ಚೆನ್ನೈ ಸೈಕ್ಲೋನ್ ಶುರುವಾದ್ರೆ ಮತ್ತೊಂದು ಸುತ್ತು ಮಳೆ ಬರಲಿದೆ: ಹಾಸನದಲ್ಲಿ ರೈತರನ್ನು ಎಚ್ಚರಿಸಿದ ಸಚಿವ ಅಶೋಕ್​ ಹೇಳಿದ್ದೇನು?

ಹವಾಮಾನ ವರದಿ ಪ್ರಕಾರ ಮಳೆ ಇನ್ನೂ ಮುಂದುವರೆಯುತ್ತೆ. ಚನ್ನೈ ಸೈಕ್ಲೋನ್ ಶುರುವಾದ್ರೆ ಮತ್ತೊಂದು ಸುತ್ತು ಮಳೆ ಬರಲಿದೆ. ರಾಗಿ ಉದುರಿ ಮೊಳಕೆ ಬರುತ್ತಿದೆ, ಹುಲ್ಲು ಕೂಡ ಕೊಳೆಯುತ್ತಿದೆ. ಹಾಗಾಗಿ ಕೂಡಲೆ ರೈತರಿಗೆ ಪರಿಹಾರ ಕೊಡೋದು ಸರ್ಕಾರದ ಕರ್ತವ್ಯ ಇದೆ - ಕಂದಾಯ ಸಚಿವ ಆರ್​ ಅಶೋಕ್

ಚೆನ್ನೈ ಸೈಕ್ಲೋನ್ ಶುರುವಾದ್ರೆ ಮತ್ತೊಂದು ಸುತ್ತು ಮಳೆ ಬರಲಿದೆ: ಹಾಸನದಲ್ಲಿ ರೈತರನ್ನು ಎಚ್ಚರಿಸಿದ ಸಚಿವ ಅಶೋಕ್​  ಹೇಳಿದ್ದೇನು?
ಆರ್ ಅಶೋಕ್ (ಸಂಗ್ರಹ ಚಿತ್ರ)
Follow us
TV9 Web
| Updated By: ಸಾಧು ಶ್ರೀನಾಥ್​

Updated on: Nov 24, 2021 | 2:01 PM

ಹಾಸನ: ಕಂದಾಯ ಸಚಿವ ಆರ್​ ಅಶೋಕ್​ ಇಂದು ಹಾಸನ ಜಿಲ್ಲೆಯಲ್ಲಿ ನೆರೆ ಪ್ರದೇಶಗಳಿಗೆ ಭೇಟಿ ನೀಡಿ, ಬೆಳೆ ಹಾನಿ ಪ್ರದೇಶಗಳ ವೀಕ್ಷಣೆ ಮಾಡುತ್ತಿದ್ದಾರೆ. ಈ ಮಧ್ಯೆ, ಅರಕಲಗೂಡು ತಾಲೂಕಿನ ರಾಗಿಮರೂರು ರಾಗಿಮರೂರಿನಲ್ಲಿ ಮಾತನಾಡಿದ ಸಚಿವ ಅಶೋಕ್ ಅವರು ಹಾಸನ ಜಿಲ್ಲೆಯಲ್ಲಿ ಒಟ್ಟು 47 ಸಾವಿರ ಹೆಕ್ಟೇರ್ ಕೃಷಿ ಹಾಗೂ 300 ಹೆಕ್ಟೇರ್ ತೋಟಗಾರಿಕೆ ಬೆಳೆ ಹಾನಿ ಆಗಿದೆ. ರಾಜ್ಯದಲ್ಲಿ ಐದು ಲಕ್ಷಕ್ಕೂ ಅಧಿಕ ಹೆಕ್ಟೇರ್ ಬೆಳೆ ಹಾನಿ ಆಗಿದೆ. ಕಂದಾಯ ಮತ್ತು ಕೃಷಿ ಇಲಾಖೆ ಅಧಿಕಾರಿಗಳಿಗೆ ಪರಿಶೀಲನೆ ನಡೆಸಿ ವರದಿ ನೀಡಲು ಸೂಚನೆ ನೀಡಲಾಗಿದೆ. ಕೂಡಲೆ ರೈತರಿಗೆ ಬೆಳೆ ಪರಿಹಾರ ಸಿಗಬೇಕಿದೆ. ನೇರವಾಗಿ ರೈತರ ಖಾತೆಗೆ ಪರಿಹಾರ ಸಂದಾಯ ಆಗೋ ರೀತಿ ಕ್ರಮ ವಹಿಸಲಾಗುತ್ತೆ ಎಂದು ಹೇಳಿದ್ದಾರೆ.

ಹವಾಮಾನ ವರದಿ ಪ್ರಕಾರ ಮಳೆ ಇನ್ನೂ ಮುಂದುವರೆಯುತ್ತೆ. ಚನ್ನೈ ಸೈಕ್ಲೋನ್ ಶುರುವಾದ್ರೆ ಮತ್ತೊಂದು ಸುತ್ತು ಮಳೆ ಬರಲಿದೆ. ರಾಗಿ ಉದುರಿ ಮೊಳಕೆ ಬರುತ್ತಿದೆ, ಹುಲ್ಲು ಕೂಡ ಕೊಳೆಯುತ್ತಿದೆ. ಹಾಗಾಗಿ ಕೂಡಲೆ ರೈತರಿಗೆ ಪರಿಹಾರ ಕೊಡೋದು ಸರ್ಕಾರದ ಕರ್ತವ್ಯ ಇದೆ. ನಾನು ಸಾಕಷ್ಟು ಜಿಲ್ಲೆಗೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದೇನೆ. ಎನ್ ಡಿ ಆರ್ ಎಫ್ ಪರಿಹಾರ ಮನಮೋಹನ್ ಸಿಂಗ್ ಸರ್ಕಾರದ ಅವಧಿಯಲ್ಲಿ ನಿಗದಿ ಆಗಿದ್ದು, ಅದು ಇನ್ನೂ ಪರಿಷ್ಕರಣೆ ಆಗಿರಲಿಲ್ಲ. ತಿಂಗಳ ಹಿಂದೆಯೇ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದ್ದೇವೆ.

ಕನಿಷ್ಠ ಈಗಿರುವ ಮೂರು ಪಟ್ಟು ಹೆಚ್ಚು ಮಾಡಲು ಮನವಿ ಮಾಡಲಾಗಿದೆ. ಪರಿಹಾರ ಹೆಚ್ಚಿಸಬೇಕು ಎಂದು ಪತ್ರ ಬರೆದು ಸರ್ಕಾರದ ಜೊತೆ ಸಂಪರ್ಕದಲ್ಲಿ ಇದ್ದೇವೆ. ಕೇಂದ್ರ ಹಣಕಾಸು ಸಚಿವರು ಕೂಡಲೆ ಕ್ರಮ ವಹಿಸೊದಾಗಿ ಹೇಳಿದ್ದಾರೆ. ಈಗಾಗಲೆ 300 ಕೋಟಿ ಬೆಳೆ ಪರಿಹಾರ ವಿತರಣೆ ಮಾಡಲಾಗಿದೆ. ಕಾಫಿ ಬೆಳೆಗೂ ಕೂಡ ರಾಜ್ಯ ಸರ್ಕಾರದಿಂದ ಪರಿಹಾರ ಕೊಡುತ್ತೇವೆ. ಶೇಕಡಾ 33 ಕ್ಕಿಂತ ಹೆಚ್ಚು ಹಾನಿಯಾಗಿರೋ ಪ್ರದೇಶದ ಕಾಫಿಗೆ ಪರಿಹಾರ ನೀಡುತ್ತೇವೆ. ಹಾಸನ ಜಿಲ್ಲೆಯಲ್ಲಿ ಎನ್.ಡಿ.ಆರ್.ಎಫ್ ಮಾನದಂಡದ ಪ್ರಕಾರ 33 ಕೋಟಿ ರೂ ನಷ್ಟ ಆಗಿದೆ. ಆದರೆ ವಾಸ್ತವದಲ್ಲಿ ಕನಿಷ್ಠ ನೂರು ಕೋಟಿಗೂ ಹೆಚ್ಚು ಲಾಸ್ ಆಗಿದೆ. ಕೇವಲ ರಾಗಿ ಅಷ್ಟೆ ಅಲ್ಲ, ಎಲ್ಲ ರೀತಿಯ ಬೆಳೆ ಹಾನಿಗೆ ಪರಿಹಾರ ಸಿಗುತ್ತೆ ಎಂದು ಕಂದಾಯ ಸಚಿವ ಆರ್ ಅಶೋಕ್ ಬೆಳೆ ಹಾನಿ ಪ್ರದೇಶಗಳಿಗೆ ಭೇಟಿ ನೀಡಿ ಹೇಳಿದರು. ಕಂದಾಯ, ಕೃಷಿ ಇಲಾಖೆ ಅಧಿಕಾರಿಗಳ ಜೊತೆ ಪರಿಶೀಲನೆ ನಡೆಸಿದರು.

ಸೆಟ್ಟೇರಿತು ‘ಎಕ್ಕ’ ಸಿನಿಮಾ; ಖುಷಿ ಖುಷಿಯಲ್ಲಿ ಮಾತನಾಡಿದ ಯುವ ರಾಜ್​ಕುಮಾರ್
ಸೆಟ್ಟೇರಿತು ‘ಎಕ್ಕ’ ಸಿನಿಮಾ; ಖುಷಿ ಖುಷಿಯಲ್ಲಿ ಮಾತನಾಡಿದ ಯುವ ರಾಜ್​ಕುಮಾರ್
ಘಟಸರ್ಪಗಳಿರುವ ಹುತ್ತಕ್ಕೆ ಸಿಪಿ ಯೋಗೇಶ್ವರ್ ಕೈ ಹಾಕಿದ್ದಾರೆ: ಪುಟ್ಟರಾಜು
ಘಟಸರ್ಪಗಳಿರುವ ಹುತ್ತಕ್ಕೆ ಸಿಪಿ ಯೋಗೇಶ್ವರ್ ಕೈ ಹಾಕಿದ್ದಾರೆ: ಪುಟ್ಟರಾಜು
ಗೃಹ ಲಕ್ಷ್ಮಿ ಹಣದ ಬಗ್ಗೆ ಮಹತ್ವದ ಅಪ್ಡೇಟ್ ನೀಡಿದ ಸಚಿವೆ ಹೆಬ್ಬಾಳ್ಕರ್​
ಗೃಹ ಲಕ್ಷ್ಮಿ ಹಣದ ಬಗ್ಗೆ ಮಹತ್ವದ ಅಪ್ಡೇಟ್ ನೀಡಿದ ಸಚಿವೆ ಹೆಬ್ಬಾಳ್ಕರ್​
ಜೆಡಿಎಸ್ ಶಾಸಕರನ್ನು ಕಾಂಗ್ರೆಸ್​ಗೆ ತರುವಷ್ಟು ತಾಕತ್ತು ನಂಗಿಲ್ಲ: ಬಾಲಕೃಷ್ಣ
ಜೆಡಿಎಸ್ ಶಾಸಕರನ್ನು ಕಾಂಗ್ರೆಸ್​ಗೆ ತರುವಷ್ಟು ತಾಕತ್ತು ನಂಗಿಲ್ಲ: ಬಾಲಕೃಷ್ಣ
ಹೆಬ್ಬಾಳ್ಕರ್ ರಾಜೀನಾಮೆ ನೀಡಿ ಪಂಚಮಸಾಲಿ ಹೋರಾಟದಲ್ಲಿ ಭಾಗಿಯಾಗಲಿ: ಯತ್ನಾಳ್
ಹೆಬ್ಬಾಳ್ಕರ್ ರಾಜೀನಾಮೆ ನೀಡಿ ಪಂಚಮಸಾಲಿ ಹೋರಾಟದಲ್ಲಿ ಭಾಗಿಯಾಗಲಿ: ಯತ್ನಾಳ್
ಮೋದಿ ವಿಡಿಯೋ; ಜಾಗತಿಕವಾಗಿ ಭಾರತೀಯ ಸಂಸ್ಕೃತಿ ಅನಾವರಣ
ಮೋದಿ ವಿಡಿಯೋ; ಜಾಗತಿಕವಾಗಿ ಭಾರತೀಯ ಸಂಸ್ಕೃತಿ ಅನಾವರಣ
ಆರ್​ಸಿಬಿಯ ಹಿಂದಿ ಖಾತೆ ವಿರುದ್ಧಕೆರಳಿದ ಕನ್ನಡ ಪರ ಸಂಘಟನೆಗಳು
ಆರ್​ಸಿಬಿಯ ಹಿಂದಿ ಖಾತೆ ವಿರುದ್ಧಕೆರಳಿದ ಕನ್ನಡ ಪರ ಸಂಘಟನೆಗಳು
ಕಾಂಗ್ರೆಸ್​ಗೆ ರಾಜ್ಯದಲ್ಲಿ ಮಹಾರಾಷ್ಟ್ರದಂಥ ಸ್ಥಿತಿ ಎದುರಾಗಲಿದೆ: ಯತ್ನಾಳ್
ಕಾಂಗ್ರೆಸ್​ಗೆ ರಾಜ್ಯದಲ್ಲಿ ಮಹಾರಾಷ್ಟ್ರದಂಥ ಸ್ಥಿತಿ ಎದುರಾಗಲಿದೆ: ಯತ್ನಾಳ್
ಮೋಕ್ಷಿತಾ ಬಗ್ಗೆ ಉಗ್ರಂ ಮಂಜು ಗೇಲಿ, ಥೂ ಎಂದ ‘ಮಹರಾಣಿ’
ಮೋಕ್ಷಿತಾ ಬಗ್ಗೆ ಉಗ್ರಂ ಮಂಜು ಗೇಲಿ, ಥೂ ಎಂದ ‘ಮಹರಾಣಿ’
‘ಮಂಜು ರೋಗಿಷ್ಟ ರಾಜ’: ಬಿಗ್ ಬಾಸ್ ಮನೆಯಲ್ಲಿ ಮತ್ತೆ ನಾಲಿಗೆ ಹರಿಬಿಟ್ಟ ರಜತ್
‘ಮಂಜು ರೋಗಿಷ್ಟ ರಾಜ’: ಬಿಗ್ ಬಾಸ್ ಮನೆಯಲ್ಲಿ ಮತ್ತೆ ನಾಲಿಗೆ ಹರಿಬಿಟ್ಟ ರಜತ್