AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಇಫ್ತಾರ್ ಕೂಟದಲ್ಲಿ ಭಾಗಿಯಾಗಿದವರು ಹಿಂದೂ ದ್ರೋಹಿಗಳು, ನಿಮಗೆ ನಾಚಿಕೆ ಮಾನ ಮಾರ್ಯದೆ ಏನು ಇಲ್ವಾ? ಮುತಾಲಿಕ್ ಆಕ್ರೋಶ

ನಿಮ್ಮ ಹೇಳಿಕೆ ಮುಸ್ಲಿಮರಿಗೆ ಪ್ರೋತ್ಸಾಹ ಕೊಟ್ಟಂತೆ. ಏನ್ ಸಂದೇಶ ಕೊಡಲು ಹೊರಟ್ಟಿದ್ದಾರೆ. ಇಫ್ತಾರ್ ಕೂಟದಲ್ಲಿ ಭಾಗಿಯಾಗಿದವರು ಹಿಂದೂ ದ್ರೋಹಿಗಳು, ನಿಮಗೆ ನಾಚಿಕೆ ಮಾನ ಮಾರ್ಯದೆ ಏನು ಇಲ್ವಾ? ನಿಮಗೆ ದಿಕ್ಕಾರ ಹಾಕುತ್ತಿದ್ದೇನೆ. -ಪ್ರಮೋದ್ ಮುತಾಲಿಕ್

ಇಫ್ತಾರ್ ಕೂಟದಲ್ಲಿ ಭಾಗಿಯಾಗಿದವರು ಹಿಂದೂ ದ್ರೋಹಿಗಳು, ನಿಮಗೆ ನಾಚಿಕೆ ಮಾನ ಮಾರ್ಯದೆ ಏನು ಇಲ್ವಾ? ಮುತಾಲಿಕ್ ಆಕ್ರೋಶ
ಶ್ರೀರಾಮಸೇನೆಯ ನಾಯಕ ಪ್ರಮೋದ್ ಮುತಾಲಿಕ್
TV9 Web
| Edited By: |

Updated on:Apr 21, 2022 | 1:16 PM

Share

ಬೆಂಗಳೂರು: ಸರ್ಕಾರ ನೋಟಿಸ್ ಕೊಟ್ಟು ಕೈ ತೊಳೆದುಕೊಳ್ಳುತ್ತಿದ್ದಾರೆ. ಆಜಾನ್ ನಿಲ್ಲಿಸಲು ಡಿಸಿ ಕಚೇರಿಗಳಿಗೆ ಮನವಿ ಕೊಟ್ಟಿದ್ದೇವೆ. ಬೆಳ್ಳಗ್ಗೆ 5 ಗಂಟಿಯಿಂದ ಆಜಾನ್ ನಿಲ್ಲಿಸಲು ದೂರು ನೀಡಿದ್ದೇವೆ. ಪೊಲೀಸ್ ಇಲಾಖೆಯು ಯಾವುದೇ ಕ್ರಮಕೈಗೊಂಡಿಲ್ಲ. ಮೇ.9ರಿಂದ ಎಲ್ಲಾ ದೇವಾಲಯಗಳಿಗೆ ಭಜನೆ ಶುರುವಾಗುತ್ತೆ. ಹನುಮಾನ್ ಚಾಲೀಸ್ ಹಾಕ್ತೇವೆ ಅದನ್ನ ತಡೆಯಲು ಬಂದ್ರೆ ಮೊದಲು ಆಜಾನ್ ಬಂದ್‌ ಆಗಬೇಕು ಎಂದು ಬೆಂಗಳೂರಿನಲ್ಲಿ ಟಿವಿ9ಗೆ ಪ್ರಮೋದ್ ಮುತಾಲಿಕ್ ಹೇಳಿಕೆ ನೀಡಿದ್ದಾರೆ.

ಆಸ್ಪತ್ರೆಗಳಲ್ಲಿ ರೋಗಿಗಳಿಗೆ ಆಜಾನ್ ತೊಂದ್ರೆ ಕೊಡುತ್ತಿದೆ. ಶಾಲೆಗಳಲ್ಲಿ ಪಾಠ ಮಾಡುವಾಗ ಆಜಾನ್ ತೊಂದ್ರೆ ಕೊಡುತ್ತಿದೆ. ಇನ್ನು ಹುಬ್ಬಳ್ಳಿಯಲ್ಲಿ ಮಸೀದಿ ಮೇಲೆ ಲೈಸರ್ ಹಾಕಿದ ವಿಚಾರಕ್ಕೆ ಸಂಬಂಧಿಸಿ ಮಾತನಾಡಿರುವ ಪ್ರಮೋದ್ ಮುತಾಲಿಕ್, ಮಸೀದಿ ಮೇಲೆ ಏನಾದ್ರು ಬಾಂಬ್ ಹಾಕಿದ್ರ. ಲೈಸರ್ ಹಾಕಿದ್ದಾರೆ ಏನ್ ತಪ್ಪು. ನಿಮ್ಮ ತಪ್ಪುಗಳನ್ನ ನಾವು ಸಹಿಸಿಕೊಂಡಿದ್ದೇವೆ ಎಂದರು. ಇದೇ ವೇಳೆ ಮುತಾಲಿಕ್, ಆನಂದ್‌ ಸಿಂಗ್‌ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ. ನಿಮ್ಮ ಹೇಳಿಕೆ ಮುಸ್ಲಿಮರಿಗೆ ಪ್ರೋತ್ಸಾಹ ಕೊಟ್ಟಂತೆ. ಏನ್ ಸಂದೇಶ ಕೊಡಲು ಹೊರಟ್ಟಿದ್ದಾರೆ. ಇಫ್ತಾರ್ ಕೂಟದಲ್ಲಿ ಭಾಗಿಯಾಗಿದವರು ಹಿಂದೂ ದ್ರೋಹಿಗಳು, ನಿಮಗೆ ನಾಚಿಕೆ ಮಾನ ಮಾರ್ಯದೆ ಏನು ಇಲ್ವಾ? ನಿಮಗೆ ದಿಕ್ಕಾರ ಹಾಕುತ್ತಿದ್ದೇನೆ. ಕರ್ನಾಟಕ ಸರ್ಕಾರಕ್ಕೆ ಧಮ್ ಇಲ್ಲ. ಮತಾಂತರ ಕಾನೂನು ಇನ್ನೂ ಜಾರಿಯಾಗಿಲ್ಲ. ಯೋಗಿ ಸರ್ಕಾರದ ಮಾದರಿಯಲ್ಲಿ ಕೆಲಸ ಮಾಡಿ ಎಂದು ಮುತಾಲಿಕ್ ಆಕ್ರೋಶ ಹೊರ ಹಾಕಿದ್ದಾರೆ. ಹಾಗೂ ಮುಸ್ಲಿಂ ಸಮಾಜ ಶಾಂತಿ ಬಯಸಿದರೆ ಮೊದಲು ಮೈಕ್ ತೆರವು ಮಾಡಿ. ಇಲ್ಲಾಂದ್ರೆ ಮುಂದಿನ ದಿನಗಳಲ್ಲಿ ನಿಮಗೆ ಪಾಠ ಕಲಿಸ್ತಿವಿ ಎಂದರು.

ಕರ್ನಾಟಕದ ಬಿಜೆಪಿಗೆ ಧಮ್​ ಇಲ್ಲ, ಗಟ್ಸ್​​ ಇಲ್ಲ. ರಾಜ್ಯಸರ್ಕಾರದ ವಿರುದ್ಧ ಪ್ರಮೋದ್ ಮುತಾಲಿಕ್ ವಾಗ್ದಾಳಿ ನಡೆಸಿದ್ದಾರೆ. ಹೇಳಿಕೆಗೆ ಮಾತ್ರ ಇವರು ಸೀಮಿತ, ಯಾವುದೇ ಕೃತಿ ಇಲ್ಲ. ರಾಜ್ಯದಲ್ಲಿ ಗೋಹತ್ಯೆ ನಿಷೇಧ ಕಾಯ್ದೆ ಜಾರಿಯಲ್ಲಿದೆ. ನಿಷೇಧವಿದ್ರೂ ಗೋಸಾಗಾಟ, ಗೋಮಾಂಸ ಮಾರಾಟವಾಗ್ತಿದೆ. ಮತಾಂತರ ಕಾನೂನು ಮಾಡುವುದಾಗಿ ಹೇಳಿ ಅರ್ಧಕ್ಕೆ ನಿಲ್ಲಿಸಿದ್ರಿ. ಸೋನಿಯಾ ಗಾಂಧಿಯಿಂದ ಒತ್ತಡ ಬಂದಿದ್ಯಾ ಗೊತ್ತಿಲ್ಲ. ಡಿ.ಜೆ.ಹಳ್ಳಿ, ಕೆ.ಜಿ.ಹಳ್ಳಿಯಲ್ಲಿ ಶಾಸಕರ ಮನೆಗೆ ಬೆಂಕಿ ಇಟ್ಟಿದ್ದಾರೆ. ಆರೋಪಿಗಳೆಲ್ಲ ಜಾಮೀನು ಮೇಲೆ ಹೊರಗಡೆ ಬಂದಿದ್ದಾರೆ. ಬಿಜೆಪಿ ಸರ್ಕಾರದ ಸಾಧನೆ ಏನೂ ಇಲ್ಲ. ಅದೇ ಮಾದರಿಯಲ್ಲಿ ಹುಬ್ಬಳ್ಳಿಯಲ್ಲೂ ಯಾವುದೇ ಕ್ರಮ ಇಲ್ಲ. ಯೋಗಿ‌ ಮಾದರಿಯಲ್ಲಿ ಮನೆ, ಅಂಗಡಿ ತೆರವುಗೊಳಿಸಬೇಕು. ಬುಲ್ಡೋಜರ್​ನಿಂದ ಮನೆ, ಅಂಗಡಿಗಳನ್ನು ಧ್ವಂಸ ಮಾಡಬೇಕು. ನಿಮ್ಮ ತಾಕತ್ತು ಈಗಲಾದ್ರೂ ತೋರಿಸಿ ಎಂದು ಮುತಾಲಿಕ್ ವಾಗ್ದಾಳಿ ನಡೆಸಿದ್ದಾರೆ.

ಈ ನೆಲದ ಕಾನೂನು ಎಲ್ಲರಿಗೂ ಒಂದೆ ಇನ್ನು ಮತ್ತೊಂದು ಕಡೆ ಮಾತನಾಡಿರುವ ಸಿ.ಟಿ. ರವಿ ಮಸೀದಿಗಳಲ್ಲಿ ಆಜಾನ್ ಬ್ಯಾನ್ ವಿಚಾರಕ್ಕೆ ಸಂಬಂಧಿಸಿ ಸುಪ್ರಿಂ ಕೋರ್ಟ್ ಧ್ವನಿವರ್ಧಕಗಳಲ್ಲಿ ಎಷ್ಟು ಡೆಸಿಬಲ್ ಇರಬೇಕು ಅಂತ ಆದೇಶ ನೀಡಿದೆ. ಸೌಂಡ್ ಎಷ್ಟಿರಬೇಕು ಅಂತ ಹೇಳಿದೆ. ಅದರಲ್ಲಿ ದೇವಸ್ಥಾನ ಮಸೀದಿ ಅಂತಿಲ್ಲ. ಮಸೀದಿಯಲ್ಲಿ ಎಷ್ಟು ಬೇಕಾದ್ರು ಶಬ್ದಹಾಕಿ ಕೂಗಬಹುದು ಅಂತ ಹೇಳಿಲ್ಲ. ದೇವಸ್ಥಾನದಲ್ಲಿ ಎಷ್ಟು ಬೇಕಾದರು ಹಾಕಿ ಭಜನೆ ಮಾಡಿ ಅಂತಲು ಹೇಳಿಲ್ಲ. ಈ ನೆಲದ ಕಾನೂನು ಎಲ್ಲರಿಗೂ ಒಂದೆ. ರಾತ್ರಿ 10 ಗಂಟೆಯಿಂದ ಬೆಳಗ್ಗೆ 6 ವರೆಗೂ ದ್ವನಿವರ್ದಕ ಬಳಸಲು ವಿಶೇಷ ಅನುಮತಿ ನೀಡಿಲ್ಲ. ಅದನ್ನ ಎಲ್ಲರೂ ಪಾಲಿಸಲೆಬೇಕು, ಇಷ್ಟು ದಿನ ನಡೆದುಕೊಂಡು ಬಂದಿದೆ ಎನ್ನವುದಾದರೆ ಇಷ್ಟು ದಿನ ಬೇಕಾದನ್ನ ಮಾಡಿದ್ದೀರಿ, ಆದ್ರೆ ಇನ್ನು ಮುಂದೆ ನಡೆಯಲ್ಲ. ಕೈಗಾರಿಕೆ, ಶಾಲಾ ಕಾಲೇಜು, ಜನ ವಾಸತಿ ಪ್ರದೇಶದಲ್ಲಿ ಎಷ್ಟು ಡೆಸಿಬಲ್ ಇರಬೇಕು ಅಂತ ನಿಯಮದಲ್ಲಿದೆ. ಅದನ್ನ ಅನುಷ್ಟಾನಕ್ಕೆ ತರುವ ಜವಾಬ್ದಾರಿ ಅಧಿಕಾರಿಗಳಿಗಿದೆ. ಅಧಿಕಾರಿಗಳು ಕ್ರಮ ವಹಿಸುವಂತೆ ನೋಡಿಕೊಳ್ಳುವುದು ಸರ್ಕಾರದ ಜವಾಬ್ದಾರಿ ಎಂದು ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿದ್ರು.

ಇದನ್ನೂ ಓದಿ: ಬೇಸಿಗೆ ರಜೆಯಲ್ಲಿರುವ ಮಕ್ಕಳೇ ಶಾಲೆಗೆ ಹೋಗೋಕೆ ಸಿದ್ಧರಾಗಿ; ಶಿಕ್ಷಣ ಇಲಾಖೆಯಿಂದ 22-23ನೇ ಶೈಕ್ಷಣಿಕ ವರ್ಷದ ಕ್ಯಾಲೆಂಡರ್ ಬಿಡುಗಡೆ

Published On - 12:45 pm, Thu, 21 April 22