ರಾಜ್ಯಸಭೆ ಚುನಾವಣೆ ವೇಳೆ ಅಡ್ಡ ಮತದಾನ ಆರೋಪ: ಶಾಸಕ ಶ್ರೀನಿವಾಸ್‌ಗೌಡ ಹಾಗೂ ಶಾಸಕ ಎಸ್.ಆರ್.ಶ್ರೀನಿವಾಸ್​ಗೆ ನೋಟಿಸ್​ ಜಾರಿ

| Updated By: ಆಯೇಷಾ ಬಾನು

Updated on: Oct 03, 2022 | 1:39 PM

ಕೋಲಾರ ಶಾಸಕ ಶ್ರೀನಿವಾಸ್‌ಗೌಡ ಹಾಗೂ ಗುಬ್ಬಿ ಶಾಸಕ ಎಸ್.ಆರ್.ಶ್ರೀನಿವಾಸ್‌ ಸೇರಿ ಇಬ್ಬರನ್ನ ಅನರ್ಹಗೊಳಿಸುವಂತೆ ದೂರು ಹಿನ್ನೆಲೆ ವಿಶಾಲಾಕ್ಷಿ ಅವರು ನೋಟಿಸ್​ ಜಾರಿ ಮಾಡಿದ್ದಾರೆ.

ರಾಜ್ಯಸಭೆ ಚುನಾವಣೆ ವೇಳೆ ಅಡ್ಡ ಮತದಾನ ಆರೋಪ: ಶಾಸಕ ಶ್ರೀನಿವಾಸ್‌ಗೌಡ ಹಾಗೂ ಶಾಸಕ ಎಸ್.ಆರ್.ಶ್ರೀನಿವಾಸ್​ಗೆ ನೋಟಿಸ್​ ಜಾರಿ
ಶಾಸಕ ಶ್ರೀನಿವಾಸ್‌ಗೌಡ ಹಾಗೂ ಶಾಸಕ ಎಸ್.ಆರ್.ಶ್ರೀನಿವಾಸ್
Follow us on

ಬೆಂಗಳೂರು: ರಾಜ್ಯಸಭೆ ಚುನಾವಣೆ ವೇಳೆ ಅಡ್ಡ ಮತದಾನದ ಆರೋಪಕ್ಕೆ ಸಂಬಂಧಿಸಿ ಜೆಡಿಎಸ್​​ನ ಇಬ್ಬರು ಶಾಸಕರಿಗೆ ವಿಧಾನಸಭೆ ಕಾರ್ಯದರ್ಶಿ ವಿಶಾಲಾಕ್ಷಿರಿಂದ ನೋಟಿಸ್​ ಜಾರಿಯಾಗಿದೆ. ಕೋಲಾರ ಶಾಸಕ ಶ್ರೀನಿವಾಸ್‌ಗೌಡ ಹಾಗೂ ಗುಬ್ಬಿ ಶಾಸಕ ಎಸ್.ಆರ್.ಶ್ರೀನಿವಾಸ್‌ ಸೇರಿ ಇಬ್ಬರನ್ನ ಅನರ್ಹಗೊಳಿಸುವಂತೆ ದೂರು ಹಿನ್ನೆಲೆ ವಿಶಾಲಾಕ್ಷಿ ಅವರು ನೋಟಿಸ್​ ಜಾರಿ ಮಾಡಿದ್ದಾರೆ.

ಲಿಖಿತ ರೂಪದಲ್ಲಿ ಉತ್ತರ ನೀಡುವಂತೆ ನೋಟೀಸ್ ಜಾರಿ ಮಾಡಲಾಗಿದೆ. ರಾಜ್ಯಸಭಾ ಚುನಾವಣೆ ವೇಳೆ ಬಿಜೆಪಿ ಅಭ್ಯರ್ಥಿ ಲೇಹರ್‌ಸಿಂಗ್ ಪರ ಮತದಾನ ಮಾಡಿದ್ದಾರೆ ಎಂದು ಗುಬ್ಬಿ ಶ್ರೀನಿವಾಸ್ ವಿರುದ್ಧ ಆರೋಪಿಸಲಾಗಿತ್ತು. ಕಾಂಗ್ರೆಸ್ ಅಭ್ಯರ್ಥಿಗೆ ಮತ ಹಾಕಿದ್ದೇನೆ ಎಂದು ಕೋಲಾರ ಶ್ರೀನಿವಾಸಗೌಡ ಬಹಿರಂಗವಾಗಿ ಹೇಳಿದ್ದರು. ಹೀಗಾಗಿ ಪಕ್ಷ ವಿರೋಧಿ ಚಟುವಟಿಕೆ ನಿಯಮದಡಿ ಇಬ್ಬರು ಶಾಸಕರ ಸದಸ್ಯತ್ವ ಅನರ್ಹತೆಗೆ ಜೆಡಿಎಸ್‌‌ ಶಾಸಕ ವೆಂಕಟ್‌ರಾವ್ ನಾಡಗೌಡ ದೂರು ನೀಡಿದ್ದರು. ದೂರನ್ನ ಪರಿಶೀಲಿಸಿದ ವಿಧಾನಸಭೆ ಸ್ಪೀಕರ್, ಕಾರಣ ಕೇಳಿ ಶಾಸಕರಿಗೆ ನೋಟಿಸ್ ಜಾರಿ ಮಾಡಿದ್ದಾರೆ. ಇದನ್ನೂ ಓದಿ: ನಾಲ್ಕನೇ ಅಭ್ಯರ್ಥಿ ಗೆಲುವಿಗೆ ಅಡ್ಡ ಮತದಾನವೇ ನಿರ್ಣಾಯಕ, ಒಂದೇ ಸ್ಥಾನಕ್ಕೆ ಮೂವರ ಪೈಪೋಟಿ

ಗುಬ್ಬಿ ಶ್ರೀನಿವಾಸ್, ಕೋಲಾರ ಶ್ರೀನಿವಾಸ ಗೌಡ ಉಚ್ಚಾಟನೆ ಮಾಡಿ ಜೆಡಿಎಸ್ ಆದೇಶ

ಕೆಲ ತಿಂಗಳ ಹಿಂದೆ ಗುಬ್ಬಿ ಶ್ರೀನಿವಾಸ್, ಕೋಲಾರ ಶ್ರೀನಿವಾಸ ಗೌಡ ಉಚ್ಚಾಟನೆ(Expelled) ಮಾಡಿ ಜೆಡಿಎಸ್(JDS) ಆದೇಶ ಹೊರಡಿಸಿತ್ತು. ಕೋರ್ ಕಮಿಟಿ ಸಭೆ ನಡೆಸಿ ಈ ಬಗ್ಗೆ ನಿರ್ಧಾರ ತೆಗೆದುಕೊಂಡಿದ್ದರು. ರಾಜ್ಯಸಭೆ ಚುನಾವಣೆಯಲ್ಲಿ ಅಡ್ಡ ಮತದಾನ ಮಾಡಿದ ಹಿನ್ನೆಲೆಯಲ್ಲಿ ಜೆಡಿಎಸ್ ಗುಬ್ಬಿ ಶ್ರೀನಿವಾಸ್ ಮತ್ತು ಶ್ರೀನಿವಾಸ್ ಗೌಡರನ್ನು ಉಚ್ಚಾಟನೆ ಮಾಡಲು ಜೆಡಿಎಸ್‍ ತೀರ್ಮಾನ ಮಾಡಿತ್ತು.

ರಾಜ್ಯಸಭೆ ಚುನಾವಣೆಯಲ್ಲಿ ವಿಪ್ ಉಲ್ಲಂಘಿಸಿ ಅಡ್ಡ ಮತದಾನ ಮಾಡಿದ್ದ ಕೋಲಾರ ಶಾಸಕ ಕೆ. ಶ್ರೀನಿವಾಸ ಗೌಡ ಹಾಗೂ ಗುಬ್ಬಿ ಶಾಸಕ ಎಸ್.ಆರ್.ಶ್ರೀನಿವಾಸ್ ಇಬ್ಬರನ್ನೂ ಜೆಡಿಎಸ್ ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಉಚ್ಛಾಟನೆ ಮಾಡಿದೆ. ಕೋರ್ ಕಮಿಟಿ ಅಧ್ಯಕ್ಷ ಬಂಡೆಪ್ಪ ಕಾಶೆಂಪೂರ್ ಈ ಬಗ್ಗೆ ಮಾಹಿತಿ ನೀಡಿದ್ದರು.

ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 1:39 pm, Mon, 3 October 22