ನಾಲ್ಕನೇ ಅಭ್ಯರ್ಥಿ ಗೆಲುವಿಗೆ ಅಡ್ಡ ಮತದಾನವೇ ನಿರ್ಣಾಯಕ, ಒಂದೇ ಸ್ಥಾನಕ್ಕೆ ಮೂವರ ಪೈಪೋಟಿ

ಒಂದು ಸ್ಥಾನಕ್ಕಾಗಿ ಮೂರೂ ಪಕ್ಷಗಳಿಂದ ಅಭ್ಯರ್ಥಿಗಳು ಕಣಕ್ಕಿಳಿದಿದ್ದಾರೆ. ತನ್ನ ಕೈಲಿರುವ 32 ಪ್ರಥಮ ಪ್ರಾಶಸ್ತ್ಯದ ಮತಗಳನ್ನು ಹಿಡಿದಿಟ್ಟುಕೊಳ್ಳುವುದು ಹೇಗೆ ಎಂಬುದು ಜೆಡಿಎಸ್​ಗೆ ದೊಡ್ಡ ಸವಾಲಾಗಿದೆ.

ನಾಲ್ಕನೇ ಅಭ್ಯರ್ಥಿ ಗೆಲುವಿಗೆ ಅಡ್ಡ ಮತದಾನವೇ ನಿರ್ಣಾಯಕ, ಒಂದೇ ಸ್ಥಾನಕ್ಕೆ ಮೂವರ ಪೈಪೋಟಿ
ಪ್ರಾತಿನಿಧಿಕ ಚಿತ್ರ
Follow us
TV9 Web
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on:Jun 09, 2022 | 3:33 PM

ಬೆಂಗಳೂರು: ರಾಜ್ಯಸಭಾ ಚುನಾವಣೆ (Rajya Sabha Elections) ಜೂನ್ 10ರಂದು ನಡೆಯಲಿದೆ. ಚಲಾವಣೆಯಾಗಲಿರುವ ಅಡ್ಡಮತಗಳೇ ನಾಲ್ಕನೇ ಅಭ್ಯರ್ಥಿಯ ಗೆಲುವನ್ನು ನಿರ್ಧರಿಸಲಿದೆ. ಒಂದು ಸ್ಥಾನಕ್ಕಾಗಿ ಮೂರೂ ಪಕ್ಷಗಳಿಂದ ಅಭ್ಯರ್ಥಿಗಳು ಕಣಕ್ಕಿಳಿದಿದ್ದಾರೆ. ತನ್ನ ಕೈಲಿರುವ 32 ಪ್ರಥಮ ಪ್ರಾಶಸ್ತ್ಯದ ಮತಗಳನ್ನು ಹಿಡಿದಿಟ್ಟುಕೊಳ್ಳುವುದು ಹೇಗೆ ಎಂಬುದು ಜೆಡಿಎಸ್​ಗೆ ದೊಡ್ಡ ಸವಾಲಾಗಿದೆ. ಪಕ್ಷದ ನಾಲ್ವರು ಶಾಸಕರ ವಿರುದ್ಧ ಈ ಹಿಂದೆ ಜೆಡಿಎಸ್ ನಾಯಕ ಎಚ್​.ಡಿ.ಕುಮಾರಸ್ವಾಮಿ ಬಹಿರಂಗವಾಗಿಯೇ ಅಸಮಾಧಾನ ವ್ಯಕ್ತಪಡಿಸಿದ್ದರು. ಆದರೆ ಈಗ ಎಲ್ಲರೂ ಪಕ್ಷದ ಪರ ನಿಲ್ಲುತ್ತಾರೆಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಜೆಡಿಎಸ್ ಅಭ್ಯರ್ಥಿ ಕುಪೇಂದ್ರ ರೆಡ್ಡಿ ಎಲ್ಲ ಅಭ್ಯರ್ಥಿಗಳನ್ನು ವೈಯಕ್ತಿಕವಾಗಿ ಭೇಟಿಯಾಗುತ್ತಿದ್ದಾರೆ. 32 ಶಾಸಕರ ಜೊತೆ ಜೆಡಿಎಸ್‌ಗೆ ಹೆಚ್ಚುವರಿಯಾಗಿ ಮೂರ್ನಾಲ್ಕು ಮತಗಳು ಸಿಗುವ ನಿರೀಕ್ಷೆಯಿದೆ. ಆತ್ಮವಿಶ್ವಾಸದ ಮತಗಳು ನಮಗೆ ಬರುತ್ತವೆ ಎನ್ನುವ ಅವರ ಮಾತು ಇದನ್ನೇ ಸೂಚಿಸಿದೆ. ಜೆಡಿಎಸ್‌ನಿಂದ ಕ್ರಾಸ್​ವೋಟ್ ತಡೆಯದಿದ್ದರೆ ಕುಪೇಂದ್ರ ರೆಡ್ಡಿ ಸೋಲು ನಿಶ್ಚಿತ.

ಕಾಂಗ್ರೆಸ್‌ನಲ್ಲಿ ಎರಡನೇ ಅಭ್ಯರ್ಥಿಗೆ ಪಕ್ಷದ ಶಾಸಕರಿಂದ 25 ಉಳಿಕೆ ಮತ ಸಿಗುತ್ತದೆ. ಕ್ರಾಸ್​ವೋಟ್ ಮೂಲಕ ಹೆಚ್ಚುವರಿ ಮತ ಬರುವ ನಿರೀಕ್ಷೆಯಲ್ಲಿ ಕಾಂಗ್ರೆಸ್​ ನಾಯಕರು ಇದ್ದಾರೆ. ಆದರೆ ಎಷ್ಟು ಜನರು ಕ್ರಾಸ್​ ವೋಟ್ ಮಾಡುತ್ತಾರೆ ಎನ್ನುವ ಗುಟ್ಟನ್ನು ನಾಯಕರು ಈವರೆಗೆ ಬಿಟ್ಟುಕೊಟ್ಟಿಲ್ಲ. 8ಕ್ಕಿಂತ ಹೆಚ್ಚು ಹೆಚ್ಚುವರಿ ಮತ ಬಂದರೆ ಮಾತ್ರ ಕಾಂಗ್ರೆಸ್ ಅಭ್ಯರ್ಥಿ ಸುರಕ್ಷಿತವಾಗಿ ಗೆಲುವು ಸಾಧಿಸಲು ಸಾಧ್ಯ. ಕೇವಲ ಮೂರ್ನಾಲ್ಕು ಮತಗಳು ಬಂದರೆ ಕಾಂಗ್ರೆಸ್‌ಗೆ ಸೋಲು ನಿಶ್ಚಿತ

ಬಿಜೆಪಿಯಲ್ಲಿ ಮೊದಲ ಅಭ್ಯರ್ಥಿಗಳ ಗೆಲುವಿನ ನಂತರ 32 ಉಳಿಕೆ ಮತ ಇರುತ್ತವೆ. ತಮಗೆ 50 ಶಾಸಕರ ಮತ ಹಂಚಿಕೆ ಮಾಡುವಂತೆ ನಿರ್ಮಲಾ ಸೀತರಾಮನ್ ಮನವಿ ಮಾಡಿದ್ದಾರೆ. 47ಕ್ಕಿಂತ ಹೆಚ್ಚು ಮತ ಬಂದರೆ 5 ಹೆಚ್ಚುವರಿ ಮತಗಳನ್ನು ಮೂರನೇ ಅಭ್ಯರ್ಥಿಗೆ ವರ್ಗಾವಣೆ ಮಾಡಲಾಗುತ್ತದೆ. ಯಾವುದೇ ಮತಗಳು ಅಸಿಂಧು ಆಗದಿದ್ದರೆ 3ನೇ ಅಭ್ಯರ್ಥಿಗೆ 32 ಮತಗಳು ಸಿಗುತ್ತವೆ.

ಕ್ರಾಸ್ ವೋಟ್ ಆಗದಿದ್ದರೆ ಎರಡನೇ ಸ್ಥಾನದಲ್ಲಿರುವ ಮನ್ಸೂರ್ ಖಾನ್, ಮೊದಲ ಸ್ಥಾನದಲ್ಲಿ ಕುಪೇಂದ್ರ ರೆಡ್ಡಿ, ಲೇಹರ್‌ಸಿಂಗ್ ಸಮಬಲ ಸಾಧಿಸಲಿದ್ದಾರೆ. ಸ್ಪರ್ದೆಯಿಂದ ಕಾಂಗ್ರೆಸ್‌ ಅಭ್ಯರ್ಥಿ ಎಲಿಮೇನೆಟ್ ಆಗಬಹುದು. ನಂತರ ಮೊದಲ ಸ್ಥಾನದಲ್ಲಿರುವ ಇಬ್ಬರ ಮತ ಎಣಿಕೆ ನಡೆಯಬೇಕಿದೆ. ಎರಡನೇ ಪ್ರಾಶಸ್ತ್ಯ ಮತಗಳ ಮೂಲಕ ಬಿಜೆಪಿಗೆ ಗೆಲುವಿನ ಅವಕಾಶ ಲಭ್ಯವಾಗಲಿದೆ.

ಪಕ್ಷಗಳ ಬಲಾಬಲ

ರಾಜ್ಯಸಭಾ ಚುನಾವಣೆಯಲ್ಲಿ ಬಿಜೆಪಿಗೆ 119, ಕಾಂಗ್ರೆಸ್​ಗೆ 69, ಜೆಡಿಎಸ್​ಗೆ 32, ಪಕ್ಷೇತರರಿಗೆ ಎರಡು, ಬಿಎಸ್​ಪಿಗೆ ಒಂದು ಮತ್ತು ಸ್ಪೀಕರ್ ಹಾಗೂ ನಾಮನಿರ್ದೇಶನ ಸದಸ್ಯರಿಗೆ ತಲಾ ಒಂದು ಮತ ಇರುತ್ತದೆ. ಈ ಪೈಕಿ 119 ಸದಸ್ಯ ಬಲದ ಆಡಳಿತ ಪಕ್ಷ ಬಿಜೆಪಿಗೆ ಕೊಳ್ಳೇಗಾಲ ಕ್ಚೇತ್ರದ ಉಚ್ಚಾಟಿತ ಬಿಎಸ್​ಪಿ ಶಾಸಕ ಎನ್. ಮಹೇಶ್ ಸಹ ಸದಸ್ಯರಾಗಿ ಸೇರ್ಪಡೆಯಾಗಿದ್ದಾರೆ. ಇದರ ಜೊತೆಗೆ ಸ್ಪೀಕರ್ ಮತ್ತು ಮುಳಬಾಗಿಲು ಕ್ಷೇತ್ರದ ಪಕ್ಷೇತರ ಶಾಸಕ ಎಚ್. ನಾಗೇಶ್ ಸೇರಿ ಒಟ್ಟು 122 ಮತಗಳಿವೆ.

ಕಾಂಗ್ರೆಸ್ ಪಕ್ಷಕ್ಕೆ 69 ಶಾಸಕರ ಜೊತೆಗೆ ಹೊಸಕೋಟೆ ಕ್ಷೇತ್ರದ ಪಕ್ಷೇತರ ಶಾಸಕ ಶರತ್ ಬಚ್ಚೇಗೌಡ ಸಹ ಸದಸ್ಯರಾಗಿದ್ದು ಒಟ್ಟು 70 ಮತಗಳಿವೆ. ಜೆಡಿಎಸ್ ಬಳಿ ಒಟ್ಟು 32 ಮತಗಳಿದ್ದು, ನಾಮ ನಿರ್ದೇಶಿತ ಸದಸ್ಯೆ ವಿನಿಶಾ ನೀರೋ ಮತದಾನದ ಹಕ್ಕು ಹೊಂದಿಲ್ಲ.

45 ಮೊದಲ ಪ್ರಾಶಸ್ತ್ಯದ ಮತಗಳ ಹಂಚಿಕೆ ಮೇಲೆ‌ ಬಿಜೆಪಿಯ ಮೊದಲನೇ ಅಭ್ಯರ್ಥಿ ನಿರ್ಮಲಾ ಸೀತಾರಾಮನ್, ಕಾಂಗ್ರೆಸ್​ನ ಮೊದಲನೇ ಅಭ್ಯರ್ಥಿ ಜೈರಾಂ ರಮೇಶ್ ಮತ್ತು ಬಿಜೆಪಿಯ ಎರಡನೇ ಅಭ್ಯರ್ಥಿ ಜಗ್ಗೇಶ್ ಗೆಲವು ಖಚಿತವಾಗಿದೆ. ಆದರೆ ನಾಲ್ಕನೇ ಸ್ಥಾನಕ್ಕಾಗಿ ಬಿಜೆಪಿ ಮೂರನೇ ಅಭ್ಯರ್ಥಿ ಲೆಹರ್ ಸಿಂಗ್ ಸಿರೋಯಾ, ಕಾಂಗ್ರೆಸ್ ಎರಡನೇ ಅಭ್ಯರ್ಥಿ ಮನ್ಸೂರ್ ಖಾನ್ ಮತ್ತು ಜೆಡಿಎಸ್ ಅಭ್ಯರ್ಥಿ ಕುಪೇಂದ್ರ ರೆಡ್ಡಿ ಪೈಪೋಟಿಯಲ್ಲಿದ್ದಾರೆ‌.

ಎರಡು ಕಂಪಾರ್ಟ್​ಮೆಂಟ್

ರಾಜ್ಯಸಭೆ ಚುನಾವಣೆ ಮತದಾನಕ್ಕೆ ವಿಧಾನಸೌಧದಲ್ಲಿ ಸಿದ್ಧತೆ ಪೂರ್ಣಗೊಂಡಿದೆ. ಶಾಸಕರು ಮತ ಚಲಾಯಿಸಲು ಎರಡು ಕಂಪಾರ್ಟ್​ಮೆಂಟ್​ಗಳನ್ನು ರೂಪಿಸಲಾಗಿದೆ. ಬಿಜೆಪಿ, ಕಾಂಗ್ರೆಸ್, ಜೆಡಿಎಸ್​ನ​ ಅಧಿಕೃತ ಪ್ರತಿನಿಧಿಗೆ ಕಂಪಾರ್ಟ್​ಮೆಂಟ್​ ಕೊಡಲಾಗುತ್ತದೆ. ಪಕ್ಷದ ಪ್ರತಿನಿಧಿಗೆ ತೋರಿಸಿಯೇ ಶಾಸಕರು ಮತ ಹಾಕಬೇಕು. ಕೊನೆಯಲ್ಲಿ ಮತಪೆಟ್ಟಿಗೆಯನ್ನು ಚುನಾವಣಾಧಿಕಾರಿಗಳು ಇರಿಸಿದ್ದಾರೆ. ಸಹಾಯಕ ಚುನಾವಣಾಧಿಕಾರಿ, ಚುನಾವಣಾ ಅಧಿಕಾರಿ, ಅಬ್ಸರ್ವರ್, ವಿಶೇಷ ಅಬ್ಸರ್ವರ್ ಇರುತ್ತಾರೆ. ಮತಪತ್ರಗಳ ವಿತರಣೆಗೆ ಒಬ್ಬ ಅಧಿಕಾರಿ ಇರುತ್ತಾರೆ. ಮತದಾನ ಕೇಂದ್ರದಲ್ಲಿ ಸಿಸಿ ಕ್ಯಾಮೆರಾ ಅಳವಡಿಸಲಾಗಿದೆ.

ಮತಗಳು ಆಗಬೇಕಾದರೆ ಅನುಸರಿಸಬೇಕಾದ 13 ಅಂಶಗಳ ಬಗ್ಗೆ ಸಿಬ್ಬಂದಿ ಫಲಕ ಅಳವಡಿಸಿದ್ದಾರೆ. ಇದರಲ್ಲಿ ಮತ ಹೇಗೆ ಸಿಂಧುವಾಗಲಿದೆ ಎಂಬ 7 ಅಂಶಗಳ ವಿವರಣೆ ಇದೆ.

ಕರ್ನಾಟಕದ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ. ದೇಶದ ಇತರ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ ಪ್ರಮುಖ  ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 3:33 pm, Thu, 9 June 22

ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ