ಪಂಚಮಸಾಲಿ ಮೀಸಲಾತಿ: ಬಿಜೆಪಿ ಸರ್ಕಾರಕ್ಕೆ ಕೊನೆಯ ಎಚ್ಚರಿಕೆ ಕೊಟ್ಟ ಜಯಮೃತ್ಯುಂಜಯಶ್ರೀ
ಮಾ.15ರವರೆಗೆ ಫ್ರೀಡಂಪಾರ್ಕ್‌ನಲ್ಲಿ ಹೋರಾಟ ಮಾಡುತ್ತೇವೆ. ನಂತರವೂ ಮೀಸಲಾತಿ ನೀಡದಿದ್ರೆ ಕ್ಷೇತ್ರಗಳಲ್ಲಿ ಧರಣಿ ನಡೆಸುತ್ತೇವೆ ಎಂದು ಕೂಡಲಸಂಗಮದ ಪಂಚಮಸಾಲಿ ಪೀಠಾಧಿಪತಿ ಬಸವ ಜಯಮೃತ್ಯುಂಜಯ ಸ್ವಾಮೀಜಿ ಹೇಳಿದರು.
ಬೆಂಗಳೂರು: ಮಾ.15ರವರೆಗೆ ಫ್ರೀಡಂಪಾರ್ಕ್‌ನಲ್ಲಿ ಹೋರಾಟ ಮಾಡುತ್ತೇವೆ. ನಂತರವೂ ಮೀಸಲಾತಿ ನೀಡದಿದ್ರೆ ಕ್ಷೇತ್ರಗಳಲ್ಲಿ ಧರಣಿ ನಡೆಸುತ್ತೇವೆ ಎಂದು ಕೂಡಲಸಂಗಮದ ಪಂಚಮಸಾಲಿ ಪೀಠಾಧಿಪತಿ ಬಸವ ಜಯಮೃತ್ಯುಂಜಯ ಸ್ವಾಮೀಜಿ (Mruthyunjaya Swamiji) ಹೇಳಿದರು. ನಗರದ ಪಂಚಮಸಾಲಿ ರಾಷ್ಟ್ರೀಯ ಕಾರ್ಯಕಾರಿಣಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿ, ಎಲ್ಲಾ ವಿಧಾನಸಭಾ ಕ್ಷೇತ್ರಗಳಿಗೆ ಹೋಗಿ ಪ್ರತಿಭಟನೆ ಮಾಡುತ್ತೇವೆ. ಪ್ರತಿಭಟನೆಯಲ್ಲಿ ಸರ್ಕಾರ ಮಾಡಿದ ಮೋಸವನ್ನು ಜನರಿಗೆ ತಿಳಿಸ್ತೇವೆ. ಪಂಚಮಸಾಲಿಗರ ಹೋರಾಟದ ಕಿಚ್ಚನ್ನು ಜನರ ಮುಂದೆ ತೆರೆದಿಡ್ತೇವೆ ಎಂದು ಹೇಳಿದರು.
ಮೀಸಲಾತಿ ಕೊಡಿಸಬೇಕು ಅಂತ ಎರಡು ವರ್ಷಗಳಿಂದ ಪಂಚಮಸಾಲಿ ಸಮುದಾಯ ಹೋರಾಟ ಮಾಡಿದೆ. ನಮಗೆ ನ್ಯಾಯ ಸಿಕ್ಕೆ ಸಿಗುತ್ತೆ ಅಂತ ಮುಖ್ಯಮಂತ್ರಿಗಳನ್ನು ನಂಬಿದ್ದೇವು. ಹೀಗಾಗಿಯೇ ವಿಧಾನಸೌಧಕ್ಕೆ ಮುತ್ತಿಗೆ ಹಾಕಲು ಯತ್ನಿಸಿದ್ವಿ. ಈ ವೇಳೆ ತಾಯಿ ಮೇಲೆ ಆಣೆ ಮಾಡಿ ಮೀಸಲಾತಿ ಕೊಡುವುದಾಗಿ ಹೇಳಿದ್ರು.ಆದರೆ ಮೀಸಲಾತಿ ಕೊಡದೇ ಮೋಸ ಮಾಡಿದ್ದಾರೆ. ತಾಯಿ ಮೇಲೆ ಆಣೆ ಹಾಕಿಯು ಮೋಸ ಮಾಡಿದ ಮೇಲೆ ನಾವು ಸುಮ್ಮನಿರಬಾರದು ಅಂತ ಇಲ್ಲಿಯವರೆಗೂ ಹೊರಾಟ ಮಾಡಿದ್ವಿ. ಅವರವರ ಸ್ವಂತ ಖರ್ಚಿನಲ್ಲಿ ಹೋರಾಟಕ್ಕೆ ಬಂದು ಸಹಕರಿಸಿದ್ರು ಎಂದರು.
ಇದನ್ನೂ ಓದಿ: ಪಂಚಮಸಾಲಿ ಹೋರಾಟ: ಯತ್ನಾಳ್ಗೆ ಕರೆ ಮಾಡಿ ಗುಡ್ನ್ಯೂಸ್ ಕೊಟ್ಟ ಬಿಜೆಪಿ ಹೈಕಮಾಂಡ್
34 ದಿನಗಳಿಂದ ಶ್ರೀಗಳ ಹೋರಾಟ: ಯತ್ನಾಳ್
ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಮಾತನಾಡಿ, 34 ದಿನಗಳಿಂದ ಶ್ರೀಗಳು ಹೋರಾಟ ಮಾಡುತ್ತಿದ್ದಾರೆ. ಇದರ ಪರಿಣಾಮ ಸಾಕಷ್ಟು ಸಮುದಾಯ ಮೀಸಲಾತಿ ವಿಚಾರದಲ್ಲಿ ಕೇಂದ್ರ ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಕೇಂದ್ರದ ನಮ್ಮ ನಾಯಕರು ನನ್ನನ್ನ ಕರೆಸಿ ಮಾಹಿತಿಯನ್ನ ಪಡೆದುಕೊಂಡಿದ್ದಾರೆ. ಕಡೆ ಎಚ್ಚರಿಕೆ ಕೊಟ್ಟಿದ್ದಾರೆ, ಬೇಡಿಕೆ ಇಟ್ಟಿದ್ದಾರೆ ಅಂತ ಉದ್ದೇಶ ಪೂರ್ವಕವಾಗಿ ಕೆಲ ಜನರು ಹೇಳ್ತಾ ಇದ್ದಾರೆ. ನಮ್ಮ ಪಕ್ಷದ ಉನ್ನತ ಹುದ್ದೆಯಲ್ಲಿರುವಂತವರು ಮೀಸಲಾತಿ ಕುರಿತಾಗಿ ಗಂಭೀರವಾಗಿ ನಿರ್ಧಾರ ತೆಗೆದುಕೊಳ್ಳಬೇಕು ಎಂದು ಹೇಳಿದರು.
ಸಿಎಂ ಬೊಮ್ಮಯಿ ಯಾವುದೇ ನಿರ್ಣಯವನ್ನ ತೆಗೆದುಕೊಳ್ಳಲಿಲ್ಲ
ಚುನಾವಣಾ ನೀತಿ ಸಂಹಿತೆ ಬರುವ ಮುಂಚೆಯೇ ಸಿಎಂ ಬೊಮ್ಮಯಿಯವರು ಮೀಸಲಾತಿ ಕೊಡ್ತಾರೆ ಅಂದುಕೊಂಡಿದ್ವಿ. ಆದ್ರೆ ಯಾವುದೇ ನಿರ್ಣಯವನ್ನ ತೆಗೆದುಕೊಳ್ಳಲಿಲ್ಲ. ಹೀಗಾಗಿ ಕೇಂದ್ರದ ನಾಯಕರು ಮಾಹಿತಿ ಪಡೆದುಕೊಂಡಿದ್ದಾರೆ. ಎಲ್ಲಾ ಸಮುದಾಯಗಳಿಗೆ ಕೊಟ್ಟಂತೆ ನಾವು ಮೀಸಲಾತಿ ಕೇಳ್ತಾ ಇದ್ದೀವಿ. ಈ ಹೋರಟ ಎರಡು ವರ್ಷಗಳಿಂದ ಮಾಡುತ್ತಾ ಬಂದಿದ್ದಾರೆ. ಒಂದು ಸಮಾಜದಲ್ಲಿ ನಮ್ಮ ಸಮುದಾಯ ಶಕ್ತಿ ತುಂಬುವ ಕೆಲಸ ಮಾಡುತ್ತಿದೆ ಎಂದು ತಿಳಿಸಿದರು.
ಇದನ್ನೂ ಓದಿ: ಉತ್ತರ ಕರ್ನಾಟಕದಲ್ಲಿ ಕುಮಾರಸ್ವಾಮಿಯದ್ದು ಏನೂ ನಡೆಯಲ್ಲ, ಅವರದ್ದೇನಿದ್ದರೂ ಮಂಡ್ಯ, ಹಾಸನ ಎಂದ ಶಾಸಕ ಯತ್ನಾಳ್
ನನ್ನ ಉದ್ದೇಶ ಮೀಸಲಾತಿ ಕೊಡಿಸುವುದಷ್ಟೇ
ರಾಜಕೀಯ ಪಕ್ಷಗಳಿಗೆ ಅರಿವು ಇದೆ. ಆದ್ರೆ ನಮ್ಮನ್ನ ಬಿಟ್ಟು ಬೇರೆಯವರಿಗೆ ಓಟ್ ಹಾಕ್ತಾರೆ ಎನ್ನುವ ಮಾತಿಗಳನ್ನ ನಂಬಿಕೊಂಡು ಈ ರೀತಿಯಾಗಿ ಮಾಡ್ತಾ ಇದ್ದಾರೆ. ನಾನು ಮೌನವಾಗಿರುವುದಕ್ಕೆ ಕಾರಣ ಬೇರೆ ಇದೆ. ನಾನು ಕಾಂಪ್ರೂಮೈಸ್ ಆಗಿದ್ದೀನಿ ಅಂತಲ್ಲ. ನಾನು ಸರ್ಕಾರದ ಜೊತೆಗೆ ಈ ಕುರಿತಾಗಿ ಚರ್ಚೆಯನ್ನ ಮಾಡಿದ್ದೀನಿ. ಇಂದು ಗುರುಗಳು ಯಾವುದೇ ನಿರ್ಣಯ ತೆಗೆದುಕೊಂಡ್ರು ನಾವು ಅನುಸರಿಸುತ್ತೀವಿ. ನಾನು ಬೇರೆಯವರ ರೀತಿ ಒಳಗೊಂದು ಹೊರಗೊಂದು ಇಲ್ಲ. ನನ್ನ ಉದ್ದೇಶ ಮೀಸಲಾತಿ ಕೊಡಿಸುವುದಷ್ಟೇ ಎಂದರು.
ನನಗೆ ಯಾವುದೇ ಆಸೆಗಳು ಇಲ್ಲ
ಯತ್ನಾಳ್ರನ್ನ ಪಕ್ಷದಿಂದ ಹೊರಗೆ ಹಾಕುತ್ತಾರೆ ಅಂತ ಅಂದುಕೊಂಡಿದ್ರು. ಆದ್ರೆ ನಾನು ಪಕ್ಷದಲ್ಲಿ ಇರುವುದರಿಂದ ಕೆಲವರಿಗೆ ಅನುಮಾನ ಇದೆ. ನಾನು ಮುಖ್ಯಮಂತ್ರಿಗಳ ಜೊತೆಗೂ ಮಾತಾನಾಡಿದ್ದೀನಿ. ಅವರು ಮೀಸಲಾತಿ ಕೊಡುವುದಾಗಿ ಹೇಳುತ್ತಿದ್ದಾರೆ. ನಾನು ಕಾನ್ಫಿಡೆಂಟ್ ಆಗಿ ಇದ್ದೀನಿ. ಗುರುಗಳು ಯಾವುದೇ ನಿರ್ಣಯ ತೆಗೆದುಕೊಂಡ್ರು ನಾನು ಬದ್ದ. ನನಗೆ ಯಾವುದೇ ಆಸೆಗಳು ಇಲ್ಲ. ಆಸೆಗಳು ಇಲ್ಲದೇ ಇದ್ದಾಗ ಯಾರ ಕೈ ಕಾಲು ಹಿಡಿಯುವ ಅಗತ್ಯ ಬರುವುದಿಲ್ಲ ಎಂದು ಬಸವನಗೌಡ ಪಾಟೀಲ್ ಯತ್ನಾಳ್ ಹೇಳಿದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 10:39 pm, Thu, 16 February 23