AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರೈಲ್ವೆ ಟಿಕೆಟ್ ಖರೀದಿಸಲು ಇನ್ಮುಂದೆ ಕ್ಯೂ ನಿಲ್ಬೇಕಿಲ್ಲ! ದೇಶದಲ್ಲೇ ಮೊದಲ ಬಾರಿಗೆ ಕೆಎಸ್​ಆರ್​ನಲ್ಲಿ MUTS ಸಹಾಯಕ್ ಪರಿಚಯ

ಈ ಹಿಂದೆ ರೈಲುಗಳಲ್ಲಿ ಪ್ರಯಾಣ ಮಾಡಬೇಕೆಂದರೆ ಟಿಕೆಟ್ ಕೌಂಟರ್​​ನಲ್ಲಿ ಗಂಟೆಗಟ್ಟಲೆ ಕ್ಯೂ ನಿಂತು ಟಿಕೆಟ್ ಖರೀದಿ ಮಾಡಬೇಕಿತ್ತು. ಆದರೆ, ಇನ್ಮುಂದೆ ರೈಲ್ವೆ ಸ್ಟೇಷನ್ ಎಂಟ್ರಿ ಗೇಟ್​ನಲ್ಲೇ ಕೇವಲ ಮೂರೇ ನಿಮಿಷಗಳಲ್ಲಿ ಟಿಕೆಟ್ ನಿಮ್ಮ ಕೈಗೆ ಸಿಗಲಿದೆ ನೋಡಿ. ಬೆಂಗಳೂರಿನ ಕೆಎಸ್​ಆರ್​ ನಿಲ್ದಾಣದಲ್ಲಿ ದೇಶದಲ್ಲೇ ಮೊದಲ ಬಾರಿಗೆ MUTS ಸಹಾಯಕ್ ಪರಿಚಯಿಸಲಾಗಿದೆ. ಈ ಕುರಿತು ವಿವರ ಇಲ್ಲಿದೆ.

ರೈಲ್ವೆ ಟಿಕೆಟ್ ಖರೀದಿಸಲು ಇನ್ಮುಂದೆ ಕ್ಯೂ ನಿಲ್ಬೇಕಿಲ್ಲ! ದೇಶದಲ್ಲೇ ಮೊದಲ ಬಾರಿಗೆ ಕೆಎಸ್​ಆರ್​ನಲ್ಲಿ MUTS ಸಹಾಯಕ್ ಪರಿಚಯ
ಬೆಂಗಳೂರು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದಲ್ಲಿ ಟಿಕೆಟ್​ ನೀಡುತ್ತಿರುವ MUTS ಸಹಾಯಕ್ ಸಿಬ್ಬಂದಿ
Kiran Surya
| Updated By: Ganapathi Sharma|

Updated on: Nov 04, 2025 | 6:54 AM

Share

ಬೆಂಗಳೂರು, ನವೆಂಬರ್ 4: ರೈಲಿನಲ್ಲಿ ಎಲ್ಲಿಗಾದರೂ ಪ್ರಯಾಣ ಮಾಡಬೇಕಿದ್ದರೆ, ರೈಲ್ವೆ ನಿಲ್ದಾಣದಲ್ಲಿಯೇ ಟಿಕೆಟ್ ಖರೀದಿಸುತ್ತೇವೆ ಎಂದರೆ ಮುಗಿದೇ ಹೋಯಿತು. ಟಿಕೆಟ್ ಖರೀದಿಗೆ ಸರದಿ ನಿಲ್ಲಬೇಕು. ಅಷ್ಟೇ ಅಲ್ಲದೆ, ಚಿಲ್ಲರೆ ಸಹಿತ ಅನೇಕ ಸಮಸ್ಯೆ ಎದುರಿಸಬೇಕು. ಆದರೆ ಇದೀಗ ನೈಋತ್ಯ ರೈಲ್ವೆ (South Western Railway) ಬೆಂಗಳೂರಿನ (Bengaluru) ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲ್ವೆ (KSR) ನಿಲ್ದಾಣದಲ್ಲಿ Mobile unreserved ticketing system (MUTS) ಸಹಾಯಕ್ ಪರಿಚಯ ಮಾಡಿದೆ. ಇದರಿಂದ, ಇನ್ಮುಂದೆ ಕೆಎಸ್ಆರ್ ರೈಲ್ವೆ ನಿಲ್ದಾಣ ಪ್ರವೇಶಿಸುತ್ತಿದ್ದಂತೆಯೇ ಪ್ರಯಾಣಿಕರು ಇರುವ ಸ್ಥಳಕ್ಕೆ ಬಂದು ಟಿಕೆಟ್ ಮಷಿನ್​ಗಳ ಮೂಲಕ ರೈಲ್ವೆ ಸಿಬ್ಬಂದಿ ಟಿಕೆಟ್ ನೀಡಲಿದ್ದಾರೆ.

ದೇಶದ 5 ರೈಲ್ವೆ ನಿಲ್ದಾಣಗಳಲ್ಲಿ MUTS ಸಹಾಯಕ್ ಪರಿಚಯಿಸಲು ಚಿಂತನೆ

ದೇಶದಲ್ಲಿ ಐದು ರೈಲ್ವೆ ಸ್ಟೇಷನ್​ಳಲ್ಲಿ ಈ ವ್ಯವಸ್ಥೆ ಜಾರಿ ಮಾಡಲು ರೈಲ್ವೆ ಇಲಾಖೆ ಸಿದ್ದತೆ ಮಾಡಿಕೊಂಡಿದ್ದು, ಪ್ರಾಯೋಗಿಕವಾಗಿ ಮೊದಲಿಗೆ ಕೆಎಸ್ಆರ್ ರೈಲ್ವೆ ನಿಲ್ದಾಣದಲ್ಲಿ ಪರಿಚಯ ಮಾಡಲಾಗಿದೆ. ವೀಕೆಂಡ್ ಅಥವಾ ಹಬ್ಬಗಳ ಸಂದರ್ಭದಲ್ಲಿ ಕೆಎಸ್ಎಆರ್ ರೈಲ್ವೆ ನಿಲ್ದಾಣಕ್ಕೆ ಲಕ್ಷಾಂತರ ಸಂಖ್ಯೆಯಲ್ಲಿ ಪ್ರಯಾಣಿಕರು ಬರುತ್ತಾರೆ. ಜನರ ದಟ್ಟಣೆ‌ ನಿಯಂತ್ರಣಕ್ಕಾಗಿ ಈ MUTS ಸಹಾಯಕ್ ಆರಂಭಿಸಲಾಗಿದ್ದು, ಇದರಿಂದ ಪ್ರಯಾಣಿಕರು ಗಂಟೆಗಟ್ಟಲೇ ಸರದಿಯಲ್ಲಿ ನಿಲ್ಲುವ ಅನಿವಾರ್ಯತೆ ತಪ್ಪಲಿದೆ.

MUTS ಸಹಾಯಕ್​ನಲ್ಲಿ ಟಿಕೆಟ್ ಖರೀದಿಸಿದರೆ ಶೇ 3 ರ ಡಿಸ್ಕೌಂಟ್

MUTS ಸಹಾಯಕ್​ ಮೂಲಕ ಟಿಕೆಟ್ ಖರೀದಿ ಮಾಡಿದರೆ ಶೇ 3 ರಷ್ಟು ರಿಯಾಯಿತಿ ಕೂಡ ದೊರೆಯಲಿದೆ. ಪ್ರತಿದಿನ ಕೆಎಸ್ಆರ್ ರೈಲ್ವೆ ನಿಲ್ದಾಣದಲ್ಲಿ ಸಾವಿರಾರು ಪ್ರಯಾಣಿಕರು ಇದ್ದಲ್ಲಿಗೆ ಹೋಗಿ ಸಹಾಯಕ್​ಗಳು ಟಿಕೆಟ್ ಕೊಡಲಿವೆ. ಇದು ಯಶಸ್ವಿಯಾದರೆ ರಾಜ್ಯದ ಎಲ್ಲಾ ರೈಲ್ವೆ ನಿಲ್ದಾಣಗಳಿಗೆ ವಿಸ್ತರಿಸುವ ಗುರಿಯನ್ನು ನೈಋತ್ಯ ರೈಲ್ವೆ ಹಾಕಿಕೊಂಡಿದೆ. MUTS ಸಹಾಯಕ್ ಮೂಲಕ ಟಿಕೆಟ್ ಪಡೆದ ಪ್ರಯಾಣಿಕರು ಸಂತಸ ವ್ಯಕ್ತಪಡಿಸಿದ್ದಾರೆ‌.

ಇದನ್ನೂ ಓದಿ: ಆರೇ ವರ್ಷಕ್ಕೇ ಕಲಬುರಗಿ ಬೆಂಗಳೂರು ವಿಮಾನ ಸಂಚಾರ ಬಂದ್‌! ಸ್ತಬ್ಧವಾಯ್ತು ಕಲಬುರಗಿ ವಿಮಾನ ನಿಲ್ದಾಣ

ಒಟ್ಟಿನಲ್ಲಿ, ಈ MUTS ಸಹಾಯಕ್​ನಿಂದ ಪ್ರಯಾಣಿಕರು ಟಿಕೆಟ್ ಖರೀದಿಸಲು ಸರದಿ ಸಾಲಿನಲ್ಲಿ ನಿಲ್ಲುವುದು ತಪ್ಪುವುದರಲ್ಲಿ ಅನುಮಾನ ಇಲ್ಲ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ