AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಿವಿಧ ಬೇಡಿಕೆ ಆಗ್ರಹಿಸಿ NSUI ವಿದ್ಯಾರ್ಥಿ ಸಂಘಟನೆಯಿಂದ ರಾಜ್ಯ ಮಟ್ಟದಲ್ಲಿ ಎಲ್ಲ ವಿಶ್ವವಿದ್ಯಾಲಯಗಳ ಬಂದ್​ಗೆ ಕರೆ

ಸರ್ಕಾರ ರಾಷ್ಟ್ರೀಯ ಶಿಕ್ಷಣ ನೀತಿಯನ್ನ ಜಾರಿ ಮಾಡಿದ್ದು ಸೇರಿದಂತೆ ಇನ್ನೂ ಹಲವು ಸಮಸ್ಯೆಗಳು, ಬೇಡಿಕೆಗಳನ್ನ ಮುಂದಿಟ್ಟುಕೊಂಡು ಎನ್‌ಎಸ್‌ಯುಐ ಇಂದು ರಾಜ್ಯಾದ್ಯಂತ ಎಲ್ಲ ವಿವಿಗಳ ಬಂದ್‌ಗೆ ಕರೆ ನೀಡಿದೆ.

ವಿವಿಧ ಬೇಡಿಕೆ ಆಗ್ರಹಿಸಿ NSUI ವಿದ್ಯಾರ್ಥಿ ಸಂಘಟನೆಯಿಂದ ರಾಜ್ಯ ಮಟ್ಟದಲ್ಲಿ ಎಲ್ಲ ವಿಶ್ವವಿದ್ಯಾಲಯಗಳ ಬಂದ್​ಗೆ ಕರೆ
ಬಸ್ ನಿಲ್ದಾಣ, ಶೆಲ್ಟರ್ ಗಳ ಮೇಲೆ ಬಂದ್ ಸಂಬಂಧ ಭಿತ್ತಿಪತ್ರ ಅಳವಡಿಕೆ
TV9 Web
| Updated By: ಆಯೇಷಾ ಬಾನು|

Updated on:Dec 17, 2022 | 9:42 AM

Share

ಬೆಂಗಳೂರು: ಇಂದು ರಾಜ್ಯ ಮಟ್ಟದಲ್ಲಿ ಎಲ್ಲ ವಿಶ್ವವಿದ್ಯಾಲಯಗಳ ಬಂದ್​ಗೆ NSUI ವಿದ್ಯಾರ್ಥಿ ಸಂಘಟನೆ ಕರೆ ಕೊಟ್ಟಿದೆ. ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ NSUI ವಿದ್ಯಾರ್ಥಿ ಸಂಘಟನೆಯಿಂದ ವಿವಿಗಳ ಮುಷ್ಕರ ಮಾಡಿದೆ.

ನ್ಯಾಷನಲ್ ಎಜುಕೇಷನ್ ಪಾಲಿಸಿ. ಇಡೀ ದೇಶದಲ್ಲಿಯೇ ಎಲ್ಲ ರಾಜ್ಯಗಳಿಗಿಂತ ಮೊದಲು ಕರ್ನಾಟಕದಲ್ಲಿಯೇ ರಾಷ್ಟ್ರೀಯ ಶಿಕ್ಷಣ ನೀತಿಯನ್ನ ಜಾರಿಗೊಳಿಸಲಾಗಿದೆ. ಇದರೊಂದಿಗೆ ಸರ್ಕಾರ ಶೈಕ್ಷಣಿಕ ಕ್ಷೇತ್ರದಲ್ಲಿ ಐತಿಹಾಸಿಕ ಹೆಜ್ಜೆ ಇರಿಸಿದ್ದೇವೆ ಅಂತಾ ಬೀಗುತ್ತಿದೆ. ಕೇಂದ್ರ ಶಿಕ್ಷಣ ಇಲಾಖೆಯಿಂದಲೂ ಗ್ರೀನ್ ಸಿಗ್ನಲ್ ಸಿಕ್ಕಿದೆ. ಆದ್ರೆ ರಾಜ್ಯ ಸರ್ಕಾರ ಜಾರಿಗೊಳಿಸಿರುವ ಹೊಸ ಶಿಕ್ಷಣ ನೀತಿಗೆ ಭಾರತೀಯ ರಾಷ್ಟ್ರೀಯ ವಿದ್ಯಾರ್ಥಿ ಒಕ್ಕೂಟ ಅಂದ್ರೆ ಎನ್‌ಎಸ್‌ಯುಐ ವಿರೋಧಿಸಿದೆ. ರಾಜ್ಯ ಸರ್ಕಾರ ತರಾತುರಿಯಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಜಾರಿಗೆ ತಂದಿದೆ. ಇದರ ಬಗ್ಗೆ ಯಾವುದೇ ಮಾಹಿತಿ ಶಿಕ್ಷಣ ಸಂಸ್ಥೆಗಳಲ್ಲಿಲ್ಲ. ಪ್ರಿನ್ಸಿಪಾಲ್​ರನ್ನ ಕೇಳಿದ್ರೆ, ನಾವು ಸರ್ಕಾರಿ ನೌಕರರು. ಅದರ ಬಗ್ಗೆ ‌ಮಾತನಾಡಲು ಸಾಧ್ಯವಿಲ್ಲ ಅಂತಾರೆ. ಯಾವುದೇ ಮುಂದಾಲೋಚನೆ ರಾಷ್ಟ್ರೀಯ ಶಿಕ್ಷಣ ನೀತಿಯನ್ನ ಜಾರಿ ಮಾಡಲಾಗಿದೆ. ಇದರಿಂದಾಗಿ ವಿದ್ಯಾರ್ಥಿಗಳಿಗೆ ಸಾಕಷ್ಟು ತೊಂದರೆಯಾಗುತ್ತಿದೆ ಎಂದು ಎನ್‌ಎಸ್‌ಯುಐ ವಾದ ಮಾಡಿದೆ.

ಸರ್ಕಾರ ರಾಷ್ಟ್ರೀಯ ಶಿಕ್ಷಣ ನೀತಿಯನ್ನ ಜಾರಿ ಮಾಡಿದ್ದಕ್ಕೆ ಮಾತ್ರವಲ್ಲ, ಇನ್ನೂ ಹಲವು ಸಮಸ್ಯೆಗಳು, ಬೇಡಿಕೆಗಳನ್ನ ಮುಂದಿಟ್ಟುಕೊಂಡು ಎನ್‌ಎಸ್‌ಯುಐ ಇಂದು ರಾಜ್ಯಾದ್ಯಂತ ಎಲ್ಲ ವಿವಿಗಳ ಬಂದ್‌ಗೆ ಕರೆ ನೀಡಿದೆ.

ಇದನ್ನೂ ಓದಿ: ಮನೆ ಕಳ್ಳತನಕ್ಕೆ ಬಂದವನ ಕಾಲಿಗೆ ಗುಂಡು ಹಾರಿಸಿ ಪೊಲೀಸರಿಗೆ ಒಪ್ಪಿಸಿದ ಮನೆ ಮಾಲಿಕ

ವಿವಿ ಬಂದ್‌ಗೆ ಕಾರಣವೇನು

ರಾಜ್ಯದ ಹಲವು ವಿಶ್ವವಿದ್ಯಾಲಯಗಳಲ್ಲಿ ಫಲಿತಾಂಶ ವಿಳಂಬವಾಗ್ತಿದೆ. ಇನ್ನು ಸರ್ಕಾರ ಜಾರಿಗೊಳಿಸಿರುವ ರಾಷ್ಟ್ರೀಯ ಶಿಕ್ಷಣ ನೀತಿ ಅಸಂಘಟಿತ ಮತ್ತು ಅವೈಜ್ಞಾನಿಕವಾಗಿದೆ. ಅಷ್ಟೇ ಅಲ್ಲ ವಿದ್ಯಾರ್ಥಿವೇತನ ಮಂಜೂರು ಮಾಡುವಲ್ಲಿ ವಿಳಂಬ ಧೋರಣೆ ಮಾಡಲಾಗ್ತಿದೆ ಅನ್ನೋದು ಎನ್‌ಎಸ್‌ಯುಐ ಆರೋಪವಾಗಿದೆ. ಇದರ ಜೊತೆಗೆ ಕಾಲೇಜು ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ನೀಡುವಂತೆ ಹಾಗೂ ಬಸ್ ಸಾರಿಗೆ ಸಮಸ್ಯೆ, ಸರ್ಕಾರಿ ಕಾಲೇಜು ಶುಲ್ಕ ಹೆಚ್ಚಳ ಸಂಬಂಧ ಬಂದ್​ಗೆ ಕರೆ ನೀಡಲಾಗಿದೆ.

ವಿದ್ಯಾರ್ಥಿಗಳ ಬೇಡಿಕೆಗಳೇನು?

  • ಸರಿಯಾದ ಸಮಯಕ್ಕೆ ಫಲಿತಾಂಶ ನೀಡಬೇಕು
  • ವಿದ್ಯಾರ್ಥಿವೇತನ ಕೂಡಲೇ ಬಿಡುಗಡೆ ಮಾಡಬೇಕು
  • ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ನೀಡಬೇಕು
  • ಸರ್ಕಾರಿ ಕಾಲೇಜು ಶುಲ್ಕ ಕಡಿಮೆ ಮಾಡಬೇಕು.

    ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 9:42 am, Sat, 17 December 22