Karnataka Covid Update: ಕರ್ನಾಟಕದಲ್ಲಿ ಇಂದು 2,530 ಜನರಿಗೆ ಕೊವಿಡ್ ದೃಢ, 62 ಜನರು ನಿಧನ
ಇಂದು ಒಂದೇ ದಿನ 3,344 ಜನರು ಆಸ್ಪತ್ರೆಗಳಿಂದ ಬಿಡುಗಡೆಯಾಗಿದ್ದಾರೆ. ಇಂದಿನ ಕೊವಿಡ್ ಪಾಸಿಟಿವಿಟಿ ದರ ಶೇಕಡಾ 1.60ರಷ್ಟಿದೆ.
ಬೆಂಗಳೂರು: ಕರ್ನಾಟಕದಲ್ಲಿ ಇಂದು 2,530 ಜನರಿಗೆ ಕೊವಿಡ್ ಸೋಂಕು ದೃಢಪಟ್ಟಿದ್ದು, 62 ಜನರು ನಿಧನರಾಗಿದ್ದಾರೆ. ರಾಜಧಾನಿ ಬೆಂಗಳೂರಲ್ಲಿ ಇಂದು ಒಂದೇ ದಿನ 514 ಜನರಿಗೆ ಸೋಂಕು ಖಚಿತಪಟ್ಟಿದ್ದು, 9 ಜನರು ಮೃತಪಟ್ಟಿದ್ದಾರೆ. ರಾಜ್ಯದಲ್ಲಿ ಸೋಂಕಿತರ ಪೈಕಿ ಈವರೆಗೆ 27,90,453 ಜನ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದು, ಈವರೆಗೆ ಕೊರೊನಾದಿಂದ 35663 ಜನರ ಸಾವನ್ನಪ್ಪಿದ್ದಾರೆ. ಸದ್ಯ ರಾಜ್ಯದಲ್ಲಿ 38,729 ಜನರಲ್ಲಿ ಕೊರೊನಾ ಸೋಂಕು ಸಕ್ರಿಯವಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ. ಇಂದು ಒಂದೇ ದಿನ 3,344 ಜನರು ಆಸ್ಪತ್ರೆಗಳಿಂದ ಬಿಡುಗಡೆಯಾಗಿದ್ದಾರೆ. ಇಂದಿನ ಕೊವಿಡ್ ಪಾಸಿಟಿವಿಟಿ ದರ ಶೇಕಡಾ 1.60ರಷ್ಟಿದೆ.
ಬೆಂಗಳೂರು ನಗರ ಜಿಲ್ಲೆ 514, ಮೈಸೂರು ಜಿಲ್ಲೆ 294 , ದಕ್ಷಿಣ ಕನ್ನಡ 210, ಹಾಸನ 202, ಬೆಳಗಾವಿ 176, ಶಿವಮೊಗ್ಗ 167, ಉಡುಪಿ 148, ತುಮಕೂರು 136 , ಚಿಕ್ಕಮಗಳೂರು 114, ಮಂಡ್ಯ 88, ಕೊಡಗು 81 ಪ್ರಕರಣ ಕೋಲಾರ 63, ಬೆಂಗಳೂರು ಗ್ರಾಮಾಂತರ ಜಿಲ್ಲೆ 59, ಉತ್ತರ ಕನ್ನಡ 49, ಚಾಮರಾಜನಗರ 47, ಚಿತ್ರದುರ್ಗ 30, ದಾವಣಗೆರೆ 28, ಧಾರವಾಡ 19, ಚಿಕ್ಕಬಳ್ಳಾಪುರ 18, ಬಳ್ಳಾರಿ 18, ರಾಮನಗರ 15, ಕೊಪ್ಪಳ 12, ಕಲಬುರಗಿ 11, ಹಾವೇರಿ 9, ಗದಗ 5, ಯಾದಗಿರಿ 5, ವಿಜಯಪುರ 4 , ಬಾಗಲಕೋಟೆ 3, ಬೀದರ್ 3, ರಾಯಚೂರು 2 ಪ್ರಕರಣ ದಾಖಲಾಗಿದೆ.
ರಾಜ್ಯದಲ್ಲಿ ಇಂದು ಕೊರೊನಾ ಸೋಂಕಿನಿಂದ 62 ಜನರು ನಿಧನರಾಗಿದ್ದು, ಬಳ್ಳಾರಿ ಜಿಲ್ಲೆ 11, ಬೆಂಗಳೂರು ನಗರ ಜಿಲ್ಲೆ 9, ದಕ್ಷಿಣ ಕನ್ನಡ ಜಿಲ್ಲೆ 8, ಮೈಸೂರು ಜಿಲ್ಲೆ 6, ಧಾರವಾಡ , ಶಿವಮೊಗ್ಗ ಜಿಲ್ಲೆ 5, ದಾವಣಗೆರೆ ಜಿಲ್ಲೆ 4, ತುಮಕೂರು ಜಿಲ್ಲೆ 3, ಬೆಳಗಾವಿ, ಚಿಕ್ಕಮಗಳೂರು, ಮಂಡ್ಯ ಜಿಲ್ಲೆಯಲ್ಲಿ ತಲಾ ಇಬ್ಬರು, ಚಿಕ್ಕಬಳ್ಳಾಪುರ, ಹಾಸನ, ಕೋಲಾರ, ರಾಮನಗರ, ಉಡುಪಿ ಜಿಲ್ಲೆ ತಲಾ ಒಬ್ಬರು ಮೃತಪಟ್ಟಿದ್ದಾರೆ.
ಇಂದಿನ 08/07/2021 ಸಂಪೂರ್ಣ ಪತ್ರಿಕಾ ಪ್ರಕಟಣೆಗಾಗಿ ಇಲ್ಲಿ ನೀಡಲಾಗಿರುವ ಲಿಂಕ್ ಅನ್ನು ಕ್ಲಿಕ್ ಮಾಡಿ.https://t.co/wkJudF4WfP
@CMofKarnataka @drashwathcn@GovindKarjol @LaxmanSavadi @mla_sudhakar @BBMPCOMM @DC_Dharwad @DCKodagu @dcudupi @DCDK9 @mysurucitycorp @mangalurucorp @CEOUdupi pic.twitter.com/KYBnZeUCGJ
— K’taka Health Dept (@DHFWKA) July 8, 2021
ಇದನ್ನೂ ಓದಿ:
(Karnataka Covid Update 2530 new cases and 62 deaths today)