ಚುನಾವಣಾ ಆಯೋಗದ ಕಚೇರಿ ಮುಂದೆ ಸಿಎಂ, ಸಚಿವರ ಧರಣಿ: ಸರ್ಕಾರದ ವಿರುದ್ಧ ಮುಗಿಬಿದ್ದ ವಿಪಕ್ಷಗಳು

ಚುನಾವಣಾ ಆಯೋಗದ ಕಚೇರಿ ಮುಂದೆ ಸಿಎಂ ಡಿಕೆ ಶಿವಕುಮಾರ್ ಮತ್ತು ಸಚಿವರು ಧರಣಿ ನಡೆಸಿದ್ದನ್ನು ಬಿಜೆಪಿ ಹಾಗೂ ಜೆಡಿಎಸ್ ಕಟುವಾಗಿ ಟೀಕಿಸಿದ್ದು, ಬರಗಾಲ ನಿರ್ವಹಣೆ ಬಿಟ್ಟು ಜನರನ್ನು ದಿಕ್ಕು ತಪ್ಪಿಸಲು ರಾಜಕೀಯ ನಾಟಕವಾಡುತ್ತಿದ್ದಾರೆ ಎಂದು ಆರೋಪಿಸಿವೆ. ರಾಜ್ಯದಲ್ಲಿ ಬರಗಾಲ, ರೈತರ ಸಂಕಷ್ಟ ಹಾಗೂ ಜನರ ಜ್ವಲಂತ ಸಮಸ್ಯೆಗಳಿಗೆ. ಇವುಗಳಿಗೆ ಪರಿಹಾರ ಕಂಡುಕೊಳ್ಳುವತ್ತ ಗಮನಹರಿಸಬೇಕಾದ ಮುಖ್ಯಮಂತ್ರಿ ಡಿಕೆಶಿ, ಚುನಾವಣಾಧಿಕಾರಿಗಳ ಕಚೇರಿ ಎದುರು ಏಕಾಏಕಿ ಧರಣಿ ನಡೆಸಿರುವುದು ಅತ್ಯಂತ ವಿಷಾದನೀಯ ಎಂದಿವೆ.

ಚುನಾವಣಾ ಆಯೋಗದ ಕಚೇರಿ ಮುಂದೆ ಸಿಎಂ, ಸಚಿವರ ಧರಣಿ: ಸರ್ಕಾರದ ವಿರುದ್ಧ ಮುಗಿಬಿದ್ದ ವಿಪಕ್ಷಗಳು
ಸರ್ಕಾರದ ವಿರುದ್ಧ ಮುಗಿಬಿದ್ದ ವಿಪಕ್ಷಗಳು
Image Credit source: PTI
Edited By:

Updated on: Oct 01, 2026 | 9:16 PM

ಬೆಂಗಳೂರು, ಅಕ್ಟೋಬರ್​​ 01: ಚುನಾವಣಾ ಆಯೋಗದ ಕಚೇರಿ ಮುಂದೆ ಸಿಎಂ ಡಿಕೆ ಶಿವಕುಮಾರ್​​ ಮತ್ತು ಸಚಿವರ ಧರಣಿ ವಿಚಾರವಾಗಿ ವಿಪಕ್ಷಗಳಾದ ಬಿಜೆಪಿ ಮತ್ತು ಜೆಡಿಎಸ್​​ ಸರ್ಕಾರದ ಮೇಲೆ ಮುಗಿಬಿದ್ದವಿವೆ. ರಾಜ್ಯದಲ್ಲಿ ಬರಗಾಲ, ರೈತರ ಸಂಕಷ್ಟ ಹಾಗೂ ಜನರ ಜ್ವಲಂತ ಸಮಸ್ಯೆಗಳಿಗೆ. ಇವುಗಳಿಗೆ ಪರಿಹಾರ ಕಂಡುಕೊಳ್ಳುವತ್ತ ಗಮನಹರಿಸಬೇಕಾದ ಮುಖ್ಯಮಂತ್ರಿ ಡಿಕೆಶಿ, ಚುನಾವಣಾಧಿಕಾರಿಗಳ ಕಚೇರಿ ಎದುರು ಏಕಾಏಕಿ ಧರಣಿ ನಡೆಸಿರುವುದು ಅತ್ಯಂತ ವಿಷಾದನೀಯ ಎಂದು ಕೇಂದ್ರ ಸಚಿವ ಪ್ರಹ್ಲಾದ್​​ ಜೋಶಿ ಕಿಡಿ ಕಾರಿದ್ದಾರೆ.

‘ಇದು ಜನರನ್ನು ದಿಕ್ಕು ತಪ್ಪಿಸುವ ನಾಟಕ’

ಚುನಾವಣಾ ಪ್ರಕ್ರಿಯೆ, SIR ಪ್ರಕ್ರಿಯೆ, ಫಾರ್ಮ್ 7, ಮತದಾರರ ಪಟ್ಟಿ ಪರಿಷ್ಕರಣೆ ಬಗ್ಗೆ ಸಂಬಂಧ ಚುನಾವಣಾ ಅಧಿಕಾರಿಗಳಿಗೆ ಹಾಗೂ ಬಿಎಲ್‌ಎ, ಬಿಎಲ್‌ಒಗಳಿಗೂ ಸ್ಪಷ್ಟ ಅರಿವಿರುತ್ತದೆ ಮತ್ತು ಆಯೋಗವೂ ಈ ಬಗ್ಗೆ ನಿರಂತರವಾಗಿ ಗಮನಹರಿಸುತ್ತದೆ. ​ಹೀಗಿದ್ದರೂ, ರೈತರ ಸಂಕಷ್ಟ, ಬರಗಾಲದ ಪರಿಸ್ಥಿತಿ, ಜನರ ಮೂಲ ಸೌಕರ್ಯಗಳಿಗೆ ಆದ್ಯತೆ ನೀಡೋದನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿ, ನಕಲಿ ಗಾಂಧಿಗಳನ್ನು ಓಲೈಸಲು ಸಂದೇಹಾಸ್ಪದ ಮತದಾರರನ್ನು ರಕ್ಷಿಸಲು ಸಚಿವ ಸಂಪುಟ ಸಭೆಯನ್ನೇ ಮುಂದೂಡಿ ಧರಣಿ ನಡೆಸುತ್ತಿರುವುದು ನಿಜಕ್ಕೂ ದುರಂತ ಹಾಗೂ ಖಂಡನೀಯ. ಇದು ಇಲ್ಲದ ಗುಮ್ಮನನ್ನು ಸೃಷ್ಟಿಸಿ ಜನರನ್ನು ದಿಕ್ಕು ತಪ್ಪಿಸುವ ನಾಟಕವಷ್ಟೇ ಎಂದವರು ಆರೋಪಿಸಿದ್ದಾರೆ.

‘ನೈಸ್ ಅಕ್ರಮ ಜನರ ಮನಸ್ಸಿನಿಂದ ದೂರ ಸರಿಸೋಕೆ ಈ ನಾಟಕ’

HD Kumaraswamy on Congress: ಸಚಿವ ಸಂಪುಟ ರದ್ದು ಮಾಡಿ ರಾಜಕೀಯ ಪ್ರಹಸನ ಪ್ರಾರಂಭ ಮಾಡವ್ರೆ ಅಂತಾ ವ್ಯಂಗ್ಯ | #TV9D

ಇದೇ ವಿಚಾರವಾಗಿ ಕಿಡಿ ಕಾರಿರುವ ಮತ್ತೋರ್ವ ಕೇಂದ್ರ ಸಚಿವ ಹೆಚ್​​.ಡಿ. ಕುಮಾರಸ್ವಾಮಿ, ಸಂಪುಟ ಸಭೆ ರದ್ದುಗೊಳಿಸಿ ಧರಣಿ‌ ನಡೆಸಿದ್ದಕ್ಕೆ ನಾಚಿಕೆ ಆಗಬೇಕು. ದೆಹಲಿ ನಾಯಕರ ಮಾತು ಕೇಳಿಸಿಕೊಂಡು ಬಂದು ನಾಟಕ ಮಾಡ್ತಿದ್ದೀರಾ? ಕಾಂಗ್ರೆಸ್ ಹೈಕಮಾಂಡ್‌ ಸೂಚನೆಯಂತೆ ಈ ಡ್ರಾಮಾ ನಡೆಯುತ್ತಿದೆಯಾ?  ಫಾರ್ಮ್ 7 ಕೊಟ್ಟಾಗ ನೀವೇನು ಮಾಡ್ತಿದ್ರಿ, ಕಾರ್ಯಕರ್ತರು ಏನು ಮಾಡ್ತಿದ್ರು? ನಿಮ್ಮ ಕಾರ್ಯಕರ್ತರಿಗೆ ದೊಡ್ಡ ಪಾಠ ಹೇಳುತ್ತೀರಿ, ಇದನ್ನು ಏಕೆ ಹೇಳಲಿಲ್ಲ? ಕಲ್ಯಾಣಮಂಟಪ, ಮನೆಯಲ್ಲಿ SIR ಮಾಡ್ತಿದ್ದಾರೆ ಅಂದಾಗ ಏಕೆ ಮಾತಾಡಿಲ್ಲ? ಎಂದು ಪ್ರಶ್ನಿಸಿದ್ದಾರೆ. ನೈಸ್ ಅಕ್ರಮ ಜನರ ಮನಸ್ಸಿನಿಂದ ದೂರ ಸರಿಸೋಕೆ ಈ ನಾಟಕ ನಡೆಯುತ್ತಿದೆ ಎಂದು ದೂರಿದ್ದಾರೆ.

ಇದನ್ನೂ ಓದಿ: ಅಕ್ರಮವಾಗಿ ಫಾರ್ಮ್-7 ಸಲ್ಲಿಸಿಕೆ ಆರೋಪ: ಚುನಾವಣಾ ಆಯೋಗದ ಕಚೇರಿಯಲ್ಲೇ ಪ್ರತಿಭಟನೆ ಕುಳಿತ ಸಿಎಂ ಆ್ಯಂಡ್​ ಟೀಮ್​

‘ಗ್ಯಾರಂಟಿ ಪರಿಷ್ಕರಣೆ ಆಗುತ್ತಿರುವಾಗ ಮತದಾರರ ಪಟ್ಟಿ ಆಗಬಾರದೆ?’

ರಾಜ್ಯ ಭೀಕರ ಬರಗಾಲದಲ್ಲಿ ಸಿಲುಕಿ ನರಳುತ್ತಿರುವಾಗ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ತಮ್ಮಸಂಪುಟದ ಸದಸ್ಯರ ಜತೆ ಸೇರಿ ರಾಜ್ಯ ಮುಖ್ಯ ಚುನಾವಣಾಧಿಕಾರಿಗಳ ಮುಂದೆ ರಾಜಕೀಯ ಪ್ರಹಸನ ನಡೆಸುತ್ತಿದ್ದಾರೆ. ರಾಜ್ಯ ಸರ್ಕಾರ ತನ್ನ ಗ್ಯಾರಂಟಿ ಯೋಜನೆಯಿ‌ದ ಮೊದಲ್ಗೊಂಡು ವಿಧವಾ ಹಾಗೂ ಅಂಗವಿಕಲರ ಪಿಂಚಣಿಯನ್ನು ಕಾಲಕಾಲಕ್ಕೆ ಪರಿಷ್ಕರಣೆ ಮಾಡುತ್ತಿರುವಾಗ ಚುನಾವಣಾ ಆಯೋಗ ಮತದಾರರ ಪಟ್ಟಿ ಪರಿಷ್ಕರಣೆ ಮಾಡಬಾರದು ಎಂದು ಬೀದಿ ನಾಟಕ ಮಾಡುವುದು ಎಷ್ಟು ಸರಿ? ಫಾರ್ಮ್ ನಂಬರ್ 7 ಪ್ರಕಾರ ಸಲ್ಲಿಕೆಯಾಗುವ ಆಕ್ಷೇಪಗಳನ್ನು ಇತ್ಯರ್ಥಪಡಿಸಿಬೇಕಾದವರು ಚುನಾವಣಾಧಿಕಾರಿಗಳೇ ಹೊರತು ಕಾಂಗ್ರೆಸ್ ನಾಯಕರಲ್ಲ. ಕಳ್ಳ ಮತದ ಮೂಲಕ ಚುನಾವಣೆ ಗೆಲ್ಲಬೇಕೆಂದು ಬಯಸುವ ಕಾಂಗ್ರೆಸ್ SIR ವಿರೋಧಿಸುತ್ತಿದೆ. ಸಿಎಂ ಡಿ.ಕೆ. ಶಿವಕುಮಾರ್ ಅವರೇ ರಾಜ್ಯ ಸಂಕಷ್ಟದಲ್ಲಿದೆ. ಆಡಳಿತ ಮಾಡಿ, ರಾಜಕೀಯ ಬಿಡಿ ಎಂದು ಬಿಜೆಪಿ ಶಾಸಕ ಸುನಿಲ್​​ ಕುಮಾರ್​​ ಕೂಡ ಆಗ್ರಹಿಸಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On - 8:41 pm, Thu, 1 October 26

ಸುನಿಲ್​ ಎಮ್​ ಹೆಚ್​
Loading...
Unable to load recommendations.
Follow Us