ಡಿಕೆ ಶಿವಕುಮಾರ್ ಕುಕ್ಕರ್ ಸ್ಫೋಟ ಹೇಳಿಕೆಗೆ ಬಿಜೆಪಿ ಗರಂ; ಇದು ಚುನಾವಣಾ ಓಲೈಕೆಯ ತಂತ್ರ ಎಂದ ಸಿಎಂ ಬಸವರಾಜ ಬೊಮ್ಮಾಯಿ
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿಕೆ ಶೋಭೆ ತರುವಂತಹದ್ದಲ್ಲ. ಇದು ಚುನಾವಣಾ ಓಲೈಕೆಯ ತಂತ್ರ. ಹೀಗೆ ಟೀಕೆ ಮಾಡಿದರೆ ಅಲ್ಪಸಂಖ್ಯಾತರ ಮತ ಬರುತ್ತೆ ಅಂತಾ ತಂತ್ರ ಮಾಡುತ್ತಿದ್ದಾರೆ ಎಂದು ಸಿಎಂ ಬೊಮ್ಮಾಯಿ ಹೇಳಿದ್ರು.
ಬೆಂಗಳೂರು: ಮಂಗಳೂರು ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣದ(Mangaluru Blast Case) ಶಾರಿಕ್ ಬಗ್ಗೆ ಡಿ.ಕೆ ಶಿವಕುಮಾರ್(DK Shivakumar) ಆಡಿದ ಮಾತು ದೊಡ್ಡ ಮಟ್ಟದಲ್ಲಿ ಸಂಚಲನ ಸೃಷ್ಟಿ ಮಾಡಿತ್ತು. ಡಿ.ಕೆ ಶಿವಕುಮಾರ್ ಆಡಿದ ಈ ಮಾತಿನಿಂದ ಬಿಜೆಪಿ ನಾಯಕರು ಕೆಂಡಾಮಂಡಲರಾಗಿದ್ದು ವಿರೋಧ ವ್ಯಕ್ತಪಡಿಸಿದ್ದಾರೆ. ಕಾಂಗ್ರೆಸ್ ಉಗ್ರರ ಪರವಾಗಿದೆ, ಉಗ್ರರನ್ನ ಸಮರ್ಥಿಸಿಕೊಳ್ತಿದೆ ಅಂತ ಬಿಜೆಪಿ ನಾಯಕರು ಆಕ್ರೋಶ ಹೊರ ಹಾಕಿದ್ದಾರೆ. ಆದ್ರೆ ಇದ್ಯಾವುದಕ್ಕೂ ತಲೆ ಕೆಡಿಸಿಕೊಳ್ಳದ ಕನಕಪುರ ಬಂಡೆ ಡಿಕೆ ಶಿವಕುಮಾರ್, ಮತ್ತೆ ಮತ್ತೆ ತಮ್ಮ ಹೇಳಿಕೆಗೆ ಸಮರ್ಥನೆಯನ್ನು ನೀಡುತ್ತಿದ್ದಾರೆ.
ಶಂಕಿತ ಉಗ್ರ ಶಾರಿಕ್ ವಿಚಾರವಾಗಿ ಆಡಿದ್ದ ಮಾತಿಗೆ ಮತ್ತೊಮ್ಮೆ ಸಮರ್ಥನೆ ಕೊಟ್ಟ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್, ಯಡಿಯೂರಪ್ಪ ಹಾಗೂ ಅವರ ನಡುವಿನ ಡಿಫ್ರೆನ್ಸ್ ಮರೆಸೋಕೆ ಜಂಪ್ ಮಾಡಿದ್ದಾರೆ ಅಂತ ಬೆಂಗಳೂರಿನಲ್ಲಿ ಹೇಳಿದ್ರು. ಇಷ್ಟೇ ಅಲ್ಲ ಕೊಪ್ಪಳದಲ್ಲೂ ಗುಡುಗಿದ ಡಿಕೆಶಿ, ದಕ್ಷಿಣ ಕನ್ನಡ, ಶಿವಮೊಗ್ಗ ಘಟನೆಗಳಿಂದ ರಾಜ್ಯ ಸರ್ಕಾರದ ಭ್ರಷ್ಟಾಚಾರ ಡೈವರ್ಟ್ ಆಗಿದೆ ಅಂತ ಹೇಳುವ ಮೂಲಕ ಇನ್ನೊಂದು ರೀತಿಯ ವಿರೋಧಕ್ಕೆ ಕಾರಣರಾಗಿದ್ದಾರೆ.
ಇದು ಚುನಾವಣಾ ಓಲೈಕೆಯ ತಂತ್ರ
ಈ ವಿಚಾರವಾಗಿ ಬೆಂಗಳೂರಿನಲ್ಲಿ ಪ್ರತಿಕ್ರಿಯೆ ನೀಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಂಗಳೂರಿನಲ್ಲಿ ಸ್ಫೋಟ ಮಾಡಿಸುವ ಹುನ್ನಾರ ಬಯಲಾಗಿದೆ. ಈ ಹಿಂದೆ 2-3 ಕೇಸ್ನಲ್ಲಿ ಈತ ಸಿಕ್ಕಿಹಾಕಿಕೊಂಡಿದ್ದಾನೆ. ದೇಶದ ಹೊರಗೆಯೂ ಶಂಕಿತ ಉಗ್ರನಿಗೆ ಸಂಪರ್ಕ ಇರುವ ಮಾಹಿತಿ ಇದೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿಕೆ ಶೋಭೆ ತರುವಂತಹದ್ದಲ್ಲ. ಇದು ಚುನಾವಣಾ ಓಲೈಕೆಯ ತಂತ್ರ. ಹೀಗೆ ಟೀಕೆ ಮಾಡಿದರೆ ಅಲ್ಪಸಂಖ್ಯಾತರ ಮತ ಬರುತ್ತೆ ಅಂತಾ ತಂತ್ರ ಮಾಡುತ್ತಿದ್ದಾರೆ. ಕಾಂಗ್ರೆಸ್ಸಿಗರು ಉಗ್ರರ ಪರ ಇದ್ದಾರೋ, ದೇಶದ ಪರ ಇದ್ದಾರೋ ಈ ಬಗ್ಗೆ ರಾಹುಲ್, ಸೋನಿಯಾ, ಖರ್ಗೆ ಸ್ಪಷ್ಟನೆ ನೀಡಲಿ. ಒಂದು ಸಮುದಾಯದ ಓಲೈಕೆಗಾಗಿ ಡಿಕೆಶಿ ಹೇಳಿಕೆ ನೀಡಿದ್ದಾರೆ. ಹೀಗೆ ಮಾತನಾಡುವುದು ದೇಶ ಭಕ್ತನ ಕೆಲಸ ಅಲ್ಲ ಎಂದು ಆಕ್ರೋಶ ಹೊರ ಹಾಕಿದ್ದಾರೆ.
ಇದನ್ನೂ ಓದಿ: ಬೆಂಗಳೂರಿನಲ್ಲಿ ಜೀವಕ್ಕೆ ಕುತ್ತು ತಂದ ಖಾಸಗಿ ಅಪಾರ್ಟ್ಮೆಂಟ್ನ ಯಡವಟ್ಟು: ವಾಲಿದ ಹತ್ತಾರು ಮನೆಗಳು
ಡಿ.ಕೆ.ಶಿವಕುಮಾರ್ ತಲೆ ತಿರುಗಿ ಮಾತನಾಡುತ್ತಿದ್ದಾರೆ
ಬಿಎಸ್ ಯಡಿಯೂರಪ್ಪ ಡಿಕೆ ಶಿವಕುಮಾರ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಡಿ.ಕೆ.ಶಿವಕುಮಾರ್ ತಲೆ ತಿರುಗಿ ಮಾತನಾಡುತ್ತಿದ್ದಾರೆ. ಏನು ಮಾತನಾಡಬೇಕು ಅವರಿಗೆ ಗೊತ್ತಾಗುತ್ತಿಲ್ಲ. ಯಾರನ್ನು ಬೆಂಬಲಿಸಿ ಮಾತನಾಡಬೇಕು ಎಂಬುದು ತಿಳಿಯುತ್ತಿಲ್ಲ. ಅವರ ಮಾತು ಅವರಿಗೆ ತಿರುಗು ಬಾಣವಾಗುತ್ತದೆ. ಇಂತಹ ಹೇಳಿಕೆಯಿಂದ ಅವರ ಗೌರವ ಕಡಿಮೆಯಾಗುತ್ತದೆ. ಅವರ ಈ ಹೇಳಿಕೆಯನ್ನು ನಾನು ಖಂಡಿಸುತ್ತೇನೆ ಎಂದು ಬಿ.ಎಸ್.ಯಡಿಯೂರಪ್ಪ ವಾಗ್ದಾಳಿ ನಡೆಸಿದ್ರು.
ಸಿದ್ದರಾಮಯ್ಯ, ಡಿಕೆ ವಿರುದ್ಧ ಅಶ್ವತ್ಥ್ ಗರಂ, ಕ್ಷಮೆಗೆ ಅಶೋಕ್ ಪಟ್ಟು
ಡಿ.ಕೆ ಶಿವಕುಮಾರ್ ಡೈವರ್ಟ್ ಮಾತಿಗೆ ಬಿಜೆಪಿ ನಾಯಕರು ಕೆಂಡ ಉಗುಳಿದ್ದಾರೆ. ಡಿಕೆಶಿಗೆ ಕೌಂಟರ್ ಕೊಟ್ಟ ಸಚಿವ ಆರ್.ಅಶೋಕ್, ಅಲ್ಪಸಂಖ್ಯಾತರ ಓಲೈಸುವುದಕ್ಕಾಗಿ ಹೀಗೆ ಮಾತನಾಡ್ತಿದ್ದಾರೆ ಎಂದಿದ್ದಾರೆ. ಸಿದ್ದರಾಮಯ್ಯ ಟಿಪ್ಪು ಸುಲ್ತಾನ್ ಆದ್ರೆ, ಡಿಕೆಶಿ ಭಯೋತ್ಪಾದಕರ ಸುಲ್ತಾನ್ ಎಂದು ಅಶ್ವತ್ಥ್ ನಾರಾಯಣ ಖಾರವಾಗಿಯೇ ಕುಟುಕಿದ್ದಾರೆ.
ಪ್ರಮುಖು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 7:42 am, Sat, 17 December 22