ಕೆಲವರ ಸ್ವಾರ್ಥಕ್ಕಾಗಿ ಜಾತಿ ವ್ಯವಸ್ಥೆಯನ್ನ ಗಟ್ಟಿಗೊಳಿಸಿದ್ದಾರೆ: ಸಿದ್ದರಾಮಯ್ಯ
ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಇಂದು (ಜೂನ್ 26) ರಂದು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ನ್ಯಾಯಮೂರ್ತಿ ಹೆಚ್.ಎನ್.ನಾಗಮೋಹನದಾಸ್ ರಚಿಸಿದ ಮೀಸಲಾತಿ ಕುರಿತು ಭ್ರಮೆ ಮತ್ತು ವಾಸ್ತವ ಕನ್ನಡ ಮತ್ತು ಇಂಗ್ಲಿಷ್ ಆವೃತ್ತಿಯ ಪುಸ್ತಕವನ್ನು ಬಿಡುಗಡೆ ಮಾಡಿದರು.
ಬೆಂಗಳೂರು: ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು (Siddaramai) ಇಂದು (ಜೂನ್ 26) ರಂದು ಬೆಂಗಳೂರಿನ (Bengaluru) ರವೀಂದ್ರ ಕಲಾಕ್ಷೇತ್ರದಲ್ಲಿ (Ravindra Kalakshetra) ನ್ಯಾಯಮೂರ್ತಿ ಹೆಚ್.ಎನ್.ನಾಗಮೋಹನದಾಸ್ ರಚಿಸಿದ ”ಮೀಸಲಾತಿ ಭ್ರಮೆ ಮತ್ತು ವಾಸ್ತವ” ಕನ್ನಡ ಮತ್ತು ಇಂಗ್ಲಿಷ್ ಆವೃತ್ತಿಯ ಪುಸ್ತಕವನ್ನು ಬಿಡುಗಡೆ ಮಾಡಿದರು. ಕಾರ್ಯಕ್ರಮದಲ್ಲಿ ಸಂಗೀತ ನಿರ್ದೇಶಕ ಹಂಸಲೇಖ (Hamsalekha), ನ್ಯಾ.H.N.ನಾಗಮೋಹನದಾಸ್, ಬಂಜಗೆರೆ ಜಯಪ್ರಕಾಶ್ ಮತ್ತು ಆರ್ಥಿಕ ಚಿಂತಕ ಚಂದ್ರಶೇಖರ್ ಭಾಗಿಯಾಗಿದ್ದರು. ಪುಸ್ತಕ ಬಿಡುಗಡೆ ಮಾಡಿ ಕಾರ್ಯಕ್ರಮದಲ್ಲಿ ಮಾತನಾಡಿದ ಸಿದ್ದರಾಮಯ್ಯ, ಮೀಸಲಾತಿ ಸಂಬಂಧ ನ್ಯಾ.ನಾಗಮೋಹನದಾಸ್ ಪುಸ್ತಕ ಬರೆದಿದ್ದಾರೆ. ಈ ಪುಸ್ತಕ ಬಹಳ ದೊಡ್ಡ ಪುಸ್ತಕವಲ್ಲ ಚಿಕ್ಕದಾಗಿ ಚೊಕ್ಕದಾಗಿ ಹೆಚ್ಚು ಮಾಹಿತಿಯುಳ್ಳ ಪುಸ್ತಕ ತಯಾರು ಮಾಡಿದ್ದಾರೆ ಎಂದರು.
ನ್ಯಾ.ನಾಗಮೋಹನದಾಸ್ ನ್ಯಾಯಮೂರ್ತಿಗಳಾಗಿದ್ದರಿಂದ ದೇಶದ ಸಂವಿಧಾನದ ಬಗ್ಗೆ ಓದಿದ್ದಾರೆ. ಸಂವಿಧಾನ ಓದು ಅನ್ನೋ ಕಿರುಹೊತ್ತಿಗೆ ಮುಂದಿಟ್ಟಿದ್ದರು ಅದನ್ನ ನಾನು ಕೂಡ ಓದಿದ್ದೇನೆ. ಪ್ರತಿಯೊಬ್ಬರು ಸಂವಿಧಾನದ ಓದಿ ತಿಳಿದುಕೊಳ್ಳಬೇಕು. ಸರಳವಾದ ಭಾಷೆಯಲ್ಲಿ ಸರಳವಾಗಿ ಸಂವಿಧಾನ ಓದು ಅನ್ನೋ ಕಿರುಹೊತ್ತಿಗೆ ಕೊಟ್ಟಿದ್ದರು. ಆ ವೇಳೆ ಮೀಸಲಾತಿ ಸಂಬಂಧ ಪ್ರಶ್ನೆಗಳನ್ನ ಕೇಳುತ್ತಿದ್ದರು. ಆಗ ಮೀಸಲಾತಿ ಬಗ್ಗೆ ಅರಿವಿಲ್ಲ ಅನ್ನೋದನ್ನ ಅರಿತಿದ್ದರು. ಹೀಗಾಗಿ ಈ ಪುಸ್ತಕ ರಚನೆ ಮಾಡಿದ್ದಾರೆ. ಜಾತಿ ವ್ಯವಸ್ಥೆ ಕಾರಣದಿಂದಾಗಿ ನಮ್ಮ ಸಮಾಜ ಅಸಮಾನತೆಯಿಂದ ಕೂಡಿದೆ ಎಂದು ತಿಳಿಸಿದರು.
ಇದನ್ನು ಓದಿ: ಮಂಗಳೂರು: ಮುಳುಗಡೆಯಾಗಿದ್ದ ವಿದೇಶಿ ಸರಕು ಸಾಗಣೆ ಹಡಗಿನಿಂದ ತೈಲ ಸೋರಿಕೆ ಆತಂಕ! ಕೋಸ್ಟ್ ಗಾರ್ಡ್ ಮಿನಿ ಜೆಟ್ ಆಗಮನ
ಕೆಲವರ ಸ್ವಾರ್ಥಕ್ಕಾಗಿ ಜಾತಿ ವ್ಯವಸ್ಥೆಯನ್ನ ಗಟ್ಟಿಗೊಳಿಸಿದ್ದಾರೆ. ಈ ಹಿಂದೆ ಬ್ರಾಹ್ಮಣ, ಕ್ಷತ್ರಿಯ, ವೈಶ್ಯರಿಗೆ ಮಾತ್ರ ಓದುವ ಅವಕಾಶವಿತ್ತು. ಇದು ಕೂಡ ಮೀಸಲಾತಿ ಅಲ್ಲವೇ..? ಶೂದ್ರರು ತಾವು ಉತ್ಪಾದನೆ ಮಾಡಿದ ವಸ್ತುಗಳನ್ನು ಅನುಭವಿಸುವಂತಿರಲಿಲ್ಲ. ಶೂದ್ರರನ್ನು ಕೊಳಕು ಕೆಲಸಕ್ಕೆ ಬಿಟ್ಟು ಮೇಲ್ಜಾತಿಯವರು ಮಜಾ ಮಾಡ್ಕೊಂಡಿದ್ದರು. ಇವತ್ತು ಅಸಮಾನತೆ ನಿರ್ಮಾಣ ಮಾಡೋಕೆ ಕಾರಣರಾದವರೇ, ಏಕೆ ಮೀಸಲಾತಿ ಕೊಡಬೇಕೆಂದು ಇವರೇ ಪ್ರಶ್ನೆ ಮಾಡುತ್ತಿದ್ದಾರೆ ಎಂದು ಆಕ್ರೋಶ ಹೊರಹಾಕಿದರು.
ಈ ವೇಳೆ ಜಾತಿವ್ಯವಸ್ಥೆ ಬಗ್ಗೆ ಉದಾಹರಣೆ ಸಮೇತ ವಿವರಿಸಿದ ಸಿದ್ದರಾಮಯ್ಯ, ಒಂದು ವೇಳೆ ರಾಮಕೃಷ್ಣ ಹೆಗಡೆ, ಬಿ.ರಾಚಯ್ಯ, ಜೆ.ಹೆಚ್.ಪಟೇಲ್ ಸೇರಿ ಮೂವರ ನಡುವೆ ಸ್ವಾರಸ್ಯಕರ ಚರ್ಚೆ ನಡೆದ್ದಿದ್ದು, ರಾಮಕೃಷ್ಣ ಹೆಗಡೆಯವರನ್ನು ಬಿ.ರಾಚಯ್ಯ ಬಹಳ ಮೇಧಾವಿಗಳು ಎಂದಿದ್ದರು. ಆಗ ಜೆ.ಹೆಚ್.ಪಟೇಲ್ ಎದ್ದು ನಿಂತು ರೀ ರಾಚಯ್ಯನವರೇ ರಾಮಕೃಷ್ಣ ಹೆಗಡೆಯವರಿಗೆ 5 ಸಾವಿರ ವರ್ಷಗಳ ಇತಿಹಾಸವಿದೆ. ನಮಗೆ ಬಸವಣ್ಣ ಬಂದ ಮೇಲೆ 800 ವರ್ಷಗಳ ಇತಿಹಾಸವಿದೆ. ಸಂವಿಧಾನ ಬಂದ ಮೇಲೆ ನಿಮಗೆ ಇತಿಹಾಸ ಶುರುವಾಗಿದ್ದು, ಸಂವಿಧಾನ ಜಾರಿಯಾದ ಮೇಲೆ ಶೂದ್ರರಿಗೆ ಓದುವ ಅವಕಾಶ ಸಿಕ್ತು ಎಂದು ಘಟನೆ ಮೆಲಕು ಹಾಕಿದರು.
ಇದನ್ನು ಓದಿ: ರಮೇಶ್ ಜಾರಕಿಹೊಳಿ ಸಾರ್ವಜನಿಕರ 819 ಕೋಟಿ ಹಣ ಲೂಟಿ ಮಾಡಿದ್ದಾರೆ: ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ ಗಂಭೀರ ಆರೋಪ
ಆರ್ಯರು ಮಧ್ಯಪ್ರಾಚ್ಯದಿಂದ ಬಂದವರು ಎಂದಿದ್ದಕ್ಕೆ ಏನ್ರಿ ನಮ್ಮನ್ನೇ ಪ್ರಶ್ನೇ ಮಾಡುತ್ತೀರಾ ಅಂತಾರೆ. ದ್ರಾವಿಡರನ್ನ ದಬ್ಬಾಳಿಕೆ ಮಾಡಿದರು ಅಂದರೆ ಅವರಿಗೆ ಕೋಪ ಬರುತ್ತದೆ. ಇದ್ದಂಗೆ ಇದ್ದಹಾಗೇ ಹೇಳಿದರೆ ಎದ್ದು ಬಂದು ಎದೆಗೆ ಹೊದೀತಾರೆ. ಮೀಸಲಾತಿ ಕರ್ನಾಟಕದಲ್ಲಿ ಸುಮಾರು 100 ವರ್ಷಗಳಿಂದ ಇದೆ. ಬಹುಸಂಖ್ಯಾತರ ಪರ ಮಾತಾಡಿದರೆ, ಯಾರು ನನ್ನ ಪರ ಮಾತಾಡಲ್ಲ. ಸಿದ್ದರಾಮಯ್ಯ ತಾನೇ ಮಾತಾಡೋದು ಬೈಸಿಕೊಳ್ಳಲಿ ಬಿಡು ಅಂತಾರೆ. ಅಸಮಾನತೆ ವಿರುದ್ಧ ನಾನು ಮಾತನಾಡುವುದು ತಪ್ಪಾ..? ಎಂದು ಪ್ರಶ್ನಿಸಿದರು.
ದಕ್ಷಿಣ ಭಾರತದಲ್ಲಿ ಮೀಸಲಾತಿ ಇದೆ ಆದರೆ ಉತ್ತರ ಭಾರತದಲ್ಲಿ ಬರಲಿಲ್ಲ. ೧೯೯೦ರಲ್ಲಿ ವಿಪಿ ಸಿಂಗ್ ಪ್ರಧಾನ ಮಂತ್ರಿಯಾದಾಗ ಹಿಂದುಳಿದ ಜಾತಿಯವರಿಗೆ ಮೀಸಲಾತಿ ಬಂತು. ೧೯೫೦ರಲ್ಲಿ ಸಂವಿಧಾನ ಬಂದರೂ, ೧೯೯೦ರವರಗೆ ಹಿಂದುಳಿದ ವರ್ಗದವರಿಗೆ ಮೀಸಲಾತಿನೇ ಸಿಕ್ಕಿರಲಿಲ್ಲ. ಶ್ರೀಕೃಷ್ಣದೇವರಾಯರು ಮೀಸಲಾತಿ ಬಗ್ಗೆ ಮಂಡಲ್ ಆಯೋಗ ಮಾಡಿದಾಗ ಯಾರು ವಿರೋದಿಸಿದ್ದು? ವಿಶ್ವೇಶ್ವರಯ್ಯ ಆದರೆ ನಾನ್ ಮಾತಾಡಿದರೆ ತಪ್ಪು ಅಂತಾರೆ ಎಂದು ಹೇಳಿದ್ದಾರೆ.