ಥೈಲ್ಯಾಂಡ್ ಆಗಸದಲ್ಲಿ ಕನ್ನಡ ಬಾವುಟ ಹಾರಿಸಿದ ಕನ್ನಡಿಗ – ಇದು ಕನ್ನಡ ಬಾವುಟಕ್ಕೆ ಅವಮಾನ ಮಾಡಿದ್ದಕ್ಕೆ ಕನ್ನಡಿಗನಿಂದ ತಕ್ಕ ಉತ್ತರ

ಮಹಾರಾಷ್ಟ್ರದಲ್ಲಿ ಪುಂಡರು ಕನ್ನಡ ಬಾವುಟಕ್ಕೆ ಅವಮಾನ ಮಾಡಿದ್ದಕ್ಕೆ ಪುರುಷೋತ್ತಮ ಶಾಮಾಚಾರ್ ಎಂಬ ಯುವಕ ಆಕಾಶದ ಮೇಲೆ ಕನ್ನಡ ಬಾವುಟ ಹಾರಿಸಿ ಪ್ರತೀಕಾರ ತೀರಿಸಿಕೊಂಡಿದ್ದಾನೆ.

ಥೈಲ್ಯಾಂಡ್ ಆಗಸದಲ್ಲಿ ಕನ್ನಡ ಬಾವುಟ ಹಾರಿಸಿದ ಕನ್ನಡಿಗ - ಇದು ಕನ್ನಡ ಬಾವುಟಕ್ಕೆ ಅವಮಾನ ಮಾಡಿದ್ದಕ್ಕೆ ಕನ್ನಡಿಗನಿಂದ ತಕ್ಕ ಉತ್ತರ
ಥೈಲ್ಯಾಂಡ್ ಆಗಸದಲ್ಲಿ ಕನ್ನಡ ಬಾವುಟ ಹಾರಿಸಿದ ಕನ್ನಡಿಗ - ಇದು ಕನ್ನಡ ಬಾವುಟಕ್ಕೆ ಅವಮಾನ ಮಾಡಿದ್ದಕ್ಕೆ ಕನ್ನಡಿಗನಿಂದ ತಕ್ಕ ಉತ್ತರ
Follow us
TV9 Web
| Updated By: ಆಯೇಷಾ ಬಾನು

Updated on:Jan 04, 2022 | 10:48 AM

ಬೆಂಗಳೂರು: ಮಹಾರಾಷ್ಟ್ರದ ಕೊಲ್ಲಾಪುರದಲ್ಲಿ ಎಂಇಎಸ್ ಕಾರ್ಯಕರ್ತರು(MES) ಕನ್ನಡ ಬಾವುಟವನ್ನು ದಹನ(Karnataka Flag Burnt) ಮಾಡಿ ಪುಂಡಾಟ ಮೆರೆದಿದ್ದರು. ಘಟನೆ ಬಳಿಕ ಪ್ರತಿಯೊಬ್ಬ ಕನ್ನಡಿಗನ ರಕ್ತವೂ ಕುದಿದಿತ್ತು. ಎಂಇಎಸ್ ಪುಂಡಾಟ ಕಟ್ಟಿ ಹಾಕಲು ಕನ್ನಡ ಪರ ಸಂಘಟನೆಗಳು ಬಂದ್ಗೆ ಮುಂದಾಗಿದ್ದವು. ಅನೇಕ ಕನ್ನಡಿಗರು ವಿವಿಧ ರೀತಿಯಲ್ಲಿ ತಮ್ಮ ಆಕ್ರೋಶವನ್ನು ಹೊರ ಹಾಕಿದ್ರು. ಆದ್ರೆ ಇಲ್ಲೊಬ್ಬ ಕನ್ನಡಿಗ ಎಂಇಎಸ್ ಪುಂಡರಿಗೆ ಬೇರೆ ರೀತಿಯೇ ಪಾಠ ಕಳಿಸಿದ್ದಾನೆ. ಎಂಇಎಸ್ ಪುಂಡರಿಗೆ ತಿರುಗೇಟು ಕೊಡುವಂತೆ ವೀರ ಕನ್ನಡಿಗನ ಮಹಾನ್ ಸಾಧನೆಯೊಂದನ್ನು ಮಾಡಿದ್ದಾನೆ.

ಆಗಸದಲ್ಲಿ ಕನ್ನಡ ಬಾವುಟ ಹಾರಿಸಿದ ಕನ್ನಡ ಪ್ರೇಮಿ ಮಹಾರಾಷ್ಟ್ರದಲ್ಲಿ ಪುಂಡರು ಕನ್ನಡ ಬಾವುಟಕ್ಕೆ ಅವಮಾನ ಮಾಡಿದ್ದಕ್ಕೆ ಪುರುಷೋತ್ತಮ ಶಾಮಾಚಾರ್ ಎಂಬ ಯುವಕ ಆಕಾಶದ ಮೇಲೆ ಕನ್ನಡ ಬಾವುಟ ಹಾರಿಸಿ ಪ್ರತೀಕಾರ ತೀರಿಸಿಕೊಂಡಿದ್ದಾನೆ. ಬೆಂಗಳೂರಿನ ನಾಗರಬಾವಿಯ ನಿವಾಸಿ ಪುರುಷೋತ್ತಮ ಶಾಮಾಚಾರ್ ಸದ್ಯ ಥಾಯ್ಲ್ಯಾಂಡ್ ನಲ್ಲಿ ಟೆಕ್ಲಿಕಲ್ ಇಂಜಿನಿಯರ್ ಆಗಿದ್ದಾರೆ. ಇವರು ಕನ್ನಡಿಗರ ಹೆಮ್ಮೆಯ ಕನ್ನಡದ ಧ್ವಜಕ್ಕೆ ಯಾರೂ ಅವಮಾನ ಮಾಡಲು ಸಾಧ್ಯವಿಲ್ಲ, ಕನ್ನಡ ಬಾವುಟ ಎತ್ತರದಲ್ಲಿ ಹಾರೋ ಸ್ವಾಭಿಮಾನಿಗಳ ಧ್ವಜ ಎಂಬ ಸಂದೇಶ ಸಾರುವ ಸಲುವಾಗಿ ಥಾಯ್ಲ್ಯಾಂಡ್ ನಲ್ಲಿ 14 ಸಾವಿರ ಮೀಟರ್ (14 ಕಿಲೋಮೀಟರ್ ) ಎತ್ತರದಿಂದ ಸ್ಕೈ ಡೈವ್ ಮಾಡಿ ಕನ್ನಡ ಬಾವುಟ ಹಾರಿಸಿದ್ದಾರೆ.

ಪ್ರಾಣದ ಹಂಗು ತೊರೆದು ಆಗಸದಲ್ಲಿ ಕನ್ನಡ ಬಾವುಟ ಆರಿಸಿದ್ದಾರೆ. ಪುಂಡರಿಂದ ಕನ್ನಡ ಬಾವುಟಕ್ಕೆ ಅವಮಾನ ಆಗಿದ್ರಿಂದ ಬೇಸರಗೊಂಡ ಪುರುಷೋತ್ತಮ್ ಆಗಸದಲ್ಲಿ ಕನ್ನಡ ಬಾವುಟ ರಾರಾಜಿಸುವಂತೆ ಮಾಡಿದ್ದಾರೆ.

karnataka flag on blue sky

ಥೈಲ್ಯಾಂಡ್ ಆಗಸದಲ್ಲಿ ಕನ್ನಡ ಬಾವುಟ ಹಾರಿಸಿದ ಕನ್ನಡಿಗ

karnataka flag on blue sky

ಪುರುಷೋತ್ತಮ ಶಾಮಾಚಾರ್

ಇದನ್ನೂ ಓದಿ: ‘ಪುನೀತ್ ಬಹಳ ಶ್ರಮಜೀವಿ, ಅವರೊಂದಿಗೆ ಡಾನ್ಸ್ ಮಾಡಬೇಕು ಎಂಬ ಕನಸಿತ್ತು’; ಅಪ್ಪು ಸ್ಮರಿಸಿದ ನಟಿ ಪ್ರೇಮಾ

Published On - 10:09 am, Tue, 4 January 22

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ