AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಿಮ್ಮ ವಾಹನದ ಡಾಕ್ಯುಮೆಂಟ್​ಗಳನ್ನು ಇನ್ನು ಡಿಜಿ ಲಾಕರ್ ಮತ್ತು ಎಂ-ಪರಿವಾಹನ್ ಌಪ್​ಗಳಲ್ಲಿ ತೋರಿಸಬಹುದು!

ಸಾರಿಗೆ ಇಲಾಖೆಯವರಾಗಲೀ, ಟ್ರಾಫಿಕ್ ಪೊಲೀಸರಾಗಲೀ ವಾಹನಗಳನ್ನು ತಪಾಸಣೆ ಮಾಡುವಾಗ ವಾಹನದ ಡಾಕ್ಯುಮೆಂಟ್​ಗಳನ್ನು ಡಿಜಿ ಲಾಕರ್ ಮತ್ತು ಎಂ-ಪರಿವಾಹನ್ ಌಪ್​ಗಳ ಮೂಲಕ ಕೇಂದ್ರ ಸರ್ಕಾರ ಬಹಳ ಹಿಂದೆಯೇ ಹೇಳಿದೆ.

ನಿಮ್ಮ ವಾಹನದ ಡಾಕ್ಯುಮೆಂಟ್​ಗಳನ್ನು ಇನ್ನು ಡಿಜಿ ಲಾಕರ್ ಮತ್ತು ಎಂ-ಪರಿವಾಹನ್ ಌಪ್​ಗಳಲ್ಲಿ ತೋರಿಸಬಹುದು!
ರವಿಕಾಂತೇ ಗೌಡ
TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ|

Updated on: Jul 08, 2021 | 10:03 PM

Share

ಬೆಂಗಳೂರು: ನೀವು ಬೈಕ್ ಅಥವಾ ಕಾರಿನಲ್ಲಿ ಪ್ರತಿದಿನ ಬೆಂಗಳೂರಿನ ರಸ್ತೆಗಳಲ್ಲಿ ಸಂಚರಿಸುತ್ತಿದ್ದರೆ ಟ್ರಾಫಿಕ್ ಪೊಲೀಸರ ಕಾಟ ಖಂಡಿತವಾಗಿಯೂ ಎದುರಾಗಿರುತ್ತದೆ. ನೀವು ಹೆಲ್ಮೆಟ್​ ಧರಿಸಿ ಬೈಕ್​ ಓಡಿಸುತ್ತಿದ್ದರೂ ಟ್ರಾಫಿಕ್ ಕಾಪ್​ಗಳು ತಡೆದು ನಿಮ್ಮ ಡಿಎಲ್, ವಾಹನದ ದಾಖಲೆಗಳನ್ನು ತೋರಿಸಿ ಅಂತಾರೆ. ಅವುಗಳನ್ನು ಡಿಕ್ಕಿಯಲ್ಲಿ ಇಟ್ಟುಕೊಂಡಿದ್ದರೆ ನೀವು ಬಚಾವಾದಂತೆ. ಇಲ್ಲದಿದ್ದರೆ, ಭಾರೀ ಪ್ರಮಾಣದ ದಂಡ ತೆರಲು ಸಿದ್ಧರಾಗಬೇಕಾಗುತ್ತದೆ. ಹಾಗೆ ನೋಡಿದರೆ, ಈ ಡಾಕ್ಯುಮೆಂಟ್​ಗಳನ್ನು ಪ್ರತಿದಿನ ಕ್ಯಾರಿ ಮಾಡುವುದು ಕರೆಕರೆಯ ಕೆಲಸವೇ. ಮಳೆಯಲ್ಲಿ ಅವು ನೆನೆಯುವ ಭಯ ಇದ್ದೇ ಇರುತ್ತದೆ. ಹಲವಾರು ಜನ ಅವು ನೆನೆಯದಂತೆ ಪ್ಲಾಸ್ಟಿಕ್ ಚೀಲದಲ್ಲಿ ಇಟ್ಟುಕೊಂಡಿರುತ್ತಾರೆ . ಪೊಲೀಸರು ವಾಹನವನ್ನು ಅಡ್ಡಹಾಕಿದಾಗ ಅವುಗಳನ್ನು ತೆಗೆದು ತೋರಿಸುವುದು ತಾಪತ್ರಯ ಅಂತ ಬಹಳ ಸಲ ನಾವು ಅಂದುಕೊಂಡಿರುತ್ತೇವೆ.

ಈ ತಾಪತ್ರಯವನ್ನು ದೂರ ಮಾಡಲೆಂದೇ ಕೇಂದ್ರ ಸರ್ಕಾರ ಡಿಜಿ ಲಾಕರ್ ಮತ್ತು ಎಂ-ಪರಿವಾಹನ್ ಌಪ್​ಗಳನ್ನು ಲಾಂಚ್ ​ಮಾಡಿರುವುದು ಬಹಳಷ್ಟು ಜನಕ್ಕೆ ಗೊತ್ತಿರಬಹುದು ಮತ್ತು ಕೆಲವರ ಅರಿವಿಗೆ ಅದು ಬಂದಿರಲಿಕ್ಕಿಲ್ಲ. ಅದು ಅಪರಾಧವೇನೂ ಅಲ್ಲ ಬಿಡಿ. ಹಾಗಂತ ದಯವಿಟ್ಟು ಯಾಮಾರಬೇಡಿ. ಯಾಕೆಂದರೆ ಈ ಌಪ್​ಗಳ ಮೂಲಕವೇ ನಿಮ್ಮ ಗಾಡಿಯ ದಾಖಲೆ ಪತ್ರಗಳನ್ನೂ ಪೊಲೀಸರಿಗೆ ತೋರಿಸಬಹುದು.

ಸಾರಿಗೆ ಇಲಾಖೆಯವರಾಗಲೀ, ಟ್ರಾಫಿಕ್ ಪೊಲೀಸರಾಗಲೀ ವಾಹನಗಳನ್ನು ತಪಾಸಣೆ ಮಾಡುವಾಗ ವಾಹನದ ಡಾಕ್ಯುಮೆಂಟ್​ಗಳನ್ನು ಡಿಜಿ ಲಾಕರ್ ಮತ್ತು ಎಂ-ಪರಿವಾಹನ್ ಌಪ್​ಗಳ ಮೂಲಕ ಕೇಂದ್ರ ಸರ್ಕಾರ ಬಹಳ ಹಿಂದೆಯೇ ಹೇಳಿದೆ. ಈ ಌಪ್​ಗಳಲ್ಲಿ ದಾಖಲೆಗಳನ್ನು ತೋರಿಸಿದರೆ, ‘ನಮ್ಮ ಬೆಂಗಳೂರು’ ಪೊಲೀಸರು ಅದನ್ನು ಮಾನ್ಯ ಮಾಡುತ್ತಿರಲಿಲ್ಲ. ಅವರಿಗೆ ಕಾಗದಗಳನ್ನು ಭೌತಿಕವಾಗಿಯೇ ತೋರಿಸಬೇಕು. ಜನರ ಗಮನಕ್ಕೆ ಈ ಸಂಗತಿ ಬಂದಿರಬಹುದು.

ಆದರೆ. ಇನ್ನು ಮಂದೆ ಈ ಕಿರಿಕಿರಿ ತಪ್ಪಲಿದೆ. ಬೆಂಗಳೂರಿನ ಸಂಚಾರಿ ವಿಭಾಗದ ಹೆಚ್ಚುವರಿ ಆಯುಕ್ತ ರವಿಕಾಂತೇಗೌಡ ಅವರು ಕೇಂದ್ರ ಸರ್ಕಾರದ ಡಿಜಿ ಲಾಕರ್, ಪರಿವಾಹನ್ ಆ್ಯಪ್ ಬಳಸಿ ಡ್ರೈವಿಂಗ್ ಲೈಸೆನ್ಸ್ ಹಾಗೂ ಆರ್​ಸಿ ಬುಕ್ ಸೇರಿದಂತೆ ಹಲವು ದಾಖಲೆಗಳನ್ನ ಡಿಜಿ‌ ಲಾಕರ್​ನಲ್ಲಿ ತೋರಿಸಬಹುದು ಎಂದು ಗುರುವಾರ ಬೆಂಗಳೂರಿನಲ್ಲಿ ಹೇಳಿದ್ದಾರೆ. ಜನರು ಡಿಜಿ ಲಾಕರ್​, ಎಂ-ಪರಿವಾಹನ್ ಆ್ಯಪ್​ಗಳನ್ನು ಬಳಸಿ ನಿರ್ಭಯದಿಂದ ತಮ್ಮ ವಾಹನಗಳ ಕಾಗದಪತ್ರಗಳನ್ನು ತೋರಿಸಿಬಹುದೆಂದು ಅವರು ಹೇಳಿರುವುದು ವಾಹನ ಓಡಿಸುವವರಲ್ಲಿ ನಿರಾಳತೆ ಉಂಟು ಮಾಡಿರಲಿಕ್ಕೂ ಸಾಕು.

ಮುಂದಿನ ದಿನಗಳಲ್ಲಿ ಡಾಕ್ಯುಮೆಂಟ್​ಗಳನ್ನು ಪೊಲೀಸರಿಗೆ ಭೌತಿಕವಾಗಿ ತೋರಿಸುವ ಅಗತ್ಯವಿಲ್ಲ, ವಿಷಯಕ್ಕೆ ಸಂಬಂಧಿಸಿದಂತೆ ಪೊಲೀಸರಿಗೂ ಸೂಚನೆ ನೀಡಲಾಗಿದೆ, ಭೌತಿಕವಾಗೇ ಅವುಗಳನ್ನು ತೋರಿಸಲು ಒತ್ತಾಯಿಸಿದ್ರೆ ಅವರ ವಿರುದ್ಧ ಕ್ರಮ ಜರುಗಿಸಲಾಗುವುದೆಂದು ರವಿಕಾಂತೇಗೌಡ ಹೇಳಿದ್ದಾರೆ. ವಾಹನ ಚಾಲಕರು ಈ ಆ್ಯಪ್​ಗಳ ಸದುಪಯೋಗ ಮಾಡಿಕೊಳ್ಳಬೇಕು ಎಂದು ಅಯುಕ್ತರು ಒತ್ತಾಯಿಸಿದ್ದಾರೆ.

ಇದನ್ನೂ ಓದಿ: DigiLocker: ಡಿಜಿಲಾಕರ್ ಬಳಸಿ ಪಾಸ್​ಪೋರ್ಟ್​ಗೆ ಅರ್ಜಿ ಸಲ್ಲಿಸಲು ಸುಲಭ ವಿಧಾನ ಇಲ್ಲಿದೆ