AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪಾರ್ಕ್ ಒತ್ತುವರಿ ತೆರವುಗೊಳಿಸದ ಬಿಡಿಎಗೆ ಹೈಕೋರ್ಟ್ ತರಾಟೆ

ಒತ್ತುವರಿ ತೆರವುಗೊಳಿಸದ ಬಿಡಿಎ ಆಯುಕ್ತರನ್ನು ಅಮಾನತುಪಡಿಸುವುದಾಗಿ ಎಚ್ಚರಿಕೆ ನೀಡಿದೆ. ಈ ಮಧ್ಯೆ ಬಿಡಿಎ ವಕೀಲರು ಒತ್ತುವರಿ ತೆರವಿಗೆ ಕಾಲಾವಕಾಶ ನೀಡುವಂತೆ ಮನವಿ ಮಾಡಿದರು.

ಪಾರ್ಕ್ ಒತ್ತುವರಿ ತೆರವುಗೊಳಿಸದ ಬಿಡಿಎಗೆ ಹೈಕೋರ್ಟ್ ತರಾಟೆ
ಹೈಕೋರ್ಟ್
TV9 Web
| Updated By: sandhya thejappa|

Updated on: Nov 24, 2021 | 2:45 PM

Share

ಬೆಂಗಳೂರು: ಬಿಡಿಎ ಅನುಮೋದಿತ ಏರ್ ಕ್ರಾಫ್ಟ್ ಹೌಸಿಂಗ್ ಸೊಸೈಟಿ ಲೇಔಟ್​ನಲ್ಲಿ ಸಾರ್ವಜನಿಕ ಉದ್ಯಾನವನಗಳ ಒತ್ತುವರಿ ಕುರಿತು ಹೈಕೋರ್ಟ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ಲೇಔಟ್​ನ 39 ಪಾರ್ಕ್​ಗಳ ಪೈಕಿ ಬಹುತೇಕ ಪಾರ್ಕ್ ಒತ್ತುವರಿಯಾಗಿದೆ ಎಂದು ಬಿಡಿಎ ಸ್ವತಃ ವರದಿ ಸಲ್ಲಿಸಿದೆ. ಈವರೆಗೆ ಒತ್ತುವರಿ ತೆರವುಗೊಳಿಸದಿರಲು ಕಾರಣವೇನೆಂದು ಹೈಕೋರ್ಟ್ ಬಿಡಿಎಯನ್ನು ತರಾಟೆಗೆ ತೆಗೆದುಕೊಂಡಿದೆ. ಪಾರ್ಕ್ ನಲ್ಲಿ ಕಟ್ಟಡ ಕಟ್ಟಲು ಅನುಮತಿ ಕೊಟ್ಟವರಾರು? ಹೀಗೆ ಪಾರ್ಕ್ ಒತ್ತುವರಿ ಮಾಡಿ ನಿರ್ಮಿಸಿರುವ ಅಕ್ರಮ ಕಟ್ಟಡಗಳಿಗೆ ಹೊಣೆ ಯಾರು? ಕಟ್ಟಡ ನಿರ್ಮಿಸುವಾಗ ಬಿಡಿಎ ಅಧಿಕಾರಿಗಳು ಕಣ್ಮುಚ್ಚಿ ಕುಳಿತಿದ್ದರಾ ಎಂದು ಪ್ರಶ್ನಿಸಿದೆ.

ಒತ್ತುವರಿ ತೆರವುಗೊಳಿಸದ ಬಿಡಿಎ ಆಯುಕ್ತರನ್ನು ಅಮಾನತುಪಡಿಸುವುದಾಗಿ ಎಚ್ಚರಿಕೆ ನೀಡಿದೆ. ಈ ಮಧ್ಯೆ ಬಿಡಿಎ ವಕೀಲರು ಒತ್ತುವರಿ ತೆರವಿಗೆ ಕಾಲಾವಕಾಶ ನೀಡುವಂತೆ ಮನವಿ ಮಾಡಿದರು. ಪೊಲೀಸ್ ಭದ್ರತೆ ಪಡೆದು ಒತ್ತುವರಿ ತೆರವುಗೊಳಿಸಲಾಗುವುದು. ಹೈಕೋರ್ಟ್ ಆದೇಶ ಪಾಲಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದೆಂದು ಹೈಕೋರ್ಟ್ ಗೆ ಬಿಡಿಎ ವಕೀಲರು ಮನವಿ ಮಾಡಿದರು. ಕ್ರಮ ಕೈಗೊಂಡ ವರದಿ ಸಲ್ಲಿಸುವಂತೆ ಸೂಚಿಸಿದ ಹೈಕೋರ್ಟ್ ವಿಚಾರಣೆಯನ್ನು ಫೆಬ್ರವರಿ ಮೊದಲ ವಾರಕ್ಕೆ ಮುಂದೂಡಿದೆ.

ಸಿಂಗಸಂದ್ರದ ಮಂಜುನಾಥ್ ಎಸ್​ಕೆ ಎಂಬುವವರು ಹೈಕೋರ್ಟ್​ನಲ್ಲಿ ಪಿಐಎಲ್ ಸಲ್ಲಿಸಿದ್ದರು. ಈ ಹಿಂದೆ ಪಿಐಎಲ್ ವಿಚಾರಣೆ ನಡೆಸಿದ್ದ ಹೈಕೋರ್ಟ್ ವಿಭಾಗೀಯ ಪೀಠ ಲೇಔಟ್​ನಲ್ಲಿರುವ ಪಾರ್ಕ್​ಗಳ ಸರ್ವೆ ನಡೆಸುವಂತೆ ಸೂಚಿಸಿತ್ತು. ಸಿಂಗಸಂದ್ರ, ಕೂಡ್ಲು ಗ್ರಾಮಗಳಲ್ಲಿ ನಿರ್ಮಾಣವಾದ ಲೇಔಟ್​ನ ಸರ್ವೆ ನಡೆಸಿದ ಬಿಡಿಎ 39 ಪಾರ್ಕ್​ಗಳ ಪೈಕಿ ಬಹುತೇಕ ಪಾರ್ಕ್ ಒತ್ತುವರಿಯಾಗಿದೆ ಎಂದು ವರದಿ ನೀಡಿತ್ತು. 60 ದಿನಗಳಲ್ಲಿ ಕಾನೂನು ಪ್ರಕಾರ ಒತ್ತುವರಿ ತೆರವುಗೊಳಿಸುವಂತೆ ಹೈಕೋರ್ಟ್ ಬಿಡಿಎಗೆ ನಿರ್ದೇಶನ ನೀಡಿತ್ತು. ಪಾರ್ಕ್ ಜಾಗವನ್ನು ಸೊಸೈಟಿ ಬಿಡುಗಡೆ ಪತ್ರದ ಮೂಲಕ ಬಿಡಿಎಗೆ ಒಪ್ಪಿಸಿದ್ದರೂ ಒತ್ತುವರಿ ಹೇಗಾಯಿತೆಂದು ಹೈಕೋರ್ಟ್ ಪ್ರಶ್ನಿಸಿದೆ.

ಒತ್ತುವರಿ ತೆರವುಗೊಳಿಸುವುದಾಗಿ ಕಳೆದ ಸೆಪ್ಟೆಂಬರ್ ತಿಂಗಳಲ್ಲೇ ತಿಳಿಸಿದ್ದ ಬಿಡಿಎ ಈವರೆಗೂ ಕ್ರಮ ಕೈಗೊಂಡಿಲ್ಲ. ಹೀಗಾಗಿಯೇ ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ತಿ ಹಾಗೂ ನ್ಯಾ. ಸಚಿನ್ ಶಂಕರ್ ಮಗದುಮ್ ರವರಿದ್ದ ವಿಭಾಗೀಯ ಪೀಠ ಬಿಡಿಎಯನ್ನು ತರಾಟೆಗೆ ತೆಗೆದುಕೊಂಡಿದ್ದು, ಶೀಘ್ರ ಒತ್ತುವರಿ ತೆರವುಗೊಳಿಸುವಂತೆ ತಾಕೀತು ಮಾಡಿದೆ.

ಇದನ್ನೂ ಓದಿ

ಮಂಗಳೂರಿನಲ್ಲಿ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ, ಕೊಲೆ ಪ್ರಕರಣ; ನಾಲ್ವರು ಅರೆಸ್ಟ್

ಚೆನ್ನೈ ಸೈಕ್ಲೋನ್ ಶುರುವಾದ್ರೆ ಮತ್ತೊಂದು ಸುತ್ತು ಮಳೆ ಬರಲಿದೆ: ಹಾಸನದಲ್ಲಿ ರೈತರನ್ನು ಎಚ್ಚರಿಸಿದ ಸಚಿವ ಅಶೋಕ್​ ಹೇಳಿದ್ದೇನು?