ಬೆಂಗಳೂರಿನಲ್ಲಿ ಕೊರೊನಾ ಅತಂಕ! ಶಾಲೆಗಳನ್ನ ಬಂದ್ ಮಾಡಲು ಆರ್ಕಿಡ್ ಇಂಟರ್ನ್ಯಾಷನಲ್ ಸಂಸ್ಥೆ ನಿರ್ಧಾರ

| Updated By: sandhya thejappa

Updated on: Jan 04, 2022 | 12:55 PM

ಆರ್ಕಿಡ್ ಇಂಟರ್​ನ್ಯಾಷನಲ್ಲಿ ಸಂಸ್ಥೆ (Orchid International School) ಕೊರೊನಾ ಹೆಚ್ಚಾಗುತ್ತಿರುವ ಕಾರಣ ಶಾಲೆ ಬಂದ್ ಮಾಡಲು ನಿರ್ಧರಿಸಿದೆ. ಆರ್ಕಿಡ್ ಸಂಸ್ಥೆ ದೇಶದಲ್ಲಿ ಸುಮಾರು 48 ಶಾಲೆಗಳನ್ನ ಹೊಂದಿದೆ.

ಬೆಂಗಳೂರಿನಲ್ಲಿ ಕೊರೊನಾ ಅತಂಕ! ಶಾಲೆಗಳನ್ನ ಬಂದ್ ಮಾಡಲು ಆರ್ಕಿಡ್ ಇಂಟರ್ನ್ಯಾಷನಲ್ ಸಂಸ್ಥೆ ನಿರ್ಧಾರ
ಆರ್ಕಿಡ್ ಇಂಟರ್​ನ್ಯಾಷನಲ್ ಶಾಲೆ
Follow us on

ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಮೂರನೇ ಅಲೆ ಆತಂಕದ ನಡುವೆ ಮತ್ತೆ ಲಾಕ್​ಡೌನ್ ಆಗುತ್ತಾ ಎಂಬ ಭೀತಿ ಇದೆ. ಕೊರೊನಾ ಮೂರನೇ ಅಲೆ ಮಕ್ಕಳ ಮೇಲೆ ಹೆಚ್ಚು ಪರಿಣಾಮ ಬೀಳುತ್ತದೆ ಅಂತ ಈಗಾಗಲೇ ತಜ್ಞರು ಹೇಳಿದ್ದಾರೆ. ರಾಜ್ಯದ ಹಲವೆಡೆ ಮಕ್ಕಳಿಗೆ ಸೋಂಕು ತಗುಲಿದ್ದು, ಆತಂಕ ಹೆಚ್ಚಾಗುತ್ತಿದೆ. ಸದ್ಯ ಬೆಂಗಳೂರಿನಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ಹೆಚ್ಚಳವಾಗುತ್ತಿರುವ ಹಿನ್ನೆಲೆ ಶಾಲೆಗಳನ್ನ ಬಂದ್ ಮಾಡಲು ಖಾಸಗಿ ಶಾಲೆಗಳು ಮುಂದಾಗಿವೆ.

ಆರ್ಕಿಡ್ ಇಂಟರ್​ನ್ಯಾಷನಲ್ಲಿ ಸಂಸ್ಥೆ (Orchid International School) ಕೊರೊನಾ ಹೆಚ್ಚಾಗುತ್ತಿರುವ ಕಾರಣ ಶಾಲೆ ಬಂದ್ ಮಾಡಲು ನಿರ್ಧರಿಸಿದೆ. ಆರ್ಕಿಡ್ ಸಂಸ್ಥೆ ದೇಶದಲ್ಲಿ ಸುಮಾರು 48 ಶಾಲೆಗಳನ್ನ ಹೊಂದಿದೆ. ಸದ್ಯ ಬೆಂಗಳೂರಿನಲ್ಲಿರುವ 16 ಶಾಲೆಗಳನ್ನ ಬಂದ್ ಮಾಡಲು ಸಂಸ್ಥೆ ತೀರ್ಮಾನಿಸಿದೆ. ಬೆಂಗಳೂರಿನ 16 ಶಾಲೆಗಳ ವಿದ್ಯಾರ್ಥಿಗಳಿಗೆ ಆನ್​ಲೈನ್ ಮೂಲಕ ತರಗತಿ ನೀಡಲಾಗುತ್ತದೆ.

ದೆಹಲಿ, ಮುಂಬೈ, ಪುಣೆ, ಗುರಗಾಂವ್, ಚೆನೈ, ಹೈದರಾಬಾದ್ ಸೇರಿದಂತೆ ಹಲವೆಡೆ ಕೊವಿಡ್ ಸೋಂಕಿತರ ಸಂಖ್ಯೆ ಏರಿಕೆಯಾಗುತ್ತಿರುವ ಹಿನ್ನೆಲೆ ಪೋಷಕರು ಆನ್​ಲೈನ್​ ಕ್ಲಾಸ್ ನಡೆಸಲು ಮನವಿ ಮಾಡಿದ್ದಾರೆ. ಹೀಗಾಗಿ ಆರ್ಕಿಡ್ ಸಂಸ್ಥೆ ಇಂದಿನಿಂದ ಆಫ್​ಲೈನ್​ ಕ್ಲಾಸ್ ಬಂದ್ ಮಾಡಿ ಆನ್​ಲೈನ್ ಕ್ಲಾಸ್ ಮೊರೆ ಹೋಗಿದೆ.

ಇಂದು ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಮಹತ್ವದ ಸಭೆ ನಡೆಯಲಿದೆ. ಸಭೆಯಲ್ಲಿ ಕೊರೊನಾ ಸೋಂಕನ್ನು ನಿಯಂತ್ರಿಸಲು ಕಠಿಣ ನಿಯಮ ಜಾರಿ ಬಗ್ಗೆ ಚರ್ಚಿಸಲಾಗುತ್ತದೆ. ತಜ್ಞರ ಸಲಹೆ ಮೇರೆಗೆ ಇಂದು ಕಠಿಣ ಕ್ರಮಗಳ ಬಗ್ಗೆ ನಿರ್ಧಾರ ಮಾಡಲಾಗುತ್ತದೆ. ರಾಜ್ಯದ ಶಾಲೆಗಳಿಗೆ ಮತ್ತೆ ಬೀಗ ಬೀಳಬಹುದು. ಶೇ.2ಕ್ಕಿಂತ ಹೆಚ್ಚು ಪಾಸಿಟಿವಿಟಿ ರೇಟ್ ಇರುವ ಜಿಲ್ಲಾ ಕೇಂದ್ರಗಳಲ್ಲಿ ಶಾಲೆಗಳಿಗೆ ಬೀಗಾ ಬೀಳುವ ಸಾಧ್ಯತೆ ಹೆಚ್ಚಿದೆ. 15 ವರ್ಷದೊಳಗಿನ ಮಕ್ಕಳಿಗೆ ವ್ಯಾಕ್ಸಿನ್ ಲಭ್ಯವಿಲ್ಲ. ಹೀಗಾಗಿ 1ರಿಂದ 9ನೇ ತರಗತಿ ಮಕ್ಕಳಿಗೆ ಆನ್​ಲೈನ್​ ತಗರತಿ ನಡೆಸಲು ಸೂಚಿಸಬಹುದು.

ಇದನ್ನೂ ಓದಿ

ಮನೆಯಲ್ಲೇ ಸೃಷ್ಟಿಯಾಯ್ತು ಪ್ರಕೃತಿಯ ಸೊಬಗು; ಟೆರೇಸ್ ಮೇಲೆ ಬಗೆ ಬಗೆಯ ತರಕಾರಿ, ಹೂಗಳ ಬೆಳೆದು ಸೈ ಎನಿಸಿಕೊಂಡ ಕೃಷ್ಣಪ್ಪ!

ಅಕ್ರಮ ಬಗ್ಗೆ ಆರೋಪಿಸಿದ್ದಕ್ಕೆ ವ್ಯಕ್ತಿ ಮೇಲೆ ಹಲ್ಲೆ ನಡೆಸಿದ ಗ್ರಾಮ ಪಂಚಾಯಿತಿ ಅಧ್ಯಕ್ಷ, ಸದಸ್ಯರು

Published On - 12:32 pm, Tue, 4 January 22