ಬೆಂಗಳೂರು: ತನ್ನ 20 ವರ್ಷ ವಯಸ್ಸಿನಲ್ಲೇ ರೌಡಿಶೀಟರ್ ಆಗಿ ಹೆಸರು ಪಡೆದಿದ್ದ ಸೈಲೆಂಟ್ ಸುನೀಲ್(Silent Sunila) ಪಾರಿವಾಳ ಟೂರ್ನಮೆಂಟ್ನಲ್ಲಿ(Pigeon Tournament) ಶಾಂತಿ ಮಂತ್ರ ಜಪಿಸಿದ್ದಾರೆ. ಸದ್ಯ ಸೈಲೆಂಟ್ ಸುನೀಲನ ಭಾಷಣದ ವಿಡಿಯೋ ವೈರಲ್ ಆಗುತ್ತಿದೆ. ಬಸವನಗುಡಿ ಪೊಲೀಸರು ವೈರಲ್ ಆದ ವಿಡಿಯೋ ಸಂಬಂಧ ಪರಿಶೀಲನೆಗಿಳಿದಿದ್ದಾರೆ.
ಬಸವನಗುಡಿಯಲ್ಲಿ ನಡೆದಿದೆ ಎನ್ನಲಾದ ಪಾರಿವಾಳ ಟೂರ್ನಿಮೆಂಟ್ನಲ್ಲಿ ಸೈಲೆಂಟ್ ಸುನೀಲ ಕೂಡ ಭಾಗಿಯಾಗಿದ್ದ. ಈ ವೇಳೆ ರೌಡಿಶೀಟರ್ ಬಾಯಲ್ಲಿ ಉಪದೇಶದ ಮಾತುಗಳು ಹೊರ ಬಿದ್ದಿವೆ. ಆಸ್ತಿ ಸಮಸ್ಯೆ, ಏನೇ ಸಮಸ್ಯೆ ಇದ್ರೂ ಹೇಳಿ ಕೂತು ಬಗೆಹರಿಸೋಣ. ಹೆದರಿಸಿ ಬೆದರಿಸಿ ಮಾಡೋದೆಲ್ಲ ಮಾಡ್ಬೇಡಿ ಎಂದು ಸೈಲೆಂಟ್ ಸುನೀಲ ಹೇಳಿರುವ ಭಾಷಣದ ವಿಡಿಯೋ ವೈರಲ್ ಆಗಿದೆ. ರೌಡಿಶೀಟರ್ ಬಾಯಲ್ಲಿ ಸಂಧಾನದ ಮಾತುಗಳು ಹೇಳಿ ಬಂದಿದ್ದು ವಿಡಿಯೋ ನೋಡಿದವರು ಶಾಕ್ ಆಗಿದ್ದಾರೆ.
ಇದನ್ನೂ ಓದಿ: ರಾಜಕೀಯ ಪ್ರವೇಶಕ್ಕೆ ಸಜ್ಜಾದ ಕುಖ್ಯಾತ ರೌಡಿ ಸೈಲೆಂಟ್ ಸುನೀಲ: ಪಾತಕ ಲೋಕದಲ್ಲಿ ಹೀಗಿದೆ ಇವನ ಹೆಜ್ಜೆಗುರುತು
ಜಯರಾಜ್, ಕೊತ್ವಾಲ್ ಕಾಲದಿಂದಲೂ ನಡೆಯುತ್ತಿರುವ ಪಾರಿವಾಳ ಟೂರ್ನಿಮೆಂಟ್ನಲ್ಲಿ ಭಾಗಿಯಾಗಿದ್ದ ವೇಳೆ ಸೈಲೆಂಟ್ ಸುನೀಲ್ ಸಭಿಕರನ್ನುದ್ದೇಶಿಸಿ ಭಾಷಣ ಮಾಡಿದ್ರು. ಈ ವೇಳೆ, ಯಾರಿಗೆ ಏನೇ ತೊಂದ್ರೆ ಇದ್ರೂ, ಪಾರಿವಾಳ ಹಾರಿಸೋ ವಿಚಾರವಾಗಲಿ, ಇನ್ನೊಂದು ವಿಚಾರದಲ್ಲಿ ಆಗಲಿ ಏನೇ ಇದ್ರೂ ಹೇಳಿ ಕೂತು ಬಗೆಹರಿಸೋಣ. ಹೆದರಿಸಿ ಬೆದರಿಸಿ ಮಾಡೋದೆಲ್ಲ ಮಾಡ್ಬೇಡಿ. ಪರಿವಾಳ ಆಕಾಶದಲ್ಲಿ ಎಷ್ಟು ಹೊತ್ತು ಹಾರಾಡುತ್ತೆ ಎಂಬುದರ ಮೇಲೆ ವಿನ್ನರ್ಸ್ ಗಳನ್ನ ಸೆಲೆಕ್ಟ್ ಮಾಡಲಾಗುತ್ತೆ.
ಅಲ್ಲಿ ಇಲ್ಲಿ ಕರೆದು ಹೆದರಿಸಿ, ಬೆದರಿಸಿ ದಯವಿಟ್ಟು ನ್ಯಾಯಾ ಮಾಡೋಕೆ ಹೋಗಬೇಡಿ. ಯಾಕಂದ್ರೆ ಪಾರಿವಾಳ ಹಾರಿಸೋದು ಅಂದ್ರೆ ಹಣಕಾಸಿನ ಸಂಪಾದನೆ ಅಲ್ಲ. ಟೈಮ್ ವೇಸ್ಟ್ ಆಗುತ್ತೆ, ಮುಂಚೆನೂ ವೇಸ್ಟ್ ಆಗುತ್ತಿತ್ತು. ಈಗ ಅದೆಲ್ಲಾ ನಡೆಯೋದಿಲ್ಲ ಯಾಕಂದ್ರೆ ಈಗ ಟೈಮ್ ಸಿಗಲ್ಲ ಮನುಷ್ಯನಿಗೆ. ಮತ್ತೆ ಅಷ್ಟು ಸರಿಯಾಗಿ ಯಾರು ಇರೋದಿಲ್ಲ. ಅಷ್ಟು ಇದ್ರೂ ಶೋಕಿಗೋಸ್ಕರ ಮಾಡ್ತಾರೆ. ದಯವಿಟ್ಟು ಅದನ್ನ ನಡೆಸಿಕೊಂಡು ಹೋಗಿ. ಉಳಿಸಿಕೊಳ್ಳೋಣ ಎಂದು ಪರಿವಾಳ ಸ್ಪರ್ಧೆಯ ಬಗ್ಗೆ ಸೈಲೆಂಟ್ ಸುನೀಲ್ ಸಂಧಾನದ ಜಪ ಮಾಡಿದ್ದಾರೆ. ಸದ್ಯ ಈ ವಿಡಿಯೋ ವೈರಲ್ ಆಗಿದೆ. 80- 90ರ ದಶಕದಲ್ಲಿ ರೌಡಿಶೀಟರ್ಗಳು ಪಾರಿವಾಳ ಟೂರ್ನಿಮೆಂಟ್ ನಡೆಸಿ ಏರಿಯಾಗಳನ್ನ ಹಂಚಿಕೊಳ್ತಿದ್ದರು.
ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 2:46 pm, Wed, 25 January 23