ಎನ್. ಆರ್. ರಮೇಶ್ ಮತ್ತೊಂದು ಬಾಂಬ್: ಗೌರವ್ ಗುಪ್ತಾ-ಮಂಜೇಶ್ ವಿರುದ್ಧ ದೂರು; ಗುಪ್ತಾ ಅಧಿಕಾರ ಬದಲಿಸಲು ಆಗ್ರಹ

ಬೆಂಗಳೂರು ದಕ್ಷಿಣ ಜಿಲ್ಲಾ ಬಿಜೆಪಿ ಘಟಕದ ಅಧ್ಯಕ್ಷರು ಮತ್ತು ಬಿಬಿಎಂಪಿ ಆಡಳಿತ ಪಕ್ಷದ ಮಾಜಿ ನಾಯಕ ಎನ್. ಆರ್. ರಮೇಶ್, ಆಯುಕ್ತ ಗೌರವ್ ಗುಪ್ತಾ ಮತ್ತು ಮಂಜೇಶ್ ವಿರುದ್ಧ ದೂರು ದಾಖಲಿಸಿದ್ದಾರೆ.

ಎನ್. ಆರ್. ರಮೇಶ್ ಮತ್ತೊಂದು ಬಾಂಬ್: ಗೌರವ್ ಗುಪ್ತಾ-ಮಂಜೇಶ್ ವಿರುದ್ಧ ದೂರು; ಗುಪ್ತಾ ಅಧಿಕಾರ ಬದಲಿಸಲು ಆಗ್ರಹ
ಎನ್. ಆರ್. ರಮೇಶ್
Follow us
TV9 Web
| Updated By: ಆಯೇಷಾ ಬಾನು

Updated on:Nov 24, 2021 | 2:40 PM

ಬೆಂಗಳೂರು: ಬಿಬಿಎಂಪಿ ಮುಖ್ಯ ಆಯುಕ್ತರ ವಿರುದ್ಧ ಮತ್ತೊಂದು ಗಂಭೀರ ಆರೋಪ ಕೇಳಿ ಬಂದಿದೆ. ಮುಖ್ಯ ಆಯುಕ್ತ ಗೌರವ್ ಗುಪ್ತಾ ಮತ್ತು ಜಂಟಿ ನಿರ್ದೇಶಕರು (ಉತ್ತರ) ನಗರ ಯೋಜನೆ ಮಂಜೇಶ್ ವಿರುದ್ಧ ACB ಮತ್ತು BMTF ಗಳಲ್ಲಿ ಅಧಿಕಾರ ದುರುಪಯೋಗ, ವಂಚನೆ, ಭ್ರಷ್ಟಾಚಾರ ಪ್ರಕರಣ ಸಂಬಂಧ ದೂರುಗಳು ದಾಖಲಾಗಿವೆ.

ಬೆಂಗಳೂರು ದಕ್ಷಿಣ ಜಿಲ್ಲಾ ಬಿಜೆಪಿ ಘಟಕದ ಅಧ್ಯಕ್ಷರು ಮತ್ತು ಬಿಬಿಎಂಪಿ ಆಡಳಿತ ಪಕ್ಷದ ಮಾಜಿ ನಾಯಕ ಎನ್. ಆರ್. ರಮೇಶ್, ಆಯುಕ್ತ ಗೌರವ್ ಗುಪ್ತಾ ಮತ್ತು ಮಂಜೇಶ್ ವಿರುದ್ಧ ದೂರು ದಾಖಲಿಸಿದ್ದಾರೆ. ನ್ಯಾಯಾಲಯದ ಆದೇಶವೊಂದನ್ನು ವಿಭಾಗೀಯ ಪೀಠದಲ್ಲಿ ಪ್ರಶ್ನಿಸಿ, ತಡೆಯಾಜ್ಞೆ ತೆಗೆದುಕೊಳ್ಳುವ ಹತ್ತಾರು ಅವಕಾಶಗಳಿದ್ದರೂ ಸಹ ಪಾಲಿಕೆಯ ಮುಖ್ಯ ಆಯುಕ್ತರು ಬಿಲ್ಡರ್ಗಳ ಪರವಾದ ಆದೇಶವನ್ನು ಹೊರಡಿಸುವ ಮೂಲಕ ಪಾಲಿಕೆಗೆ ಪ್ರತೀ ವರ್ಷ ನೂರಾರು ಕೋಟಿ ವಂಚನೆಯಾಗುವ ನಿರ್ಣಯ ತೆಗೆದುಕೊಂಡು, ಹತ್ತಾರು ಕೋಟಿ ರೂಪಾಯಿ ಭ್ರಷ್ಟಾಚಾರ ನಡೆಸಿದೆ ಎಂದು ಎನ್. ಆರ್. ರಮೇಶ್ ದೂರು ದಾಖಲಿಸಿದ್ದಾರೆ.

ಎನ್. ಆರ್. ರಮೇಶ್ ನೀಡಿರುವ ದೂರಿನಲ್ಲೇನಿದೆ? ಬಿಲ್ಡರ್ಗಳ ಮಾಫಿಯಾ ಜೊತೆ ಶಾಮೀಲಾಗಿ ಪಾಲಿಕೆಗೆ ಮಹಾ ವಂಚನೆಯ ಪ್ರಯತ್ನ ನಡೆದಿದೆ. ಬಿಬಿಎಂಪಿಗೆ ನಗರ ಯೋಜನೆ ಇಲಾಖೆಯಿಂದ ಮಂಜೂರಾಗುವ ನಕ್ಷೆ ಮಂಜೂರಾತಿ ಶುಲ್ಕವು ಪಾಲಿಕೆಗೆ 3ನೇ ಅತಿ ದೊಡ್ಡ ಆದಾಯದ ಮೂಲವಾಗಿದ್ದು, ವರ್ಷಪೂರ್ತಿ ಸರಾಸರಿ 600 ಕೋಟಿ ರೂ ಆದಾಯವನ್ನು ಪಾಲಿಗೆ ತೆಗೆದುಕೊಳ್ಳುತ್ತಿದೆ. ನಕ್ಷೆ ಮಂಜೂರಾತಿ ಶುಲ್ಕವನ್ನು ಶೇ. 78% ರಷ್ಟು ಕಡಿತಗೊಳಿಸುವ ಹುನ್ನಾರ ನಡೆದಿದೆ. ಸೀಮಿತ ವಾರ್ಷಿಕ ಆದಾಯವನ್ನು ಹೊಂದಿರುವ ಪಾಲಿಕೆಯ ಆರ್ಥಿಕ ವ್ಯವಸ್ಥೆಯನ್ನೇ ಬುಡ ಮೇಲು ಮಾಡಲು ಹೊರಟಿರುವುದು ವಿರೋಧೀ ನಿರ್ಣಯ.

ಉಚ್ಛ ನ್ಯಾಯಾಲಯದ ಆದೇಶವನ್ನೇ ನೆಪವಾಗಿಟ್ಟುಕೊಂಡು ಬಿಲ್ಡರ್ ಮಾಫಿಯಾದೊಂದಿಗೆ ಸೇರಿಕೊಂಡು ಮಹಾಸಂಚು ರೂಪಿಸಲಾಗುತ್ತಿದೆ. ನಕ್ಷೆ ಮಂಜೂರಾತಿ ಶುಲ್ಕ ವಸೂಲು ಮಾಡಲು ಪಾಲಿಕೆಗೆ ಅವಕಾಶ ನೀಡಬಾರದೆಂದು ಹತ್ತಕ್ಕೂ ಹೆಚ್ಚು ಪ್ರತಿಷ್ಟಿತ ಬಿಲ್ಡರ್ ಗಳಿಂದ ಉಚ್ಛ ನ್ಯಾಯಾಲಯದಲ್ಲಿ 10 ಕ್ಕೂ ಹೆಚ್ಚು PIL ಗಳು ಸಲ್ಲಿಕೆಯಾಗಿವೆ. ಎಲ್ಲ PIL ಗಳನ್ನು ಒಂದುಗೂಡಿಸಿ (WP # 4601/2020) ಉಚ್ಛ ನ್ಯಾಯಾಲಯವು ಆದೇಶವೊಂದನ್ನು ನೀಡಿ, ಯಾವುದೇ ಬಿಲ್ಡರ್ಗಳು ಬಿಬಿಎಂಪಿ ನಕ್ಷೆ ಮಂಜೂರಾತಿ ಶುಲ್ಕವನ್ನು ಪಾವತಿಸುವ ಅಗತ್ಯವಿಲ್ಲ ಎಂಬ ತೀರ್ಪು ನೀಡಿದೆ.

ಬಿಬಿಎಂಪಿ ಕಾನೂನು ಕೋಶದ ಅತ್ಯಂತ ದುರ್ಬಲ ವಕೀಲರು ಸೂಕ್ತ ದಾಖಲಾತಿಗಳನ್ನು ನ್ಯಾಯಾಲಯಕ್ಕೆ ಒದಗಿಸದೆ ಮತ್ತು ಅಂಕಿ ಅಂಶಗಳ ಸಹಿತ ವಾಸ್ತವ ಸಂಗತಿಗಳನ್ನು ನ್ಯಾಯಾಧೀಶರಿಗೆ ಮನವರಿಕೆ ಮಾಡಿಕೊಡುವಲ್ಲಿ ವಿಫಲರಾಗಿದ್ದಾರೆ. ಪಾಲಿಕೆಯ ವಕೀಲರ ಉದಾಸೀನ ಮತ್ತು ವಸ್ತು ಸ್ಥಿತಿಯ ವಾಸ್ತವ ವಿವರಗಳನ್ನು ನ್ಯಾಯಾಲಯಕ್ಕೆ ಒದಗಿಸದೇ ಇರುವ ಕಾರಣ ಉಚ್ಛ ನ್ಯಾಯಾಲಯದಲ್ಲಿ ಪಾಲಿಕೆಗೆ ತೀವ್ರ ಹಿನ್ನಡೆಯಾಗಿದೆ. 04/08/2021 ರಂದು “ನ್ಯಾಯಾಲಯದ ಮುಂದಿನ ಆದೇಶದವರೆಗೆ ಪಾಲಿಕೆಯು ಬಿಲ್ಡರ್ ಗಳಿಂದ ನಕ್ಷೆ ಮಂಜೂರಾತಿ ಶುಲ್ಕ ವಸೂಲಿ ಮಾಡುವಂತಿಲ್ಲ” ಎಂದು ನ್ಯಾಯಾಲಯದ ಆದೇಶ ನೀಡಿದೆ.

ಉಚ್ಛ ನ್ಯಾಯಾಲಯದ ಆದೇಶದಿಂದ ಪಾಲಿಕೆಯ ಆರ್ಥಿಕ ವ್ಯವಸ್ಥೆಗೆ ದೊಡ್ಡ ಹೊಡೆತ ಬೀಳುತ್ತದೆ ಎಂಬ ಅಂಶ ಅರಿವಿದ್ದರೂ ಸಹ ಮುಖ್ಯ ಆಯುಕ್ತರ ದಿವ್ಯ ನಿರ್ಲಕ್ಷ್ಯ ತೋರಿದ್ದಾರೆ. ಉಚ್ಛ ನ್ಯಾಯಾಲಯದ ಆದೇಶಕ್ಕೆ ತಡೆಯಾಜ್ಞೆ ತರುವ ಅಥವಾ ವಿಭಾಗೀಯ ಪೀಠದಲ್ಲಿ ಮೇಲ್ಮನವಿ ಸಲ್ಲಿಸುವ ಅವಕಾಶಗಳಿದ್ದರೂ ಸಹ ಮುಖ್ಯ ಆಯುಕ್ತರು Builder Mafia ದೊಂದಿಗೆ ಸಂಧಾನ ಸಭೆ ನಡೆಸಿದ್ದಾರೆ. ಪಾಲಿಕೆಯ ನಗರ ಯೋಜನೆ (ಉತ್ತರ) ಜಂಟಿ ನಿರ್ದೇಶಕರಾಗಿರುವ ಮಹಾ ಭ್ರಷ್ಟ ಮಂಜೇಶ್ ಮಧ್ಯಸ್ಥಿಕೆಯಲ್ಲಿ ಬಿಲ್ಡರ್ ಮಾಫಿಯಾದೊಂದಿಗೆ ಮುಖ್ಯ ಆಯುಕ್ತರು ನಿಯಮ ಬಾಹಿರ ಸಂಧಾನ ನಡೆಸಿದ್ದಾರೆ. ಪ್ರಸ್ತುತ ಚಾಲ್ತಿಯಲ್ಲಿರುವ ನಕ್ಷೆ ಮಂಜೂರಾತಿ ಶುಲ್ಕದ ಬದಲಾಗಿ 2008 ರಲ್ಲಿ ಜಾರಿಯಲ್ಲಿದ್ದ ಪ್ರಮಾಣದಷ್ಟು ಮಾತ್ರವೇ ನಕ್ಷೆ ಮಂಜೂರಾತಿ ಶುಲ್ಕ ವಸೂಲಿಗೆ ಆದೇಶ.

ಈಗಿನ ಪ್ರಮಾಣದ ಶೇ. 22% ರಷ್ಟು ಶುಲ್ಕವನ್ನು ಮಾತ್ರವೇ 2008 ರಲ್ಲಿ ಸಂಗ್ರಹಿಸಲಾಗುತ್ತಿತ್ತು. ಇದರಿಂದಾಗಿ ಪಾಲಿಕೆಯು ಪ್ರಸ್ತುತ ನಕ್ಷೆ ಮಂಜೂರಾತಿ ಶುಲ್ಕದ ರೂಪದಲ್ಲಿ ವಾರ್ಷಿಕವಾಗಿ ಸಂಗ್ರಹಿಸುತ್ತಿರುವ ಸುಮಾರು 600 ಕೋಟಿ ರೂ. ಗಳಷ್ಟು ಆದಾಯದ ಬದಲಾಗಿ ಕೇವಲ 130 ಕೋಟಿ ರೂ. ಗಳಷ್ಟು ಮಾತ್ರವೇ ಸಂಗ್ರಹಿಸಲು ಸಾಧ್ಯವಾಗುತ್ತದೆ. ಈ ಸಂಬಂಧ ಪಾಲಿಕೆಯ ಇತಿಹಾಸದಲ್ಲಿಯೇ ಪ್ರಥಮ ಬಾರಿಗೆ ಆಯುಕ್ತರೊಬ್ಬರು ದಿನಾಂಕವನ್ನು ನಮೂದಿಸದೆಯೇ ಮತ್ತು ರವಾನೆಯ ಸಂಖ್ಯೆ (Dispatch Number) ನಮೂದಿಸದೆಯೇ ಮುಖ್ಯ ಆಯುಕ್ತರು ಆದೇಶವನ್ನು ಹೊರಡಿಸಿದ್ದಾರೆ. ಮುಂದೆ ನ್ಯಾಯಾಲಯವು ನೀಡುವ ಆದೇಶಕ್ಕೆ ಬದ್ಧರಾಗಿರುವುದಾಗಿ ಬಿಲ್ಡರ್ ಗಳು ಪ್ರಮಾಣ ಪತ್ರವನ್ನು ನೀಡಿ ನಕ್ಷೆ ಮಂಜೂರಾತಿ ಪಡೆಯಬಹುದು ಎಂಬ ವಿಚಿತ್ರ ಆದೇಶ ಇದಾಗಿದೆ. ನ್ಯಾಯಾಲಯದ ವಿಚಾರಣೆ – ವಾದ / ವಿವಾದ ಮುಗಿದು ಸ್ಪಷ್ಟವಾದ ಆದೇಶ ಹೊರ ಬರಲು ಕನಿಷ್ಠ ನಾಲ್ಕೈದು ವರ್ಷಗಳಾದರೂ ಬೇಕಾಗುತ್ತದೆ.

ಬಿಲ್ಡರ್ ಗಳು ಒಂದೆರಡು ವರ್ಷಗಳ ಅವಧಿಯಲ್ಲೇ ತಮ್ಮ ಕಟ್ಟಡಗಳ ನಿರ್ಮಾಣ ಕಾರ್ಯ ಪೂರ್ಣಗೊಳಿಸಿ ಗ್ರಾಹಕರಿಗೆ ಮಾರಾಟ ಮಾಡಿ, ಜಾಗ ಖಾಲಿ ಮಾಡಿರುತ್ತಾರೆಯಾದ್ದರಿಂದ, ಅವರಿಂದ ಮುಂದೆ ಉಳಿದ ನಕ್ಷೆ ಮಂಜೂರಾತಿ ಶುಲ್ಕ ವಸೂಲಾತಿ ಕಾರ್ಯ ಸಾಧ್ಯವೇ ಇಲ್ಲ. ಮುಖ್ಯ ಆಯುಕ್ತರು ಮಂಜೇಶ್ ಮೂಲಕ ಬಿಲ್ಡರ್ ಮಾಫಿಯಾದವರಿಂದ ಹತ್ತಾರು ಕೋಟಿ ರೂಪಾಯಿ ಕಿಕ್ ಬ್ಯಾಕ್ ಪಡೆದಿದ್ದಾರೆ ಎಂದು ಎನ್. ಆರ್. ರಮೇಶ್ ಗಂಭೀರ ಆರೋಪ ಮಾಡಿದ್ದಾರೆ.

ಮುಖ್ಯ ಆಯುಕ್ತರು ನಿರಂತರವಾಗಿ ಕೇವಲ ತಮ್ಮ ಸ್ವ ಹಿತಾಸಕ್ತಿಗಾಗಿ ಪಾಲಿಕೆಯನ್ನು ಆರ್ಥಿಕ ದುಸ್ಥಿತಿಗೆ ಕೊಂಡೊಯ್ಯುತ್ತಿದ್ದಾರೆ. ಕೂಡಲೇ ನಿಪುಣ ಹಿರಿಯ ವಕೀಲರನ್ನು ನಿಯೋಜನೆ ಮಾಡಿ, ಉಚ್ಛ ನ್ಯಾಯಾಲಯದ 04/08/2021 ರ ಆದೇಶಕ್ಕೆ ತಡೆಯಾಜ್ಞೆ ತರುವಂತೆ ಅಥವಾ ವಿಭಾಗೀಯ ಪೀಠದಲ್ಲಿ ಮೇಲ್ಮನವಿ ಸಲ್ಲಿಸುವಂತೆ ಆಗ್ರಹಿಸಿದ್ದಾರೆ. ಮುಖ್ಯ ಆಯುಕ್ತರ ಬಿಬಿಎಂಪಿ ವಿರೋಧಿ ನಡೆಯ ಬಗ್ಗೆ ಆಡಳಿತಾಧಿಕಾರಿಗಳಿಗೆ ದಾಖಲೆಗಳನ್ನು ನೀಡುತ್ತಿದ್ದಂತೆಯೇ, ನಿಯಮ ಬಾಹಿರವಾಗಿ ನೀಡಿದ್ದ ಆದೇಶದ ಪತ್ರವನ್ನು ಕಡತದಿಂದ ತೆಗೆದು ಹಾಕಿರುವ ಮುಖ್ಯ ಆಯುಕ್ತರ ನಡೆ ಹಲವಾರು ಅನುಮಾನಗಳಿಗೆ ಕಾರಣವಾಗಿದೆ. ನಿರಂತರವಾಗಿ ಹಲವಾರು ಆರೋಪಗಳಿಗೆ ಗುರಿಯಾಗುತ್ತಿರುವ ಗೌರವ್ ಗುಪ್ತಾರನ್ನು ಕೂಡಲೇ ಪಾಲಿಕೆಯ ಮುಖ್ಯ ಆಯುಕ್ತರ ಸ್ಥಾನದಿಂದ ಬದಲಿಸಲು N. R. ರಮೇಶ್ ಮುಖ್ಯಮಂತ್ರಿಗಳಿಗೆ ಆಗ್ರಹಿಸಿದ್ದಾರೆ.

ಇದನ್ನೂ ಓದಿ: IND vs NZ: ಕಿವೀಸ್ ವಿರುದ್ಧದ ಮೊದಲ ಟೆಸ್ಟ್​ಗೆ ಭಾರತದ ಮಧ್ಯಮ ಕ್ರಮಾಂಕಕ್ಕೆ ಹೊಸ ಮುಖ

Published On - 2:34 pm, Wed, 24 November 21

ರಸ್ತೆ ತಡೆಗೋಡೆಯಿಲ್ಲದಿದ್ದರೆ ಬಸ್ಸು ಪ್ರಪಾತಕ್ಕೆ ಉರುಳುತಿತ್ತು!
ರಸ್ತೆ ತಡೆಗೋಡೆಯಿಲ್ಲದಿದ್ದರೆ ಬಸ್ಸು ಪ್ರಪಾತಕ್ಕೆ ಉರುಳುತಿತ್ತು!
ಕೆಪಿಸಿಸಿ ಅಧ್ಯಕ್ಷನನ್ನು ಬದಲಾಯಿಸುವುದು ಹೈಕಮಾಂಡ್​ಗೆ ಬಿಟ್ಟ ವಿಚಾರ: ಸಚಿವ
ಕೆಪಿಸಿಸಿ ಅಧ್ಯಕ್ಷನನ್ನು ಬದಲಾಯಿಸುವುದು ಹೈಕಮಾಂಡ್​ಗೆ ಬಿಟ್ಟ ವಿಚಾರ: ಸಚಿವ
ತಂದೆ ಮುಖ ನೋಡಿ ಅಳು ನಿಲ್ಲಿಸಲೇ ಇಲ್ಲ ಉಗ್ರಂ ಮಂಜು; ಎಮೋಷನಲ್ ಎಪಿಸೋಡ್
ತಂದೆ ಮುಖ ನೋಡಿ ಅಳು ನಿಲ್ಲಿಸಲೇ ಇಲ್ಲ ಉಗ್ರಂ ಮಂಜು; ಎಮೋಷನಲ್ ಎಪಿಸೋಡ್
ಪೊಲೀಸರ ಮೇಲೆ ಅಪಾರ ನಂಬಿಕೆಯಿದೆ, ಸಿಬಿಐ ತನಿಖೆ ಬೇಕಿಲ್ಲ: ಸಿದ್ದರಾಮಯ್ಯ
ಪೊಲೀಸರ ಮೇಲೆ ಅಪಾರ ನಂಬಿಕೆಯಿದೆ, ಸಿಬಿಐ ತನಿಖೆ ಬೇಕಿಲ್ಲ: ಸಿದ್ದರಾಮಯ್ಯ
ಸಂವಿಧಾನದ ಆಶಯಗಳಿಗೆ ಕಾಂಗ್ರೆಸ್​ನಿಂದ ಅಪಪ್ರಚಾರ: ಸಿಟಿ ರವಿ
ಸಂವಿಧಾನದ ಆಶಯಗಳಿಗೆ ಕಾಂಗ್ರೆಸ್​ನಿಂದ ಅಪಪ್ರಚಾರ: ಸಿಟಿ ರವಿ
ಯುವಕ ಯುವತಿಯರ ಜೊತೆ ಮಧ್ಯವಯಸ್ಕ ಮಹಿಳೆಯರೂ ಪಬ್​ಗೆ ಬಂದಿದ್ದರು
ಯುವಕ ಯುವತಿಯರ ಜೊತೆ ಮಧ್ಯವಯಸ್ಕ ಮಹಿಳೆಯರೂ ಪಬ್​ಗೆ ಬಂದಿದ್ದರು
ಹೊಸ ವರ್ಷಕ್ಕೆ ಸಿಹಿ ಸುದ್ದಿ ಕೊಟ್ಟ ಶಿವಣ್ಣ: ವಿಡಿಯೋ ನೋಡಿ
ಹೊಸ ವರ್ಷಕ್ಕೆ ಸಿಹಿ ಸುದ್ದಿ ಕೊಟ್ಟ ಶಿವಣ್ಣ: ವಿಡಿಯೋ ನೋಡಿ
ನ್ಯೂ ಈಯರ್ ರೆವೆಲ್ಲರ್​​ಗಳ ಅಮಲಿನ ಹಾವಭಾವಗಳು ನಗೆ ಹುಟ್ಟಿಸುವಂತಿದ್ದವು!
ನ್ಯೂ ಈಯರ್ ರೆವೆಲ್ಲರ್​​ಗಳ ಅಮಲಿನ ಹಾವಭಾವಗಳು ನಗೆ ಹುಟ್ಟಿಸುವಂತಿದ್ದವು!
ಗುಂಡಿನ ಮತ್ತೇ ಗಮ್ಮತ್ತು, ಗೆಳೆಯ ಹೊತ್ತೊಯ್ಯದಿದ್ದರೆ ಕಾದಿತ್ತು ಆಪತ್ತು
ಗುಂಡಿನ ಮತ್ತೇ ಗಮ್ಮತ್ತು, ಗೆಳೆಯ ಹೊತ್ತೊಯ್ಯದಿದ್ದರೆ ಕಾದಿತ್ತು ಆಪತ್ತು
ಕಂಠಮಟ್ಟ ಕುಡಿದು ರಸ್ತೆಯಲ್ಲಿ ಓಲಾಡುತ್ತಇತರರ ಕಣ್ಣಿಗೆ ಆಹಾರವಾದ ಯುವತಿಯರು
ಕಂಠಮಟ್ಟ ಕುಡಿದು ರಸ್ತೆಯಲ್ಲಿ ಓಲಾಡುತ್ತಇತರರ ಕಣ್ಣಿಗೆ ಆಹಾರವಾದ ಯುವತಿಯರು