ಸಂಸದ ತೇಜಸ್ವಿ ಸೂರ್ಯ ಆಪ್ತ ಸಹಾಯಕನ ಹೆಸರಲ್ಲಿ ರೆಮ್​ಡೆಸಿವಿರ್ ಔಷಧ ಕೊಡಿಸುವುದಾಗಿ ಕೊವಿಡ್ ಸೋಂಕಿತರಿಗೆ ವಂಚನೆ

| Updated By: guruganesh bhat

Updated on: Jun 06, 2021 | 7:06 PM

10 ಸಾವಿರ ನೀಡಿದರೆ 5 ರೆಮ್​ಡೆಸಿವಿರ್ ಔಷಧ ಕೊಡಿಸುವುದಾಗಿ ಒದಗಿಸುವುದಾಗಿ ನಂಬಿಸಿ ವಂಚನೆ ನಡೆಸಲಾಗಿದೆ ಎಂದು ಸಂಸದ ತೇಜಸ್ವಿ ಸೂರ್ಯ ಕಚೇರಿ ಗಮನಕ್ಕೆ ಸೋಂಕಿತನ ಕಡೆಯವರು ತಂದಿದ್ದರು.

ಸಂಸದ ತೇಜಸ್ವಿ ಸೂರ್ಯ ಆಪ್ತ ಸಹಾಯಕನ ಹೆಸರಲ್ಲಿ ರೆಮ್​ಡೆಸಿವಿರ್ ಔಷಧ ಕೊಡಿಸುವುದಾಗಿ ಕೊವಿಡ್ ಸೋಂಕಿತರಿಗೆ ವಂಚನೆ
ಸಂಸದ ತೇಜಸ್ವಿ ಸೂರ್ಯ
Follow us on

ಬೆಂಗಳೂರು: ಸಂಸದ ತೇಜಸ್ವಿ ಸೂರ್ಯ ಆಪ್ತ ಸಹಾಯಕನ ಹೆಸರಲ್ಲಿ ಕೊವಿಡ್ ಸೋಂಕಿತರಿಗೆ ವಂಚಿಸಲು ಯತ್ನಿಸಲಾಗಿದೆ ಎಂದು ಆರೋಪಿಸಿ ಜಯನಗರ ಠಾಣೆಯಲ್ಲಿ ಶಿವಲಿಂಗಯ್ಯ ಎಂಬ ವ್ಯಕ್ತಿಯ ಮೇಲೆ ದೂರು ದಾಖಲಿಸಲಾಗಿದೆ. ತೇಜಸ್ವಿ ಸೂರ್ಯ ಆಪ್ತ ಸಹಾಯಕ ಭಾನು ಪ್ರಕಾಶ್ ಪ್ರಕರಣ ದಾಖಲಿಸಿದ್ದು, ​₹10 ಸಾವಿರ ನೀಡಿದರೆ ರೆಮ್​ಡಿಸಿವಿರ್ ಔಷಧ ಕೊಡಿಸುವುದಾಗಿ ವಂಚಿಸಿ ಪ್ರಕರಣ ದಾಖಲಿಸಿದ್ದಾರೆ.

10 ಸಾವಿರ ನೀಡಿದರೆ  5 ರೆಮ್​ಡೆಸಿವಿರ್ ಔಷಧ ಕೊಡಿಸುವುದಾಗಿ ಒದಗಿಸುವುದಾಗಿ ನಂಬಿಸಿ ವಂಚನೆ ನಡೆಸಲಾಗಿದೆ ಎಂದು ಸಂಸದ ತೇಜಸ್ವಿ ಸೂರ್ಯ ಕಚೇರಿ ಗಮನಕ್ಕೆ ಸೋಂಕಿತನ ಕಡೆಯವರು ತಂದಿದ್ದರು. ಸಂಸದ ತೇಜಸ್ವಿ ಸೂರ್ಯ ಕಚೇರಿಯಿಂದ ಕರೆ ಮಾಡಿದಾಗಲೂ ಆರೋಪಿ ತಾನು ಸಂಸದರ ಪಿಎ ಎಂದಿದ್ದ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಇದನ್ನೂ ಓದಿ: ಕೊಲೆ ಆರೋಪಿಯ ಪತ್ತೆಗೆ ಆತನ ಚಪ್ಪಲಿ ಡಿಸೈನ್ ಕಾರಣವಾಯ್ತು! ಸೈ ಎನಿಸಿಕೊಂಡ ಹೆಣ್ಣೂರು ಪೊಲೀಸರು

ಕೊವಿಡ್​ ಲಸಿಕೆ ಹಾಕಿಸಿಕೊಂಡ ಧ್ರುವ ಸರ್ಜಾ; ಬೈಸೆಪ್ಸ್​ ನೋಡಿ ದಂಗಾದ ಫ್ಯಾನ್ಸ್​

(Person make fraud to give remdesivir drug in the name of MP Tejasvi Surya PA name)