ಮಂಗಳೂರಿನಲ್ಲಿ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ, ಕೊಲೆ ಪ್ರಕರಣ; ನಾಲ್ವರು ಅರೆಸ್ಟ್

ಭಾನುವಾರವಾಗಿದ್ದ ಕಾರಣ ಕೆಲಸಕ್ಕೆ ರಜೆ ಇತ್ತು. ನಾಲ್ಕೈದು ಮಕ್ಕಳು ಹೆಂಚಿನ ಫ್ಯಾಕ್ಟರಿಯ ತುಂಬಾ ಆಟವಾಡಿಕೊಂಡಿದ್ದವು. ಅಪ್ರಾಪ್ತ ಬಾಲಕಿಯೊಬ್ಬಳು ಬೆಳಗ್ಗೆಯಿಂದ ನಾಪತ್ತೆಯಾದ ವಿಚಾರ ಸಂಜೆ 4 ಗಂಟೆಗೆ ಗೊತ್ತಾಗಿತ್ತು.

ಮಂಗಳೂರಿನಲ್ಲಿ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ, ಕೊಲೆ ಪ್ರಕರಣ; ನಾಲ್ವರು ಅರೆಸ್ಟ್
ಸಾಂಕೇತಿಕ ಚಿತ್ರ

ಮಂಗಳೂರು: ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿ, ಹತ್ಯೆ ಮಾಡಿದ್ದ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ನವೆಂಬರ್ 21ರಂದು ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿ, ಕೊಲೆ ಮಾಡಿದ್ದರು. ಆರೋಪಿಗಳು ಬಾಲಕಿಯ ಕತ್ತು ಹಿಸುಕಿ ಕೊಲೆಗೈದಿದ್ದರು. ರಕ್ತಸ್ರಾವದಿಂದ ಸಂತ್ರಸ್ತೆ ಬಾಲಕಿ ಚೀರಾಡಿದ್ದಳು. ಆದರೆ ಆರೋಪಿಗಳು ಬಾಲಕಿಯ ಕತ್ತು ಹಿಸುಕಿ ಕೊಂದಿದ್ದರು. ಈ ಪ್ರಕರಣ ಸಂಬಂಧ ಮಂಗಳೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಸದ್ಯ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬರುವ ಹೆಂಚಿನ ಕಾರ್ಖಾನೆಯೊಂದರಲ್ಲಿ ನಡೆಯಬಾರದ ಘಟನೆಯೊಂದು ನಡೆದು ಹೋಗಿತ್ತು. ಹೆಂಚಿನ ಕಾರ್ಖಾನೆಯಲ್ಲಿ ಕರ್ನಾಟಕ ಮತ್ತು ಉತ್ತರ ಭಾರತ ಮೂಲದ ಒಟ್ಟು 29 ಜನ ಕಾರ್ಮಿಕರು ಕೆಲಸ ಮಾಡುತ್ತಿದ್ದರಾರೆ. ಅದರಲ್ಲಿ ಜಾರ್ಖಂಡ್ ಮೂಲದ ಕುಟುಂಬ ಕೂಡ ಒಂದು. ಆ ಕುಟುಂಬದ ದಂಪತಿಯ ಅಪ್ರಾಪ್ತ ಮಗಳು ನವೆಂಬರ್ 21ಕ್ಕೆ ಹೆಂಚಿನ ಫ್ಯಾಕ್ಟರಿಯ ಡ್ರೈನೇಜ್ ಒಂದರಲ್ಲಿ ಶವವಾಗಿ ಪತ್ತೆಯಾಗಿದ್ದಳು.

ಅಂದು ಭಾನುವಾರವಾಗಿದ್ದ ಕಾರಣ ಕೆಲಸಕ್ಕೆ ರಜೆ ಇತ್ತು. ನಾಲ್ಕೈದು ಮಕ್ಕಳು ಹೆಂಚಿನ ಫ್ಯಾಕ್ಟರಿಯ ತುಂಬಾ ಆಟವಾಡಿಕೊಂಡಿದ್ದವು. ಅಪ್ರಾಪ್ತ ಬಾಲಕಿಯೊಬ್ಬಳು ಬೆಳಗ್ಗೆಯಿಂದ ನಾಪತ್ತೆಯಾದ ವಿಚಾರ ಸಂಜೆ 4 ಗಂಟೆಗೆ ಗೊತ್ತಾಗಿತ್ತು. ನಂತರ ಸಂಜೆ ವೇಳೆಗೆ ಸುಮಾರಿಗೆ ಅದೇ ಬಾಲಕಿ ಶವವಾಗಿ ಪತ್ತೆಯಾಗಿದ್ದಳು.

ಸ್ಥಳಕ್ಕೆ ಆಗಮಿಸಿದ ಮಂಗಳೂರು ನಗರ ಪೊಲೀಸ್ ಆಯುಕ್ತ ಎನ್ ಶಶಿಕುಮಾರ್ ಕೊಲೆ ಕೇಸ್ ದಾಖಲಿಸಿ ತನಿಖೆ ನಡೆಸಲು ಸೂಚಿಸಿದ್ದರು. ಆಗ ಅದು ಕೊಲೆ ಮಾತ್ರವಲ್ಲ ಅತ್ಯಾಚಾರ ನಡೆದಿದೆ ಎಂಬ ಸ್ಫೋಟಕ ಮಾಹಿತಿ ಬೆಳಕಿಗೆ ಬಂದಿತ್ತು. ಸದ್ಯ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ

ಇದನ್ನೂ ಓದಿ

ಬಿಬಿಎಂಪಿ ಪೌರಕಾರ್ಮಿಕರಾಗಿದ್ದ ಅಪ್ಪ ಸತ್ತ ಮೇಲೆ ಅನುಕಂಪದ ಮೇಲೆ ಕೆಲಸ ಗಿಟ್ಟಿಸಿಕೊಂಡ ಮಾಯಣ್ಣ ಇಂದು ನುಂಗಣ್ಣ ಆದ ಕತೆ!

ಮುದ್ರಣ ಜಾಹೀರಾತಿನಲ್ಲಿ ವಿಡಿಯೊ ಕ್ಯುಆರ್ ಕೋಡ್ ಬಳಸಲಿದೆ ಮೋದಿ ಸರ್ಕಾರ

Click on your DTH Provider to Add TV9 Kannada