ನಾಗರಬಾವಿಯಲ್ಲಿ ಕಾರು ಡಿಕ್ಕಿ: ರಸ್ತೆ ದಾಟುತ್ತಿದ್ದ ಮಹಿಳೆ ಸ್ಥಳದಲ್ಲೇ ಸಾವು, ಕಾರು ನಿಲ್ಲಿಸದೇ ಎಸ್ಕೇಪ್ ಆದ ಚಾಲಕ

ನಾಗರಬಾವಿಯಲ್ಲಿ ಕಾರು ಡಿಕ್ಕಿ: ರಸ್ತೆ ದಾಟುತ್ತಿದ್ದ ಮಹಿಳೆ ಸ್ಥಳದಲ್ಲೇ ಸಾವು, ಕಾರು ನಿಲ್ಲಿಸದೇ ಎಸ್ಕೇಪ್ ಆದ ಚಾಲಕ
ಅಪಘಾತ ನಡೆದ ಸ್ಥಳ

ನಾಯಂಡನಹಳ್ಳಿಯ ಪ್ಲಾಸ್ಟಿಕ್ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ ಮೃತ ವ್ಯಕ್ತಿ, ಕಾಮಾಕ್ಷಿಪಾಳ್ಯದ ಸಂಬಂಧಿಕರ ಮನೆಯಿಂದ ಹಿಂತಿರುಗುವ ವೇಳೆ ದುರ್ಘಟನೆ ಸಂಭವಿಸಿದೆ.

TV9kannada Web Team

| Edited By: Ayesha Banu

Dec 27, 2021 | 9:15 AM

ಬೆಂಗಳೂರು: ಕಾರು ಡಿಕ್ಕಿಯಾಗಿ ರಸ್ತೆ ದಾಟುತ್ತಿದ್ದ ಪಾದಚಾರಿ ಮೃತಪಟ್ಟ ಘಟನೆ ಬೆಂಗಳೂರಿನ ನಾಗರಬಾವಿಯ ರಿಂಗ್ ರಸ್ತೆಯಲ್ಲಿ ನಡೆದಿದೆ. ಪಶ್ಚಿಮ ಬಂಗಾಳ ಮೂಲದ ಬೇನಂ ಬರ್ಮನ್(42) ಮೃತ ದುರ್ದೈವಿ. ಘಟನೆ ಬಳಿಕ ಕಾರು ನಿಲ್ಲಿಸದೆ ಚಾಲಕ ಪರಾರಿಯಾಗಿದ್ದು ಬ್ಯಾಟರಾಯನಪುರ ಸಂಚಾರಿ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಬೇನಂ ಬರ್ಮನ್ ರಸ್ತೆ ದಾಟುವಾಗ ಕಾರು ಡಿಕ್ಕಿ ಹೊಡೆದಿದೆ. ಈ ಪರಿಣಾಮ ವ್ಯಕ್ತಿ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ರಾತ್ರಿ 11ರ ಸುಮಾರಿಗೆ ಈ ಘಟನೆ ನಡೆದಿದೆ. ನಾಯಂಡನಹಳ್ಳಿಯ ಪ್ಲಾಸ್ಟಿಕ್ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ ಮೃತ ವ್ಯಕ್ತಿ, ಕಾಮಾಕ್ಷಿಪಾಳ್ಯದ ಸಂಬಂಧಿಕರ ಮನೆಯಿಂದ ಹಿಂತಿರುಗುವ ವೇಳೆ ದುರ್ಘಟನೆ ಸಂಭವಿಸಿದೆ. ಅಪಘಾತದ ನಂತರ ಕಾರನ್ನ ನಿಲ್ಲಿಸದೇ ಕಾರು ಚಾಲಕ ಪರಾರಿಯಾಗಿದ್ದಾನೆ. ಸ್ಥಳೀಯರು ಹಾಗೂ ಪ್ರತ್ಯಕ್ಷದರ್ಶಿಗಳಿಂದ ಪೊಲೀಸರಿಗೆ ಮಾಹಿತಿ ಸಿಕ್ಕಿದ್ದು ಸ್ಥಳಕ್ಕೆ ಸಂಚಾರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

ಇನ್ನು ಮತ್ತೊಂದೆಡೆ ತುಮಕೂರಿನ ಕ್ಯಾತ್ಸಂದ್ರ ಬಳಿ ರೈಲಿಗೆ ಸಿಲುಕಿ ಸುಮಾರು 65 ವರ್ಷದ ವೃದ್ಧೆ ಮೃತಪಟ್ಟಿದ್ದಾರೆ. ಸ್ಥಳಕ್ಕೆ ತುಮಕೂರು ರೈಲ್ವೆ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದು ಮೃತರ ಗುರುತು ಪತ್ತೆಯಾಗಿಲ್ಲ.

ನೀರಲ್ಲಿ ಮುಳುಗಿ ಯುವಕ ಸಾವು ತುಮಕೂರು: ಪಾವಗಡ ತಾಲೂಕಿನ ನಾಗಲಮಡಿಕೆ ಜಲಾಶಯದಲ್ಲಿ ಈಜುತ್ತಿದ್ದ ವೇಳೆ ಮುಳುಗಿ ತಿಪ್ಪನಹಳ್ಳಿಯ ನಿರಂಜನ್(21) ಮೃತಪಟ್ಟ ಘಟನೆ ನಡೆದಿದೆ. ಆಂಧ್ರದ ಕಲ್ಯಾಣದುರ್ಗ ತಾಲೂಕಿನ ತಿಪ್ಪನಹಳ್ಳಿ ಗ್ರಾಮದ ನಿರಂಜನ (21) ಮೃತ ದುರ್ದೈವಿ. ನಾಗಲಮಡಿಕೆಗೆ ಮದುವೆಗೆಂದು ಆಗಮಿಸಿದ್ದ ಯುವಕ ನಿನ್ನೆ ಈಜಲು ಹೋಗಿ ಮೃತಪಟ್ಟಿದ್ದಾನೆ. ಇಂದು ಬೆಳಿಗ್ಗೆ ಘಟನೆ ಬೆಳಕಿಗೆ ಬಂದಿದೆ. ಪಾವಗಡ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಇದನ್ನೂ ಓದಿ: ಮೈಸೂರಿನ ಕಲಾಮಂದಿರದಲ್ಲಿ ರೈತ ದಿನಾಚರಣೆಯ ಸಂಭ್ರಮ; ಸಿಎಂ ಬೊಮ್ಮಾಯಿಗೆ ಹಸುವಿನ ಕಲಾಕೃತಿ ಕೊಟ್ಟ ರೈತರು

ಸಾವಿನಲ್ಲೂ ಸಾರ್ಥಕತೆ – ಮಂಡ್ಯ ಯುವಕನ ಅಂಗಾಗ ದಾನ, ಪೋಷಕರ ಸಮಯಪ್ರಜ್ಞೆ, ಆರು ಜನರ ಬಾಳಿಗೆ ಬೆಳಕು

Follow us on

Related Stories

Most Read Stories

Click on your DTH Provider to Add TV9 Kannada