್ತೆ ಅಂತಾ ಸುಳ್ಳು ಸುದ್ದಿ ಹಬ್ಬಿಸ್ತಾ ಇದ್ದಾರೆ. ಯಾವುದೇ ಕಾರಣಕ್ಕೂ ಲೋಡ್ ಶೆಡ್ಡಿಂಗ್ ಆಗಲ್ಲ (load shedding). ಕಲ್ಲಿದ್ದಲು ಸರಬರಾಜು ಇಲ್ಲವಾಗಿದೆ ಎಂಬುದು ಕಪೋಲಕಲ್ಪಿತ ಸುದ್ದಿ ಎಂದು ಬೆಂಗಳೂರಿನಲ್ಲಿ ಇಂಧನ ಸಚಿವ ವಿ. ಸುನಿಲ್ ಕುಮಾರ್ ವಿಕಾಸಸೌಧದಲ್ಲಿ ಹೇಳಿದ್ದಾರೆ (power minister V sunil kumar).

ರಾಜ್ಯದಲ್ಲಿ ಮಾರ್ಚ್ 21 ರಂದು 14,000 ಮೆಗಾವ್ಯಾಟ್ ಪೀಕ್ ಲೋಡ್ ಕಂಡು ಬಂತು. ಅಷ್ಟು ಬಂದ್ರೂ ಲೋಡ್ ಶೆಡ್ಡಿಂಗ್ ಮಾಡಲಿಲ್ಲ. 10,400 ಮೆಗಾವ್ಯಾಟ್ ಲೋಡ್ ಶೆಡ್ಡಿಂಗ್ ಬಂದಿದೆ. ನಮ್ಮ‌ಬೇಡಿಕೆಯೂ ಕಡಿಮೆಯಾಗ್ತಿದೆ. 12 ಸಾವಿರ ಮೆಗಾವ್ಯಾಟ್ ಗೆ ಇಳಿದಿದೆ. ರಾಯಚೂರು ಮತ್ತು ಬಳ್ಳಾರಿ ಉಷ್ಣ ವಿದ್ಯುತ್​ ಘಟಕಗಳನ್ನು ಬಂದ್ ಮಾಡಿಲ್ಲ. ಅದೆಲ್ಲವೂ ಸುಳ್ಳು ಸುದ್ದಿ ಹರಿದಾಡ್ತಿವೆ. ಎರಡ್ಮೂರು ಯೂನಿಟ್ ಬಂದ್ ಮಾಡಿದ್ದು ಕೊರತೆಯಿಂದಲ್ಲ. ಆರು ತಿಂಗಳ ಮೊದಲೇ ನಾವು ಎಚ್ಚರಿಕೆ ತೆಗೆದುಕೊಂಡಿದ್ವಿ, ಲೋಡ್ ಶೆಡ್ಡಿಂಗ್ ಕೊರತೆ ಇಲ್ಲಿಯವರೆಗೆ ಉದ್ಬವವಾಗಿಲ್ಲ ಎಂದು ಇಂಧನ ಸಚಿವ ಸುನೀಲ್ ಕುಮಾರ್ ಸ್ಪಷ್ಟನೆ ನೀಡಿದ್ದಾರೆ.

ಮಳೆಯಿಂದಾಗಿ ರಾಯಚೂರು ಸೇರಿ ಒಂದಿಷ್ಟು ಕಡೆ ಕಲ್ಲಿದ್ದಲು ಕೊರತೆ ಎದುರಾಗಿದೆಯಷ್ಟೆ. ಆರು ತಿಂಗಳ ಮೊದಲೇ ಎಚ್ಚರಿಕೆ ತೆಗೆದುಕೊಂಡಿದ್ದೇವೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾರ್ಗದರ್ಶನದಲ್ಲಿ ಎಲ್ಲಾ ವ್ಯವಸ್ಥಿತವಾಗಿ ನೋಡಿಕೊಂಡು ಬಂದಿದ್ದೇವೆ. ಸೋಲಾರ್ ಮತ್ತು ವಿಂಡ್ ಹೆಚ್ಚು ಉತ್ಪಾದನೆ ಆಗ್ತಾ ಇದೆ. ಹಾಗಾಗಿ ಲೋಡ್ ಶೆಡ್ಡಿಂಗ್ ತೊಂದರೆ ಆಗಿಲ್ಲ. ಕಲ್ಲಿದ್ದಲು ಸರಬರಾಜು ಕೊರತೆಯಿಂದ ತೊಂದರೆ ಆಗಿರಬಹುದು. ಮುಂದೆ ಸರಿ ಮಾಡುವ ಕೆಲಸ ಮಾಡಿದ್ದೇವೆ. ಅನಗತ್ಯವಾಗಿ ಕಾಂಗ್ರೆಸ್ ನವರು ಈ ರೀತಿ ಮಾತಾಡುತ್ತಿದ್ದಾರೆ, ಸುಳ್ಳು ಸುದ್ದಿ ಹಬ್ಬಿಸ್ತಾ ಇದ್ದಾರೆ. ಯಾವುದೇ ಕಾರಣಕ್ಕೂ ಇಂತಹದ್ದು ಏನೂ ಆಗಲ್ಲ ಎಂದು ಸಚಿವ ಸುನಿಲ್ ಕುಮಾರ್ ತಿಳಿಸಿದ್ದಾರೆ.

ನನ್ನನ್ನ ಆ್ಯಕ್ಟೀವ್ ಇಡೋಕೆ ಡಿಕೆಶಿ ಬೇಕಿಲ್ಲ. ನನಗೆ ಶ್ರೀರಾಮಚಂದ್ರನೇ ಸಾಕು:
ಕೇಂದ್ರದಲ್ಲಿ ಯುಪಿಎ ಸರ್ಕಾರ ಇದ್ದಾಗ ಕಲ್ಲಿದ್ದಲು ಸಮಸ್ಯೆ ಇತ್ತು. ಆದರೆ ನಮ್ಮ ಸರ್ಕಾರ ಬಂದ ನಂತರದಲ್ಲಿ ಈ ರೀತಿಯಾಗಿ ಸಮಸ್ಯೆ ಬಂದಿಲ್ಲ. 13 ರಿಂದ 15 ರೇಕು ಕಲ್ಲಿದ್ದಲು ಬರ್ತಾ ಇದೆ. ಸುಳ್ಳು ಸುದ್ದಿಗಾಗಿ ಸೋಷಿಯಲ್ ಮೀಡಿಯಾ ಬಳಸಿ ಕೊಳ್ತಾ ಇದ್ದಾರೆ. ಬೇಸಿಗೆಯ ಮೇ 30 ರವರೆಗೆ ಆಗಬಹುದಾದ ಬೇಡಿಕೆಗೆ ಬೇಕಾಗುವಷ್ಟು ನಾವು ತಯಾರಿ ನಡೆಸಿದ್ದೇವೆ. ಡಿಕೆ ಶಿವಕುಮಾರ್​ ಮಾಹಿತಿಯನ್ನ ಪಡೆದು ಆರೋಪಿಸಬೇಕು. ಆಧಾರರಹಿತವಾಗಿ ಆರೋಪ ಮಾಡಬಾರದು. ನನ್ನನ್ನ ಆ್ಯಕ್ಟೀವ್ ಇಡೋಕೆ ಡಿಕೆಶಿ ಬೇಕಿಲ್ಲ. ನನಗೆ ಶ್ರೀರಾಮಚಂದ್ರನೇ ಸಾಕು ಎಂದು ಡಿಕೆ ಶಿವಕುಮಾರ್ ಗೆ ಸುನೀಲ್ ಕುಮಾರ್ ತಿರುಗೇಟು ನೀಡಿದರು.

ಇದನ್ನೂ ಓದಿ:
ಹುಣಸೂರು: ಮದುವೆ ಮುಗಿಸಿ ಬರುತ್ತಿದ್ದ ಬೊಲೆರೋ ವಾಹನ ಮರಕ್ಕೆ ಡಿಕ್ಕಿ – 6 ಮಂದಿ ಸ್ಥಳದಲ್ಲೇ ಸಾವು

ಇದನ್ನೂ ಓದಿ:
Solar Energy: ಸದ್ಯದಲ್ಲೇ ಅಪಾರ್ಟ್​ಮೆಂಟ್​​ಗಳಲ್ಲಿ ಸೋಲಾರ್ ಅಳವಡಿಕೆ ಅನಿವಾರ್ಯ ಸಾಧ್ಯತೆ; ವಿದ್ಯುತ್ ಉಳಿತಾಯಕ್ಕೆ ಸರ್ಕಾರ ಚಿಂತನೆ

Published On - 6:07 pm, Wed, 20 April 22