ಅಕ್ರಮ ಬಗ್ಗೆ ಆರೋಪಿಸಿದ್ದಕ್ಕೆ ವ್ಯಕ್ತಿ ಮೇಲೆ ಹಲ್ಲೆ ನಡೆಸಿದ ಗ್ರಾಮ ಪಂಚಾಯಿತಿ ಅಧ್ಯಕ್ಷ, ಸದಸ್ಯರು
2020-21ನೇ ಸಾಲಿನ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಹಣ ದುರುಪಯೋಗ ಆಗಿದೆ ಅಂತ ಸಂಗಪ್ಪ ಗೂಡಗಾರ್ ಆರೋಪಿಸಿದ್ದಾರೆ. ಅಧ್ಯಕ್ಷ ವಿರೂಪಾಕ್ಷ ತೊರಗಲ್, ಪಿಡಿಓ ಫಕ್ಕೀರವ್ವ ಹನಸಿ ವಿರುದ್ಧ ಹಣ ದುರುಪಯೋಗದ ಆರೋಪ ಕೇಳಿಬಂದಿದೆ.
ಬೆಳಗಾವಿ: ಅಕ್ರಮ ಬಗ್ಗೆ ಆರೋಪಿಸಿದ ವ್ಯಕ್ತಿ ಮೇಲೆ ಗ್ರಾಮ ಪಂಚಾಯತಿ ಅಧ್ಯಕ್ಷ ಮತ್ತು ಸದಸ್ಯರು ಹಲ್ಲೆ ನಡೆಸಿದ್ದಾರೆ. ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಹೂಲಿ ಗ್ರಾಮ ಪಂಚಾಯಿತಿ ಅಧ್ಯಕ್ಷ, ಸದಸ್ಯರು ಗೂಂಡಾ ರೀತಿ ವರ್ತನೆ ಮಾಡಿದ್ದಾರೆ. ಸಂಗಪ್ಪ ಗೂಡಗಾರ್ ಎಂಬುವವರ ಮೇಲೆ ಗ್ರಾಮ ಪಂಚಾಯತಿ ಅಧ್ಯಕ್ಷ ವಿರೂಪಾಕ್ಷ ತೊರಗಲ್ ಮತ್ತು ಬೆಂಬಲಿಗರು ಹಲ್ಲೆ ನಡೆಸಿದ್ದು, ಗೂಂಡಾವರ್ತನೆಯ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
2020-21ನೇ ಸಾಲಿನ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಹಣ ದುರುಪಯೋಗ ಆಗಿದೆ ಅಂತ ಸಂಗಪ್ಪ ಗೂಡಗಾರ್ ಆರೋಪಿಸಿದ್ದಾರೆ. ಅಧ್ಯಕ್ಷ ವಿರೂಪಾಕ್ಷ ತೊರಗಲ್, ಪಿಡಿಓ ಫಕ್ಕೀರವ್ವ ಹನಸಿ ವಿರುದ್ಧ ಹಣ ದುರುಪಯೋಗದ ಆರೋಪ ಕೇಳಿಬಂದಿದೆ. ಅಕ್ರಮ ನಡೆದ ಬಗ್ಗೆ ಜಿಲ್ಲಾ ಪಂಚಾಯತಿ ಸಿಇಓ ಅವರಿಗೆ ಸಂಗಪ್ಪ ದಾಖಲೆ ಸಮೇತ ದೂರು ನೀಡಿದ್ದಾರೆ. ತಾಲೂಕು ಪಂಚಾಯಿತಿ ಮುಖ್ಯಾಧಿಕಾರಿಗೆ ಅಕ್ರಮ ನಡೆದ ಬಗ್ಗೆ ತನಿಖೆ ಮಾಡುವಂತೆ ಸಿಇಓ ಆದೇಶ ಮಾಡಿದ್ದು, ನಿನ್ನೆ (ಜ.3) ಮುಖ್ಯಾಧಿಕಾರಿ ಸಂಗನೌಡ ಹಂದ್ರಾಳ ನೇತೃತ್ವದಲ್ಲಿ ಪರಿಶೀಲನೆ ನಡೆದಿದೆ.
ಗ್ರಾಮ ಪಂಚಾಯತಿಯಲ್ಲಿ ಪರಿಶೀಲನೆ ವೇಳೆ ಅಧ್ಯಕ್ಷ ವಿರೂಪಾಕ್ಷ ಸಂಗಪ್ಪನ ಮೇಲೆ ಹಲ್ಲೆ ಮಾಡಿದ್ದಾರೆ. ಇವರ ಗೂಂಡಾವರ್ತನೆ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಇದನ್ನೂ ಓದಿ
ರೈಲಿನಲ್ಲಿ ಟಿಕೆಟ್ ಇಲ್ಲದೆ ಪ್ರಯಾಣಿಸಿದ ವ್ಯಕ್ತಿಯನ್ನು ಬೂಟುಗಾಲಿನಿಂದ ಒದೆದ ಕೇರಳ ಪೊಲೀಸ್ ಅಮಾನತು
ಐಟಿಆರ್, ಆಧಾರ್, ತೆರಿಗೆ ಯೋಜನೆ ತನಕ 2022ನೇ ಇಸವಿಯಲ್ಲಿನ 5 ಗಡುವು ದಿನಾಂಕಗಳ ಬಗ್ಗೆ ತಿಳಿಯಿರಿ