ಈದ್ಗಾ ಮೈದಾನದಲ್ಲಿ ಯೋಗ ದಿನಾಚರಣೆಗೆ ಅನುಮತಿ ಡೌಟ್: ಮತ್ತೆ ನಿರಾಸೆ ಮೂಡಿಸಿದ ಬಿಬಿಎಂಪಿ

ನಮ್ಮ ದಾಖಲೆಗಳಲ್ಲಿ ಬಿಬಿಎಂಪಿ ಆಟದ ಮೈದಾನ ಅಂತಿದೆ. ಆಟ ಆಡೋಕೆ ಯಾವುದೇ ಅಭ್ಯಂತರ ಇಲ್ಲ. ಆದರೆ ಸಂಘಟನೆಗಳು ಕೇಳಿರೋದು ಸ್ವಾತಂತ್ರ್ಯ, ಯೋಗಾ ದಿನಾಚರಣೆಗೆ ಮಾಡಲು ಅನುಮತಿ ಕೇಳಲಾಗಿದೆ.

ಈದ್ಗಾ ಮೈದಾನದಲ್ಲಿ ಯೋಗ ದಿನಾಚರಣೆಗೆ ಅನುಮತಿ ಡೌಟ್: ಮತ್ತೆ ನಿರಾಸೆ ಮೂಡಿಸಿದ ಬಿಬಿಎಂಪಿ
ಈದ್ಗಾ ಮೈದಾನ
Follow us
TV9 Web
| Updated By: ಗಂಗಾಧರ​ ಬ. ಸಾಬೋಜಿ

Updated on: Jun 20, 2022 | 11:06 AM

ಬೆಂಗಳೂರು: ಈದ್ಗಾ ಮೈದಾನದಲ್ಲಿ ವಿಶ್ವ ಯೋಗಾ ದಿನಾಚರಣೆ (International Yoga Day) ಯನ್ನು ಆಚರಿಸಲು ಅನುಮತಿ ನೀಡುವಂತೆ ಬಿಬಿಎಂಪಿ(BBMP) ಗೆ ಹಿಂದೂಪರ ಸಂಘಟನೆಗಳು ಈ ಹಿಂದೆ ಮನವಿ ಸಲ್ಲಿಸಿದ್ದವು. ಆದರೆ ಸದ್ಯದ ಪರಿಸ್ಥಿತಿ ಹಿನ್ನೆಲೆ ಈದ್ಗಾ ಮೈದಾನದಲ್ಲಿ ಯೋಗ ದಿನ ಆಚರಣೆಗೆ ಪರ್ಮಿಷನ್ ಸಿಗುವುದು ಡೌಟಾಗಿದ್ದು, ಈ ವಿಚಾರದಲ್ಲಿ ಬಿಬಿಎಂಪಿ ಮತ್ತೆ ನಿರಾಸೆ ಮೂಡಿಸಿದೆ. ಈದ್ಗಾ ಮೈದಾನದಲ್ಲಿ ಯೋಗ ದಿನಾಚರಣೆಗೆ ಪರ್ಮಿಷನ್ ನೋ ಎಂದಿದೆ. ಬಿಬಿಎಂಪಿ ನೀಡಿದ್ದ ನೋಟಿಸ್​ಗೆ ವರ್ಕ್ಫ್ ಬೋರ್ಡ್ ಇಂದ ದಾಖಾಲೆ ಸಲ್ಲಿಕೆ ಮಾಡಲಾಗಿದೆ. ಸಲ್ಲಿಕೆಯಾದ ದಾಖಲೆಯನ್ನು ಬಿಬಿಎಂಪಿಯ ಕಾನೂನು ವಿಭಾಗಕ್ಕೆ ರವಾನಿಸಿದ್ದು, ಕಾನೂನು ಇಲಾಖೆಯಿಂದ ವರದಿ ಪರಿಶೀಲಿಸಿ ಬರಲು ಇನ್ನೂ ಒಂದು ವಾರ ಬೇಕಾಗುತ್ತದೆ. ಈ ಹಿನ್ನೆಲೆಯಲ್ಲಿ ಸದ್ಯದ ಪರಿಸ್ಥಿತಿಯಲ್ಲಿ ಅನುಮತಿ ನೀಡೋದಕ್ಕೆ ಆಗಲ್ಲ. ಕಾನೂನು ಇಲಾಖೆ ಹಾಗೂ ಪೊಲೀಸ್ ಇಲಾಖೆ ವರದಿ ಬರುವವರೆಗೆ ಮೈದಾನದಲ್ಲಿ ಯಾವುದೇ ಕಾರ್ಯಕ್ರಮಕ್ಕೆ ಅವಕಾಶ ಇಲ್ಲ ಎಂದು ಬಿಬಿಎಂಪಿ ತಿಳಿಸಿದೆ. ಸದ್ಯ ಯೋಗ ದಿನಾಚರಣೆಗೆ ಅನುಮತಿ ನೀಡದ ಕಾರಣ ಸಂಘಟನೆಗಳು ಕೋರ್ಟ್​​ಗೆ ಅರ್ಜಿ ಸಲ್ಲಿಸಲು ನಿರ್ಧಾರ ಮಾಡಿದೆ.

ಬಿಬಿಎಂಪಿಗೆ ಮನವಿ ಮಾಡಿದ್ದ ಹಿಂದೂಪರ ಸಂಘಟನೆ:

ಹಿಂದೂಪರ ಸಂಘಟನೆಗಳು ಈಗಾಗಲೆ ಡೆಡ್ ಲೈನ್ ನೀಡಿವೆ ಆದರೂ ಕೂಡಾ ಅನುಮತಿ ಸಿಗೋದು ಕಷ್ಟ ಎನ್ನಲಾಗುತ್ತಿದೆ. ಈ ಸಂಬಂಧ ಬಿಬಿಎಂಪಿ ಪಶ್ಚಿಮ ವಲಯದ ಜಂಟಿ ಆಯುಕ್ತ ಶ್ರೀನಿವಾಸ್ ಮಾತನಾಡಿ ನಮ್ಮ ದಾಖಲೆಗಳಲ್ಲಿ ಬಿಬಿಎಂಪಿ ಆಟದ ಮೈದಾನ ಅಂತಿದೆ. ಆಟ ಆಡೋಕೆ ಯಾವುದೇ ಅಭ್ಯಂತರ ಇಲ್ಲ. ಆದರೆ ಸಂಘಟನೆಗಳು ಕೇಳಿರೋದು ಸ್ವಾತಂತ್ರ್ಯ, ಯೋಗಾ ದಿನಾಚರಣೆಗೆ ಮಾಡಲು ಅನುಮತಿ ಕೇಳಿವೆ. ಮತ್ತೊಂದು ಕಡೆ ವಕ್ಫ್ ಬೋರ್ಡ್ ನಿಂದ ನಮಗೆ ಪತ್ರ ಬಂದಿದೆ. ಚಾಮರಾಜಪೇಟೆ ಮೈದಾನ ನಮ್ಮ ವ್ಯಾಪ್ತಿಗೆ ಬರುತ್ತೆ ಅಂತಿದ್ದಾರೆ. ಇದನ್ನ ಪರಿಶೀಲನೆ ನಡೆಸಲು ಮುಖ್ಯ ಕಚೇರಿಗೆ ಕಳುಹಿಸಿದ್ದೇನೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: Viral Photo: ಸಂಗಾತಿಯ ಬದಲು ಡೇಟಿಂಗ್ ಆಪ್​ನಲ್ಲಿ ಬಾಡಿಗೆ ಮನೆ ಹುಡುಕುತ್ತಿರುವ ವ್ಯಕ್ತಿ! ವಿ ಆರ್ ನಾಟ್ ಸೇಮ್ ಬ್ರೊ

ಈದ್ಗಾ ಮೈದಾನ ಯಾರಿಗೆ ಸೇರಿದ್ದು ಎಂಬ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ಈ ನಡುವೆ ಆಗಸ್ಟ್ 15ರಂದು ನಡೆಯುವ ಸ್ವಾತಂತ್ರ್ಯ ದಿನಾಚರಣೆಯನ್ನು ಈದ್ಗಾ ಮೈದಾನದಲ್ಲಿ ಆಚರಿಸಲು ನಿರ್ಧಾರ ಮಾಡಲಾಗಿದೆ ಎಂದು ವಕ್ಫ್ ಬೋರ್ಡ್ ಅಧ್ಯಕ್ಷ ಶಾಫಿ ಸಆದಿ ಟಿವಿ9ಗೆ ಮಾಹಿತಿ ನೀಡಿದ್ದಾರೆ. ವಿವಾದಿತ ಮೈದಾನದಲ್ಲಿ ಸ್ವಾತಂತ್ರ್ಯ ದಿನಾಚರಣೆ ಆಚರಣೆ ಮಾಡಲು ಹಿಂದೂ ಸಂಘಟನೆಗಳು ಮನವಿ ಮಾಡಿದ್ದವು. ಹಿಂದೂ ಸಂಘಟನೆಗಳ ಸಾಲು ಸಾಲು ಮನವಿ ಬೆನ್ನಲೆ ವಕ್ಫ್ ಬೋರ್ಡ್ ಮಹತ್ವದ ನಿರ್ಧಾರ ತೆಗೆದುಕೊಂಡಿದೆ.

ರಾಜ್ಯದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. 

14 ತಿಂಗಳುಗಳ ಬಳಿಕ ಮೊಹಮ್ಮದ್ ಶಮಿ ಎಂಟ್ರಿ: ವಿಡಿಯೋ ಹಂಚಿಕೊಂಡ ಬಿಸಿಸಿಐ
14 ತಿಂಗಳುಗಳ ಬಳಿಕ ಮೊಹಮ್ಮದ್ ಶಮಿ ಎಂಟ್ರಿ: ವಿಡಿಯೋ ಹಂಚಿಕೊಂಡ ಬಿಸಿಸಿಐ
ವಿಜಯಪುರದಲ್ಲಿ ಮೂವರು ಕಾರ್ಮಿಕರ ಮೇಲೆ ಮಾರಣಾಂತಿಕ ಹಲ್ಲೆ, ವಿಡಿಯೋ ವೈರಲ್​
ವಿಜಯಪುರದಲ್ಲಿ ಮೂವರು ಕಾರ್ಮಿಕರ ಮೇಲೆ ಮಾರಣಾಂತಿಕ ಹಲ್ಲೆ, ವಿಡಿಯೋ ವೈರಲ್​
ಗೃಹ ಇಲಾಖೆ ನೀಡುವ ಸೂಚನೆಗಳನ್ನು ಬ್ಯಾಂಕ್​ಗಳು ಪಾಲಿಸುತ್ತಿಲ್ಲ: ಪರಮೇಶ್ವರ್
ಗೃಹ ಇಲಾಖೆ ನೀಡುವ ಸೂಚನೆಗಳನ್ನು ಬ್ಯಾಂಕ್​ಗಳು ಪಾಲಿಸುತ್ತಿಲ್ಲ: ಪರಮೇಶ್ವರ್
ಉದ್ಯಮಿಗೆ ಹಲ್ಲೆ ಮಾಡಿ ಹಣ ಕಸಿದು ಕಾರು ಸಮೇತ ಪರಾರಿಯಾದ ಮುಸುಕುಧಾರಿಗಳು
ಉದ್ಯಮಿಗೆ ಹಲ್ಲೆ ಮಾಡಿ ಹಣ ಕಸಿದು ಕಾರು ಸಮೇತ ಪರಾರಿಯಾದ ಮುಸುಕುಧಾರಿಗಳು
ಬಾಗಲಕೋಟೆಯ ಪ್ರೌಢ ಮತ್ತು ಪ್ರಾಥಮಿಕ ಶಾಲೆಗಳಿಗೆ ರಜೆ ಘೋಷಣೆ
ಬಾಗಲಕೋಟೆಯ ಪ್ರೌಢ ಮತ್ತು ಪ್ರಾಥಮಿಕ ಶಾಲೆಗಳಿಗೆ ರಜೆ ಘೋಷಣೆ
ಗೌತಮಿಯ ಮುದ್ದಾಡಿದ ಶ್ವಾನಗಳು; ಮನೆಗೆ ಬಂದ ಸ್ಪರ್ಧಿಗೆ ಹೀಗಿತ್ತು ಸ್ವಾಗತ
ಗೌತಮಿಯ ಮುದ್ದಾಡಿದ ಶ್ವಾನಗಳು; ಮನೆಗೆ ಬಂದ ಸ್ಪರ್ಧಿಗೆ ಹೀಗಿತ್ತು ಸ್ವಾಗತ
ರಜತ್ ಮೇಲಿನ ಕೋಪಕ್ಕೆ ಬಿಗ್ ಬಾಸ್ ಪ್ರಾಪರ್ಟಿ ಪುಡಿ ಮಾಡಿದ ಮಂಜು
ರಜತ್ ಮೇಲಿನ ಕೋಪಕ್ಕೆ ಬಿಗ್ ಬಾಸ್ ಪ್ರಾಪರ್ಟಿ ಪುಡಿ ಮಾಡಿದ ಮಂಜು
ಡೊನಾಲ್ಡ್​ಟ್ರಂಪ್​ಗೆ ಮರಳು ಕಲಾವಿದನಿಂದ ಅಭಿನಂದನೆ
ಡೊನಾಲ್ಡ್​ಟ್ರಂಪ್​ಗೆ ಮರಳು ಕಲಾವಿದನಿಂದ ಅಭಿನಂದನೆ
ಪತ್ನಿ ಗರ್ಭಿಣಿಯಾಗಿದ್ದಾಗ ಪತಿ ಈ ತಪ್ಪುಗಳನ್ನು ಮಾಡಬಾರದು
ಪತ್ನಿ ಗರ್ಭಿಣಿಯಾಗಿದ್ದಾಗ ಪತಿ ಈ ತಪ್ಪುಗಳನ್ನು ಮಾಡಬಾರದು
Daily horoscope: ಈ ರಾಶಿಯವರು ಇಂದು ಕೆಲಸಗಳಲ್ಲಿ ಯಶಸ್ಸು ಕಾಣುವರು
Daily horoscope: ಈ ರಾಶಿಯವರು ಇಂದು ಕೆಲಸಗಳಲ್ಲಿ ಯಶಸ್ಸು ಕಾಣುವರು