ಬೆಂಗಳೂರಿನಲ್ಲಿ ದುಷ್ಕರ್ಮಿಗಳಿಂದ ರೌಡಿಶೀಟರ್ ಹತ್ಯೆ

ಸ್ನೇಹಿತನ ಮನೆಗೆ ತೆರಳಿದ್ದ ವೇಳೆ ಅಪ್ಪು ಮೇಲೆ ಬರ್ಬರ ಹತ್ಯೆ ನಡೆದಿದ್ದು, ಅಶೋಕನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಳೆದ ರಾತ್ರಿ ದುಷ್ಕರ್ಮಿಗಳ ತಂಡ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ್ದಾರೆ.

  • TV9 Web Team
  • Published On - 11:23 AM, 21 Apr 2021
ಬೆಂಗಳೂರಿನಲ್ಲಿ ದುಷ್ಕರ್ಮಿಗಳಿಂದ ರೌಡಿಶೀಟರ್ ಹತ್ಯೆ
ಸಾಂದರ್ಭಿಕ ಚಿತ್ರ

ಬೆಂಗಳೂರು:ಅಶೋಕ ನಗರದ ಫಾತಿಮಾ ಗಲ್ಲಿಯಲ್ಲಿ ರೌಡಿಶೀಟರ್ ರವಿವರ್ಮ ಅಲಿಯಾಸ್ ಅಪ್ಪು ಕೊಲೆಯಾಗಿದ್ದಾನೆ. ಸ್ನೇಹಿತನ ಮನೆಗೆ ತೆರಳಿದ್ದ ವೇಳೆ ಅಪ್ಪು ಮೇಲೆ ಬರ್ಬರ ಹತ್ಯೆ ನಡೆದಿದ್ದು, ಅಶೋಕನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಳೆದ ರಾತ್ರಿ ದುಷ್ಕರ್ಮಿಗಳ ತಂಡ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ್ದಾರೆ.

ಜೂಜುಕೋರ ಬಂಧನ
ಬೆಂಗಳೂರಿನಲ್ಲಿ ಕುಖ್ಯಾತ ಜೂಜುಕೋರ ಹರಿರಾಜ ಶೆಟ್ಟಿಯನ್ನು ಪೊಲೀಸರು ಬಂಧಿಸಿದ್ದಾರೆ. ನಗರದ ವಿವಿಧ ಠಾಣೆಗಳಲ್ಲಿ ಆರೋಪಿ ನಗರದ ವಿವಿಧ ಠಾಣೆಗಳಲ್ಲಿ ಆರೋಪಿ ಮೇಲೆ ಸುಮಾರು 13 ಪ್ರಕರಣಗಳಿವೆ. ಆರೋಪಿ ವೈಯಾಲಿಕಾವಲ್, ಹೈಗ್ರೌಂಡ್ಸ್, ಕೋರಮಂಗಲ ಸೇರಿ ನಗರದ ವಿವಿಧೆಡೆ ಜೂಜು ಅಡ್ಡೆ ನಡೆಸುತ್ತಿದ್ದ. ಹಲವು ಬಾರಿ ಪ್ರಕರಣ ದಾಖಲಿಸಿದರು ಮತ್ತೆ ಜೂಜು ಅಡ್ಡೆ ನಡೆಸುವುದನ್ನು ಮುಂದುವರೆಸಿದ್ದ. ಈ ಹಿನ್ನೆಲೆ ಗೂಂಡಾ ಕಾಯ್ದೆಯಡಿ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಹರಿರಾಜ ಶೆಟ್ಟಿ

ಇದನ್ನೂ ಓದಿ

ಕಲಬುರಗಿಯಲ್ಲಿ ಬರ್ಬರ ಹತ್ಯೆ; ಚಿಕಿತ್ಸೆ ಫಲಿಸದೆ ಆಟೋ ಚಾಲಕ ಸಾವು

ಮೇಡಿ ಅಗ್ರಹಾರ ಚಿತಾಗಾರ ಕ್ಲೋಸ್.. ಅಂತ್ಯಸಂಸ್ಕಾರಕ್ಕೆ ಗೇಟ್​ ಮುಂದೆ ಕಾದು ಕುಳಿತ ಕುಟುಂಬಸ್ಥರು

(perpetrators committed the murder of the rowdy sheeter in Bengaluru)