AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪಂಡಿತ್​ ಡಾ. ಭೀಮಸೇನ ಜೋಶಿ ಜನ್ಮಶತಾಬ್ದಿ ಸಂಗೀತೋತ್ಸವ: ಇದೇ ವಾರಾಂತ್ಯ ಹಿಂದೂಸ್ತಾನಿ ಸಂಗೀತ ರಸದೌತಣ, ಸ್ಥಳ ಎಲ್ಲಿ?

Pandit Bhimsen Joshi Purnahuti Sangeethotsava: ಭಾರತ ರತ್ನ ಪಂಡಿತ್​ ಭೀಮಸೇನ ಜೋಶಿ ಜನ್ಮಶತಾಬ್ದಿ ಕಾರ್ಯಕ್ರಮ: ಮಾರ್ಚ್​ 20 ಬೆಳಗ್ಗೆ 10 ರಿಂದ ನಡೆಯಲಿರುವ ಕಾರ್ಯಕ್ರಮದಲ್ಲಿ ಪದ್ಮಶ್ರೀ ಪುರಸ್ಕೃತ ವೆಂಕಟೇಶ್​ ಕುಮಾರ್ ಮತ್ತು ಉಲ್ಲಾಸ್​ ಕಶಾಲ್ಕರ್, ವಿದುಷಿ ಆರತಿ ಅಂಕಲೀಕರ್, ಮಂಜೂಷಾ ಪಾಟೀಲ್ ಗಾಯನ ನಡೆಸಿಕೊಡಲಿದ್ದಾರೆ.

ಪಂಡಿತ್​ ಡಾ. ಭೀಮಸೇನ ಜೋಶಿ ಜನ್ಮಶತಾಬ್ದಿ ಸಂಗೀತೋತ್ಸವ: ಇದೇ ವಾರಾಂತ್ಯ ಹಿಂದೂಸ್ತಾನಿ ಸಂಗೀತ ರಸದೌತಣ, ಸ್ಥಳ ಎಲ್ಲಿ?
ಭಾರತ ರತ್ನ ಪಂಡಿತ್​ ಭೀಮಸೇನ ಜೋಶಿ ಜನ್ಮಶತಾಬ್ದಿ ಪೂರ್ಣಾಹುತಿ ಸಂಗೀತೋತ್ಸವ: ಇದೇ ವಾರಾಂತ್ಯ ಹಿಂದೂಸ್ತಾನಿ ಸಂಗೀತದ ರಸದೌತಣ, ಸ್ಥಳ ಎಲ್ಲಿ?
TV9 Web
| Edited By: |

Updated on:Mar 09, 2022 | 3:27 PM

Share

ಬೆಂಗಳೂರು: ಹಿಂದೂಸ್ತಾನಿ ಸಂಗೀತದಲ್ಲಿ ಮೊದಲ ಭಾರತ ರತ್ನ ಪ್ರಶಸ್ತಿ ಪಡೆದ, ಕನ್ನಡದ ಕಣ್ಮಣಿ ಪಂಡಿತ ಭೀಮಸೇನ ಜೋಶಿ ಅವರ ಜನ್ಮಶತಾಬ್ದಿ ಸಂದರ್ಭ ಈಗ. ಪಂಡಿತ ಡಾ. ಭೀಮಸೇನ ಜೋಶಿ ಕರುನಾಡಿನ ಕುವರ. ಮುದ್ರಣ ಕಾಶಿ ಗದಗ ಜಿಲ್ಲೆಯಲ್ಲಿ ಹುಟ್ಟಿ ವಿಶ್ವದಾದ್ಯಂತ ಹಿಂದುಸ್ತಾನಿ ಸಂಗೀತ ರಸದೌತಣ ನೀಡಿದವರು. ಈಗ ಅವರ ಜನ್ಮಶತಾಬ್ದಿ ಇರುವ ಹಿನ್ನೆಲೆಯಲ್ಲಿ ಹಿಂದೂಸ್ತಾನಿ ಸಂಗೀತ ಪ್ರೇಮಿಗಳಿಗೆ ಇದೇ ವಾರಾಂತ್ಯ ಪೂರ್ಣಾಹುತಿ ಸಂಗೀತೋತ್ಸವ ರಸದೌತಣ (Pandit Bhimsen Joshi Purnahuti Sangeethotsava) ಅರ್ಪಿಸಲು ಸಿದ್ಧತೆಗಳು ನಡೆದಿವೆ, ಈ ಮೂಲಕ ಡಾ. ಭೀಮಸೇನ ಜೋಶಿ ಅವರಿಗೆ ವಿಶೇಷ ಗೌರವ ಸಲ್ಲಿಸಲಾಗುತ್ತಿದೆ.

ಪುಣೆಯ ಸಂಗೀತಾಚಾರ್ಯ ಪಂಡಿತ ಡಿ.ವಿ. ಕಾಣೆಬುವಾ ಪ್ರತಿಷ್ಠಾನವು ಬೆಂಗಳೂರು ದಕ್ಷಿಣ ಭಾಗದ ಎನ್ ಆರ್​ ಕಾಲೋನಿಯಲ್ಲಿರುವ ರಾಮಮಂದಿರ ಬಳಿಯ ಪತ್ತಿ ಸಭಾಂಗಣ​ದಲ್ಲಿ(NR Colony Bangalre on March 19 and 20) ಇದೇ ವಾರಾಂತ್ಯ ಅಂದರೆ ಶನಿವಾರ-ಭಾನುವಾರ (ಮಾರ್ಚ್​ 19 ಮತ್ತು 20) ಪೂರ್ಣಾಹುತಿ ಸಂಗೀತ ಉತ್ಸವ ಹಮ್ಮಿಕೊಳ್ಳಲಾಗಿದೆ (Celebration of the birth centenary of Bharat Ratna Pandit Bhimsen Joshi ).

ಭಾರತ ರತ್ನ ಪಂಡಿತ್​ ಭೀಮಸೇನ ಜೋಶಿ ಜನ್ಮಶತಾಬ್ದಿ ಕಾರ್ಯಕ್ರಮ: ಈ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಿರುವ ಪ್ರತಿಷ್ಠಾನದ ಅಧ್ಯಕ್ಷರಾದ ಗೋವಿಂದ್ ಬೆಡೇಕರ್ ಅವರು ಪೂರ್ಣಾಹುತಿ ಉತ್ಸವವನ್ನು ಕೇಂದ್ರ ಸರ್ಕಾರ ಮತ್ತು ಕೇಂದ್ರ ಸಂಸ್ಕೃತಿ ಸಚಿವಾಲಯದ ಸಹಕಾರದಲ್ಲಿ ನಡೆಸಲಿದ್ದೇವೆ. ಮಾರ್ಚ್​​ 19 ಶನಿವಾರದಂದು ಸಂಜೆ 5ಕ್ಕೆ ಕಾರ್ಯಕ್ರಮಕ್ಕೆ ಚಾಲನೆ ದೊರೆಯಲಿದೆ ಎಂದು ತಿಳಿಸಿದ್ದಾರೆ. ಕಿರ್ಲೋಸ್ಕರ್ ಫರಸ್​​ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಾದ ಆರ್ ವಿ ಗುಮಾಸ್ತೆ ಅವರು ಉಪಸ್ಥಿತರಾಗಲಿದ್ದಾರೆ.

ಮಾರ್ಚ್​ 20 ಭಾನುವಾರ ಬೆಳಗ್ಗೆ 10 ರಿಂದ ಮಧ್ಯಾಹ್ನ 2 ವರೆಗೂ ನಡೆಯಲಿರುವ ಕಾರ್ಯಕ್ರಮದಲ್ಲಿ ಪದ್ಮಶ್ರೀ ಪುರಸ್ಕೃತ ವೆಂಕಟೇಶ್​ ಕುಮಾರ್ ಮತ್ತು ಉಲ್ಲಾಸ್​ ಕಶಾಲ್ಕರ್, ವಿದುಷಿ ಆರತಿ ಅಂಕಲೀಕರ್, ಮಂಜೂಷಾ ಪಾಟೀಲ್ ಗಾಯನ ನಡೆಸಿಕೊಡಲಿದ್ದಾರೆ. ಕುಮಾರ್​ ಬೋಸ್​ (ತಬಲಾ) ಮತ್ಉ ರಾಕೇಶ್ ಚೌರಾಸಿಯಾ (ಕೊಳಲು) ಸಾಥ್​ ನೀಡಲಿದ್ದಾರೆ.

ಇದನ್ನೂ ಓದಿ: ಹೀಗೊಂದು ನವರತ್ನ ವಿಚಾರ -ಶಾಲೆಗಳಲ್ಲಿ ಮಕ್ಕಳಿಗೆ ನೀಡುವ ಶಿಕ್ಷೆಗಳ ಹಿಂದೆ ಇದೆ ಸದುದ್ದೇಶ!

ಇದನ್ನೂ ಓದಿ: ಜ್ಯೋತಿಷ್ಯ ಶಾಸ್ತ್ರದ 27 ನಕ್ಷತ್ರಗಳ ಆಧಾರದ ಮೇಲೆ ಮನುಷ್ಯನನ್ನು ಕಾಡುವ ರೋಗ, ಅದರ ಕಾಲಾವಧಿ ಹೇಳಬಹುದು! ಅದು ಹೇಗೆ? ಇಲ್ಲಿದೆ ವಿವರ ಓದಿ

Published On - 2:09 pm, Wed, 9 March 22

VIDEO: 6 ಎಸೆತಗಳಲ್ಲಿ 7 ರನ್​: ಡೆಲ್ಲಿ ಕ್ಯಾಪಿಟಲ್ಸ್​ಗೆ ಇದೆಂಥ ಸೋಲು..!
VIDEO: 6 ಎಸೆತಗಳಲ್ಲಿ 7 ರನ್​: ಡೆಲ್ಲಿ ಕ್ಯಾಪಿಟಲ್ಸ್​ಗೆ ಇದೆಂಥ ಸೋಲು..!
ಜಮ್ಮು-ಕಾಶ್ಮೀರದ ಗಡಿಯಲ್ಲಿ 5 ಪಾಕಿಸ್ತಾನಿ ಡ್ರೋನ್​ಗಳು ಪತ್ತೆ, ಹೈ ಅಲರ್ಟ್​
ಜಮ್ಮು-ಕಾಶ್ಮೀರದ ಗಡಿಯಲ್ಲಿ 5 ಪಾಕಿಸ್ತಾನಿ ಡ್ರೋನ್​ಗಳು ಪತ್ತೆ, ಹೈ ಅಲರ್ಟ್​
ಪತಿಯ ಅಂತ್ಯಕ್ರಿಯೆಗೆ ಕಂದನ ಜತೆ ಸ್ಟ್ರೆಚರ್​ನಲ್ಲಿ ಬಂದ ಸೈನಿಕನ ಪತ್ನಿ
ಪತಿಯ ಅಂತ್ಯಕ್ರಿಯೆಗೆ ಕಂದನ ಜತೆ ಸ್ಟ್ರೆಚರ್​ನಲ್ಲಿ ಬಂದ ಸೈನಿಕನ ಪತ್ನಿ
ಶುಕ್ರವಾರದಂದು ಹುಳಿ ಪದಾರ್ಥ ತಿನ್ನಲೇಬಾರದು ಯಾಕೆ ಗೊತ್ತಾ?
ಶುಕ್ರವಾರದಂದು ಹುಳಿ ಪದಾರ್ಥ ತಿನ್ನಲೇಬಾರದು ಯಾಕೆ ಗೊತ್ತಾ?
ಇಂದು ಈ ರಾಶಿಯವರಿಗೆ ಹಣಕಾಸು ವಿಚಾರದಲ್ಲಿ ಅದೃಷ್ಟ!
ಇಂದು ಈ ರಾಶಿಯವರಿಗೆ ಹಣಕಾಸು ವಿಚಾರದಲ್ಲಿ ಅದೃಷ್ಟ!
ಬೆಂಗಳೂರಿನಲ್ಲಿ ಅಕ್ರಮವಾಗಿ ನೆಲೆಸಿದ್ದ ಬಾಂಗ್ಲಾ ವಲಸಿಗರ ಬಂಧನ
ಬೆಂಗಳೂರಿನಲ್ಲಿ ಅಕ್ರಮವಾಗಿ ನೆಲೆಸಿದ್ದ ಬಾಂಗ್ಲಾ ವಲಸಿಗರ ಬಂಧನ
ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ಬೆಂಗಳೂರಿನಲ್ಲಿ ‘ಜನ ನಾಯಗನ್’ ಸ್ವಾಗತಕ್ಕೆ ಹೀಗೆ ಮಾಡಿದ್ದರು ತಯಾರಿ
ಬೆಂಗಳೂರಿನಲ್ಲಿ ‘ಜನ ನಾಯಗನ್’ ಸ್ವಾಗತಕ್ಕೆ ಹೀಗೆ ಮಾಡಿದ್ದರು ತಯಾರಿ