Plan B ಸಿದ್ಧ: ಪಾದಯಾತ್ರೆ ವಿಚಾರದಲ್ಲಿ ಜಗ್ಗದ ಕಾಂಗ್ರೆಸ್ ನಾಯಕರು, ಪ್ರತಿ 15 ಕಿಮೀ ಅಂತರದಲ್ಲಿ ಮಿನಿ ಕಿಚನ್ ಸಿದ್ದ

| Updated By: preethi shettigar

Updated on: Jan 07, 2022 | 10:24 AM

ಖಾಲಿ ಜಮೀನು, ಖಾಸಗಿ ಸ್ಥಳಗಳಲ್ಲಿ ಟೆಂಟ್‌ಗಳ ವ್ಯವಸ್ಥೆ ಮಾಡಿದ್ದು, ಕಲ್ಯಾಣ ಮಂಟಪಗಳಲ್ಲಿ ನಾಯಕರಿಗೆ ವಸತಿ ವ್ಯವಸ್ಥೆ ಮಾಡಲಾಗಿದೆ. 5-6 ಸಾವಿರ ಹಾಸಿಗೆ ಬಾಡಿಗೆಗೆ ಪಡೆಯಲಿರುವ ಕಾಂಗ್ರೆಸ್, ಸ್ಥಳೀಯ ಕಾರ್ಯಕರ್ತರಿಗೆ ಊಟೋಪಚಾರದ ಹೊಣೆ ಹೊತ್ತಿದೆ.

Plan B ಸಿದ್ಧ: ಪಾದಯಾತ್ರೆ ವಿಚಾರದಲ್ಲಿ ಜಗ್ಗದ ಕಾಂಗ್ರೆಸ್ ನಾಯಕರು, ಪ್ರತಿ 15 ಕಿಮೀ ಅಂತರದಲ್ಲಿ ಮಿನಿ ಕಿಚನ್ ಸಿದ್ದ
ಕಾಂಗ್ರೆಸ್‌ನಿಂದ ಪಾದಯಾತ್ರೆ
Follow us on

ಬೆಂಗಳೂರು: ಮೇಕೆದಾಟು ವಿಚಾರವಾಗಿ ಕಾಂಗ್ರೆಸ್‌ (Congress) ಜನವರಿ 9 ರಿಂದ ಪಾದಯಾತ್ರೆಗೆ ಮುಂದಾಗಿದ್ದು, ಆ ಮೂಲಕ ಸರ್ಕಾರಕ್ಕೆ ಸವಾಲ್ ಹಾಕಲು ಸಿದ್ಧವಾಗಿದೆ. ಈ ನಡುವೆ ಕೊರೊನಾ ಹಿನ್ನೆಲೆ ರಾಜ್ಯ ಸರ್ಕಾರ (State Government) ಮಾರ್ಗಸೂಚಿ ಬಿಡುಗಡೆ ಮಾಡಿದೆ. ಇಂದು (ಜನವರಿ 07) ಸಂಜೆಯಿಂದ ಸೋಮವಾರ ಬೆಳಿಗ್ಗೆ 5 ಗಂಟೆವರೆಗೆ ಕರ್ಫ್ಯೂ (Curfew) ಇರಲಿದೆ. ಆದರೆ ಇದಕ್ಕೆ ಜಗ್ಗದ ಕಾಂಗ್ರೆಸ್​ ಸರ್ಕಾರ ಹೋಟೆಲ್, ರೆಸಾರ್ಟ್‌ಗಳನ್ನು ಬಂದ್ ಮಾಡಿದರೆ ಪ್ಲ್ಯಾನ್ ಬಿ ಸಿದ್ಧ ಮಾಡಿಕೊಂಡಿದೆ.

ಖಾಲಿ ಜಮೀನು, ಖಾಸಗಿ ಸ್ಥಳಗಳಲ್ಲಿ ಟೆಂಟ್‌ಗಳ ವ್ಯವಸ್ಥೆ ಮಾಡಿದ್ದು, ಕಲ್ಯಾಣ ಮಂಟಪಗಳಲ್ಲಿ ನಾಯಕರಿಗೆ ವಸತಿ ವ್ಯವಸ್ಥೆ ಮಾಡಲಾಗಿದೆ. 5-6 ಸಾವಿರ ಹಾಸಿಗೆ ಬಾಡಿಗೆಗೆ ಪಡೆಯಲಿರುವ ಕಾಂಗ್ರೆಸ್, ಸ್ಥಳೀಯ ಕಾರ್ಯಕರ್ತರಿಗೆ ಊಟೋಪಚಾರದ ಹೊಣೆ ಹೊತ್ತಿದೆ. ಈಗಾಗಲೇ ಸ್ಥಳೀಯ ಬಾಣಸಿಗರಿಂದ ಅಡುಗೆ ತಯಾರಿಗೆ ಯೋಜನೆ ಮಾಡಿಕೊಂಡಿದೆ. ಅಲ್ಲದೆ ಅಗತ್ಯಕ್ಕೆ ಅನುಗುಣವಾಗಿ ಮಿನಿ ಕಿಚನ್ ತೆರೆಯಲು ಯೋಜನೆ ರೂಪಿಸಿದೆ ಎಂದು ಮೂಲಗಳು ತಿಳಿಸಿವೆ.

ಪ್ರತಿ 15 ಕಿಲೋಮೀಟರ್ ಅಂತರದಲ್ಲಿ ಮಿನಿ ಕಿಚನ್, 25 ಸಾವಿರಕ್ಕೂ ಅಧಿಕ ತಾತ್ಕಾಲಿಕ ಶೌಚಾಲಯದ ವ್ಯವಸ್ಥೆ, ವಾಹನ ಸಂಚಾರಕ್ಕೆ ಸರ್ಕಾರ ಅಡ್ಡಿಪಡಿಸಿದರೂ ಅದಕ್ಕೆ ಕೂಡ ಸಿದ್ಧತೆ ಮಾಡಿಕೊಳ್ಳಲಾಗಿದೆ. ಇನ್ನೂ ಖಾಸಗಿ ವಾಹನದಲ್ಲೇ ಓಡಾಟಕ್ಕೆ ಕಾಂಗ್ರೆಸ್ ವ್ಯವಸ್ಥೆ ಮಾಡಲಾಗಿದೆ.

ಸ್ಥಳೀಯರ ಬೈಕ್ ಮೂಲಕ ಸಂಚರಿಸಲು ಕೈ ನಾಯಕರು ನಿರ್ಧಾರ ಮಾಡಿದ್ದಾರೆ. ಪೊಲೀಸರು ತಡೆದರೂ ಮರುದಿನ ಅಲ್ಲಿಂದಲೇ ಪ್ರತಿಭಟನೆಗೆ ಮುಂದಾಗಲಿದ್ದಾರೆ. ಅಲ್ಲದೇ ಬಂಧಿಸಿದರೆ ಆ ಸ್ಥಳದಿಂದಲೇ ಪ್ರತಿಭಟನೆ ನಡೆಸಲಾಗುತ್ತದೆ. ರಸ್ತೆ ಬ್ಲಾಕ್ ಮಾಡಿದರೂ ಸ್ಥಳೀಯರೊಂದಿಗೆ ಪಾದಯಾತ್ರೆ ನಡೆಸಲಾಗುತ್ತದೆ. ಕೊವಿಡ್ ನಿಯಮ ಪಾಲನೆಗೆ ಅಗತ್ಯ ಪರಿಕರಗಳ ಸರಬರಾಜು ಮಾಡಲಾಗುತ್ತದೆ. ಮಾಸ್ಕ್, ಸ್ಯಾನಿಟೈಸರ್, ವೈದ್ಯರು, ಆ್ಯಂಬುಲೆನ್ಸ್ ಕೂಡ ವ್ಯವಸ್ಥೆ ಮಾಡಲಾಗಿದೆ. ಅಲ್ಲದೇ ಅಂತರ ಕಾಯ್ದುಕೊಂಡು ಱಲಿಯಲ್ಲಿ ಹೆಜ್ಜೆ ಹಾಕಲು ನಿರ್ಧಾರ ಮಾಡಲಾಗಿದೆ. ಸೆಕ್ಷನ್ 144 ಜಾರಿಯಾದರೂ ಕೇವಲ ಐವರಿಂದ ಪಾದಯಾತ್ರೆ ಮಾಲಾಗುತ್ತದೆ. ಪ್ರತ್ಯೇಕ ಗುಂಪು ಗುಂಪಾಗಿ ಅಂತರ ಕಾಯ್ದುಕೊಂಡು ನಡಿಗೆಗೆ ಕೂಡ ಯೋಜನೆ ಸಿದ್ಧ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ.

ಜನವರಿ 9ರಿಂದ ಕಾಂಗ್ರೆಸ್ ಪಾದಯಾತ್ರೆ
ಮೇಕೆದಾಟು ಯೋಜನೆ ಆರಂಭಿಸಲು ಒತ್ತಾಯಿಸಿ ಜನವರಿ 9 ರಿಂದ ಕಾಂಗ್ರೆಸ್ ಪಾದಯಾತ್ರೆ ನಡೆಸಲಿದ್ದಾರೆ. ಈ ಹಿನ್ನೆಲೆ ರಾಮನಗರ ಜಿಲ್ಲೆಯ ಕನಕಪುರಕ್ಕೆ ಇಂದೇ ‘ಕೈ’ನಾಯಕರು ಆಗಮಿಸುತ್ತಿದ್ದಾರೆ. ವೀಕೆಂಡ್ ಕರ್ಫ್ಯೂ ಜಾರಿ ಹಿನ್ನೆಲೆ ಸಿದ್ದರಾಮಯ್ಯ ಸೇರಿದಂತೆ ಹಲವು ನಾಯಕರು ಇಂದೇ ಆಗಮಿಸುತ್ತಿದ್ದಾರೆ.

ಇದನ್ನೂ ಓದಿ:
ರಾಮನಗರ ಜಿಲ್ಲೆಯಲ್ಲಿ ನಿಷೇಧಾಜ್ಞೆ ಜಾರಿ; ಮೇಕೆದಾಟು ಪಾದಯಾತ್ರೆ ಮೇಲೆ ನೇರ ಕರಿನೆರಳು: ನಾವಿಬ್ಬರೇ ಹೆಜ್ಜೆ ಹಾಕ್ತೀವಿ -ಸಿದ್ಧರಾಮಯ್ಯ

ಸತ್ತರೂ ಸರಿ, ಮೇಕೆದಾಟು ಪಾದಯಾತ್ರೆ ನಿಲ್ಲದು: ಡಿಕೆ ಶಿವಕುಮಾರ್

Published On - 9:28 am, Fri, 7 January 22